
ಬ್ರಿಟನ್‌ನಲ್ಲಿ, ಸಧೃಡ ಗರ್ಭಕೋಶವಿಲ್ಲದ ಮಹಿಳೆಯೊಬ್ಬರು ಮೃತ ದಾನಿಯಿಂದ ಪಡೆದ ಗರ್ಭಕೋಶದ ಕಸಿ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವೈದ್ಯಕೀಯ ಪವಾಡವು ಯಶಸ್ವಿಯಾಗಿದ್ದು, ಹುಗೋ ಎಂಬ ಮಗು ಜನಿಸಿದೆ. ತಾಯಿ ಮಗು ಆರೋಗ್ಯವಾಗಿದ್ದಾರೆ.
ಮೃತ ಮಹಿಳೆಯ ಗರ್ಭದಲ್ಲಿ ಅರಳಿದ ಜೀವ
ಅನೇಕರಿಗೆ ಇತ್ತೀಚೆಗೆ ಮಕ್ಕಳಾಗುವುದೇ ದೊಡ್ಡ ಸಮಸ್ಯೆಯಾಗಿದೆ. ಎಳೆ ಪ್ರಾಯದ ಹೆಣ್ಣ ಮಕ್ಕಳು ಕೂಡ ಮಕ್ಕಳಾಗದ ಸಮಸ್ಯೆಯಿಂದ ಬಳುತ್ತಿದ್ದಾರೆ. ಅನೇಕರನ್ನು ಪಿಸಿಒಎಸ್, ಪಿಸಿಒಡಿ ಸಮಸ್ಯೆಗಳು ಕಾಡುತ್ತಿದ್ದು, ಇದು ಕೂಡ ಮಕ್ಕಳಾಗುವಿಕೆಯನ್ನು ವಿಳಂಬಗೊಳಿಸುತ್ತವೆ. ಆದರೆ ಇಲ್ಲೊಬ್ಬರು ಹೆಣ್ಣು ಮಕ್ಕಳಿಗೆ ಮಗುವನ್ನು ಹೇರುವುದಕ್ಕೆ ಶಸಕ್ತವಾಗಿರುವಂತಹ ಸಧೃಡವಾದ ಗರ್ಭಕೋಶವಿರಲಿಲ್ಲ, ಆದರೆ ಆಕೆ ದಾನ ಪಡೆದ ಗರ್ಭದ ಸಹಾಯದಿಂದ ಗಂಡು ಮಗುವೊಂದಕ್ಕೆ ಜನ್ಮ ನೀಡಿದ್ದಾರೆ.
ಹೌದು ಅಂಗಾಂಗ ದಾನದ ಬಗ್ಗೆ ನೀವು ಕೇಳಿರಬಹುದು, ಕೈಗಳನ್ನು ಹೃದಯ, ಕಿಡ್ನಿ, ಲಿವರ್‌ಗಳನ್ನು ದಾನ ನೀಡಲಾಗುತ್ತದೆ. ಕಿಡ್ನಿ ಹಾಗೂ ಲಿವರ್ ಹೊರತುಪಡಿಸಿ ಮತ್ತೆಲ್ಲವನ್ನೂ ಸತ್ತ ನಂತರವೋ ಅಥವಾ ಮೆದುಳು ನಿಷ್ಕ್ರಿಯಗೊಂಡಂತಹ ಸಂದರ್ಭದಲ್ಲಿ ದಾನ ನೀಡಲಾಗುತ್ತದೆ. ಅದೇ ರೀತಿ ಇಲ್ಲೊಬ್ಬರು ಮಹಿಳೆಗೆ ಮೃತ ಮಹಿಳೆಯ ಗರ್ಭಕೋಶವನ್ನು ಟ್ರಾನ್ಸ್‌ಪ್ಲಾಂಟ್ ಮಾಡಲಾಗಿದ್ದು, ಆ ಗರ್ಭಕೋಶದ ಮೂಲಕ ಅವರು ಗಂಡು ಮಗುವಿನ ತಾಯಿಯಾಗಿದ್ದಾರೆ. ಈ ವಿಚಾರ ಈಗ ಅಂಗಾಂಗ ದಾನದ ಬಗ್ಗೆ ಹೊಸ ಚರ್ಚೆ ಹುಟ್ಟುಹಾಕಿದೆ.
ಗರ್ಭಕೋಶ ಕಸಿ ಬಳಿಕ ಮಗುವಿಗೆ ಜನ್ಮ ನೀಡಿದ ಮಹಿಳೆ
ಹೌದು ಬ್ರಿಟನ್‌ನಲ್ಲಿ ವೈದ್ಯಕೀಯ ಪವಾಡ ಎಂಬಂತೆ ಕಸಿ ಮಾಡಿದ ಗರ್ಭಕೋಶದಿಂದ ಮಗುವೊಂದು ಜನಿಸಿದೆ. ಹೀಗೆ ಮೃತ ಮಹಿಳೆಯ ಗರ್ಭಕೋಶದ ಕಸಿಯಿಂದಾಗಿ ಜನಿಸಿದ ಮೊದಲ ಮಗು ಇದಾಗಿದೆ. ಹುಗೋ ಎಂಬ ಆ ಮಗುವಿಗೆ 10 ವಾರಗಳಾಗಿದ್ದು, ಆರೋಗ್ಯವಾಗಿದೆ. ಆ ಮಗುವನ್ನು ಒಂದು ಪವಾಡವೇ ಸರಿ ಎಂದು ಕರೆದಿದ್ದಾರೆ. ಆ ಮಗುವಿನ ತಾಯಿ ಗ್ರೇಸ್ ಬೆಲ್, ಈ ಗ್ರೇಸ್ ಬೆಲ್ ಅವರಿಗೆ ಮಗುವನ್ನು ಹೆರುವುದಕ್ಕೆ ಅಗತ್ಯವಾದ ಸಧೃಡವಾದ ಗರ್ಭಕೋಶ ಇರಲಿಲ್ಲ. ಹೀಗಾಗಿ ಮೃತ ಮಹಿಳೆಯೊಬ್ಬರ ಗರ್ಭಕೋಶವನ್ನು ಅವರಿಗೆ ಕಸಿ ಮಾಡಲಾಗಿತ್ತು. ಇದಾದ ನಂತರ ಮಗು ಹುಗೋ ಆರೋಗ್ಯವಾಗಿ ಜನಿಸಿದ್ದಾನೆ.
ಇದನ್ನೂ ಓದಿ: ಮಾರಾಟಕ್ಕಿಟ್ಟ ಹಣ್ಣುಗಳಿಗೆ ಇಲಿ ಪಾಷಾಣ ಸ್ಪ್ರೇ ಮಾಡ್ತಿದ್ದ ಇಬ್ಬರು ವ್ಯಾಪಾರಿಗಳ ಬಂಧನ
ಯುನೈಟೆಡ್ ಕಿಂಗ್‌ಡಮ್(UK) ಕೆಂಟ್ ನಿವಾಸಿಗಳಾದ ಗ್ರೇಸ್ ಬೆಲ್ ಹಾಗೂ ಅವರ ಪತಿ ಸ್ಟೀವ್ ಪಾವೆಲ್ ಅವರು ತಮ್ಮನ್ನು ಪೋಷಕರಾಗುವುದಕ್ಕೆ ಅಗತ್ಯವಾಗಿದ್ದ ಗರ್ಭಕೋಶ ದಾನ ಮಾಡಿದ ದಾನಿ ಮಹಿಳೆ ಹಾಗೂ ಅವರ ಕುಟುಂಬದ ಅದ್ಭುತವಾದ ಉಡುಗೊರೆಗೆ ಧನ್ಯವಾದ ಹೇಳಿದ್ದಾರೆ. ಹಾಗೆಯೇ ಇದನ್ನು ಸಾಧ್ಯವವಾಗಿಸಿದ ಆಕ್ಸ್‌ಫರ್ಡ್ ಹಾಗೂ ಲಂಡನ್‌ನ ವೈದ್ಯಕೀಯ ತಂಡಕ್ಕೂ ಆ ದಂಪತಿ ಧನ್ಯವಾದ ಹೇಳಿದ್ದಾರೆ. ನನಗೆ ಗರ್ಭಕೋಶ ದಾನ ನೀಡಿದ ಮಹಿಳೆಯನ್ನು ನಾನು ಸದಾ ಸ್ಮರಿಸುತ್ತೇನೆ. ಅವರಿಂದಲೇ ನಾನು ತಾಯ್ತನದ ಖುಷಿ ಅನುಭವಿಸುವುದಕ್ಕೆ ಸಾಧ್ಯವಾಯ್ತು ಎಂದು ಮಹಿಳೆ ಹೇಳಿದ್ದಾರೆ.
ಬೆಳಿಗ್ಗೆ ಎದ್ದಾಗ ಅವನ ಪುಟ್ಟ ಮುಖವನ್ನು, ಅವನ ಪುಟ್ಟ ಗೊಂಬೆಯನ್ನು ನೋಡಿದ್ದು ನನಗೆ ನೆನಪಿದೆ, ಮತ್ತು ನಾನು ಕನಸಿನಿಂದ ಎಚ್ಚರಗೊಳ್ಳಬೇಕೆಂದು ಅನಿಸಿತು ಎಂದು ಗ್ರೇಸ್ ಹೇಳಿದ್ದಾರೆ. ಈ ಹೆರಿಗೆ ಒಂದು ಕ್ರಾಂತಿಕಾರಿ ಕ್ಷಣ ಎಂದು ಈ ಅಂಗಾಂಗ ಕಸಿ ಹಾಗೂ ನಂತರ ಹೆರಿಗೆಯಲ್ಲಿ ಭಾಗಿಯಾದ ವೈದ್ಯರು ಹೇಳಿದ್ದಾರೆ. ಇದು ಇದೇ ರೀತಿಯ ಸಮಸ್ಯೆಗಳನ್ನು ಹೊಂದಿರುವ ಇನ್ನೂ ಅನೇಕ ಮಹಿಳೆಯರಿಗೆ ಭರವಸೆಯನ್ನು ನೀಡುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ವಿಶ್ವದಲ್ಲೇ ಅತೀಹೆಚ್ಚು ಜನರಿಂದ ಪ್ರಧಾನಿ ಮೋದಿ ಇಸ್ರೇಲ್‌ಗೆ ಪಯಣಿಸಿದ ಏರ್ ಇಂಡಿಯಾ ಒನ್ ವಿಮಾನದ ಟ್ರ್ಯಾಕಿಂಗ್