Headlines

ಬೈಕ್‌ ಸವಾರನಿಗೆ ಸಹಾಯ ಮಾಡಿ ₹1000 ದಂಡ ತೆತ್ತ ಕಾರು ಚಾಲಕ! ಆವಲಹಳ್ಳಿ ಸಮೀಪದ ಹೊಸಕೋಟೆ ರಸ್ತೆಯಲ್ಲಿ ಈ ಘಟನೆ | Car Driver Fined Rs 1000 For Helping A Bike Rider

ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಬೈಕ್ ಸವಾರನಿಗೆ ಸಹಾಯ ಮಾಡಲು ಹೋಗಿ ಕಾರಿನ ಚಾಲಕರೊಬ್ಬರು ಒಂದು ಸಾವಿರ ರು. ದಂಡ ತೆತ್ತಿದ್ದಾರೆ. ಆವಲಹಳ್ಳಿ ಸಮೀಪದ ಹೊಸಕೋಟೆ ರಸ್ತೆಯಲ್ಲಿ ಈ ಘಟನೆ ಮಂಗಳವಾರ ಬೆಳಗ್ಗೆ ನಡೆದಿ ದೆ

ಬೆಂಗಳೂರು : ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಬೈಕ್ ಸವಾರನಿಗೆ ಸಹಾಯ ಮಾಡಲು ಹೋಗಿ ಕಾರಿನ ಚಾಲಕರೊಬ್ಬರು ಒಂದು ಸಾವಿರ ರು. ದಂಡ ತೆತ್ತಿದ್ದಾರೆ…!!

ಆವಲಹಳ್ಳಿ ಸಮೀಪದ ಹೊಸಕೋಟೆ ರಸ್ತೆಯಲ್ಲಿ ಈ ಘಟನೆ

ಆವಲಹಳ್ಳಿ ಸಮೀಪದ ಹೊಸಕೋಟೆ ರಸ್ತೆಯಲ್ಲಿ ಈ ಘಟನೆ ಮಂಗಳವಾರ ಬೆಳಗ್ಗೆ ನಡೆದಿದ್ದು, ಕಾರು ಚಾಲಕ ಅಜೀಜ್ ಅವರಿಗೆ ಅಜಾಗರೂಕತೆ ಚಾಲನೆ ಆರೋಪದ ಮೇರೆಗೆ ಕೆ.ಆರ್‌. ಪುರ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ. ಈ ದಂಡ ಪಾವತಿಸಿ ಅವರು ತೆರಳಿದ್ದಾರೆ.

ಬೈಕ್ ಸವಾರನ ನೆರವಿಗೆ ಧಾವಿಸಿ ದಂಡ

ಹೊಸಕೋಟೆ ರಸ್ತೆಯಲ್ಲಿ ಬೈಕ್ ಕೆಟ್ಟು ನಿಂತಿದ್ದನ್ನು ಗಮನಿಸಿದ ಅಜೀಜ್‌ ಅವರು, ಆ ಬೈಕ್ ಸವಾರನ ನೆರವಿಗೆ ಧಾವಿಸಿದ್ದಾರೆ. ತಮ್ಮ ಕಾರಿನ ಡೋರ್ ಹಿಡಿದುಕೊಂಡ ಬೈಕ್ ಸವಾರನನ್ನು ಎಳೆದುಕೊಂಡು ಅವರು ಸಾಗಿದ್ದಾರೆ.

ಈ ವಿಡಿಯೋವನ್ನು ಚಿತ್ರೀಕರಿಸಿದ ಸಾರ್ವಜನಿಕರೊಬ್ಬರು, ಸತ್ಯಾಸತ್ಯತೆ ತಿಳಿಯದೆ ರಸ್ತೆಯಲ್ಲಿ ಬೈಕ್ ಸವಾರನ ಹುಚ್ಚಾಟ ಎಂದು ಹೇಳಿ ವಿಡಿಯೋ ಹರಿಬಿಟ್ಟಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮಾಹಿತಿ ಆಧರಿಸಿ ಕಾರನ್ನು ಪತ್ತೆ ಹಚ್ಚಿದಾಗ ಪೊಲೀಸರಿಗೆ ನಿಜ ಸಂಗತಿ ಗೊತ್ತಾಗಿದೆ. ಆದರೆ ಕಾರು ಬಾಗಿಲನ್ನು ಬೈಕ್ ಸವಾರ ಹಿಡಿದುಕೊಂಡಿದ್ದರೂ ಕಾರು ಚಾಲನೆ ಮಾಡಿದ ತಪ್ಪಿಗೆ ಅಜೀಜ್ ಅವರಿಗೆ ದಂಡ ಬಿದ್ದಿದೆ ಎಂದು ಮೂಲಗಳು ಹೇಳಿವೆ.

Source link

Leave a Reply

Your email address will not be published. Required fields are marked *