Headlines

ಬಯಲಾಯ್ತು ಕಾಮಚಂದ್ರರಾವ್‌ ಐಪಿಎಸ್‌ ವಿಡಿಯೋಗಳ ಅಸಲಿ ಮುಖ– ಎಐ ಬಳಸಿ ಸೃಷ್ಟಿಸಿದ್ದಲ್ಲ | Investigation Confirms Ips Officer Ramachandra Rao Videos Found Real

ಬಯಲಾಯ್ತು ಕಾಮಚಂದ್ರರಾವ್‌ ಐಪಿಎಸ್‌ ವಿಡಿಯೋಗಳ ಅಸಲಿ ಮುಖ– ಎಐ ಬಳಸಿ ಸೃಷ್ಟಿಸಿದ್ದಲ್ಲ | Investigation Confirms Ips Officer Ramachandra Rao Videos Found Real



ಬಯಲಾಯ್ತು ಕಾಮಚಂದ್ರರಾವ್‌ ಐಪಿಎಸ್‌ ವಿಡಿಯೋಗಳ ಅಸಲಿ ಮುಖ– ಎಐ ಬಳಸಿ ಸೃಷ್ಟಿಸಿದ್ದಲ್ಲ | Investigation Confirms Ips Officer Ramachandra Rao Videos Found Real

ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ರಾಸಲೀಲೆ ಹಗರಣಕ್ಕೆ ಸಂಬಂಧಿಸಿದ ವಿಡಿಯೋಗಳು ಅಸಲಿ ಎಂದು ರಾಜ್ಯ ಸರ್ಕಾರಕ್ಕೆ ಎಡಿಜಿಪಿ ಆರ್‌.ಹಿತೇಂದ್ರ ನೇತೃತ್ವದ ವಿಚಾರಣಾ ಸಮಿತಿ ವರದಿ ಸಲ್ಲಿಸಿದೆ.

ಬೆಂಗಳೂರು : ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ರಾಸಲೀಲೆ ಹಗರಣಕ್ಕೆ ಸಂಬಂಧಿಸಿದ ವಿಡಿಯೋಗಳು ಅಸಲಿ ಎಂದು ರಾಜ್ಯ ಸರ್ಕಾರಕ್ಕೆ ಎಡಿಜಿಪಿ ಆರ್‌.ಹಿತೇಂದ್ರ ನೇತೃತ್ವದ ವಿಚಾರಣಾ ಸಮಿತಿ ವರದಿ ಸಲ್ಲಿಸಿದೆ.

ಈ ವಿಡಿಯೋಗಳು ಬಹಿರಂಗವಾದಾಗ, ತಮ್ಮ ತೇಜೋವಧೆಗೆ ಕೃತಕ ಬುದ್ಧಿಮತ್ತೆಯಿಂದ (ಎಐ) ವಿಡಿಯೋಗಳನ್ನು ಸೃಷ್ಟಿಸಲಾಗಿದೆ ಎಂದು ರಾಮಚಂದ್ರ ರಾವ್ ಹೇಳಿದ್ದರು. ಆದರೆ ಆ ವಿಡಿಯೋಗಳು ಅಸಲಿ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ತಜ್ಞರು ಸಲ್ಲಿಸಿದ ಅಭಿಪ್ರಾಯ ಆಧರಿಸಿ ಸರ್ಕಾರಕ್ಕೆ ಸುಮಾರು 100ಕ್ಕೂ ಹೆಚ್ಚು ಪುಟಗಳ ವರದಿಯನ್ನು ವಿಚಾರಣಾ ಸಮಿತಿ ಸಲ್ಲಿಸಿದೆ.

ಈ ವರದಿ ಸಲ್ಲಿಕೆ ಬೆನ್ನಲ್ಲೇ ರಾವ್ ವಿರುದ್ಧ ಇಲಾಖಾ ಮಟ್ಟದ ವಿಚಾರಣೆಗೆ (ಡಿಇ) ಸರ್ಕಾರ ಮುಂದಾಗಿದ್ದು, ಇನ್ನೆರೆಡು ತಿಂಗಳಲ್ಲಿ ಸೇವಾ ನಿವೃತ್ತಿ ಹೊಂದಲಿದ್ದ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ ಎಂದು ತಿಳಿದು ಬಂದಿದೆ.

2016-17ರ ಅವಧಿಯಲ್ಲಿ ರಾಮಚಂದ್ರ ರಾವ್ ಅವರು ಉತ್ತರ ವಲಯ ಐಜಿಪಿ ಆಗಿದ್ದ ಅವಧಿಯಲ್ಲಿ ಇಬ್ಬರು ಮಹಿಳೆಯರ ಜತೆ ಅವರಿಗೆ ‘ಆತ್ಮೀಯ ಒಡನಾಟ’ ಇತ್ತು. ಈ ಸಲುಗೆಯಲ್ಲಿ ತಮ್ಮ ಐಜಿಪಿ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಆ ಮಹಿಳೆಯರ ಜತೆ ಅನುಚಿತವಾಗಿ ರಾವ್‌ ನಡೆದುಕೊಂಡಿದ್ದಾರೆ. ಈ ವಿಡಿಯೋಗಳನ್ನು ಆ ಮಹಿಳೆಯರೇ ಚಿತ್ರೀಕರಿಸಿದ್ದಾರೆ ಎಂದು ತನ್ನ ವರದಿಯಲ್ಲಿ ಸಮಿತಿ ಉಲ್ಲೇಖಿಸಿದೆ ಎನ್ನಲಾಗಿದೆ.

ಎಫ್‌ಎಸ್‌ಎಲ್ ವರದಿ-ಸಮಿತಿ:

ಕಳೆದ ಜನವರಿಯಲ್ಲಿ ಆಗಿನ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಆಗಿದ್ದ ರಾಮಚಂದ್ರರಾವ್ ಅವರು ಪರ ಸ್ತ್ರೀಯರ ಜತೆ ನಡೆಸಿದ್ದಾರೆ ಎನ್ನಲಾದ ಅನುಚಿತ ವರ್ತನೆಯ ವಿಡಿಯೋಗಳು ಬಹಿರಂಗವಾಗಿದ್ದವು. ತಮ್ಮ ಕಚೇರಿಯಲ್ಲಿ ಸಮವಸ್ತ್ರದಲ್ಲೇ ಮಹಿಳೆಯರ ಜತೆ ಈ ರೀತಿಯ ವರ್ತನೆ ನಡೆಸಿದ್ದರಿಂದ ರಾವ್ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ರಾಸಲೀಲೆ ಹಗರಣ ಸರ್ಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿತು. ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ರಾಮಚಂದ್ರರಾವ್ ಅವರನ್ನು ಅಮಾನತುಗೊಳಿಸಿತು. ಅಲ್ಲದೆ ಈ ವಿಡಿಯೋಗಳ ಸತ್ಯಾಸತ್ಯತೆ ಪರಿಶೀಲನೆಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್‌.ಹಿತೇಂದ್ರ ನೇತೃತ್ವದಲ್ಲಿ ಮೂವರು ಐಪಿಎಸ್ ಅಧಿಕಾರಿಗಳನ್ನೊಳಗೊಂಡ ವಿಚಾರಣಾ ಸಮಿತಿಯನ್ನು ರಚಿಸಿತ್ತು. ಎರಡು ತಿಂಗಳ ವಿಚಾರಣೆ ನಡೆಸಿದ ಸಮಿತಿ, ಆ ವಿಡಿಯೋಗಳ ಪರೀಕ್ಷೆಗೆ ಎಫ್ಎಸ್‌ಎಲ್‌ಗೆ ರವಾನಿಸಿತು. ಇವುಗಳನ್ನು ಪರಿಶೀಲಿಸಿ ಆ ವಿಡಿಯೋಗಳು ಅಸಲಿ ಎಂದು ಸಮಿತಿಗೆ ಎಫ್‌ಎಸ್‌ಎಲ್ ತಜ್ಞರು ವರದಿ ಸಲ್ಲಿಸಿದ್ದಾರೆ.

ಕಚೇರಿ ಸಿಬ್ಬಂದಿ ಹೇಳಿಕೆ ದಾಖಲು:

ಈ ಲೈಂಗಿಕ ಕೃತ್ಯ ರಾಮಚಂದ್ರ ರಾವ್ ಅವರು ಉತ್ತರ ವಲಯ ಐಜಿಪಿ ಆಗಿದ್ದಾಗ ನಡೆದಿದ್ದು ಎಂಬುದು ಸಹ ಖಚಿತವಾಗಿದೆ. ಬೆಳಗಾವಿ ನಗರದಲ್ಲಿದ್ದ ಉತ್ತರ ವಲಯ ಐಜಿಪಿ ಕಚೇರಿಯಲ್ಲೇ ಸಮವಸ್ತ್ರದಲ್ಲಿ ಇಬ್ಬರು ಮಹಿಳೆಯರ ಜತೆ ಐಜಿಪಿ ಅನುಚಿತವಾಗಿ ನಡೆದುಕೊಂಡಿದ್ದರು. ಆ ಇಬ್ಬರು ಮಹಿಳೆಯರನ್ನು ಸಮಿತಿ ಗುರುತಿಸಿದೆ. ಅಲ್ಲದೆ ಈ ಬಗ್ಗೆ ಐಜಿಪಿ ಕಚೇರಿಯ ಸಿಬ್ಬಂದಿಯನ್ನು ವಿಚಾರಣೆ ನಡೆಸಿ ಸಮಿತಿ ಹೇಳಿಕೆ ಪಡೆದಿದೆ. ವಿಡಿಯೋದಲ್ಲಿ ಕಂಡು ಬಂದಿರುವ ಆ ಮಹಿಳೆಯರು ಐಜಿಪಿ ಕಚೇರಿಗೆ ಆಗಾಗ್ಗೆ ಬರುತ್ತಿದ್ದರು ಎಂಬುದನ್ನು ಸಿಬ್ಬಂದಿ ಖಚಿತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಕಾಮಪುರಾಣ?

– ಇತ್ತೀಚೆಗೆ ಮಹಿಳೆಯರ ಜತೆ ಐಪಿಎಸ್ ರಾಮಚಂದ್ರರಾವ್‌ ಚಕ್ಕಂದದ ವಿಡಿಯೋ ಬಹಿರಂಗ

– ಇದರ ಬೆನ್ನಲ್ಲೇ ವಿಡಿಯೋ ಸತ್ಯಾಸತ್ಯತೆ ಪರಿಶೀಲನೆಗಾಗಿ ತನಿಖೆಗೆ ಆದೇಶಿಸಿದ್ದ ಸರ್ಕಾರ

– ಇದು ಎಐ ದೃಶ್ಯ ಎಂಬ ರಾವ್‌ ಸ್ಪಷ್ಟನೆ ಸುಳ್ಳು. ಎಫ್‌ಎಸ್‌ಎಲ್‌ನಲ್ಲಿ ಅಸಲಿ ಎಂದು ದೃಢ

– 2016-17ರಲ್ಲಿ ಐಜಿ ಆಗಿದ್ದಾಗ 2 ಮಹಿಳೆಯರ ಜತೆ ಸಲುಗೆ ಹೊಂದಿ ಚಕ್ಕಂದ ಆಡಿದ್ದ ರಾವ್‌

– ಆ ವಿಡಿಯೋಗಳನ್ನು ಮಹಿಳೆಯರೇ ಚಿತ್ರೀಕರಿಸಿದ್ದರು ಎಂದು ದೃಢ. ಸರ್ಕಾರಕ್ಕೆ ವರದಿ ಸಲ್ಲಿಕೆ



Source link

Leave a Reply

Your email address will not be published. Required fields are marked *