2050ರಲ್ಲಿ ಇನ್‌ಫ್ಲುಯೆನ್ಸರ್‌ಗಳು (influencer) ಹೇಗಿರ್ತಾರೆ? ವಿಜ್ಞಾನಿಗಳ ಭಯಾನಕ ಊಹೆ! | How Will Be The Social Media Influencer Of 2050 Scientists Predict Bni

2050ರಲ್ಲಿ ಇನ್‌ಫ್ಲುಯೆನ್ಸರ್‌ಗಳು (influencer) ಹೇಗಿರ್ತಾರೆ? ವಿಜ್ಞಾನಿಗಳ ಭಯಾನಕ ಊಹೆ! | How Will Be The Social Media Influencer Of 2050 Scientists Predict Bni



2050ರಲ್ಲಿ ಇನ್‌ಫ್ಲುಯೆನ್ಸರ್‌ಗಳು (influencer) ಹೇಗಿರ್ತಾರೆ? ವಿಜ್ಞಾನಿಗಳ ಭಯಾನಕ ಊಹೆ! | How Will Be The Social Media Influencer Of 2050 Scientists Predict Bni

2050ರ ಹೊತ್ತಿಗೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ವೈಜ್ಞಾನಿಕ ಅಧ್ಯಯನವೊಂದು ಆಘಾತಕಾರಿ ಭವಿಷ್ಯ ನುಡಿದಿದೆ. ‘ಆವಾ’ ಎಂಬ ಮಾದರಿಯ ಮೂಲಕ, ನಿರಂತರ ಸ್ಕ್ರೀನ್ ಸಮಯ ಮತ್ತು ಒತ್ತಡದಿಂದಾಗುವ ದೈಹಿಕ ಕುರೂಪದ ಬಗ್ಗೆ ವಿಜ್ಞಾನಿಗಳು ಎಚ್ಚರಿಸಿದ್ದಾರೆ. 

ಇಂದು ಸೋಶಿಯಲ್ ಮೀಡಿಯಾ ಇಲ್ಲದೆ ಜೀವನವೇ ಇಲ್ಲ ಅನ್ನಿಸುವ ಕಾಲ. 25 ವರ್ಷಗಳ ಹಿಂದೆ “ಇನ್‌ಫ್ಲುಯೆನ್ಸರ್” ಅನ್ನೋ ಪದವೇ ಜನರಿಗೆ ಗೊತ್ತಿರಲಿಲ್ಲ. ಆದರೆ ಇಂದು ಲಕ್ಷಾಂತರ, ಕೋಟ್ಯಾಂತರ ರೂಪಾಯಿ ಗಳಿಸುವ ಡಿಜಿಟಲ್ ಸ್ಟಾರ್‌ಗಳು ಸಮಾಜದ ಪ್ರಮುಖ ಮುಖಗಳಾಗಿದ್ದಾರೆ. ಆದ್ರೆ… 2050ಕ್ಕೆ ಈ ಇನ್‌ಫ್ಲುಯೆನ್ಸರ್‌ಗಳು ಹೇಗಿರ್ತಾರೆ?

ಒಂದು ಹೊಸ ವೈಜ್ಞಾನಿಕ ಅಧ್ಯಯನ ಹೇಳುತ್ತಿರುವುದು ನಿಜಕ್ಕೂ ಶಾಕ್ ಆಗಿಸುವಂತದ್ದು! “ಅಲ್ಗೋರಿದಮ್”ಗಳ ಹಿಂದೆ ಓಡಿದ ಜೀವನದ ಬೆಲೆ ಹೀಗಿದೆ. ವಿಜ್ಞಾನಿಗಳು “ಆವಾ” (Ava) ಎಂಬ ಮಾದರಿ ವ್ಯಕ್ತಿಯನ್ನು ಸೃಷ್ಟಿಸಿ, ಭವಿಷ್ಯದ ಇನ್‌ಫ್ಲುಯೆನ್ಸರ್‌ ಹೇಗಿರಬಹುದು ಎಂದು ಚಿತ್ರಿಸಿದ್ದಾರೆ.

ಅವಳ ರೂಪ ಹೀಗಿದೆ: ಮೊಬೈಲ್, ಲ್ಯಾಪ್‌ಟಾಪ್ ಮುಂದೆ ಗಂಟೆಗಳ ಕಾಲ ಕುಳಿತುಕೊಳ್ಳುವುದರಿಂದ ಕುಗ್ಗಿದ ಬೆನ್ನು (hunched back). LED ಬೆಳಕಿಗೆ ಹೆಚ್ಚು ಒಳಗಾಗುವುದರಿಂದ ಚರ್ಮದ ಸಮಸ್ಯೆಗಳು ಮತ್ತು ಕಪ್ಪು ವಲಯಗಳು. ನಿರಂತರ ಫೇಸ್ ಫಿಲ್ಲರ್‌ಗಳಿಂದ ಮುಳ್ಳಿನಂತ ಮುಂಚಾಚಿದ ಗಲ್ಲ. ವರ್ಷಗಳ ಕಾಲ ಹೇರ್ ಎಕ್ಸ್‌ಟೆನ್ಷನ್ ಬಳಕೆ ಮಾಡಿದ್ದರಿಂದ ತಲೆಕೂದಲು ಉದುರುವುದು ಮತ್ತು ಬೋಳುತನ. ಸರಿಯಾದ ನಿದ್ರೆ ಇಲ್ಲದ ಕಾರಣ ಕಣ್ಣು ಕೆಳಗೆ ಊತ ಮತ್ತು ದೇಹದ ದೌರ್ಬಲ್ಯ.

ವಿಜ್ಞಾನಿಗಳ ಪ್ರಕಾರ, ಆವಾ ಭವಿಷ್ಯದ ಸೋಶಿಯಲ್ ಮೀಡಿಯಾ ಸ್ಟಾರ್‌ನ ಮುಖ. ಆದರೆ ಅವಳು ಇಂದಿನ ಪೀಳಿಗೆಗೆ ಒಂದು ಎಚ್ಚರಿಕೆಯೂ ಹೌದು.

90 ಗಂಟೆಗಳ ಆನ್‌ಲೈನ್‌ ಕೆಲಸವು ದೇಹದ ಮೇಲೆ ಬೀರುವ ಪರಿಣಾಮವಿದು. BBC ವರದಿ ಪ್ರಕಾರ, ಅನೇಕ ಇನ್‌ಫ್ಲುಯೆನ್ಸರ್‌ಗಳು ವಾರಕ್ಕೆ 90 ಗಂಟೆಗಳವರೆಗೂ ಕೆಲಸ ಮಾಡುತ್ತಾರೆ. ತಡರಾತ್ರಿ ವರೆಗೂ ಎಡಿಟಿಂಗ್, ಪೋಸ್ಟ್ ಮಾಡುವುದು, ಬ್ರ್ಯಾಂಡ್ ಶೂಟ್‌ಗಳು, ಟ್ರಿಪ್‌ಗಳು… ಈ ಸುದೀರ್ಘವಾದ ಕೆಲಸದ ಸಮಯದಿಂದಾಗಿ ದೀರ್ಘಕಾಲದ ದೌರ್ಬಲ್ಯ (chronic fatigue), ಮೆಲಟೊನಿನ್ ಉತ್ಪಾದನೆ ಕಡಿಮೆಯಾಗುವುದು, ಕೂದಲು ತೆಳ್ಳಗಾಗುವುದು, ಮಾನಸಿಕ ಒತ್ತಡ ಹೆಚ್ಚಾಗುವುದು, ಎಲ್ಲವೂ ಸಂಭವಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಗ್ಲಾಮರ್ ಜೀವನದ ಒಳಗಿನ ಕಥೆ

ಇನ್‌ಫ್ಲುಯೆನ್ಸರ್ ಜೀವನ ಹೊರಗೆ ನೋಡಿದಾಗ ಲಕಲಕ ಮಿನುಗುವಂತೆ ಕಾಣಬಹುದು — ಬ್ರ್ಯಾಂಡ್ ಟ್ರಿಪ್‌ಗಳು, ಫೋಟೋಶೂಟ್‌ಗಳು, ಫಿಲ್ಟರ್‌ಗಳು, ಲಕ್ಷಾಂತರ ಫಾಲೋವರ್‌ಗಳು ಇವೆಲ್ಲದರಿಂದ ಕೂಡಿರುತ್ತದೆ. ಆದರೆ ಈ “ಪರ್ಫೆಕ್ಟ್” ಜೀವನದ ಹಿಂದೆ ದೇಹ ಮತ್ತು ಮನಸ್ಸು ಹೊರುವ ಒತ್ತಡವನ್ನು ನಾವು ಗಮನಿಸುತ್ತಿಲ್ಲ.

ತಜ್ಞರು ಹೇಳಿರುವುದು ಭವಿಷ್ಯವೇ ಅಥವಾ ಎಚ್ಚರಿಕೆಯೇ? 2050ರ ಇನ್‌ಫ್ಲುಯೆನ್ಸರ್‌ಗಳ ಬಗ್ಗೆ ವಿಜ್ಞಾನಿಗಳ ಈ ಊಹೆ ನಿಜವಾಗುತ್ತದೆಯೇ ಗೊತ್ತಿಲ್ಲ. ಆದರೆ ಒಂದು ವಿಷಯ ಸ್ಪಷ್ಟ: ಅಲ್ಗೋರಿದಮ್‌ಗಳ ಹಿಂದೆ ಓಡುತ್ತಾ, ನಿರಂತರವಾಗಿ ಕಂಟೆಂಟ್ ಸೃಷ್ಟಿಸುತ್ತಾ, ಸೌಂದರ್ಯದ ಮಾನದಂಡಗಳನ್ನು ಬೆನ್ನಟ್ಟುತ್ತಾ ಹೋದರೆ ಅದರ ಪರಿಣಾಮ ದೇಹದ ಮೇಲೂ, ಮನಸ್ಸಿನ ಮೇಲೂ ಕಾಣಿಸಬಹುದು.

ದೇಹದ ಕತೆ ಹೀಗಾಯ್ತು. ಮನಸ್ಸು ಕೂಡ ನಾವು ಹೇಳಿದಂತೆ ಕೇಳಲಾರದು. ಇನ್‌ಫ್ಲುಯೆನ್ಸರ್‌ಗಳ ಮುಂದಿನ ಪೀಳಿಗೆ, ಅವರ ಮುಂದಿನ ಪೀಳಿಗೆ ಹೇಗಿರಬಹುದು ಎಂಬುದನ್ನು ಊಹಿಸಿಕೊಳ್ಳಿ. ಹುಟ್ಟಿನಿಂದಲೇ ಲೈಕು, ಶೇರ್‌, ಲುಕ್‌ಗಾಗಿ ಹಾತೊರೆಯುವ ಅವರ ಜೀವನ ಹೇಗಿದ್ದೀತು! ಸದಾ ಜನಪ್ರಿಯತೆಗಾಗಿ ಹೋರಾಡುತ್ತಿರುವ ಅದರ ಕಷ್ಟ ಯಾರಿಗೂ ಬೇಡ.

ಈಗಾಗಲೇ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಾಗಿರುವ ಹಲವು ಮಕ್ಕಳನ್ನು ನಾವು ನೋಡಿರುತ್ತೇವೆ. ಅವರು ಮಾಡುವುದೆಲ್ಲವೂ ಮುದ್ದಾಗಿಯೇ ಕಾಣಿಸುತ್ತದೆ. ಆದರೆ ಅವರನ್ನು ತಯಾರು ಮಾಡುತ್ತಿರುವವರ ಹಿಂದೆ ಲಾಭದ ಉದ್ದೇಶ ಇರುತ್ತದೆ. ಮಕ್ಕಳಿಗೆ ತಮ್ಮ ಬಾಲ್ಯ ಕಳೆದುಕೊಳ್ಳುತ್ತಿರುವುದರ ಅರಿವೇ ಇಲ್ಲ.

ಸೋಶಿಯಲ್ ಮೀಡಿಯಾ ಯಶಸ್ಸು ಚೆನ್ನವೇ. ಆದರೆ ನಮ್ಮ ತಲೆಮಾರಿನ ಹಾಗೂ ಮುಂದಿನ ತಲೆಮಾರಿನ ಆರೋಗ್ಯವೇ ನಮ್ಮ ಅತಿ ದೊಡ್ಡ ಸಂಪತ್ತು ಅನ್ನೋದನ್ನು ಮರೆಯಬಾರದು.



Source link

Leave a Reply

Your email address will not be published. Required fields are marked *