Santosh Lad on MLA foreign trip ಶಾಸಕರು ವಿದೇಶಕ್ಕೆ ಹೋಗಿ ರಾಜಕಾರಣ ಮಾಡೋಕೆ ಆಗುತ್ತಾ?: ಸಚಿವ ಲಾಡ್‌ | Minister Santosh Lad Slams Leaders For Playing Politics Overseas

Santosh Lad on MLA foreign trip ಶಾಸಕರು ವಿದೇಶಕ್ಕೆ ಹೋಗಿ ರಾಜಕಾರಣ ಮಾಡೋಕೆ ಆಗುತ್ತಾ?: ಸಚಿವ ಲಾಡ್‌ | Minister Santosh Lad Slams Leaders For Playing Politics Overseas


Santosh Lad on MLA foreign trip ಶಾಸಕರು ವಿದೇಶಕ್ಕೆ ಹೋಗಿ ರಾಜಕಾರಣ ಮಾಡಲು ಸಾಧ್ಯವೇ ಎಂದು ಸಚಿವ ಸಂತೋಷ ಲಾಡ್ ಪ್ರಶ್ನಿಸಿದ್ದಾರೆ. ಸಾರಿಗೆ ನೌಕರರ ಬೇಡಿಕೆಗಳಿಗೆ ಸಹಮತ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ 50 ಸಾವಿರ ಸರ್ಕಾರಿ ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಧಾರವಾಡ (ಫೆ.20) ವಿದೇಶಕ್ಕೆ ಹೋಗಿ ಶಾಸಕರು ರಾಜ್ಯದ ರಾಜಕಾರಣ ಮಾಡಲು ಸಾಧ್ಯವೇ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮಾಡುವಾಗ ಅವರ ಶಾಸಕರು ಎಲ್ಲಿಗೆ ಹೋಗಿದ್ದರು. ಅವರ ಪ್ರವಾಸದ ಬಗ್ಗೆ ಹೇಳಬೇಕಾ? ವಿದೇಶಕ್ಕೆ ಹೋಗಿರುವ ನಮ್ಮ ಹತ್ತಿಪ್ಪತ್ತು ಶಾಸಕರಿಂದ ಅಲ್ಲಿ ಹೋಗಿ ರಾಜಕಾರಣ ಮಾಡಲು ಸಾಧ್ಯವೇ? ಅವರೇನೂ ಅಲ್ಲಿಗೆ ಹೋಗಿ ಮತಗಳನ್ನು ಹಾಕುತ್ತಾರಾ? ಎಂದ ಲಾಡ್‌, ಸರ್ಕಾರದಿಂದ ಅಥವಾ ವೈಯಕ್ತಿಕವಾಗಿ ವಿದೇಶ ಪ್ರವಾಸಕ್ಕೆ ಹೋಗಿದ್ದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೆಎಸ್‌ಆರ್‌ಟಿಸಿ ನೌಕರರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಲಾಡ್‌, ಸಾರಿಗೆ ನೌಕರರ ಬೇಡಿಕೆಗಳು ನಿಜವಾಗಿದ್ದು, ಹೋರಾಟಕ್ಕೆ ಸಹಮತವಿದೆ. ಎಲ್ಲ ಸರ್ಕಾರಗಳಲ್ಲಿ ಹೋರಾಟಗಳು ನಡೆಯುತ್ತವೆ. ಈ ಬಗ್ಗೆ ಸಾರಿಗೆ ಇಲಾಖೆ ಸಚಿವರು ಗಮನ ಹರಿಸಿ ಪರಿಹರಿಸುತ್ತಾರೆ ಎಂದರು.

ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾತನಾಡಿದ ಅವರು, ಈಗಾಗಲೇ 50 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ. ಒಳ ಮೀಸಲಾತಿ ಸೇರಿದಂತೆ ಕೋರ್ಟ್ ವಿಚಾರ ಬಗೆಹರಿದ ನಂತರ ಇತರೆ ಹುದ್ದೆಗಳ ನೇಮಕಾತಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

YouTube video player



Source link

Leave a Reply

Your email address will not be published. Required fields are marked *