ಬೀಚ್‌ನಲ್ಲಿ ಗಾಂಜಾ ಒಣಗಲು ಹಾಕಿ ಅಲ್ಲೇ ನಿದ್ದೆಗೆ ಜಾರಿದ ಆರೋಪಿಯ ಬಂಧನ | Kerala Man Arrested In Kozhikode Beach For Drying Ganja On Seashore

ಬೀಚ್‌ನಲ್ಲಿ ಗಾಂಜಾ ಒಣಗಲು ಹಾಕಿ ಅಲ್ಲೇ ನಿದ್ದೆಗೆ ಜಾರಿದ ಆರೋಪಿಯ ಬಂಧನ | Kerala Man Arrested In Kozhikode Beach For Drying Ganja On Seashore



ಬೀಚ್‌ನಲ್ಲಿ ಗಾಂಜಾ ಒಣಗಲು ಹಾಕಿ ಅಲ್ಲೇ ನಿದ್ದೆಗೆ ಜಾರಿದ ಆರೋಪಿಯ ಬಂಧನ | Kerala Man Arrested In Kozhikode Beach For Drying Ganja On Seashore

ಕೇರಳದ ಕೋಝಿಕೋಡ್ ಬೀಚ್‌ನಲ್ಲಿ ಗಾಂಜಾ ಒಣಗಿಸಲು ಹಾಕಿ ನಿದ್ರೆಗೆ ಜಾರಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಂಜಾನೆ ವಾಕಿಂಗ್ ಬಂದವರು ಇದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿಯಿಂದ 372 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. 

ಬೀಚ್‌ನಲ್ಲಿ ಗಾಂಜಾ ಒಣ ಹಾಕಿ ಆಕಸ್ಮಿಕವಾಗಿ ನಿದ್ದೆಗೆ ಜಾರಿದ ಆರೋಪಿ:

ಬೀಚ್‌ನಲ್ಲಿ ಗಾಂಜಾ ಒಣ ಹಾಕಿ ಅಲ್ಲೇ ನಿದ್ದೆಗೆ ಜಾರಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳದ ಕೋಝಿಕೋಡ್ ಬೀಚ್ ಬಳಿ ಈ ಘಟನೆ ನಡೆದಿದೆ. 39 ವರ್ಷದ ಮೊಹಮ್ಮದ್ ರಫಿ ಬಂಧಿತ ಆರೋಪಿ. ಮೊಹಮ್ಮದ್ ರಫಿ ಬೀಚ್‌ನಲ್ಲಿ ನ್ಯೂಸ್ ಪೇಪರ್ ಹಾಸಿ ಅದರ ಮೇಲೆ ಗಾಂಜಾ ಹಾಸಿ ರಾತ್ರಿಯೆಲ್ಲಾ ಒಣಗಿಸುವುದಕ್ಕೆ ಪ್ರಯತ್ನಿಸಿದ್ದಾನೆ. ಆದರೆ ಮುಂಜಾನೆ ವೇಳೆ ಈತನಿಗೆ ನಿದ್ರೆ ಬಂದಿದ್ದು, ಆತ ನಿದ್ರೆಗೆ ಜಾರಿದ್ದಾನೆ. ಮುಂಜಾನೆ ಬೀಚ್‌ಗೆ ವಾಕ್ ಬಂದವರು ಬೀಚ್‌ನಲ್ಲಿ ಹರಡಿದ್ದ ಗಾಂಜಾ ಹಾಗೂ ಮಲಗಿದ್ದ ಆರೋಪಿಯನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಬಂದು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಮೊಹಮ್ಮದ್ ರಫಿ ಪುತಿಯಕಡವು ನಿವಾಸಿಯಾಗಿದ್ದಾನೆ. ಬೆಳಿಗ್ಗೆ 7 ಗಂಟೆ ಸುಮಾರಿಗೆ ಕಡಲತೀರಕ್ಕೆ ವಾಕ್ ಬಂದ ಜನರಿಗೆ ಅಲ್ಲಿದ್ದ ಟೆಂಟೊಂದರಲ್ಲಿ ವ್ಯಕ್ತಿಯೊಬ್ಬ ಮಲಗಿರುವುದು ಪಕ್ಕದಲ್ಲೇ ಪೇಪರ್‌ ಮೇಲೆ ಗಾಂಜಾ ಹರಡಿರುವುದನ್ನು ನೋಡಿದ್ದಾರೆ ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಆತನಿಗೆ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಜಾಲದ ಹಿಂದಿರುವ ಇತರರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿ ಆತನಿಂದ ವಶಕ್ಕೆ ಪಡೆದ ವಸ್ತುಗಳ ಬಗ್ಗೆ ಬಾಯ್ಬಿಟ್ಟಿಲ್ಲ ಆದರೆ ನಗರದ ವಿವಿಧ ಭಾಗಗಳಲ್ಲಿ ಸಗಟು ವ್ಯಾಪಾರಕ್ಕಾಗಿ ಆತ ಇದನ್ನು ಬೇರೆ ರಾಜ್ಯಗಳಿಂದ ತಂದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಾಲೇಜು ದಿನಗಳಿಂದಲೇ ಆರಂಭವಾದ ಪ್ರೀತಿ 9 ವರ್ಷಗಳ ನಂತರ ಮದುವೆ: ಎರಡೇ ತಿಂಗಳಿಗೆ ಗಂಡನ ಕೊಲೆ

ವೆಳ್ಳಾಯಿಲ್ ಪೊಲೀಸರ ಪ್ರಕಾರ, ಆರೋಪಿ ಮೊಹಮ್ಮದ್ ರಫಿ ಹಲವಾರು ಮಾದಕವಸ್ತು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ವೆಳ್ಳಯಿಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದಾಗ, ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ತಕ್ಷಣವೇ ಆತನನ್ನು ಪೊಲೀಸರು ಬಂಧಿಸಿದರು. ಪೊಲೀಸರು ಆತನ ಬಳಿ ಇದ್ದ 372 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಗಾಂಜಾ ತನಗೆ ಸೇರಿದ್ದಲ್ಲ ಎಂದು ಆರೋಪಿ ಹೇಳಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಲಾ ವಲಯದ ಬಳಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಉದ್ದೇಶಿಸಲಾಗಿತ್ತು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಇದನ್ನೂ ಓದಿ: ಬಾಲಕನ ಮೊಮೊಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್ಷ ಮೌಲ್ಯದ ಬಂಗಾರ ಮಾಯ



Source link

Leave a Reply

Your email address will not be published. Required fields are marked *