Headlines

F16 crash ಏರ್‌ಪೋರ್ಟ್ ಬಳಿ F16 ಯುದ್ಧ ವಿಮಾನ ಪತನ, ಸುರಕ್ಷಿತವಾಗಿ ಹೊರಬಂದ ಪೈಲೆಟ್ ವಿಡಿಯೋ | F16 Fighter Jet Crash At California Pilot Eject Safey With Minor Injury

F16 crash ಏರ್‌ಪೋರ್ಟ್ ಬಳಿ F16 ಯುದ್ಧ ವಿಮಾನ ಪತನ, ಸುರಕ್ಷಿತವಾಗಿ ಹೊರಬಂದ ಪೈಲೆಟ್ ವಿಡಿಯೋ | F16 Fighter Jet Crash At California Pilot Eject Safey With Minor Injury



F16 crash ಏರ್‌ಪೋರ್ಟ್ ಬಳಿ F16 ಯುದ್ಧ ವಿಮಾನ ಪತನ, ಸುರಕ್ಷಿತವಾಗಿ ಹೊರಬಂದ ಪೈಲೆಟ್ ವಿಡಿಯೋ | F16 Fighter Jet Crash At California Pilot Eject Safey With Minor Injury

ಏರ್‌ಪೋರ್ಟ್ ಬಳಿ F16 ಯುದ್ಧ ವಿಮಾನ ಪತನ, ಸುರಕ್ಷಿತವಾಗಿ ಹೊರಬಂದ ಪೈಲೆಟ್ ವಿಡಿಯೋ, ತೇಜಸ್ ವಿಮಾನ ಪತನದ ಬೆನ್ನಲ್ಲೇ ಇದೀಗ ಯುದ್ಧ ವಿಮಾನ ಹಾರಾಟ ಆರಂಭಿಸಿದ ಕೆಲವೇ ನಿಮಿಷದಲ್ಲಿ ಎಫ್‌16 ಥಂಡರ್‌ಬರ್ಡ ಪತನಗೊಂಡಿದೆ.

ಕ್ಯಾಲಿಫೋರ್ನಿಯಾ (ಡಿ.04) ದುಬೈ ಏರ್ ಶೋನಲ್ಲಿ ಭಾರತದ ತೇಜಸ್ ಯುದ್ಧ ವಿಮಾನ ಪತನಗೊಂಡು ಪೈಲೆಟ್ ಮೃತಪಟ್ಟಿದ್ದರು. ಯುದ್ದ ವಿಮಾನದ ಹಾರಾಟದ ವೇಳೆ ಸಾಹಸ ಪ್ರದರ್ಶಿಸುತ್ತಿದ್ದ ವೇಳೆ ತೇಜಸ್ ಯುದ್ದ ವಿಮಾನ ಪತನಗೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಅಮೆರಿಕದ ಅತ್ಯಾಧುನಿಕ ಹಾಗೂ ವಿಶ್ವದ ನಂಬರ್ 1 ಎಂದೇ ಗುರುತಿಸಿಕೊಂಡಿರುವ ಎಫ್ 16 ಥಂಡರ್‌ಬರ್ಡ್ ಯುದ್ದ ವಿಮಾನ ಪತನಗೊಂಡಿದೆ. ಕ್ಯಾಲಿಫೋರ್ನಿಯಾದ ಟ್ರೋನಾ ವಿಮಾನ ನಿಲ್ದಾಣದ ಬಳಿಕ F16 ಯುದ್ಧ ವಿಮಾನ ಪತಗೊಂಡಿದೆ.ಇಂಧನ ಭರ್ತಿಯಿದ್ದ ಈ ವಿಮಾನ ಪತನಗೊಂಡ ಕ್ಷಣದಲ್ಲೇ ಸ್ಫೋಟಗೊಂಡದೆ. ಅದೃಷ್ಠವಶಾತ್ ವಿಮಾನ ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ ಪೈಲೆಟ್ ಪ್ಯಾರಾಚ್ಯೂಟ್ ಮೂಲಕ ಸುರಕ್ಷಿತವಾಗಿ ಹೊರಬಂದಿದ್ದಾರೆ.

ಗಾಯಗೊಂಡ ಪೈಲೆಟ್‌ಗೆ ಚಿಕಿತ್ಸೆ

ಅಮೆರಿಕದ ಯುದ್ಧ ವಿಮಾನ F16 ಪತನಗೊಳ್ಳುತ್ತಿದ್ದಂತೆ ವಿಮಾನದಿಂದ ಹೊರಬಂದ ಪೈಲೆಟ್ ಪ್ಯಾರಾಚ್ಯೂಟ್ ಮೂಲಕ ಕೆಳಕ್ಕೆ ಇಳಿದಿದ್ದಾರೆ. ವಿಪರೀತ ಗಾಳಿ ಹಾಗೂ ಪ್ರತಿಕೂಲ ಹವಾಮಾನದಿಂದ ಪೈಲೆಟ್ ಲ್ಯಾಂಡಿಂಗ್ ಕೊಂಚ ಗಲಿಬಿಲಿಯಾಗಿದೆ. ಹೀಗಾಗಿ ಪೈಲೆಟ್ ಗಾಯಗೊಂಡಿದ್ದಾರೆ. ಗಾಯಗೊಂಡ ಪೈಲೆಟ್‌ಗೆ ಚಿಕಿತ್ಸೆ ನೀಡಲಾಗಿದೆ. ಸದ್ಯ ಪೈಲೆಟ್ ಆರೋಗ್ಯ ಸ್ಥಿರವಾಗಿದೆ.

ವಿಮಾನ ಪತನಕ್ಕೆ ಕಾರಣವೇನು?

ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ, ಅಮೆರಿಕ ಎಫ್‌16 ವಿಮಾನ ಪತನಕ್ಕೆ ಸ್ಪಷ್ಟ ಕಾರಣಗಳು ಲಭ್ಯವಾಗಿಲ್ಲ. ತಾಂತ್ರಿಕ ದೋಷವೇ ಅಥವಾ ಇನ್ಯಾವುದೇ ಕಾರಣವಿದೆಯಾ ಅನ್ನೋ ಕುರಿತು ತನಿಖೆ ನಡೆಯುತ್ತಿದೆ. ಅಮರಿಕ ವಾಯು ಸೇನೆ ತನಿಖೆಗೆ ಆದೇಶಿಸಿದೆ. ಪೈಲೆಟ್ ಹಾರಾಟ ಆರಂಭಿಸಿದ ಕೆಲ ಕ್ಷಣದಲ್ಲಿ ವಿಮಾನ ಪತನಗೊಂಡಿದೆ. ಇಂದು (ಡಿ.04) ಬೆಳಗ್ಗೆ 10.45ಕ್ಕೆ ಘಟನೆ ನಡೆದಿದೆ.

ಆಗಸದಲ್ಲಿ ವಿಮಾನ ಕಸರತ್ತು ಪ್ರದರ್ಶನದ ವೇಳೆ ಯುದ್ದ ವಿಮಾನ ಪತನಗೊಂಡಿದೆ ಎಂದು ಹೇಳಲಾಗಿದೆ. ಇದು ತರಬೇತಿ ವೇಳೆಯೋ ಅಥವಾ ಸಾಹಸ ಪ್ರದರ್ಶನದ ತಾಲೀಮು ವೇಳೆ ಪತನಗೊಂಡಿದೆಯೋ ಅನ್ನೋದು ಸ್ಪಷ್ಟವಿಲ್ಲ. ವಾಯುಸೇನೆಯ ವ್ಯಾಪ್ತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದಿದೆ.

Scroll to load tweet…

ಅಮೆರಿಕದ ಎಫ್16 ಪತನ

ಅಮೆರಿಕದ ಎಫ್16 ಯುದ್ಧ ವಿಮಾನ ಪತನ ಸಾಮಾನ್ಯ ಮಾತಲ್ಲ. ಇತ್ತೀಚೆಗೆ ತೇಜಸ್ ಯುದ್ದ ವಿಮಾನ ಪತನಗೊಂಡಾಗ ಕೆಲವರು ಭಾರತದ ಯುದ್ಧ ವಿಮಾನಗಳ ಗುಣಮಟ್ಟದ ಬಗ್ಗೆ ಪ್ರಶ್ನಿಸಿದ್ದರು. ಆದರೆ ತೇಜಸ್ ಇತಿಹಾಸದಲ್ಲೇ ನಡದ 2ನೇ ಪತನ ಆದಾಗಿತ್ತು. ಆದರೆ ವಿಶ್ವದ ನಂಬರ್ 1 ಎನಿಸಿಕೊಂಡ ಅಮೆರಿಕದ ಎಫ್16 ಯುದ್ದ ವಿಮಾನ ಪತನ ಇದೀಗ ಅಮರಿಕ ಯುದ್ಧ ವಿಮಾನಗಳ ಗುಣಮಟ್ಟದ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಕಾರಣ ಹಲವು ಬಾರಿ ಎಫ್16 ಯುದ್ಧ ವಿಮಾನ ಪತನಗೊಡಿದೆ.



Source link

Leave a Reply

Your email address will not be published. Required fields are marked *