Headlines

Allu Arjun: ಹುಟ್ಟುಹಬ್ಬಕ್ಕೆ ಫ್ಯಾನ್ಸ್‌ಗೆ ಬಿಗ್ ಸರ್ಪ್ರೈಸ್ ಕೊಟ್ಟ ಬನ್ನಿ: ಪ್ರೀ-ಲುಕ್‌ನಲ್ಲೇ ಗೂಸ್‌ಬಂಪ್ಸ್! | Allu Arjun Birthday Title Teaser Atlee Movie Aa22xa6 Gvd

Allu Arjun: ಹುಟ್ಟುಹಬ್ಬಕ್ಕೆ ಫ್ಯಾನ್ಸ್‌ಗೆ ಬಿಗ್ ಸರ್ಪ್ರೈಸ್ ಕೊಟ್ಟ ಬನ್ನಿ: ಪ್ರೀ-ಲುಕ್‌ನಲ್ಲೇ ಗೂಸ್‌ಬಂಪ್ಸ್! | Allu Arjun Birthday Title Teaser Atlee Movie Aa22xa6 Gvd


ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. ಬನ್ನಿ ಹುಟ್ಟುಹಬ್ಬದ ಪ್ರಯುಕ್ತ ಬಿಗ್ ಅಪ್‌ಡೇಟ್ ಒಂದು ಹೊರಬೀಳಲಿದೆ. ಸದ್ಯ ಅಟ್ಲಿ ಜೊತೆ ಐಕಾನ್ ಸ್ಟಾರ್ ಮಾಡುತ್ತಿರುವ ಪ್ಯಾನ್ ವರ್ಲ್ಡ್ ಸಿನಿಮಾದ ಟೈಟಲ್ ಅನೌನ್ಸ್ ಆಗಲಿದೆ.

ಪುಷ್ಪ ಸಿನಿಮಾ ನಂತರ ಅಲ್ಲು ಅರ್ಜುನ್‌ಗೆ ಸಿಕ್ಕ ಕ್ರೇಜ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಬನ್ನಿ ಖ್ಯಾತಿ ಈಗ ದೇಶಾದ್ಯಂತ ಹೆಚ್ಚಾಗಿದೆ. ಒಂದು ಕಾಲದಲ್ಲಿ ಟಾಲಿವುಡ್‌ಗೆ ಸೀಮಿತವಾಗಿದ್ದ ಅಲ್ಲು ಅರ್ಜುನ್‌ಗೆ, ಪುಷ್ಪ ಚಿತ್ರದ ನಂತರ ಉತ್ತರ ಭಾರತದಲ್ಲೂ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ಹೀಗಾಗಿಯೇ ಬಾಲಿವುಡ್ ನಿರ್ದೇಶಕರು ಕೂಡ ಅಲ್ಲು ಜೊತೆ ಸಿನಿಮಾ ಮಾಡಲು ಕಾಯುತ್ತಿದ್ದಾರೆ. ಐಕಾನ್ ಸ್ಟಾರ್ ಈಗ ಪ್ಯಾನ್ ಇಂಡಿಯಾದಿಂದ ಪ್ಯಾನ್ ವರ್ಲ್ಡ್ ಮಟ್ಟಕ್ಕೆ ಬೆಳೆದಿದ್ದಾರೆ. ಸದ್ಯ ಅಟ್ಲಿ ಜೊತೆ ಸುಮಾರು 1000 ಕೋಟಿ ಬಜೆಟ್‌ನ ಚಿತ್ರ ಮಾಡುತ್ತಿದ್ದಾರೆ.

ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಈಗಾಗಲೇ ಸಂಭ್ರಮ ಶುರು ಮಾಡಿದ್ದಾರೆ. ದೇಶಾದ್ಯಂತ ಬನ್ನಿ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹಳೆಯ ಫೋಟೋ, ವಿಡಿಯೋ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಇನ್ನೊಂದೆಡೆ, ಅಭಿಮಾನಿಗಳು ಅಲ್ಲು ಅರ್ಜುನ್ ಹೊಸ ಸಿನಿಮಾ ಅಪ್‌ಡೇಟ್‌ಗಾಗಿ ಕಾಯುತ್ತಿದ್ದರು. ಈ ನಿರೀಕ್ಷೆಯಂತೆಯೇ, ಅಟ್ಲಿ ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ಸದ್ಯ ಅಲ್ಲು ಅರ್ಜುನ್, ಕಾಲಿವುಡ್ ಸ್ಟಾರ್ ನಿರ್ದೇಶಕ ಅಟ್ಲಿ ಜೊತೆ ಒಂದು ಭಾರೀ ಬಜೆಟ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. AA22xA6 ಎಂಬ ವರ್ಕಿಂಗ್ ಟೈಟಲ್‌ನಡಿ ಸಿನಿಮಾ ಸೆಟ್ಟೇರಿದೆ. ಅಲ್ಲು ಅರ್ಜುನ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಭಯಾನಕ ಕೈ, ಅದರ ಚೂಪಾದ ಉಗುರುಗಳು ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿವೆ. ಈ ಸಿನಿಮಾದ ಟೈಟಲ್ ಪೋಸ್ಟರ್ ಅನ್ನು ಏಪ್ರಿಲ್ 8 ರಂದು ಬೆಳಗ್ಗೆ 11 ಗಂಟೆಗೆ ರಿಲೀಸ್ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ. ಇದರಿಂದ ಅಭಿಮಾನಿಗಳ ಉತ್ಸಾಹ ದುಪ್ಪಟ್ಟಾಗಿದೆ.

ಈ ಕಾಂಬಿನೇಷನ್ ಮೇಲೆ ಈಗಾಗಲೇ ಭಾರಿ ನಿರೀಕ್ಷೆಗಳಿವೆ. ಈ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಚಿತ್ರದ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ಈ ಚಿತ್ರವನ್ನು ಖ್ಯಾತ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ ನಿರ್ಮಿಸುತ್ತಿದೆ. ಕಾಲಿವುಡ್‌ನ ಯುವ ಸಂಗೀತ ಸಂವೇದನೆ ಸಾಯಿ ಅಭ್ಯಂಕರ್ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ಹಿಂದಿಯಲ್ಲಿ ‘ಜವಾನ್’ ಚಿತ್ರದ ಮೂಲಕ ಶಾರುಖ್ ಖಾನ್‌ಗೆ ಭರ್ಜರಿ ಹಿಟ್ ಕೊಟ್ಟಿರುವ ಅಟ್ಲಿ, ಈಗ ಅಲ್ಲು ಅರ್ಜುನ್ ಜೊತೆ ಯಾವ ರೀತಿಯ ಪ್ರಾಜೆಕ್ಟ್ ತರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಈ ಸಿನಿಮಾ ಒಂದು ಹೈ ವೋಲ್ಟೇಜ್ ಆ್ಯಕ್ಷನ್ ಎಂಟರ್‌ಟೈನರ್ ಆಗಿ ಮೂಡಿಬರುತ್ತಿದೆ ಎನ್ನಲಾಗಿದೆ. ಅಟ್ಲಿ ಮಾರ್ಕ್ ಮಾಸ್ ಎಲಿಮೆಂಟ್ಸ್ ಜೊತೆಗೆ, ದೊಡ್ಡ ಮಟ್ಟದ ಎಫೆಕ್ಟ್ಸ್ ಇರಲಿವೆ ಎಂಬ ಮಾತು ಕೇಳಿಬರುತ್ತಿದೆ. ಈ ಪ್ರಾಜೆಕ್ಟ್‌ಗೆ ಸಂಬಂಧಿಸಿದ ಹಲವು ವಿವರಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಮುಂಬೈಗೆ ಶಿಫ್ಟ್ ಆಗಿದ್ದಾರೆ. ಅಲ್ಲೇ ಫ್ಲ್ಯಾಟ್ ತೆಗೆದುಕೊಂಡು ಸಿನಿಮಾಕ್ಕಾಗಿ ಹಾರ್ಡ್ ವರ್ಕ್ ಮಾಡುತ್ತಿದ್ದಾರೆ.



Source link

Leave a Reply

Your email address will not be published. Required fields are marked *