Headlines

‘ನ್ಯಾಟೋ’ ರಾಷ್ಟ್ರಗಳು ಹೇಡಿಗಳು- ನಾವಿಲ್ಲದೆ ಅವರು ಕಾಗದದ ಹುಲಿ : ಟ್ರಂಪ್‌ ಚಾಟಿ | Nato Nations Are Cowards Donald Trump Slams Allies

‘ನ್ಯಾಟೋ’ ರಾಷ್ಟ್ರಗಳು ಹೇಡಿಗಳು- ನಾವಿಲ್ಲದೆ ಅವರು ಕಾಗದದ ಹುಲಿ : ಟ್ರಂಪ್‌ ಚಾಟಿ | Nato Nations Are Cowards Donald Trump Slams Allies



‘ನ್ಯಾಟೋ’ ರಾಷ್ಟ್ರಗಳು ಹೇಡಿಗಳು- ನಾವಿಲ್ಲದೆ ಅವರು ಕಾಗದದ ಹುಲಿ : ಟ್ರಂಪ್‌ ಚಾಟಿ | Nato Nations Are Cowards Donald Trump Slams Allies

ಇರಾನ್‌ ವಿರುದ್ಧದ ಯುದ್ಧದಲ್ಲಿ ಹಾಗೂ ಹೋರ್ಮುಜ್‌ ಜಲಸಂಧಿಯನ್ನು ಕಾಯುವಲ್ಲಿ ತಮಗೆ ಸಹಕಾರ ನೀಡದ ನ್ಯಾಟೋ ಕೂಟದ ರಾಷ್ಟ್ರಗಳ ವಿರುದ್ಧ ಕೆಂಡಾಮಂಡಲರಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್‌: ಇರಾನ್‌ ವಿರುದ್ಧದ ಯುದ್ಧದಲ್ಲಿ ಹಾಗೂ ಹೋರ್ಮುಜ್‌ ಜಲಸಂಧಿಯನ್ನು ಕಾಯುವಲ್ಲಿ ತಮಗೆ ಸಹಕಾರ ನೀಡದ ನ್ಯಾಟೋ ಕೂಟದ ರಾಷ್ಟ್ರಗಳ ವಿರುದ್ಧ ಕೆಂಡಾಮಂಡಲರಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ನೀವೆಲ್ಲಾ ಹೇಡಿಗಳು. ಅಮೆರಿಕ ಇಲ್ಲದಿದ್ದರೆ ಕಾಗದದ ಹುಲಿ ಇದ್ದಂತೆ’ ಎಂದು ಕಿಚಾಯಿಸಿದ್ದಾರೆ.

ಭದ್ರತೆ ನೀಡಲು ಮನವಿ ಮಾಡಿದ್ದರು

ಹೋರ್ಮುಜ್‌ ಜಲಸಂಧಿಯಲ್ಲಿ ತೈಲ ಹೊತ್ತ ನೌಕೆಗಳು ಸಾಗಲು ಇರಾನ್‌ ಅಡ್ಡಿಪಡಿಸುತ್ತಿರುವ ಕಾರಣ, ಅವುಗಳಿಗೆ ಭದ್ರತೆ ನೀಡಲು ತಮ್ಮತಮ್ಮ ಪಡೆಗಳನ್ನು ನಿಯೋಜಿಸುವಂತೆ ಟ್ರಂಪ್‌ ನ್ಯಾಟೋ ಮಿತ್ರರಾಷ್ಟ್ರಗಳಿಗೆ ಮನವಿ ಮಾಡಿದ್ದರು. ಆದರೆ ಇದಕ್ಯಾರೂ ಒಪ್ಪಿರಲಿಲ್ಲ.

ಟ್ರುತ್‌ ಸೋಷಿಯಲ್‌’ ಸಾಮಾಜಿಕ ಮಾಧ್ಯಮದಲ್ಲಿ ಕಿಡಿ

ಇದಕ್ಕೀಗ ಮತ್ತೊಮ್ಮೆ ತಮ್ಮ‘ಟ್ರುತ್‌ ಸೋಷಿಯಲ್‌’ ಸಾಮಾಜಿಕ ಮಾಧ್ಯಮದಲ್ಲಿ ಕಿಡಿ ಕಾರಿರುವ ಟ್ರಂಪ್‌, ‘ಅಮೆರಿಕ ಇಲ್ಲದೆ ನೀವೆಲ್ಲಾ ಕಾಗದದ ಹುಲಿ ಇದ್ದಂತೆ. ಅಣುಶಕ್ತಿ ಸಜ್ಜಿತ ಇರಾನ್‌ ಅನ್ನು ತಡೆಯುವ ಸಲುವಾಗಿ ಅವರು ಯುದ್ಧದಲ್ಲಿ ಭಾಗಿಯಾಗಲು ಮುಂದಾಗಲಿಲ್ಲ. ಆದರೆ ಈಗ ನಾವು ಸೈನಿಕವಾಗಿ ಯುದ್ಧವನ್ನು ಗೆದ್ದಿರುವಾಗ, ಹೆಚ್ಚಿರುವ ತೈಲ ಬೆಲೆಯ ಬಗ್ಗೆ ದೂರುತ್ತಿದ್ದಾರೆ. ಅಷ್ಟಾದರೂ ಬೆಲೆ ಹೆಚ್ಚಳಕ್ಕೆ ಕಾರಣವಾದ ಹೋರ್ಮುಜ್‌ ಜಲಸಂಧಿಯನ್ನು ತೆರೆಯಲು ಸಹಕರಿಸಲಿಲ್ಲ. ಅವರ ಪಾಲಿಗದು ಅತಿ ಸುಲಭದ ಕೆಲಸವಾಗಿತ್ತು. ಅವರೆಲ್ಲಾ ಪುಕ್ಕಲರು. ಇದನ್ನು ನಾವು ನೆನಪಿಟ್ಟುಕೊಳ್ಳುತ್ತೇವೆ’ ಎಂದು ಉದ್ದದ ಪೋಸ್ಟ್‌ ಮಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಇದೇ ರೀತಿ ಟ್ರಂಪ್‌ ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ ಯಾರು ನೆರವು ನೀಡದೇ ಇದ್ದರೂ ನಾವು ಏಕಾಂಗಿಯಾಗಿ ಜಲಸಂಧಿ ಕಾಪಾಡಲಿದ್ದೇವೆ ಎಂದು ಗುಡುಗಿದ್ದರು.



Source link

Leave a Reply

Your email address will not be published. Required fields are marked *