ramayana movie: ಅದೊಂದು ಫೋಟೋದಿಂದಾಗಿ ಜನರ ನಿಂದನೆ ಕೇಳಿದ ನಟಿ ಸಾಯಿ ಪಲ್ಲವಿ: ಈ ಸತ್ಯ ಬಯಲು! | Actor Ranbir Kapoor Sai Pallavi Ramayana Movie Ai Photo Viral

ramayana movie: ಅದೊಂದು ಫೋಟೋದಿಂದಾಗಿ ಜನರ ನಿಂದನೆ ಕೇಳಿದ ನಟಿ ಸಾಯಿ ಪಲ್ಲವಿ: ಈ ಸತ್ಯ ಬಯಲು! | Actor Ranbir Kapoor Sai Pallavi Ramayana Movie Ai Photo Viral



ramayana movie: ಅದೊಂದು ಫೋಟೋದಿಂದಾಗಿ ಜನರ ನಿಂದನೆ ಕೇಳಿದ ನಟಿ ಸಾಯಿ ಪಲ್ಲವಿ: ಈ ಸತ್ಯ ಬಯಲು! | Actor Ranbir Kapoor Sai Pallavi Ramayana Movie Ai Photo Viral

Ramayana Movie: ಬಹಳ ನಿರೀಕ್ಷೆ ಹುಟ್ಟಿಸಿರುವ ‘ರಾಮಾಯಣ’ ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ. ಮೊದಲ ಭಾಗ 2026ರ ದೀಪಾವಳಿಗೆ ಮತ್ತು ಎರಡನೇ ಭಾಗ 2027ರ ದೀಪಾವಳಿಗೆ ರಿಲೀಸ್ ಆಗಲಿದೆ. 

ಬಾಲಿವುಡ್‌ನ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ರಾಮಾಯಣ’. ಈ ಚಿತ್ರದ ಬಗ್ಗೆ ದಿನಕ್ಕೊಂದು ಸುದ್ದಿ ಹರಿದಾಡುತ್ತಲೇ ಇರುತ್ತದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರಕ್ಕಾಗಿ ಇಡೀ ಭಾರತೀಯ ಚಿತ್ರರಂಗವೇ ಕಾಯುತ್ತಿದೆ. ಚಿತ್ರದಲ್ಲಿ ರಣ್‌ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಸ್ಯಾಂಡಲ್‌ವುಡ್ ಸ್ಟಾರ್ ಯಶ್ ರಾವಣನಾಗಿ ನಟಿಸುತ್ತಿದ್ದಾರೆ. ಈ ಹಿಂದೆ ಚಿತ್ರದ ಫಸ್ಟ್ ಗ್ಲಿಂಪ್ಸ್ ವಿಡಿಯೋಗೆ ಸಿನಿರಸಿಕರಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು. ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿರುವ ಈ ಸಿನಿಮಾದ ಪ್ರತಿಯೊಂದು ಅಪ್‌ಡೇಟ್‌ ಅನ್ನು ಜನ ಕುತೂಹಲದಿಂದ ಗಮನಿಸುತ್ತಿದ್ದಾರೆ.

ಲೀಕ್‌ ಆದ ಫೋಟೋ ಅಲ್ಲ

ಸದ್ಯ, ‘ರಾಮಾಯಣ’ ಸಿನಿಮಾದ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದರಲ್ಲಿ ರಾಮನ ಪಾತ್ರದಲ್ಲಿ ರಣ್‌ಬೀರ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ರಾಮನನ್ನು ಸೀತೆಯು ಪ್ರೀತಿ ಮತ್ತು ಹೆಮ್ಮೆಯಿಂದ ನೋಡುತ್ತಿರುವ ದೃಶ್ಯ ಅದಾಗಿದೆ. ಇದು ‘ರಾಮಾಯಣ’ ಶೂಟಿಂಗ್ ಸೆಟ್‌ನಿಂದ ಲೀಕ್ ಆದ ಫೋಟೋ ಎಂಬ ಕ್ಯಾಪ್ಶನ್‌ನೊಂದಿಗೆ ಹರಿದಾಡುತ್ತಿದೆ. ಈ ಫೋಟೋ ನೋಡಿದ ನೆಟ್ಟಿಗರು ಸಾಯಿ ಪಲ್ಲವಿ ಆಯ್ಕೆ ಬಗ್ಗೆ ಟೀಕೆಗಳ ಸುರಿಮಳೆಗೈದಿದ್ದಾರೆ.

“ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಮಿಸ್‌ಕ್ಯಾಸ್ಟ್ ಅಂತ ಹೇಳಲೇಬೇಕು. ನಾವು ಓದಿ, ಕೇಳಿ ತಿಳಿದಿರುವ ಸೀತೆ ಅತೀ ಸುಂದರಿ ಮತ್ತು ತುಂಬಾನೇ ಗ್ರೇಸ್ ಇರುವ ಮಹಿಳೆ. ಹಾಗಾಗಿ ಆ ಪಾತ್ರಕ್ಕೆ ತಕ್ಕ ನಟಿಯನ್ನೇ ಆಯ್ಕೆ ಮಾಡಬೇಕಿತ್ತು. ಸಾಯಿ ಪಲ್ಲವಿ ಕೆಟ್ಟ ನಟಿ ಅಂತಲ್ಲ, ಆದರೆ ಈ ಪಾತ್ರಕ್ಕೆ ಅವರು ಹೊಂದಿಕೆಯಾಗಲ್ಲ. ಅವರ ಬದಲು ಮೃಣಾಲ್ ಠಾಕೂರ್ ಆಗಿದ್ರೆ ಪರ್ಫೆಕ್ಟ್ ಆಗಿರ್ತಿತ್ತು” ಎಂದು ಒಬ್ಬರು ಪೋಸ್ಟ್ ಹಾಕಿದ್ದಾರೆ. ಈ ಅಭಿಪ್ರಾಯವನ್ನು ಹಲವರು ಬೆಂಬಲಿಸಿದ್ದಾರೆ. ಆದರೆ, ಸಾಯಿ ಪಲ್ಲವಿ ಒಬ್ಬ ಅದ್ಭುತ ನಟಿ, ಅವರಿಗೇನು ಸಮಸ್ಯೆ ಎಂದು ಪ್ರಶ್ನಿಸುವವರೂ ಇದ್ದಾರೆ.

ಎಐ ಫೋಟೋ ಅದು!

ಆದರೆ, ಈ ಫೋಟೋ ಹಿಂದಿನ ಅಸಲಿ ಕಥೆಯೇ ಬೇರೆ. ಈ ವೈರಲ್ ಫೋಟೋ ನಿಜವಾದದ್ದಲ್ಲ! ಇದು ಕೃತಕ ಬುದ್ಧಿಮತ್ತೆ, ಅಂದರೆ AI ಬಳಸಿ ಸೃಷ್ಟಿಸಿದ ನಕಲಿ ಚಿತ್ರ. 2015-16ರಲ್ಲಿ ಸ್ಟಾರ್ ಪ್ಲಸ್ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ‘ಸಿಯಾ ಕೆ ರಾಮ್’ ಅನ್ನೋ ಧಾರಾವಾಹಿಯ ಫೋಟೋವನ್ನು ಬಳಸಿ, ಅದಕ್ಕೆ AI ಮೂಲಕ ರಣ್‌ಬೀರ್ ಮತ್ತು ಸಾಯಿ ಪಲ್ಲವಿ ಮುಖವನ್ನು ಎಡಿಟ್ ಮಾಡಿ ಹಾಕಲಾಗಿದೆ. ಈ ಸತ್ಯ ತಿಳಿಯದೆಯೇ ಹಲವರು ನಟಿಯ ಆಯ್ಕೆಯನ್ನು ಟೀಕಿಸುತ್ತಿದ್ದಾರೆ. ಇನ್ನೊಂದೆಡೆ, ರಣ್‌ಬೀರ್ ಮತ್ತು ಸಾಯಿ ಪಲ್ಲವಿ ಜೋಡಿ ಚೆನ್ನಾಗಿ ಕಾಣುತ್ತದೆ ಎಂದು ಹೇಳುವವರೂ ಇದ್ದಾರೆ.

ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಚಿತ್ರತಂಡ ಈಗಾಗಲೇ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಮೊದಲ ಭಾಗ 2026ರ ದೀಪಾವಳಿ ಹಬ್ಬಕ್ಕೆ ಮತ್ತು ಎರಡನೇ ಭಾಗ 2027ರ ದೀಪಾವಳಿಗೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.



Source link

Leave a Reply

Your email address will not be published. Required fields are marked *