Headlines

ಮಗು ಅಕಸ್ಮಾತ್​ ಏನಾದ್ರೂ ತಿಂದುಬಿಟ್ರೆ ತಕ್ಷಣ ಹೀಗೆ ಮಾಡಿ: ವಿಡಿಯೋ ಮೂಲಕ ವೈದ್ಯರ ಮಾಹಿತಿ | Immediate First Aid To Child If It Eats Something At Home Suc

ಮಗು ಅಕಸ್ಮಾತ್​ ಏನಾದ್ರೂ ತಿಂದುಬಿಟ್ರೆ ತಕ್ಷಣ ಹೀಗೆ ಮಾಡಿ: ವಿಡಿಯೋ ಮೂಲಕ ವೈದ್ಯರ ಮಾಹಿತಿ | Immediate First Aid To Child If It Eats Something At Home Suc



ಮಗು ಅಕಸ್ಮಾತ್​ ಏನಾದ್ರೂ ತಿಂದುಬಿಟ್ರೆ ತಕ್ಷಣ ಹೀಗೆ ಮಾಡಿ: ವಿಡಿಯೋ ಮೂಲಕ ವೈದ್ಯರ ಮಾಹಿತಿ | Immediate First Aid To Child If It Eats Something At Home Suc

ಮೈಸೂರಿನಲ್ಲಿ ಪೂಜೆಗೆ ಇಟ್ಟಿದ್ದ ದಾಸವಾಳ ಹೂವನ್ನು ತಿಂದು ಮಗುವೊಂದು ಉಸಿರುಗಟ್ಟಿ ಮೃತಪಟ್ಟಿದೆ. ಈ ರೀತಿಯ ಘಟನೆಗಳು ನಡೆದಾಗ ಮಗುವಿನ ಜೀವ ಉಳಿಸಲು ತಕ್ಷಣವೇ ಮನೆಯಲ್ಲಿ ಯಾವ ಪ್ರಥಮ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ವಿವರಿಸಿದ್ದಾರೆ.

ಈಚೆಗಷ್ಟೇ ಒಣಗಿದ ದಾಸವಾಳವನ್ನು ತಿಂದು ಮುದ್ದಾದ ಮಗುವೊಂದು ಪ್ರಾಣ ಬಿಟ್ಟಿರುವ ಕರಾಳ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ನಡೆದಿರುವುದು ಮೊನ್ನೆಯಷ್ಟೇ ನಡೆದಿದೆ. ಆರೂವರೆ ತಿಂಗಳ ಚಿನ್ಮಯಿಗೌಡ ಎನ್ನುವ ಮಗುವೊಂದು ಮನೆಯ ಹೊಸಲಿನಲ್ಲಿ ಪೂಜೆಗೆ ಇರಿಸಿದ್ದ ದಾಸವಾಳದ ಹೂವನ್ನು ತಿಂದು ಪ್ರಾಣ ಬಿಟ್ಟಿದೆ.

ದಾಸವಾಳ ಹೂವಿನ ದುರಂತ

ತನ್ನ ಅಣ್ಣನೊಂದಿಗೆ ಆಟವಾಡುತ್ತಿದ್ದ ಚಿನ್ಮಿಯಿಗೌಡ, ಮನೆಯ ಹೊಸಲಿಗೆ ಪೂಜೆಗೆ ಇಟ್ಟಿದ್ದ ದಾಸವಾಳದ ಹೂವಿನ ತುಂಡನ್ನು ಬಾಯಿಗೆ ಹಾಕಿಕೊಂಡಿದೆ. ಈ ವೇಳೆ ಅಣ್ಣ ಕಿತ್ತುಕೊಳ್ಳುತ್ತಾನೆಂದು ಮಗು ಒಣಗಿದ ಹೂವನ್ನು ನುಂಗಿದ್ದರಿಂದ ಉಸಿರಾಟದ ತೊಂದರೆಯಾಗಿ ಅಸ್ವಸ್ಥಗೊಂಡಿದೆ. ತಕ್ಷಣವೇ ಹನಗೋಡಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.

ತಕ್ಷಣ ಕೈಗೊಳ್ಳುವ ಕ್ರಮವೇನು?

ಹೀಗೆ ಒಂದು ವೇಳೆ ಮಗು ಏನಾದರೂ ಬಾಯಿಗೆ ಹಾಕಿಕೊಂಡರೆ, ತಕ್ಷಣ ವೈದ್ಯರ ಬಳಿ ಹೋಗುವುದಂತೂ ಎಷ್ಟೋ ಸಂದರ್ಭದಲ್ಲಿ ಆಗದ ಮಾತು. ಈ ಕಾರಣದಿಂದ ಮಗು ತಿಂದದ್ದು ಗೊತ್ತಾದ ತಕ್ಷಣವೇ ಮನೆಯಲ್ಲಿಯೇ ಶೀಘ್ರದಲ್ಲಿಯೇ ಏನು ಮಾಡಿ ಮಗುವಿನ ಜೀವ ಉಳಿಸಬಹುದು ಎನ್ನುವ ಟಿಪ್ಸ್​ ನೀಡಿದ್ದಾರೆ ವೈದ್ಯಾಧಿಕಾರಿ ಡಾ.ಲಕ್ಷ್ಮಣ್​. ಮಗುವಿಗೆ ಏನು ಮಾಡಬೇಕು ಎನ್ನುವ ಟಿಪ್ಸ್​ ಅನ್ನು ಈ ವಿಡಿಯೋ ಮೂಲಕ ಅವರು ತೋರಿಸಿಕೊಟ್ಟಿದ್ದಾರೆ.

ನೀವು ಏನು ಮಾಡಬೇಕು?

ಮಗುವಿನ ಕುತ್ತಿಗೆ ಹಿಡಿದು ಅದನ್ನು ಮಕಾಡೆ ಮಲಗಿಸಿಕೊಳ್ಳಬೇಕು. ಬಳಿಕ ಮಗುವಿನ ಬೆನ್ನ ಮೇಲೆ ಚೆನ್ನಾಗಿ ಐದು ಬಾರಿ ಗುದ್ದಬೇಕು. ಒಂದು ವೇಳೆ ಹಾಗೆ ಬರದೇ ಇದ್ದರೂ, ಮಗುವಿನ ಎದೆಯ ಭಾಗದ ಮೇಲೆ ಎರಡು ಬೆರಳುಗಳಿಂದ ಐದು ಬಾರಿ ಒತ್ತಿ ಎಂದಿದ್ದಾರೆ. ಆಗ ದೇಹದ ಯಾವುದೇ ಭಾಗದಲ್ಲಿ ವಸ್ತು ಇದ್ದರೆ ಬಾಯಿಯಿಂದ ಬರುತ್ತದೆ. ಬಾಯಿಯಲ್ಲಿ ವಸ್ತು ಕಂಡರೆ ನಿಧಾನವಾಗಿ ತೆಗೆಯಿರಿ ಅಥವಾ ಕೆಮ್ಮಿದಾಗ ಆ ವಸ್ತು ಹೊರಕ್ಕೆಬರುತ್ತದೆ ಎಂದಿದ್ದಾರೆ. ವಿಡಿಯೋ ಇಲ್ಲಿದೆ.



Source link

Leave a Reply

Your email address will not be published. Required fields are marked *