frozen pea business : ರೈತರಿಗೆ ಲಾಭ ತಂದ್ಕೊಂಡೋ ಬ್ಯುಸಿನೆಸ್‌ ಇದು, ಕಡಿಮೆ ಬಂಡವಾಳ ಹೆಚ್ಚಿನ ಲಾಭ | How Much Do Farmers Earn In The Frozen Pea Business

frozen pea business : ರೈತರಿಗೆ ಲಾಭ ತಂದ್ಕೊಂಡೋ ಬ್ಯುಸಿನೆಸ್‌ ಇದು, ಕಡಿಮೆ ಬಂಡವಾಳ ಹೆಚ್ಚಿನ ಲಾಭ | How Much Do Farmers Earn In The Frozen Pea Business



frozen pea business : ರೈತರಿಗೆ ಲಾಭ ತಂದ್ಕೊಂಡೋ ಬ್ಯುಸಿನೆಸ್‌ ಇದು, ಕಡಿಮೆ ಬಂಡವಾಳ ಹೆಚ್ಚಿನ ಲಾಭ | How Much Do Farmers Earn In The Frozen Pea Business

ಪುಲಾವ್‌, ಟೊಮೊಟೊ ಬಾತ್‌ ರುಚಿ ಡಬಲ್‌ ಮಾಡುವ ಹಸಿರು ಬಟಾಣಿ ಸಿಪ್ಪೆ ಬಿಡಿಸೋದೆ ಟೆಕ್ಷನ್‌. ಜನರು ಫ್ರೋಜನ್‌ ಬಟಾಣಿ ಹೆಚ್ಚು ಇಷ್ಟಪಡ್ತಾರೆ. ನೀವೂ ಈ ಬ್ಯುಸಿನೆಸ್‌ ಶುರು ಮಾಡಿ ಕೈ ತುಂ ಹಣ ಸಂಪಾದನೆ ಮಾಡ್ಬಹುದು. 

ಹೆಪ್ಪುಗಟ್ಟಿದ ಬಟಾಣಿ (frozen peas) ಇತ್ತೀಚಿನ ದಿನಗಳಲ್ಲಿ ರೈತರಿಗೆ ದೊಡ್ಡ ಜಾಕ್ ಪಾಟ್ ಅಂದ್ರೆ ತಪ್ಪಾಗೋದಿಲ್ಲ. ಇದು ಕೃಷಿಗೆ ಪ್ರೋತ್ಸಾಹ ನೀಡುವ ಜೊತೆಗೆ ಬುದ್ಧಿವಂತಿಕೆ ಮಾರ್ಕೆಟ್ ಗೆ ಸಹಾಯ ಮಾಡಿದೆ. ತಾಜಾ ಬಟಾಣಿ ಮನೆಗೆ ತಂದು, ಅದ್ರ ಸಿಪ್ಪೆ ತೆಗೆದು ಬಳಸುವಷ್ಟು ಪುರಸೊತ್ತು ಜನರಿಗಿಲ್ಲ. ಪ್ಯಾಕೆಟ್ ನಲ್ಲಿ ಸಿಗುವ ಬಟಾಣಿ ಬಳಕೆ ಅತಿ ಸುಲಭ. ಜನರು ಈ ಪ್ಯಾಕೆಟ್ ಬಟಾಣಿ ಇಷ್ಟಪಡ್ತಾರೆ. ಇದೇ ರೈತರ ಗಹಳಿಕೆಗೆ ವಿಶೇಷ ದಾರಿ ಒದಗಿಸಿದೆ.

ಮಂಡಿ ಮಾತ್ರ ಅವಲಂಬಿಸಿದ್ರೆ ರೈತರಿಗೆ ಬೆಲೆ ಕುಸಿಯುವ ಭಯ ಕಾಡುತ್ತೆ. ಆದ್ರೆ ಈ ಹೆಪ್ಪುಗಟ್ಟಿದ ಬಟಾಣಿ ವರ್ಷಪೂರ್ತಿ ನಿಮಗೆ ಕೈ ತುಂಬ ಆದಾಯ ತಂದ್ಕೊಂಡುವ ಕೆಲ್ಸ ಮಾಡುತ್ತೆ. ಕಡಿಮೆ ಅಪಾಯ ಹಾಗೂ ಹೆಚ್ಚು ಆದಾಯದ ಕಾನ್ಸೆಪ್ಟ್ ನಲ್ಲಿ ಇದು ವರ್ಕ್ ಮಾಡೋದ್ರಿಂದ ರೈತರಿಗೆ ಇದು ಉತ್ತಮ ವ್ಯವಹಾರವಾಗಿದೆ. ಭೂಮಿಯಲ್ಲಿ ಬಟಾಣಿ ಬೆಳೆದು, ಆಧುನಿಕ ತಂತ್ರಜ್ಞಾನದ ಮೂಲಕ ಇದನ್ನು ಸುರಕ್ಷಿತವಾಗಿ ಪ್ಯಾಕ್ ಮಾಡಿ ಮಾರಾಟ ಮಾಡಿದ್ರೆ ಎಷ್ಟು ಲಾಭ ಗಳಿಸ್ಬಹುದು ಗೊತ್ತಾ?

ಹೆಪ್ಪುಗಟ್ಟಿದ ಬಟಾಣಿ ತಯಾರಿಸೋದು ಹೇಗೆ?

ಮೊದಲು ಈ ಫ್ರೋಜನ್‌ ಬಟಾಣಿ ಹೇಗೆ ತಯಾರಿಸೋದು ಅಂತ ತಿಳಿದ್ಕೊಳ್ಳಿ. ಮೊದ್ಲು ಬಟಾಣಿ ಸೈಜ್ ನೋಡಲಾಗುತ್ತೆ. ಉತ್ತಮ ಗುಣಮಟ್ಟದ ಬಟಾಣಿ ಆಯ್ಕೆ ನಡೆಯುತ್ತೆ. ಆ ನಂತ್ರ ಅದ್ರ ಸಿಪ್ಪೆ ಸುಲಿದು, ಗಾತ್ರದ ಆಧಾರದ ಮೇಲೆ ಅದನ್ನು ಬೇರ್ಪಡಿಸಲಾಗುತ್ತೆ. ನಂತ್ರ ನಡೆಯೋದು ಬ್ಲಾಂಚಿಂಗ್. ಅಂದ್ರೆ ಬಿಸಿ ನೀರಿನಲ್ಲಿ ಬಟಾಣಿಯನ್ನು ಸ್ವಲ್ಪ ಸಮಯ ಇಟ್ಟು ತಕ್ಷಣ ತಣ್ಣನೆಯ ನೀರಿನಲ್ಲಿ ನೆನೆಹಾಕಲಾಗುತ್ತೆ.

ಬ್ಲಾಂಚಿಂಗ್ (Blanching) ನಿಂದ ಬಟಾಣಿಗೆ ಯಾವುದೇ ತೊಂದ್ರೆ ಆಗೋದಿಲ್ಲ. ಬಟಾಣಿ ತನ್ನ ಬಣ್ಣ ಉಳಿಸಿಕೊಳ್ಳೋದಲ್ದೆ ಹಾಳಾಗೋದನ್ನು ತಪ್ಪಿಸುತ್ತೆ. ತಣ್ಣನೆ ನೀರಿನಿಂದ ತೆಗೆದ ಬಟಾಣಿ ನೀರು ಆರಿದ ನಂತ್ರ 18 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ವೈಯಕ್ತಿಕ ಕ್ವಿಕ್ ಫ್ರೀಜಿಂಗ್ (ಐಕ್ಯೂಎಫ್) ತಂತ್ರಜ್ಞಾನವನ್ನು ಬಳಸಿಕೊಂಡು ಫ್ರೀಜ್ ಮಾಡಲಾಗುತ್ತದೆ.

‘ಯಾವುದೇ ಬ್ಯಾಕಪ್ ಇಲ್ಲದೇ ಕೆಲಸ ಬಿಟ್ಟೆ’: ಒಂದು ಲಕ್ಷದ ಸಂಬಳ ಬಿಟ್ಟು, ಕೇವಲ 14 ತಿಂಗಳಲ್ಲಿ 2 ಲಕ್ಷ ತಿಂಗಳಿಗೆ ಗಳಿಸಲು ಆರಂಭಿಸಿದ ಯುವತಿ!

ಖರ್ಚು ವೆಚ್ಚ

ಫ್ರೋಜನ್‌ ಬಟಾಣಿ ಬ್ಯುಸಿನೆಸನ್ನು ನೀವು ಸಣ್ಣ ಪ್ರಮಾಣದಲ್ಲೂ ಮಾಡ್ಬಹುದು. ಸಣ್ಣ ಪ್ರಮಾಣದಲ್ಲಿಈ ಬ್ಯುಸಿನೆಸ್ ಶುರು ಮಾಡ್ಬೇಕು ಅಂದ್ರೆ ಬಟಾಣಿ ಸಿಪ್ಪೆ ಸುಲಿಯುವ ಯಂತ್ರ, ಬ್ಲಾಂಚಿಂಗ್ ಘಟಕ ಮತ್ತು ಆಳವಾದ ಫ್ರೀಜರ್ ಅಗತ್ಯವಿರುತ್ತದೆ. ನೀವು ದೊಡ್ಡ ಪ್ರಮಾಣದಲ್ಲಿ ಮಾಡೋದಾದ್ರೆ ಸ್ವಯಂಚಾಲಿತ ಸ್ಥಾವರ ಅಗತ್ಯವಿರುತ್ತದೆ. ಅದರ ವೆಚ್ಚ ನಿಮ್ಮ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಇದಕ್ಕೆ 2 ರಿಂದ 5 ಲಕ್ಷ ರೂಪಾಯಿ ಆರಂಭಿಕ ಹೂಡಿಕೆ ಅಗತ್ಯವಿರುತ್ತದೆ. ಆಕರ್ಷಕ ಬ್ರ್ಯಾಂಡಿಂಗ್ ಮತ್ತು ಪ್ಯಾಕೇಜಿಂಗ್ಗಾಗಿ ಆಹಾರ ಪರವಾನಗಿ (FSSAI) ಪಡೆಯುವುದು ಅತ್ಯಗತ್ಯ. ಮಾಲ್ ಮತ್ತು ನಗರಗಳಿಗೆ ಪೂರೈಸಬಹುದು.

ಶ್ರೀಮಂತರಾಗಬೇಕೆ? ಈ 5 ಅಭ್ಯಾಸಗಳಿದ್ರೆ ಇಂದೇ ಬಿಟ್ಟುಬಿಡಿ!

ಲಾಭ ಎಷ್ಟು?

ಹೆಪ್ಪುಗಟ್ಟಿದ ಬಟಾಣಿ ವ್ಯವಹಾರದಲ್ಲಿ ಸಾಕಷ್ಟು ಲಾಭವಿದೆ. ಋತುವಿನಲ್ಲಿ ಪ್ರತಿ ಕೆಜಿಗೆ ಸಿಪ್ಪೆ ಬಟಾಣಿ 15-20 ರೂಪಾಯಿಗಳಿಗೆ ಲಭ್ಯವಿದೆ. ಹೆಪ್ಪುಗಟ್ಟಿದ ನಂತ್ರ, ಅದೇ ಬಟಾಣಿ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 150 ರಿಂದ 200 ರೂಪಾಯಿಗಳಿಗೆ ಮಾರಾಟವಾಗುತ್ತದೆ. ಒಬ್ಬ ರೈತ ನೇರವಾಗಿ ಸಂಸ್ಕರಣಾ ಘಟಕವನ್ನು ಸ್ಥಾಪಿಸಿ ತನ್ನದೇ ಆದ ಬ್ರಾಂಡ್ ಪ್ರಾರಂಭಿಸಿದರೆ, ಮಧ್ಯವರ್ತಿಗಳ ಕಾಟ ಇಲ್ದೆ ಆದಾಯವನ್ನು 3 ರಿಂದ 4 ಪಟ್ಟು ಹೆಚ್ಚಿಸಬಹುದು. ಸಿಪ್ಪೆ ಬಟಾಣಿ ಮಾರ್ಕೆಟ್ ನಲ್ಲಿ ಕಡಿಮೆ ಆಗ್ತಿದ್ದಂತೆ ಹೆಪ್ಪುಗಟ್ಟಿದ ಬಟಾಣಿಗೆ ಬೇಡಿಕೆ ಹೆಚ್ಚಾಗುತ್ತದೆ. ಇದ್ರಿಂದ ಅದ್ರ ಬೆಲೆ ಡಬಲ್ ಆಗುತ್ತೆ. 100 ಕೆಜಿ ಬಟಾಣಿಯಲ್ಲಿ ನೀವು ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸಬಹುದು.



Source link

Leave a Reply

Your email address will not be published. Required fields are marked *