ಸ್ಟಾರ್‌ ನಟಿ ಜೊತೆ ಅಕ್ರಮ ಸಂಬಂಧ, ಆಕೆಯ ಜೊತೆ ಫಾರಿನ್‌ ಟ್ರಿಪ್‌: ವಿಚ್ಛೇದನಕ್ಕೆ ಕಾರಣ ತಿಳಿಸಿದ ವಿಜಯ್‌ ಪತ್ನಿ | Actor Vijay Wife Sangeetha Divorce Adultery Allegations Actress Affair Details San

ಸ್ಟಾರ್‌ ನಟಿ ಜೊತೆ ಅಕ್ರಮ ಸಂಬಂಧ, ಆಕೆಯ ಜೊತೆ ಫಾರಿನ್‌ ಟ್ರಿಪ್‌: ವಿಚ್ಛೇದನಕ್ಕೆ ಕಾರಣ ತಿಳಿಸಿದ ವಿಜಯ್‌ ಪತ್ನಿ | Actor Vijay Wife Sangeetha Divorce Adultery Allegations Actress Affair Details San



ಸ್ಟಾರ್‌ ನಟಿ ಜೊತೆ ಅಕ್ರಮ ಸಂಬಂಧ, ಆಕೆಯ ಜೊತೆ ಫಾರಿನ್‌ ಟ್ರಿಪ್‌: ವಿಚ್ಛೇದನಕ್ಕೆ ಕಾರಣ ತಿಳಿಸಿದ ವಿಜಯ್‌ ಪತ್ನಿ | Actor Vijay Wife Sangeetha Divorce Adultery Allegations Actress Affair Details San

ನಟ ಮತ್ತು ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಅವರ 27 ವರ್ಷಗಳ ದಾಂಪತ್ಯ ಜೀವನ ಅಂತ್ಯಗೊಳ್ಳುವ ಹಂತದಲ್ಲಿದೆ. ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ, ವಿಜಯ್ ವಿರುದ್ಧ ವ್ಯಭಿಚಾರ ಮತ್ತು ಕ್ರೌರ್ಯದ ಗಂಭೀರ ಆರೋಪಗಳನ್ನು ಹೊರಿಸಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. 

ಚೆನ್ನೈ (ಫೆ.28): ತಮಿಳು ಚಿತ್ರರಂಗದ ‘ದಳಪತಿ’ ಎಂದೇ ಖ್ಯಾತರಾಗಿರುವ ನಟ ಮತ್ತು ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಅವರ 27 ವರ್ಷಗಳ ದಾಂಪತ್ಯ ಜೀವನ ಅಂತ್ಯದ ಹಾದಿಯಲ್ಲಿದೆ. ವಿಜಯ್ ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ಅವರು ಜಿಲ್ಲಾ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದು, ಪತಿಯ ವಿರುದ್ಧ ವ್ಯಭಿಚಾರ (Adultery) ಮತ್ತು ಕ್ರೌರ್ಯದ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ನಟಿಯ ಜೊತೆ ಅಕ್ರಮ ಸಂಬಂಧದ ಆರೋಪ

‘ಇಂಡಿಯಾ ಟುಡೇ’ ವರದಿಯ ಪ್ರಕಾರ, 48 ವರ್ಷದ ಸಂಗೀತ ಅವರು 1954ರ ವಿಶೇಷ ವಿವಾಹ ಕಾಯ್ದೆಯಡಿ ಈ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ (51) ಅವರು ಖ್ಯಾತ ನಟಿಯೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಸಂಗೀತ ಆರೋಪಿಸಿದ್ದಾರೆ. 2021ರಲ್ಲಿ ವಿಜಯ್ ಅವರ ಈ ಸಂಬಂಧದ ಬಗ್ಗೆ ತನಗೆ ತಿಳಿಯಿತು. ಆ ಸಂಬಂಧವನ್ನು ಕೊನೆಗೊಳಿಸುವುದಾಗಿ ವಿಜಯ್ ಭರವಸೆ ನೀಡಿದ್ದರೂ, ಯಾವುದೇ ಪಶ್ಚಾತ್ತಾಪವಿಲ್ಲದೆ ಅದನ್ನು ಮುಂದುವರಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಸಾರ್ವಜನಿಕ ಅವಮಾನ ಮತ್ತು ಪ್ರವಾಸ

ಸಂಗೀತ ಅವರ ಅರ್ಜಿಯ ಪ್ರಕಾರ, ವಿಜಯ್ ತಮ್ಮ ಸಾಮಾಜಿಕ ಮತ್ತು ವೃತ್ತಿಪರ ಜೀವನದಿಂದ ಪತ್ನಿಯನ್ನು ದೂರವಿಟ್ಟಿದ್ದಾರೆ. “ಅನೈತಿಕ ಸಂಬಂಧ ಹೊಂದಿರುವ ನಟಿಯ ಜೊತೆಗೇ ವಿದೇಶ ಪ್ರವಾಸ ಮಾಡುವುದು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ವಿಜಯ್ ಮುಂದುವರಿಸಿದ್ದಾರೆ. ಆ ನಟಿ ಈ ಪ್ರವಾಸಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದರೂ ವಿಜಯ್ ಅದನ್ನು ಎಂದೂ ವಿರೋಧಿಸಿಲ್ಲ. ಇದು ನನಗೂ ಮತ್ತು ನಮ್ಮ ಮಕ್ಕಳಿಗೂ ನಿರಂತರ ಅವಮಾನ ಉಂಟುಮಾಡಿದೆ” ಎಂದು ಸಂಗೀತ ಅಳಲು ತೋಡಿಕೊಂಡಿದ್ದಾರೆ.

ಹಣಕಾಸಿನ ನಿರ್ಬಂಧ ಮತ್ತು ಮಾನಸಿಕ ಕಿರಿಕಿರಿ

ವಿಚ್ಛೇದನ ಅರ್ಜಿಯಲ್ಲಿ ಸಂಗೀತ ಅವರು ಇನ್ನೂ ಕೆಲವು ಗಂಭೀರ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಈ ಹಿಂದೆ ತನಗೆ ಸಿಗುತ್ತಿದ್ದ ಸೌಲಭ್ಯಗಳನ್ನು ವಿಜಯ್ ಹಿಂಪಡೆದಿದ್ದಾರೆ ಮತ್ತು ಹಣಕಾಸಿನ ನಿರ್ಬಂಧ ಹೇರಿದ್ದಾರೆ. 2024ರಲ್ಲಿ ವಿಜಯ್ ಅವರ ನಡವಳಿಕೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಎದ್ದ ವಿವಾದಗಳು ತನಗೆ ತೀವ್ರ ಮಾನಸಿಕ ಕಿರಿಕಿರಿ ಉಂಟುಮಾಡಿದೆ. ನಮ್ಮ ಮದುವೆ ಈಗ ಕೇವಲ ಕಾಗದದ ಮೇಲೆ ಉಳಿದಿದೆ. ಈ ಸಂಬಂಧ ನನಗೆ ಕೇವಲ ವೇದನೆ, ಅವಮಾನ ಮತ್ತು ನೋವನ್ನು ಮಾತ್ರ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್ 27(1)(a) ಮತ್ತು 27(1)(d) ಅಡಿಯಲ್ಲಿ ವ್ಯಭಿಚಾರ ಮತ್ತು ಕ್ರೌರ್ಯದ ಆಧಾರದ ಮೇಲೆ ಸಂಗೀತ ವಿಚ್ಛೇದನ ಕೋರಿದ್ದಾರೆ. ತಮಿಳು ಉದ್ಯಮಿಯ ಮಗಳಾದ ಸಂಗೀತ ಅವರು ವಿಜಯ್ ಅವರ ದೊಡ್ಡ ಅಭಿಮಾನಿಯಾಗಿದ್ದರು. ಇವರಿಬ್ಬರು ಆಗಸ್ಟ್ 25, 1999 ರಂದು ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು. ಈ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ



Source link

Leave a Reply

Your email address will not be published. Required fields are marked *