Headlines

ಈ ವರ್ಷದ ಮುಂಗಾರು ಮಳೆ ಸಾಮಾನ್ಯಕ್ಕಿಂತ ಕಡಿಮೆ: ದೇಶದ ರೈತರಿಗೆ ಭಾರೀ ಮುನ್ಸೂಚನೆ ನೀಡಿದ ಸ್ಕೈಮೆಟ್‌ | Skymet Monsoon Forecast 2026 India Below Normal Rainfall Prediction San

ಈ ವರ್ಷದ ಮುಂಗಾರು ಮಳೆ ಸಾಮಾನ್ಯಕ್ಕಿಂತ ಕಡಿಮೆ: ದೇಶದ ರೈತರಿಗೆ ಭಾರೀ ಮುನ್ಸೂಚನೆ ನೀಡಿದ ಸ್ಕೈಮೆಟ್‌ | Skymet Monsoon Forecast 2026 India Below Normal Rainfall Prediction San



ಈ ವರ್ಷದ ಮುಂಗಾರು ಮಳೆ ಸಾಮಾನ್ಯಕ್ಕಿಂತ ಕಡಿಮೆ: ದೇಶದ ರೈತರಿಗೆ ಭಾರೀ ಮುನ್ಸೂಚನೆ ನೀಡಿದ ಸ್ಕೈಮೆಟ್‌ | Skymet Monsoon Forecast 2026 India Below Normal Rainfall Prediction San

ಈ ವರ್ಷದ ಮುಂಗಾರು ಮಳೆ ‘ಸಾಮಾನ್ಯಕ್ಕಿಂತ ಕಡಿಮೆ’ ಇರಲಿದೆ ಎಂದು ಸ್ಕೈಮೆಟ್ ವರದಿ ಮಾಡಿದೆ. ಎಲ್ ನಿನೊ ವಿದ್ಯಮಾನದಿಂದಾಗಿ, ವಿಶೇಷವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆಯಾಗುವ ಸಾಧ್ಯತೆಯಿದೆ. ಈ ಮುನ್ಸೂಚನೆಯು ಭಾರತದ ಕೃಷಿ ಮತ್ತು ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಆತಂಕವನ್ನು ಸೃಷ್ಟಿಸಿದೆ.

ನವದೆಹಲಿ (ಏ.7): ಭಾರತದ ಆರ್ಥಿಕತೆಯ ಜೀವನಾಡಿಯಾಗಿರುವ ಮುಂಗಾರು ಮಳೆಯು ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದಿರಬಹುದು ಎಂಬ ಆತಂಕಕಾರಿ ವಿಷಯವನ್ನು ಸ್ಕೈಮೆಟ್ ಬಹಿರಂಗಪಡಿಸಿದೆ. ದೀರ್ಘಾವಧಿಯ ಸರಾಸರಿಯ (LPA – 868.6 ಮಿ.ಮೀ) ಸುಮಾರು 94% ದಷ್ಟು ಮಾತ್ರ ಮಳೆ ಬೀಳುವ ಸಾಧ್ಯತೆಯಿದೆ ಎಂದು ಸ್ಕೈಮೆಟ್ ತನ್ನ ವರದಿಯಲ್ಲಿ ತಿಳಿಸಿದೆ.

ಈ ಬಾರಿಯ ಮುಂಗಾರು ‘ಸಾಮಾನ್ಯಕ್ಕಿಂತ ಕಡಿಮೆ’ (Below Normal) ವರ್ಗಕ್ಕೆ ಸೇರಲಿದೆ. ಇದರಲ್ಲಿ +/- 5% ದಷ್ಟು ವ್ಯತ್ಯಾಸವಾಗುವ ಸಾಧ್ಯತೆಯಿದೆ. ಪೆಸಿಫಿಕ್ ಮಹಾಸಾಗರದಲ್ಲಿ ಉಂಟಾಗುವ ‘ಎಲ್ ನಿನೊ’ ವಿದ್ಯಮಾನವು ಈ ವರ್ಷದ ಮಳೆಯ ಮೇಲೆ ನೇರ ಪರಿಣಾಮ ಬೀರಲಿದೆ. ವಿಶೇಷವಾಗಿ ಮುಂಗಾರು ಹಂಗಾಮಿನ ದ್ವಿತೀಯಾರ್ಧದಲ್ಲಿ (ಆಗಸ್ಟ್ ಮತ್ತು ಸೆಪ್ಟೆಂಬರ್) ಇದರ ಪ್ರಭಾವ ಹೆಚ್ಚಾಗಲಿದ್ದು, ಮಳೆ ಅನಿರೀಕ್ಷಿತ ಮತ್ತು ಅಸಮರ್ಪಕವಾಗಿರಬಹುದು ಎಂದು ಸ್ಕೈಮೆಟ್ ಎಚ್ಚರಿಸಿದೆ.

ದೇಶದ ಮಧ್ಯ ಮತ್ತು ವಾಯುವ್ಯ ಭಾಗಗಳಲ್ಲಿ ಮಳೆ ಕೊರತೆಯಾಗುವ ಸಾಧ್ಯತೆಯಿದೆ. ಆದರೆ, ಈಶಾನ್ಯ ಭಾಗಗಳಲ್ಲಿ ಮಳೆ ಉತ್ತಮವಾಗಿರಬಹುದು ಎಂದು ಅಂದಾಜಿಸಲಾಗಿದೆ.

ತಿಂಗಳವಾರು ಮಳೆಯ ಮುನ್ಸೂಚನೆ

ಭಾರತದಲ್ಲಿ ಮುಂಗಾರು ಮಳೆಯ ತಿಂಗಳಾಗಿರುವ ಜೂನ್ ಮತ್ತು ಜುಲೈನಲ್ಇ ಮಳೆ ಸಾಧಾರಣವಾಗಿರಬಹುದು. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕಡಿಮೆಯಾಗುವ ಸಾಧ್ಯತೆಯಿದೆ.

ಹವಾಮಾನದ ಮೇಲಿನ ಎಲ್ ನಿನೊದ ದುಷ್ಪರಿಣಾಮಗಳನ್ನು ತಗ್ಗಿಸಲು ‘ಇಂಡಿಯನ್ ಓಷನ್ ಡೈಪೋಲ್’ (IOD) ನೆರವಾಗಬಹುದು. ಈ ವರ್ಷ IOD ತಟಸ್ಥ ಅಥವಾ ಸ್ವಲ್ಪ ಸಕಾರಾತ್ಮಕವಾಗಿರುವ ನಿರೀಕ್ಷೆಯಿದೆ, ಇದು ಮುಂಗಾರು ಆರಂಭದಲ್ಲಿ ಉತ್ತಮ ಮಳೆಗೆ ಸಹಕಾರಿಯಾಗಬಹುದು.

ಐಎಂಡಿ (IMD) ಮುನ್ಸೂಚನೆಗಾಗಿ ಕಾಯುತ್ತಿರುವ ದೇಶ

ಖಾಸಗಿ ಸಂಸ್ಥೆಯಾದ ಸ್ಕೈಮೆಟ್‌ನ ಈ ವರದಿಯ ಬಳಿಕ, ಈಗ ಎಲ್ಲರ ಕಣ್ಣು ಸರ್ಕಾರಿ ಸ್ವಾಮ್ಯದ ಭಾರತೀಯ ಹವಾಮಾನ ಇಲಾಖೆಯ (IMD) ಮೇಲೆ ನೆಟ್ಟಿದೆ. ಐಎಂಡಿಯು ಮುಂದಿನ ವಾರದಲ್ಲಿ ಮುಂಗಾರು ಮಳೆಯ ಕುರಿತು ತನ್ನ ಅಧಿಕೃತ ಮುನ್ಸೂಚನೆಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಕೃಷಿ ಆಧಾರಿತ ಭಾರತದ ಆರ್ಥಿಕತೆಗೆ ಮುಂಗಾರು ಮಳೆಯು ಅತ್ಯಂತ ನಿರ್ಣಾಯಕವಾಗಿದೆ. ಮಳೆಯ ಕೊರತೆ ಅಥವಾ ಅಸಮರ್ಪಕ ಹಂಚಿಕೆಯು ಬೆಳೆ ಉತ್ಪಾದನೆ ಮತ್ತು ನೀರಿನ ಲಭ್ಯತೆಯ ಮೇಲೆ ನೇರ ಪರಿಣಾಮ ಬೀರಬಹುದು. ರೈತರು ಮತ್ತು ನೀರಾವರಿ ಇಲಾಖೆಗಳು ಈಗ ಮುಂಜಾಗ್ರತಾ ಕ್ರಮಗಳ ಬಗ್ಗೆ ಚಿಂತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.



Source link

Leave a Reply

Your email address will not be published. Required fields are marked *