Headlines

Akshara Dasoha Scheme: ಅಡುಗೆ ಸಿಬ್ಬಂದಿಯನ್ನು ಸನ್ಮಾನಿಸುವುದು ಪುಣ್ಯದ ಕಾರ್ಯ: ಸಚಿವ ಮಧು ಬಂಗಾರಪ್ಪ | Akshara Dasoha Cook Staff Felicitation Minister Madhu Bangarappa Gvd

Akshara Dasoha Scheme: ಅಡುಗೆ ಸಿಬ್ಬಂದಿಯನ್ನು ಸನ್ಮಾನಿಸುವುದು ಪುಣ್ಯದ ಕಾರ್ಯ: ಸಚಿವ ಮಧು ಬಂಗಾರಪ್ಪ | Akshara Dasoha Cook Staff Felicitation Minister Madhu Bangarappa Gvd



Akshara Dasoha Scheme: ಅಡುಗೆ ಸಿಬ್ಬಂದಿಯನ್ನು ಸನ್ಮಾನಿಸುವುದು ಪುಣ್ಯದ ಕಾರ್ಯ: ಸಚಿವ ಮಧು ಬಂಗಾರಪ್ಪ | Akshara Dasoha Cook Staff Felicitation Minister Madhu Bangarappa Gvd

ಅಕ್ಷರ ದಾಸೋಹ ಯೋಜನೆಯ ಅಡುಗೆ ಸಿಬ್ಬಂದಿ ಪ್ರೀತಿ ಹಾಗೂ ತಾಯ್ತನದಿಂದ ಶಾಲಾ ಮಕ್ಕಳಿಗೆ ಊಟ ಬಡಿಸುವ ಕಾರ್ಯ ಶ್ಲಾಘನೀಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಸೊರಬ (ಮಾ.17): ಅಕ್ಷರ ದಾಸೋಹ ಯೋಜನೆಯ ಅಡುಗೆ ಸಿಬ್ಬಂದಿ ಪ್ರೀತಿ ಹಾಗೂ ತಾಯ್ತನದಿಂದ ಶಾಲಾ ಮಕ್ಕಳಿಗೆ ಊಟ ಬಡಿಸುವ ಕಾರ್ಯ ಶ್ಲಾಘನೀಯ. ಅವರ ಈ ಮಹತ್ ಕಾರ್ಯ ಗುರುತಿಸಿ ಸನ್ಮಾನಿಸುವುದು ನನ್ನ ಪುಣ್ಯದ ಕಾರ್ಯ ಮತ್ತು ಇಂಥ ಕಾರ್ಯಕ್ರಮ ದೊರಕಿರುವುದು ಸುದೈವ ಎಂದೇ ಭಾವಿಸುತ್ತೇನೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಸಚಿವ ಮಧು ಬಂಗಾರಪ್ಪ ಹೇಳಿದರು. ಪಟ್ಟಣದ ರಂಗಮಂದಿರದಲ್ಲಿ ಪಿಎಂ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ 2025-26ನೇ ಸಾಲಿನ ಅಕ್ಷರ ದಾಸೋಹ ನಿವೃತ್ತ ಅಡುಗೆ ಸಿಬ್ಬಂದಿಯವರಿಗೆ ಇಡಿ ಗಂಟು ವಿತರಣೆ, ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸಲು ಬಿಸಿಯೂಟ ಕಾರ್ಯಕ್ರಮ ಸಹಕಾರಿಯಾಗಿದೆ. ಶಾಲೆಗಳಲ್ಲಿ ಪಾಠದ ಜತೆಗೆ ಮಧ್ಯಾಹ್ನದ ಬಿಸಿ ಊಟ ನೀಡುತ್ತಿರುವುದು. ಮಕ್ಕಳಿಗೆ ತಾಯಂದಿರ ರೀತಿಯಲ್ಲಿ ಅಡುಗೆ ಮಾಡಿ ಬಡಿಸುತ್ತಿರುವ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಯ ಕಾರ್ಯ ಪ್ರಶಂಸನೀಯವಾಗಿದೆ. ಅಕ್ಷರ ದಾಸೋಹ ಕೇವಲ ಊಟದ ಯೋಜನೆಯಲ್ಲ. ಇದು ಮಕ್ಕಳಲ್ಲಿ ಸದೃಢತೆಯನ್ನು ಹೆಚ್ಚಿಸಲು, ಶ್ರದ್ದೆ ಭಕ್ತಿಗಳಿಂದ ಅಭ್ಯಾಸ ಮಾಡಲು ಮತ್ತು ಅತ್ಯುತ್ತಮ ದಾಖಲಾತಿ ಹೊಂದುವಂತೆ ಮಾಡಲು ಪೂರಕವಾಗಿದೆ ಎಂದರು.

ನಿಸ್ವಾರ್ಥ ಸೇವೆಯಾಗಿ ಸಲ್ಲಿಸಿದ ಸೇವೆಗೆ ಪ್ರತಿಫಲ ನೀಡುವ ನಿಟ್ಟಿನಲ್ಲಿ ಪಿ.ಎಂ. ಪೋಷಣ್ ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮದಡಿ ಶಾಲೆಗಳಲ್ಲಿ ಅಡುಗೆ ಕೆಲಸ ನಿರ್ವಹಿಸಿ 60 ವರ್ಷಗಳ ವಯೋಮಾನ ಪೂರೈಸಿ ಕೆಲಸದಿಂದ ಬಿಡುಗಡೆ ಹೊಂದಿರುವ ಅಡುಗೆ ಸಿಬ್ಬಂದಿಗೆ ಇಡುಗಂಟು ಯೋಜನೆಯಡಿ ಆರ್ಥಿಕ ನೆರವು ನೀಡಲಾಗುತ್ತಿದೆ. ಇದುವರೆಗೆ 69 ಲಕ್ಷ ರು. ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದ್ದು, 5 ವರ್ಷ ಮೇಲ್ಪಟ್ಟು 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದವರಿಗೆ 30 ಸಾವಿರ ರು., 15 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದವರಿಗೆ 40 ಸಾವಿರ ರು. ನೀಡಲಾಗುತ್ತಿದೆ. 75 ಸಾವಿರ ರುಪಾಯಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಧ್ವನಿ ಎತ್ತಲಾಗುವುದು ಎಂದರು.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ

ಪಿಎಂ ಪೋಷಣ್ ಸಹಾಯಕ ನಿರ್ದೇಶಕ ಡಾ. ಕೆ.ಸಿ. ಶ್ರೀಕಾಂತ ಮಾತನಾಡಿದರು. ಕಾರ್ಯಕ್ರಮ ಅನುಷ್ಠಾನ ಕುರಿತು ವಿಡಿಯೋ ಪ್ರದರ್ಶನ, ಉತ್ತಮ ಅಂಕ ಗಳಿಸಿದ ಅಡುಗೆ ಸಿಬ್ಬಂದಿ ಮಕ್ಕಳಿಗೆ ಪ್ರತಿಭಾ ಪರುಸ್ಕಾರ, ಕ್ಲಸ್ಟರ್‌ನ ಉತ್ತಮ ಪಿಎಂ ಪೋಷಣ್ ಶಾಲೆ ಮುಖ್ಯ ಶಿಕ್ಷಕರಿಗೆ ಸನ್ಮಾನ, ಉತ್ತಮ ಅಡುಗೆ ಸಿಬ್ಬಂದಿಗೆ ಸನ್ಮಾನ, ಅಡುಗೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಕೆ. ಪುರಂದರ, ತಾಪಂ ಇಒ ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಪುಷ್ಪ., ಪುರಸಭೆ ಮುಖ್ಯಾಧಿಕಾರಿ ಚಂದನ್, ನೌಕರರ ಸಂಘದ ಅಧ್ಯಕ ಎಸ್. ಮಜುನಾಥ್, ಡಯಟ್ ಉಪನಿರ್ದೇಶಕ ಕೃಷ್ಣಮೂರ್ತಿ, ಶಿಕ್ಷಕರ ಸಂಘದ ಅಧ್ಯಕ್ಷ ಗಣಪತಿ, ಬಿಸಿಯೂಟ ನೌಕರರ ಸಂಘದ ರಾಜ್ಯಾಧ್ಯಕ್ಷ ಹೊನ್ನಪ್ಪ, ಗ್ಯಾರಂಟಿ ಯೋಜನೆ ಅಧ್ಯಕ್ಷ ಜಯಶೀಲಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಬಿ.ಅಣ್ಣಪ್ಪ ಹಾಲಘಟ್ಟ, ಸದಾನಂದಗೌಡ ಬಿಳಗಲಿ, ಮುಖಂಡರಾದ ಎಚ್. ಗಣಪತಿ, ಕೆ.ಪಿ.ರುದ್ರಗೌಡ, ಎಂ.ಡಿ.ಶೇಖರ್, ನಾಗರಾಜ ಚಿಕ್ಕಸವಿ ಸೇರಿದಂತೆ ಮೊದಲಾದವರಿದ್ದರು.



Source link

Leave a Reply

Your email address will not be published. Required fields are marked *