
ಟೀಮ್ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧನಾ ಹಾಗೂ ಪಲಾಶ್ ಮುಚ್ಚಾಲ್ ಮದುವೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಸ್ಮೃತಿ ತಂದೆಯ ಅನಾರೋಗ್ಯದ ಕಾರಣ ಎನ್ನಲಾಗಿತ್ತಾದರೂ, ಮದುವೆಯ ಹಿಂದಿನ ದಿನ ಪಲಾಶ್ ತನ್ನ ಮಾಜಿ ಗೆಳತಿಯೊಂದಿಗೆ ಸಿಕ್ಕಿಬಿದ್ದಿದ್ದೇ ಕಾರಣ ಎಂಬ ಹೊಸ ವದಂತಿಗಳು ಹರಿದಾಡುತ್ತಿವೆ.
ಟೀಮ್ ಇಂಡಿಯಾ ಬ್ಯಾಟರ್ ಸ್ಮೃತಿ ಮಂಧನಾ ಹಾಗೂ ಸಂಗೀತ ನಿರ್ದೇಶಕ, ಗಾಯಕ ಪಲಾಶ್ ಮುಚ್ಚಾಲ್ ಅವರ ವಿವಾಹ ಅನಿರ್ದಿಷ್ಟಾವಧಿಗೆ ಮುಂದೆ ಹೋಗಿದೆ. ಆದರೆ, ಮದುವೆ ಮುಂದಕ್ಕೆ ಹೋಗಿದೆಯೋ ಅಥವಾ ಶಾಶ್ವತವಾಗಿ ನಿಂತೆ ಹೋಗಿದೆಯೋ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಮದುವೆಯ ದಿನ ಸ್ಮೃತಿ ಮಂಧನಾ ಅವರ ತಂದೆಗೆ ಹೃದಯಾಘಾತವಾಗಿದ್ದರಿಂದಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅದಕ್ಕಾಗಿ ಮದುವೆಯನ್ನು ಮುಂದೂಡಲಾಗಿದೆ ಎನ್ನಲಾಗಿತ್ತು. ಅದಾದ ಕೆಲವೇ ಹೊತ್ತಲ್ಲಿ ಸ್ಮೃತಿ ಮಂಧನಾ ಪತಿ ಆಗಬೇಕಿದ್ದ ಪಲಾಶ್ ಮುಚ್ಚಾಲ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದು ಅನುಮಾನಕ್ಕೆ ಕಾರಣವಾಗಿತ್ತು.
ಇದರ ನಡುವೆ ಪಲಾಶ್ ಮುಚ್ಚಾಲ್ ಬಗ್ಗೆ ದಿನಕ್ಕೊಂದು ಕಥೆಗಳು ಹುಟ್ಟಿಕೊಳ್ಳಲು ಆರಂಭಿಸಿದೆ. ಪಲಾಶ್ ಮುಚ್ಚಾಲ್, ಸ್ಮೃತಿಗೆ ಮೋಸ ಮಾಡಿದ್ದು ರೆಡ್‌ಹ್ಯಾಂಡ್ ಆಗಿ ಗೊತ್ತಾಗಿದ್ದರಿಂದ ಮದುವೆಯ ದಿನವೇ ಈ ನಿರ್ಧಾರಕ್ಕೆ ಬರಲು ಕಾರಣವಾಗಿದೆ. ಇನ್ನು ಹೊಸ ರೂಮರ್‌ಗಳ ಪ್ರಕಾರ, ಮದುವೆಯ ಹಿಂದಿನ ದಿನ ಪಲಾಶ್ ಮುಚ್ಚಾಲ್ ತನ್ನ ಮಾಜಿ ಗೆಳತಿಯ ಜೊತೆಗಿನ ಚಕ್ಕಂದವನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದು, ಸ್ಮೃತಿ ಮಂಧನಾ ಅವರ ಗೆಳತಿ ಹಾಗೂ ಕರ್ನಾಟಕದ ಆಟಗಾರ್ತಿ ಶ್ರೇಯಾಂಕಾ ಪಾಟೀಲ್.
ರೆಡ್ಡಿಟ್‌ನಲ್ಲಿ ಅದರ ವಿವರಗಳನ್ನು ಕೂಡ ಒಬ್ಬರು ಹಂಚಿಕೊಂಡಿದ್ದಾರೆ ಅದರ ವಿವರ ಇಲ್ಲಿದೆ
ನನ್ನ ಮಾಜಿ ಸಿಚುಯೇಶನ್‌ಶಿಪ್ ಜನಪ್ರಿಯ ಪಿಆರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಸ್ಮೃತಿ ಕುರಿತಾಗಿ ಇದ್ದ ರೂಮರ್‌ಗಳ ವಿಚಾರವಾಗಿ ನಾನು ಆತನನ್ನು ಸಂಪರ್ಕ ಮಾಡಿದ್ದೆ. ಹಾಗಂತ ನಾನು ಇಲ್ಲಿ ಹೇಳುತ್ತಿರುವುದು ಯಾವುದೇ ಕಲ್ಪನೆಯ ಕಥೆಯಲ್ಲ. ಅವರು ತಮ್ಮ ಕೆಲಸದ ವಾಟ್ಸಾಪ್ ಗ್ರೂಪ್‌ನಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತಿದ್ದರು. ಹಾಗೂ ಈ ಚಾಟ್‌ಗಳನ್ನು ಅವರು ನನಗೆ ತೋರಿಸಿದರು ಎಂದು ಬರೆದುಕೊಂಡಿದ್ದಾರೆ.
ವಿಚಾರ ಏನೆಂದರೆ, ಪಲಾಶ್ ನಿಜವಾಗಿಯೂ ಸ್ಮೃತಿಗೆ ಮೋಸ ಮಾಡಿದ್ದಾನೆ. ಈಗ ತಾನು ಆಸ್ಪತ್ರೆಗೆ ಅಡ್ಮಿಟ್ ಆಗಿರುವ ಸುದ್ದಿಗಳನ್ನು ನಿರ್ವಹಿಸಲು ಪಿಆರ್ ಸಂಸ್ಥೆಗಳಿಗೆ ಹಣ ನೀಡುತ್ತಿದ್ದಾನೆ. ಆಸ್ಪತ್ರೆಯ ಭೇಟಿಯ ಸುದ್ದಿಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ತಾನು ಮಾಡಿದ ಅನಾಚಾರವನ್ನು ವೈಟ್‌ವಾಶ್ ಮಾಡಲು ಸಹ ಮೀಮ್ ಪೇಜ್‌ಗಳಿಗೆ ಹಣ ನೀಡುತ್ತಿದ್ದಾರೆ. ಆದರೆ, ಯಾವುದು ಈಗ ಕೆಲಸ ಮಾಡುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.
ಸುದ್ದಿ ಅಪ್‌ಡೇಟ್ ಆಗುತ್ತಿದೆ