Lottery Jackpot ದುಡ್ಡಿಲ್ಲ ಅಂದ್ರೂ ಒತ್ತಾಯಕ್ಕೆ ಲಾಟರಿ ಟಿಕೆಟ್ ಖರೀದಿ, ಡ್ರೈವರಿಗೆ ಬಂತು 10 ಕೋಟಿ ರೂ ಜಾಕ್‌ಪಾಟ್ | Indian Driver Wins Rs 10 Crore Share In Abu Dhabi Big Ticket After Last Minute Purchase

Lottery Jackpot ದುಡ್ಡಿಲ್ಲ ಅಂದ್ರೂ ಒತ್ತಾಯಕ್ಕೆ ಲಾಟರಿ ಟಿಕೆಟ್ ಖರೀದಿ, ಡ್ರೈವರಿಗೆ ಬಂತು 10 ಕೋಟಿ ರೂ ಜಾಕ್‌ಪಾಟ್ | Indian Driver Wins Rs 10 Crore Share In Abu Dhabi Big Ticket After Last Minute Purchase



Lottery Jackpot ದುಡ್ಡಿಲ್ಲ ಅಂದ್ರೂ ಒತ್ತಾಯಕ್ಕೆ ಲಾಟರಿ ಟಿಕೆಟ್ ಖರೀದಿ, ಡ್ರೈವರಿಗೆ ಬಂತು 10 ಕೋಟಿ ರೂ ಜಾಕ್‌ಪಾಟ್ | Indian Driver Wins Rs 10 Crore Share In Abu Dhabi Big Ticket After Last Minute Purchase

ದುಡ್ಡಿಲ್ಲ ಅಂದ್ರೂ ಒತ್ತಾಯಕ್ಕೆ ಲಾಟರಿ ಟಿಕೆಟ್ ಖರೀದಿ, ಡ್ರೈವರಿಗೆ ಬಂತು 10 ಕೋಟಿ ರೂ ಜಾಕ್‌ಪಾಟ್, ಸಂಬಂಧಿ ಹಾಗೂ ಗೆಳೆಯನ ಒತ್ತಾಯಕ್ಕೆ ಮಣಿದು ಖರೀದಿಸಿದ ಲಾಟರಿ ಟಿಕೆಟ್‌ನಲ್ಲಿ ಬಹುಮಾನ ಬಂದಿದೆ. 

ಯುಎಇ (ಮಾ.08) ಬೇಡ ಬೇಡ ಅಂದ್ರೂ ಒತ್ತಾಯಕ್ಕೆ ಮಣಿದು ಲಾಟರಿ ಟಿಕೆಟ್ ಖರೀದಿಸಿದ ಪಿಕ್ ಅಪ್ ಚಾಲಕನಿಗೆ ಇದೀಗ 10 ಕೋಟಿ ರೂಪಾಯಿ ಜಾಕ್‌ಪಾಟ್ ಹೊಡೆದಿದೆ. ಪಿಕ್ಅಪ್ ಡ್ರೈವರ್ ಸಂಭ್ರಮಕ್ಕೆ ಪಾರವೇ ಇಲ್ಲ. ಇಷ್ಟು ದಿನದ ಎಲ್ಲಾ ಕಷ್ಟಗಳು ಬದಿಗೆ ಸರಿದಿದೆ. ಕುಟುಂಬದ ಜೊತೆ ನೆಮ್ಮದಿಯ ಜೀವನಕ್ಕೆ ಇಷ್ಟು ಸಾಕು ಎಂದು ಚಾಲಕ ಖುಷಿಯಲ್ಲಿ ತೇಲಾಡಿದ್ದಾನೆ. ಹೌದು, ಭಾರತೀಯ ವಿಭೀಷ್ ಪಿಳ್ಳೈಯಾಲಿ ಯುಎಇನಲ್ಲಿ ಪಿಕ್ಅಪ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಗೆಳೆಯ ಹಾಗೂ ಸಂಬಂಧಿಯ ಒತ್ತಾಯಕ್ಕೆ ಟಿಕೆಟ್ ಖರೀದಿಸಿ ಇದೀಗ 10 ಕೋಟಿ ರೂಪಾಯಿ ಗೆದ್ದುಕೊಂಡಿದ್ದಾನೆ.

ಕಳೆದ 15 ವರ್ಷದಿಂದ ವಿಭೀಷ್ ಯುಎಇನಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಕುಟುಂಬ ಭಾರತದ ಕೇರಳದಲ್ಲಿದೆ. 15 ವರ್ಷಗಳಿಂದ ಯುಎಇ ಲಾಟರಿ ಖರೀದಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು. ಒಂದು ದಿನ ತನ್ನ ಅದೃಷ್ಠ ಬದಲಾಗಲಿದೆ ಎಂದು ನಂಬಿದ್ದರು. ಹೀಗಾಗಿ ಪ್ರತಿ ತಿಂಗಳ ವೇತನ ಬಂದಾಗ ಯುಎಇ ಲಾಟರಿ ಟಿಕೆಟ್ ಖರೀದಿಸುವ ಹವ್ಯಾಸ ವಿಭೀಷ್‌ಗೆ ಇತ್ತು. ಇದರಂತೆ ಫೆಬ್ರವರಿ ತಿಂಗಳಲ್ಲಿ ಲಾಟರಿಗೆ ದುಡ್ಡು ನೀಡಿ ಖರೀದಿಸಿದ್ದಾನೆ. ಹೀಗಾಗಿ ತಿಂಗಳ ಕೋಟಾ ಮುಗದಿತ್ತು. ಮತ್ತೊಂದು ಟಿಕೆಟ್ ಖರೀದಿಸು ಆರ್ಥಿಕ ಸಾಮರ್ಥ್ಯ ವಿಭೀಷ್‌ಗೆ ಇರಲಿಲ್ಲ.

ಗೆಳೆಯರು ಟಿಕೆಟ್ ಖರೀದಿಸುವಾಗ ಒತ್ತಾಯ

ಗೆಳೆಯ ಹಾಗೂ ಸಂಬಂಧಿ ಇಬ್ಬರು ಸೇರಿ ಲಾಟರಿ ಟಿಕೆಟ್ ಖರೀದಿಸಲು ಮುಂದಾಗಿದ್ದಾರೆ. ಒಟ್ಟು 37 ಕೋಟಿ ರೂಪಾಯಿ ಬಹಮಾನದ ಟಿಕೆಟ್. ಆದರೆ ಇದರ ಬೆಲೆ ದುಬಾರಿಯಾಗಿರುವ ಕಾರಣ ಒಬ್ಬರೇ ಖರೀದಿ ಕಷ್ಟ. ಹೀಗಾಗಿ ಮೂರನೇಯವರಾಗಿ ವಿಭೀಷನ್ ಸೇರಿಸಲು ಪ್ಲಾನ್ ಮಾಡಿದ್ದಾರೆ. ಇದಕ್ಕಾಗಿ ಟಿಕೆಟ್ ಖರೀದಿಸಲು ಪಾಲು ನೀಡುವಂತೆ ಒತ್ತಾಯ ಮಾಡಿದ್ದಾರೆ. ಆದರೆ ತಾನು ಈಗಾಗಲೇ ಟಿಕೆಟ್ ಖರೀದಿಸಿದ್ದೇನೆ. ಮತ್ತೊಂದು ಟಿಕೆಟ್ ಖರೀದಿಸಲು ಹಣ ಇಲ್ಲ ಎಂದು ನಯವಾಗಿ ಹೇಳಿದ್ದಾನೆ. ಆದರೆ ಇದನ್ನು ಕೇಳದ ಇನ್ನಿಬ್ಬರು, ಹೇಗಾದರೂ ಮಾಡಿ ಹಣ ಹೊಂದಿಸಿ ನೀಡುವಂತೆ ಒತ್ತಾಯ ಮಾಡಿದ್ದಾರೆ. ಪದೇ ಪದೆ ಕರೆ ಮಾಡಿ ಹಿಂಸೆ ನೀಡಿದ್ದಾರೆ.

ತೀವ್ರ ಒತ್ತಾಯ ಮಾಡಿದ ಕಾರಣ ಸರಿ ಎಂದು ತನ್ನ ಪಾಲಿನ ಲಾಟರಿ ಟಿಕೆಟ್ ಹಣವನ್ನು ನೀಡಿದ್ದಾರೆ. ಬಳಿಕ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಫಲಿತಾಂಶ ದಿನ ವಿಭೀಷ್ ಎಂದಿನಂತೆ ಪಿಕ್ ಅಪ್ ಕರ್ತವ್ಯದಲ್ಲಿ ಬ್ಯೂಸಿಯಾಗಿದ್ದಾರೆ. ಇದರ ನಡುವೆ ಗೆಳೆಯ ಹಾಗೂ ಸಂಬಂಧಿಯ ಕರೆ ಬಂದಿದೆ. ಲಾಟರಿ ಗೆದ್ದಿರುವ ಮಾಹಿತಿ ನೀಡಿದ್ದಾರೆ. ಇದನ್ನು ವಿಭೀಷ್ ನಂಬಲೇ ಇಲ್ಲ. ಸುಳ್ಳು ಹೇಳುತ್ತಿದ್ದೀರಿ, ಸಾಲ ಮಾಡಿ ಕೊಟ್ಟ ದುಡ್ಡು ಹೋಯಿತು ಅನ್ನೋ ಕಾರಣಕ್ಕೆ ಹೀಗೆ ಹೇಳುತ್ತಿದ್ದೀರಿ ಎಂದಿದ್ದಾರೆ. ನಾವು ಗೆದ್ದಿದ್ದೇವೆ ಎಂದು ಮತ್ತೆ ಹೇಳಿದ್ದಾರೆ. ತಕ್ಷಣವೇ ವಿಭೀಷ್ ಹೆಂಡತಿಗೆ ಕರೆ ಮಾಡಿ ವೆಬ್‌ಸೈಟ್ ಪರಿಶೀಲಿಸುವಂತೆ ಹೇಳಿದ್ದಾನೆ. ಈ ವೇಳೆ ಲಾಟರಿ ಗೆದ್ದಿರುವುದು ಖಚಿತವಾಗಿದೆ. ಕಡಿತಗಳ ಬಳಿಕ 30 ಕೋಟಿ ರೂಪಾಯಿ ಸಿಗಲಿದೆ. ಮೂವರು ತಲಾ 10 ಕೋಟಿ ರೂಪಾಯಿಯಂತೆ ಹಂಚಿಕೊಳ್ಳುತ್ತಿದ್ದಾರೆ.



Source link

Leave a Reply

Your email address will not be published. Required fields are marked *