
ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ತನ್ನ ನಂದಿನಿ ತುಪ್ಪದ ದರವನ್ನು ಲೀಟರ್‌ಗೆ 90 ರೂಪಾಯಿಗಳಷ್ಟು ಹೆಚ್ಚಿಸಿದೆ. ಈ ದಿಢೀರ್ ದರ ಏರಿಕೆಯಿಂದಾಗಿ, ಒಂದು ಲೀಟರ್ ತುಪ್ಪದ ಹೊಸ ಬೆಲೆ 700 ರೂಪಾಯಿ ಆಗಿದ್ದು, ವಿಶ್ವ ಮಾರುಕಟ್ಟೆಯಲ್ಲಿನ ದರ ಏರಿಕೆಯೇ ಈ ಕ್ರಮಕ್ಕೆ ಕಾರಣವೆಂದು ಕೆಎಂಎಫ್ ತಿಳಿಸಿದೆ.
ಬೆಂಗಳೂರು, (ನ.5): ಕರ್ನಾಟಕ ಮಿಲ್ಕ್ ಫೆಡರೇಷನ್ (ಕೆಎಂಎಫ್) ತನ್ನ ತುಪ್ಪದ ದರವನ್ನು ದಿಢೀರ್ ಏರಿಸಿದ್ದು, ಇಂದಿನಿಂದಲೇ ಹೊಸ ದರ ಜಾರಿಗೆ ಬಂದಿದೆ. ಒಂದು ಲೀಟರ್ ಕೆಎಂಎಫ್ ತುಪ್ಪಕ್ಕೆ 90 ರೂಪಾಯಿ ಹೆಚ್ಚಳವಾಗಿ, ಈಗ ಇದು 700 ರೂಪಾಯಿಗಳ ದರಕ್ಕೆ ಬೆಲೆ ಬಾಳಿಸುತ್ತಿದೆ.
ತುಪ್ಪದ ಬೆಲೆ ದಿಡೀರ್ ಹೆಚ್ಚಳಕ್ಕೆ ಕಾರಣವೇನು?
ಕೆಎಂಎಫ್ ಅಧಿಕಾರಿಗಳ ಮಾಹಿತಿ ಪ್ರಕಾರ, ಈಗಿನವರೆಗೆ ಒಂದು ಲೀಟರ್ ತುಪ್ಪವನ್ನು 610 ರೂಪಾಯಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಜಿಎಸ್‌ಟಿ ಸ್ಲ್ಯಾಬ್ ಸುಧಾರಣೆಗೂ ಮುಂಚೆ ಈ ದರ 650 ರೂಪಾಯಿಗಳಿತ್ತು, ಸುಧಾರಣೆಯಲ್ಲಿ 40 ರೂಪಾಯಿಗಳ ಇಳಿಕೆ ಮಾಡಲಾಗಿತ್ತು. ಆದರೆ ವಿಶ್ವ ಮಾರುಕಟ್ಟೆಯಲ್ಲಿ ತುಪ್ಪದ ದರ ಏರಿಕೆಯ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ತುಪ್ಪದ ದರ ಏರಿಕೆ ಮಾಡಲಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.