Viral Video: ಮಾವ ರೇವಣ್ಣ ವಿರುದ್ಧವೇ ತೊಡೆ ತಟ್ಟಿ ರೌಡಿ ಅವತಾರ ತೋರಿದ ನಟಿ ಕಾವ್ಯಾ ಗೌಡ! | Kavya Gowda Viral Video Father In Law Revanna Family Dispute High Court Stay San

Viral Video: ಮಾವ ರೇವಣ್ಣ ವಿರುದ್ಧವೇ ತೊಡೆ ತಟ್ಟಿ ರೌಡಿ ಅವತಾರ ತೋರಿದ ನಟಿ ಕಾವ್ಯಾ ಗೌಡ! | Kavya Gowda Viral Video Father In Law Revanna Family Dispute High Court Stay San



Viral Video: ಮಾವ ರೇವಣ್ಣ ವಿರುದ್ಧವೇ ತೊಡೆ ತಟ್ಟಿ ರೌಡಿ ಅವತಾರ ತೋರಿದ ನಟಿ ಕಾವ್ಯಾ ಗೌಡ! | Kavya Gowda Viral Video Father In Law Revanna Family Dispute High Court Stay San

ನಟಿ ಕಾವ್ಯಾ ಗೌಡರ ಕೌಟುಂಬಿಕ ಆಸ್ತಿ ಕಲಹವು ಇದೀಗ ಬೀದಿ ರಂಪಾಟವಾಗಿ ಮಾರ್ಪಟ್ಟಿದೆ. ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದ ಕಾವ್ಯಾ, ಇದೀಗ ತಾವೇ ಮಾವನಿಗೆ ತೊಡೆ ತಟ್ಟಿ ದರ್ಪ ತೋರಿದ ವಿಡಿಯೋ ವೈರಲ್ ಆಗಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. 

ಬೆಂಗಳೂರು (ಮಾ.5): ರಾಧಾರಮಣ, ಗಾಂಧಾರಿ ಸೀರಿಯಲ್‌ ನಟಿ ಕಾವ್ಯಾ ಗೌಡ ಅವರ ಕೌಟುಂಬಿಕ ಕಲಹ ಈಗ ಬೀದಿ ರಂಪವಾಗಿ, ನ್ಯಾಯಾಲಯದ ಮೆಟ್ಟಿಲೇರಿದೆ. ಆಸ್ತಿ ವಿಚಾರವಾಗಿ ಶುರುವಾದ ಈ ಜಗಳ ಈಗ ಹಲ್ಲೆ ಆರೋಪ, ಸಿಸಿಟಿವಿ ದೃಶ್ಯಗಳ ಬಿಡುಗಡೆ ಹಾಗೂ ಪೊಲೀಸರ ಎದುರೇ ಅವಾಜ್ ಹಾಕುವ ಹಂತಕ್ಕೆ ತಲುಪಿದ್ದು, ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ಇದರ ನಡುವೆ ಗುರುವಾರ ಹೊಸ ವಿಡಿಯೋ ವೈರಲ್‌ ಆಗಿದ್ದು, ನಟಿ ಕಾವ್ಯಾ ಗೌಡ ತಮ್ಮ ಮಾವ ರೇವಣ್ಣ ಅವರ ವಿರುದ್ಧವೇ ತೊಡೆ ತಟ್ಟಿ ರೌಡಿ ಅವತಾರ ತೋರಿರುವುದು ಗೊತ್ತಾಗಿದೆ.

ವೈರಲ್ ಆದ ‘ರೌಡಿ ಅವತಾರ’ದ ವೀಡಿಯೋ

ಕಾವ್ಯಾ ಗೌಡ ಅವರು ಹಲ್ಲೆಯ ಸಂತ್ರಸ್ತೆ ಎಂದು ಹೇಳಿಕೊಂಡ ಬೆನ್ನಲ್ಲೇ, ಈಗ ಮತ್ತೊಂದು ವೀಡಿಯೋ ಬಿಡುಗಡೆಯಾಗಿ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಈ ವೀಡಿಯೋದಲ್ಲಿ ಕಾವ್ಯಾ ಗೌಡ ಅವರು ತಮ್ಮ ಮಾವ ರೇವಣ್ಣ ಅವರ ವಿರುದ್ಧವೇ ರೌಡಿ ಅವತಾರದಲ್ಲಿ ತೊಡೆ ತಟ್ಟಿ ಅವಾಜ್ ಹಾಕುತ್ತಿರುವುದು ಕಂಡುಬಂದಿದೆ. ಪೊಲೀಸರ ಸಮ್ಮುಖದಲ್ಲೇ ಮಾವನ ವಿರುದ್ಧ ದರ್ಪ ತೋರುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಇದು ಕಾವ್ಯಾ ಗೌಡ ಅವರ ಪರವಾಗಿದ್ದ ಸಾರ್ವಜನಿಕ ಅಭಿಪ್ರಾಯದಲ್ಲಿ ಸಂಚಲನ ಮೂಡಿಸಿದೆ. ಆಸ್ತಿ ಹಂಚಿಕೆ ವಿಚಾರದಲ್ಲಿ ಈ ಕಲಹ ವಿಕೋಪಕ್ಕೆ ಹೋಗಿರುವುದು ಸ್ಪಷ್ಟವಾಗಿದೆ.

ಪ್ರಕರಣದ ಬೆಳಕಿಗೆ ಬಂದಾ ನನ್ನ ಮಾವ ರೇವಣ್ಣ ಹಾಗೂ ಅತ್ತೆ ದೇವರಂಥವರು. ಅವರೊಂದಿಗೆ ನನಗೆ ಯಾವುದೇ ಮನಸ್ತಾಪವಿಲ್ಲ. ಅವರೂ ಕೂಡ ಮಗಳಂತೆ ನನ್ನನ್ನು ನೋಡಿದ್ದಾರೆ ಎಂದು ಕಾವ್ಯಾ ಗೌಡ ಹೇಳಿದ್ದರು. ಆದರೆ, ವಿಡಿಯೋದಲ್ಲಿ ಕಾವ್ಯಾ ಗೌಡ ಹಾಗೂ ಅವರ ಮಾವ ರೇವಣ್ಣ ಅವರ ನಡುವೆ ಮನಸ್ತಾಪಗಳು ಹೆಚ್ಚಾಗಿದ್ದವು ಎಂದು ಕಂಡುಬಂದಿದೆ.

ಘಟನೆಯ ಹಿನ್ನೆಲೆ ಮತ್ತು ಹಲ್ಲೆ ಆರೋಪ

ಕಾವ್ಯಾ ಗೌಡ ಮತ್ತು ಅವರ ಓರಗಿತ್ತಿ ಪ್ರೇಮಾ ಹಾಗೂ ಇಬ್ಬರ ಪತಿಯಂದಿರ ನಡುವೆ ದೀರ್ಘಕಾಲದಿಂದ ಆಸ್ತಿ ಹಂಚಿಕೆ ವಿಚಾರವಾಗಿ ವಿವಾದವಿತ್ತು. ಇತ್ತೀಚೆಗೆ ಕಾವ್ಯಾ ಗೌಡ ಅವರು ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಪೂರಕವಾಗಿ ಸಿಸಿಟಿವಿ ದೃಶ್ಯಗಳನ್ನು ಬಿಡುಗಡೆ ಮಾಡಿದ್ದ ನಟಿ, ಪ್ರೇಮಾ ಅವರೇ ತಮ್ಮ ಮೇಲೆ ಚಪ್ಪಲಿ ಎಸೆದು ಹಲ್ಲೆ ಮಾಡಿದ್ದಾರೆ ಎಂದು ಸಾಕ್ಷಿ ಒದಗಿಸಿದ್ದರು. “ನನ್ನ ಮಗಳನ್ನು ಕಳ್ಳಿ ಎಂದು ಕರೆದಾಗ ಒಬ್ಬ ತಾಯಿಯಾಗಿ ಸಹಿಸಲು ಸಾಧ್ಯವಾಗಲಿಲ್ಲ, ಅದಕ್ಕೆ ಧ್ವನಿ ಎತ್ತಿದೆ” ಎಂದು ಕಾವ್ಯಾ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.

ಹೈಕೋರ್ಟ್‌ನಿಂದ ಮಧ್ಯಂತರ ತಡೆ

ಈ ನಡುವೆ ಪ್ರಕರಣ ಕಾನೂನು ಸಮರಕ್ಕೆ ತಿರುಗಿದೆ. ಕಾವ್ಯಾ ಗೌಡ ಮತ್ತು ಅವರ ಪತಿ ಸೋಮಶೇಖರ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಹಾಗೂ ತನಿಖೆಗೆ ಕರ್ನಾಟಕ ಹೈಕೋರ್ಟ್ ಈಗ ಮಧ್ಯಂತರ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಈ ಆದೇಶ ನೀಡಿದ್ದು, ಪೊಲೀಸರು ಹಾಗೂ ಪ್ರತಿವಾದಿ ಪ್ರೇಮಾ ಅವರಿಗೆ ನೋಟಿಸ್ ಜಾರಿ ಮಾಡಿದೆ.

ಒಟ್ಟಾರೆಯಾಗಿ, 14 ವರ್ಷಗಳ ಚಿತ್ರಜೀವನದಲ್ಲಿ ಎಂದೂ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತದ ಕಾವ್ಯಾ ಗೌಡ, ಇಂದು ಕೌಟುಂಬಿಕ ಆಸ್ತಿ ಕಲಹದಿಂದಾಗಿ ಕೋರ್ಟ್ ಕಟಕಟೆಯಲ್ಲಿ ನಿಲ್ಲುವಂತಾಗಿದೆ.



Source link

Leave a Reply

Your email address will not be published. Required fields are marked *