Headlines

ತಾಯಿ ನಿಧನ ದಿಶಾ ಸಾಧನೆ, ಅಮ್ಮ ಇಲ್ಲದೆ 3 ಪರೀಕ್ಷೆ, 600/600 ಪಡೆದು ರಾಜ್ಯಕ್ಕೆ ಟಾಪರ್ ಆಳ್ವಾಸ್ ವಿದ್ಯಾರ್ಥಿನಿ! | Inspiring Story Karnataka Puc Topper Disha Scores 600 Out Of 600 Despite Mother Demise Gdp

2026ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ, ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ, ಪರೀಕ್ಷೆಯ ಸಮಯದಲ್ಲಿ ತಾಯಿಯನ್ನು ಕಳೆದುಕೊಂಡ ದುಃಖದ ನಡುವೆಯೂ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರ ಈ ಸಾಧನೆ ಮನೋಬಲ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದ್ದು, ಅನೇಕರಿಗೆ ಸ್ಪೂರ್ತಿದಾಯಕವಾಗಿದೆ.

ಮಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ ಪರಿಪೂರ್ಣ 600ಕ್ಕೆ 600 ಅಂಕಗಳನ್ನು ಗಳಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಶೇ.100 ಫಲಿತಾಂಶದೊಂದಿಗೆ ಅವರು ಸಾಧಿಸಿರುವ ಈ ಸಾಧನೆ ರಾಜ್ಯದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.

ದಿಶಾ ಅವರ ಈ ಸಾಧನೆ ಕೇವಲ ಅಂಕಗಳ ಮಟ್ಟದಲ್ಲೇ ವಿಶಿಷ್ಟವಲ್ಲ, ಅದಕ್ಕೆ ಕಾರಣವಾದ ಹಿನ್ನಲೆ ಇನ್ನಷ್ಟು ಮನಕಲುಕುವಂತಿದೆ. ಪರೀಕ್ಷೆ ಬರೆಯುತ್ತಿದ್ದ ಸಮಯದಲ್ಲಿ ಅವರು ತಾಯಿಯನ್ನು ಕಳೆದುಕೊಂಡರು ಆದರೂ ಮನೋಬಲ ಕಳೆದುಕೊಳ್ಳದೆ ಉಳಿದ ಪರೀಕ್ಷೆಗಳನ್ನು ಬರೆದು ಈ ಮಹತ್ವದ ಸಾಧನೆ ಮಾಡಿರುವುದು ಎಲ್ಲರಿಗೂ ಪ್ರೇರಣೆಯಾಗಿದೆ.

ಮೂರು ಪರೀಕ್ಷೆ ಬರೆದ ನಂತರ ತಾಯಿ ನಿಧನ

ದಿಶಾ ಅವರು ಮೂರು ಪರೀಕ್ಷೆಗಳನ್ನು ಬರೆದ ನಂತರ ಅವರ ತಾಯಿ ನಿಧನರಾಗಿದ್ದರು. ಈ ದುಃಖದ ನಡುವೆಯೂ ದಿಶಾ ಧೈರ್ಯ ಕಳೆದುಕೊಳ್ಳದೆ ಉಳಿದ ಪರೀಕ್ಷೆಗಳಿಗೆ ಹಾಜರಾಗಿ ಅತ್ಯುತ್ತಮ ಸಾಧನೆ ತೋರಿದ್ದಾರೆ. ತಾಯಿಯ ಪ್ರೇರಣೆ ಮತ್ತು ಆಶೀರ್ವಾದವೇ ತನ್ನ ಯಶಸ್ಸಿನ ಹಿಂದಿನ ಶಕ್ತಿ ಎಂದು ದಿಶಾ ಹೇಳಿದ್ದಾರೆ

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ದಿಶಾ, “ನನ್ನ ತಾಯಿ ಸದಾ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ‘ನೀನು ಕಷ್ಟಪಟ್ಟು ಓದುತ್ತಿದ್ದೀಯ, ದೇವರು ಇದ್ದಾನೆ, ಹೆದರಬೇಡ’ ಎಂದು ಹೇಳುತ್ತಿದ್ದರು. ಅವರ ಮಾತುಗಳು ನನಗೆ ಸದಾ ಧೈರ್ಯ ನೀಡುತ್ತವೆ,” ಎಂದು ಭಾವುಕರಾಗಿ ತಿಳಿಸಿದ್ದಾರೆ.

ವಿದ್ಯಾರ್ಥಿ ಸಮುದಾಯಕ್ಕೆ ಸ್ಪೂರ್ತಿ

ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯಾಗಿ ದಿಶಾ ತಮ್ಮ ಪರಿಶ್ರಮ, ಶಿಸ್ತು ಮತ್ತು ಸಂಕಲ್ಪದಿಂದ ಈ ಸಾಧನೆ ಸಾಧಿಸಿದ್ದು, ವಿದ್ಯಾರ್ಥಿ ಸಮುದಾಯಕ್ಕೆ ಸ್ಪೂರ್ತಿದಾಯಕ ಮಾದರಿಯಾಗಿದ್ದಾರೆ. ಕುಟುಂಬದ ದುಃಖದ ನಡುವೆಯೂ ಗುರಿಯತ್ತ ಕೇಂದ್ರೀಕರಿಸಿ ಸಾಧನೆ ಮಾಡಬಹುದೆಂಬುದಕ್ಕೆ ದಿಶಾ ಬದುಕು ಉತ್ತಮ ಉದಾಹರಣೆ.

Source link

Leave a Reply

Your email address will not be published. Required fields are marked *