
ಹರ್ಮುಜ್ ಜಲಸಂಧಿ ಬಳಿ ಅಮೆರಿಕದ ಅತ್ಯಂತ ದುಬಾರಿ ಕಣ್ಗಾವಲು ಡ್ರೋನ್ MQ-4C ಟ್ರೈಟಾನ್ ತುರ್ತು ಎಚ್ಚರಿಕೆ ಕಳುಹಿಸಿ ನಾಪತ್ತೆಯಾಗಿದೆ. ಈ ಡ್ರೋನ್ ಪತನವಾಗಿದೆಯೇ ಅಥವಾ ಶತ್ರುಗಳಿಂದ ಹೊಡೆದುರುಳಿಸಲ್ಪಟ್ಟಿದೆಯೇ ಎಂಬುದು ಸ್ಪಷ್ಟವಾಗಿಲ್ಲ, ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆಯ ಮಧ್ಯೆ ಈ ಘಟನೆ ನಡೆದಿದೆ.
ನವದೆಹಲಿ: ಇಸ್ರೇಲ್ ಅಮೆರಿಕಾ ಇರಾನ್ ನಡುವಣ ಯುದ್ದ ನಿಂತಿದೆ ಕದನ ವಿರಾಮ ಘೋಷಣೆಯಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಹೇಳುತ್ತಾ ಬಂದಿದ್ದಾರೆ. ಇದರ ನಡುವೆ ಇತ್ತ ಇಸ್ರೇಲ್ ಲೆಬನಾನ್ ಮೇಲೆ ಭೀಕರ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 300 ಜನರು ಬಲಿಯಾದ ಬಗ್ಗೆ ವರದಿಯಾಗಿದೆ. ಈ ನಡುವೆ ಹರ್ಮುಜ್ ಜಲಸಂಧಿಯ ಪ್ರದೇಶದಲ್ಲಿ ಅಮೆರಿಕಾದ ಅತ್ಯಂತ ದುಬಾರಿ ವಿಮಾನವಾದ ಅಮೆರಿಕ ನೌಕಾಪಡೆಯ ಕಣ್ಗಾವಲು ಡ್ರೋನ್ MQ-4C ಟ್ರೈಟಾನ್(MQ-4C Triton)ನಾಪತ್ತೆಯಾಗಿದೆ ಎಂದು ವರದಿಯಾಗಿದೆ. ತುರ್ತು ಎಚ್ಚರಿಕೆ ಘೋಷಿಸಿದ ನಂತರ ಈ ಡ್ರೋನ್ ನಾಪತ್ತೆಯಾಗಿದೆ ಎಂದು ವರದಿಯಾಗಿದೆ.
ಕದನ ವಿರಾಮದ ಬೆನ್ನಲ್ಲೇ ‘ಟ್ರೈಟಾನ್’ ನಾಪತ್ತೆ
ವರದಿಗಳ ಪ್ರಕಾರ, ಡ್ರೋನ್ ಪರ್ಷಿಯನ್ ಕೊಲ್ಲಿ ಮತ್ತು ಹಾರ್ಮುಜ್ ಜಲಸಂಧಿಯ ಮೇಲ್ಭಾಗದಲ್ಲಿ ಸುಮಾರು ಮೂರು ಗಂಟೆಗಳ ಕಣ್ಗಾವಲು ಹಾರಾಟ ಪೂರ್ಣಗೊಳಿಸಿ ಇಟಲಿಯ ನೌಕಾ ವಾಯು ನಿಲ್ದಾಣ ಸಿಗೊನೆಲ್ಲಾದಲ್ಲಿರುವ ತನ್ನ ನೆಲೆಗೆ ಹಿಂತಿರುಗುತ್ತಿರು ವೇಳೆ ನಾಪತ್ತೆಯಾಗಿದೆ. ಆನ್‌ಲೈನ್ ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್, ಫ್ಲೈಟ್‌ರಾಡಾರ್ 24 ತೋರಿಸುವಂತೆ ಈ ಡ್ರೋನ್ ಡ್ರೋನ್ MQ-4C ಟ್ರೈಟಾನ್ 7700 ಕೋಡ್ (ಸಾಮಾನ್ಯ ತುರ್ತು ಪರಿಸ್ಥಿತಿಗಾಗಿ ಕಳುಹಿಸುವ ಕೋಡ್)ಅನ್ನು ಕಳುಹಿಸಿ ಇರಾನ್ ಕಡೆಗೆ ಸ್ವಲ್ಪ ತಿರುವು ಪಡೆದುಕೊಂಡು ಬಳಿಕ ಇಳಿಯುವುದಕ್ಕೆ ಆರಂಭಿಸಿದೆ. ಸಿಬ್ಬಂದಿ ಇಲ್ಲದ ಈ ಡ್ರೋನ್ ವಿಮಾನವು ಕಣ್ಮರೆಯಾಗುವ ಮೊದಲು ವೇಗವಾಗಿ ಎತ್ತರದಿಂದ ಕೆಳಗಿಳಿದಿದೆ ಎಂಬುದು ತಿಳಿದು ಬಂದಿದೆ. ಆದರೆ ಅಮೆರಿಕಾದ ಈ ದುಬಾರಿ
7700 ತುರ್ತು ಕೋಡ್ ಕಳುಹಿಸಿ ನಾಪತ್ತೆಯಾದ ಅಮೆರಿಕದ ಹೈಟೆಕ್ MQ-4C ಡ್ರೋನ್!
ಡ್ರೋನ್ ಪತನಗೊಂಡಿದೆಯೇ ಅಥವಾ ಶತ್ರುಪಡೆಗಳಿಂದ ಹೊಡೆದುರುಳಿಸಲ್ಪಟ್ಟಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಅಮೆರಿಕ ಮತ್ತು ಇರಾನ್ ಕದನ ವಿರಾಮಕ್ಕೆ ಒಪ್ಪಿಕೊಂಡ ಎರಡು ದಿನಗಳ ನಂತರ ಅಮೆರಿಕಾದ ಈ ಡ್ರೋನ್ ಕಣ್ಮರೆಯಾಗಿದೆ. ಇತ್ತ ಇರಾನ್ ಹಾರ್ಮುಜ್ ಅನ್ನು ಹಡಗು ಸಂಚಾರಕ್ಕಾಗಿ ಮತ್ತೆ ತೆರೆಯಲು ಒಪ್ಪಿಕೊಂಡಿದೆ.
ನಾಪತ್ತೆಯಾದ MQ-4C ಟ್ರೈಟಾನ್ ಎಷ್ಟು ದುಬಾರಿ?
ಈಗ ಹರ್ಮುಜ್ ಜಲಸಂಧಿಯ ಮೇಲೆ ನಾಪತ್ತೆಯಾದ MQ-4C ಟ್ರೈಟಾನ್ 200 ಮಿಲಿಯನ್ ಡಾಲರ್‌ಗಳಿಗಿಂತಲೂ ಹೆಚ್ಚು ದುಬಾರಿಯಾಗಿದೆ. ಅಂದರೆ ಭಾರತೀಯ ರೂಪಾಯಿಯಲ್ಲಿ ಲೆಕ್ಕ ಹಾಕುವುದಾದರೆ ಇದರ ಮೌಲ್ಯ 1,853 ರಿಂದ 1,863 ಕೋಟಿ ರೂಪಾಯಿ. ಇದನ್ನು ಗಲ್ಫ್ ಪ್ರದೇಶದಲ್ಲಿ ಕಣ್ಗಾವಲಿಗಾಗಿ ಇರಿಸಲಾಗಿತ್ತು. ಈ ಡ್ರೋನ್ ವಿಮಾನವೂ ಸಾಂಪ್ರದಾಯಿಕ ವಿಮಾನಗಳಿಗಿಂತ ಭಿನ್ನವಾಗಿ ಚೋಕ್‌ಪಾಯಿಂಟ್‌ಗಳ ಮೇಲೆ ದೀರ್ಘಾವಧಿಯ ಕಾರ್ಯತಂತ್ರದ ಕಣ್ಗಾವಲು ಒದಗಿಸುತ್ತದೆ. ಇದನ್ನು ನಿರಂತರ, ದೊಡ್ಡ ಪ್ರಮಾಣದ ಕಡಲ ಕಣ್ಗಾವಲುಗಾಗಿ ವಿನ್ಯಾಸಗೊಳಿಸಲಾಗಿದೆ, ಹಾಗೆಯೇ ಆಗಾಗ್ಗೆ P-8A ಪೋಸಿಡಾನ್( P-8A Poseidon patrol planes) ಗಸ್ತು ವಿಮಾನಗಳಿಗೆ ಹೆಚ್ಚಿನ ಎತ್ತರದ ಕಣ್ಣುಗಳಾಗಿ ಕಾರ್ಯನಿರ್ವಹಿಸುತ್ತದೆ. ಟ್ರೈಟಾನ್ 50,000 ಅಡಿಗಳಿಗಿಂತ ಹೆಚ್ಚಿನ ಎತ್ತರದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವ ಏಕೈಕ ಸ್ವಾಯತ್ತ ಎತ್ತರದ, ದೀರ್ಘ ಸಹಿಷ್ಣುತೆಯ (HALE) ಕಡಲ ವಿಮಾನವಾಗಿದ್ದು, 7,400 ನಾಟಿಕಲ್ ಮೈಲುಗಳ ವ್ಯಾಪ್ತಿಯೊಂದಿಗೆ 24 ಕ್ಕೂ ಹೆಚ್ಚು ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ.
2025 ರ ಹೊತ್ತಿಗೆ, ಯುಎಸ್ ನೌಕಾಪಡೆಯು ಒಟ್ಟು 20 MQ-4C ಟ್ರೈಟಾನ್ ಡ್ರೋನ್‌ಗಳನ್ನು ಹೊಂದಿದ್ದು, ಇನ್ನೂ ಏಳು ಈ ಡ್ರೋನ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆಯನ್ನು ಹೊಂದಿದೆ ಎಂದು ವರದಿಗಳಿವೆ.
ಅಮೆರಿಕಾದ ಯುದ್ಧದ ವೆಚ್ಚ ಪ್ರತಿ ಸೆಕೆಂಡಿಗೆ 10 ಸಾವಿರ ಡಾಲರ್
ಇರಾನ್ ವಿರುದ್ಧ ಯುದ್ಧದಲ್ಲಿ ಅಮೆರಿಕಾ ಪ್ರತಿ ಸೆಕೆಂಡಿಗೆ $10,300 ಡಾಲರ್ (ಸುಮಾರು ರೂ. 9.8 ಲಕ್ಷ) ಖರ್ಚು ಮಾಡುತ್ತಿದೆ . ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (SIPRI)ನೀಡುವ ಮಾಹಿತಿಯ ಪ್ರಕಾರ, ಇದರಲ್ಲಿ ಯುದ್ಧಸಾಮಗ್ರಿಗಳು ಮತ್ತು ಕ್ಷಿಪಣಿಗಳು ಅತಿದೊಡ್ಡ ಪಾಲನ್ನು ಹೊಂದಿದ್ದು, ಅಮೆರಿಕಾಗೆ ಈ ಯುದ್ಧದಿಂದ ದಿನಕ್ಕೆ ಸರಿಸುಮಾರು $320 ಮಿಲಿಯನ್ (ಸುಮಾರು ರೂ. 3,040 ಕೋಟಿ) ವೆಚ್ಚವಾಗುತ್ತಿದೆ.
ಅಮೆರಿಕಾದ ವಾಯು ಕಾರ್ಯಾಚರಣೆಗಳಿಂದ ದಿನಕ್ಕೆ $245 ಮಿಲಿಯನ್ ವೆಚ್ಚವಾಗುತ್ತಿದೆ (ಸುಮಾರು ರೂ. 2,327.5 ಕೋಟಿ) ಎಂದು ಅಂದಾಜಿಸಲಾಗಿದೆ, ಇದು ಇದು ದೈನಂದಿನ ಖರ್ಚಿನ ಪ್ರಮಾಣದ 27.5% ಅನ್ನು ಪ್ರತಿನಿಧಿಸುತ್ತದೆ, ಆದರೆ ನೌಕಾ ಕಾರ್ಯಾಚರಣೆಗಳಿಂದ ದಿನಕ್ಕೆ ಸರಿಸುಮಾರು $155 ಮಿಲಿಯನ್ (ಸುಮಾರು ರೂ. 1,472.5 ಕೋಟಿ) ವೆಚ್ಚವಾಗುತ್ತಿದೆ.
ಇದನ್ನೂ ಓದಿ: ಸೆಲ್ಫಿ ಕ್ರೇಜ್‌ಗೆ ಮೂವರು ಬಾಲಕಿಯರು ಬಲಿ: ಜಲಪಾತದಲ್ಲಿ ಫೋಟೋ ತೆಗೆಯುವಾಗ ದುರಂತ: ಕೊನೆಕ್ಷಣ ಕ್ಯಾಮರಾದಲ್ಲಿ ಸೆರೆ
ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳಾದ ಥಾಡ್(THAAD), ಪೇಟ್ರಿಯಾಟ್ ಬ್ಯಾಟರಿಗಳು ಮತ್ತು ಏಜಿಸ್ ಬಿಎಂಡಿ ಪ್ರತಿಬಂಧಕಗಳ ಬಳಕೆಯಿಂದ ದಿನಕ್ಕೆ ಸುಮಾರು $95 ಮಿಲಿಯನ್ (ರೂ. 902.5 ಕೋಟಿ) ವೆಚ್ಚವಾಗುತ್ತಿದೆ. ಇದರ ಜೊತೆಗೆ ಗುಪ್ತಚರ ಮತ್ತು ಸೈಬರ್ ಕಾರ್ಯಾಚರಣೆಗಳಿಗೆ ದಿನಕ್ಕೆ ಸುಮಾರು $45 ಮಿಲಿಯನ್ (ಸುಮಾರು ರೂ. 427.5 ಕೋಟಿ), ಮತ್ತು ಸಿಬ್ಬಂದಿ ಮತ್ತು ಲಾಜಿಸ್ಟಿಕ್ಸ್‌ಗೆ ದಿನಕ್ಕೆ ಸುಮಾರು $30 ಮಿಲಿಯನ್ (ಸುಮಾರು ರೂ. 285 ಕೋಟಿ) ವೆಚ್ಚವಾಗುತ್ತದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ನಾಪತ್ತೆಯಾದ ಚೆಕ್ಬುಕ್ ಹುಡುಕುವ ನೆಪ : ಮಹಿಳೆಯ ಬಟ್ಟೆ ಬಿಚ್ಚಿಸಿ ವಿಕೃತಿ ಮೆರೆದ MSILಚಿಟ್ಫಂಡ್ ಅಧಿಕಾರಿಗಳು