ಬೋರ್ಡಿಂಗ್ ಪಾಯಿಂಟ್ ಮಿಸ್ ಮಾಡಿದ್ರೆ ಬುಕ್ ಮಾಡಿದ ಸೀಟ್ ಕ್ಯಾನ್ಸಲ್; ರೈಲ್ವೆಇಲಾಖೆಯಿಂದ ಹೊಸ ರೂಲ್ಸ್, ತಿಳ್ಕೊಳ್ಳಿ! | Board At Your Booked Station Or Lose Your Seat Indian Railways New Strict No Show Rule

ಬೋರ್ಡಿಂಗ್ ಪಾಯಿಂಟ್ ಮಿಸ್ ಮಾಡಿದ್ರೆ ಬುಕ್ ಮಾಡಿದ ಸೀಟ್ ಕ್ಯಾನ್ಸಲ್; ರೈಲ್ವೆಇಲಾಖೆಯಿಂದ ಹೊಸ ರೂಲ್ಸ್, ತಿಳ್ಕೊಳ್ಳಿ! | Board At Your Booked Station Or Lose Your Seat Indian Railways New Strict No Show Rule


Indian Railways new ticket rule ಭಾರತೀಯ ರೈಲ್ವೆಯು ಟಿಕೆಟ್ ಕಾಯ್ದಿರಿಸುವಿಕೆಯಲ್ಲಿ ಹೊಸ ಕಠಿಣ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ, ನಿಗದಿತ ನಿಲ್ದಾಣದಲ್ಲಿ ಪ್ರಯಾಣಿಕರು ರೈಲು ಹತ್ತದಿದ್ದರೆ, ಅವರ ಟಿಕೆಟ್ ತಕ್ಷಣವೇ ರದ್ದಾಗಲಿದ್ದು, ಆಸನವನ್ನು ಬೇರೆಯವರಿಗೆ ನೀಡಲಾಗುತ್ತೆ.

ನವದೆಹಲಿ (ಫೆ.17): ಭಾರತೀಯ ರೈಲ್ವೆಯು ಕಾಯ್ದಿರಿಸುವ ಟಿಕೆಟ್‌ ಸ್ವರೂಪದಲ್ಲಿ ಕಠಿಣ ನಿಯಮಗಳನ್ನು ಪರಿಚಯಿಸಿದೆ. ಇನ್ನು ಮುಂದೆ ಟಿಕೆಟ್‌ ಕಾಯ್ದಿರಿಸಿದ ಪ್ರಯಾಣಿಕರು ತಮಗೆ ನಿಗದಿಯಾದ ನಿಲ್ದಾಣದಲ್ಲಿ ರೈಲು ಏರದಿದ್ದರೆ ಟಿಕೆಟ್‌ ರದ್ದಾಗಲಿದೆ.

ಟಿಕೆಟ್‌ ಪರೀಕ್ಷಕರಿಗೆ ಹೊಸ ಎಚ್‌ಎಚ್‌ಟಿ ಟ್ಯಾಬ್ಲೆಟ್‌

ರೈಲ್ವೆಯು, ಟಿಕೆಟ್‌ ಪರೀಕ್ಷಕರಿಗೆ ಹೊಸ ಎಚ್‌ಎಚ್‌ಟಿ ಟ್ಯಾಬ್ಲೆಟ್‌ಗಳನ್ನು (ಹ್ಯಾಂಡ್‌ ಹೆಲ್ಡ್‌ ಟರ್ಮಿನಲ್ಸ್‌) ನೀಡಿದೆ. ಒಂದು ವೇಳೆ ಕಾಯ್ದಿರಿಸಿದ ಪ್ರಯಾಣಿಕರು ನಿಗದಿತ ನಿಲ್ದಾಣದಲ್ಲಿ ರೈಲು ಏರದಿದ್ದರೆ ಅದು ತಕ್ಷಣ ಈ ಎಚ್‌ಎಚ್‌ಟಿಗಳಲ್ಲಿ ದಾಖಲಾಗುತ್ತದೆ.

ಕಾಯುವಿಕೆ ಪಟ್ಟಿಯಲ್ಲಿನ ಪ್ರಯಾಣಿಕರಿಗೆ ದಾಖಲಾದ ಆಸನ

ಬಳಿಕ ಕಾಯುವಿಕೆ ಪಟ್ಟಿಯಲ್ಲಿನ ಪ್ರಯಾಣಿಕರಿಗೆ ದಾಖಲಾದ ಆಸನ ನೀಡಲಾಗುತ್ತದೆ. ಆಸನ ಬೇರೊಬ್ಬರಿಗೆ ನೀಡಿದ ಬಗ್ಗೆ ಮೂಲ ಪ್ರಯಾಣಿಕರಿಗೆ ಸಂದೇಶವೂ ರವಾನೆಯಾಗಲಿದೆ. ಇದಕ್ಕೂ ಮೊದಲು ನಿಗದಿತ ನಿಲ್ದಾಣದಲ್ಲಿ ಕಾಯ್ದಿರಿಸಿದ ಪ್ರಯಾಣಿಕರು ಏರದಿದ್ದರೆ ಟಿಟಿಇ ಆ ಆಸನವನ್ನು ಬೇರೆಯವರಿಗೆ ನೀಡದೆ ಮುಂದಿನ 2 ನಿಲ್ದಾಣಗಳ ವರೆಗೆ ಖಾಲಿ ಬಿಡುತ್ತಿದ್ದರು.

Board at your booked station or lose your seat Indian Railways new strict No Show rule

YouTube video player



Source link

Leave a Reply

Your email address will not be published. Required fields are marked *