17 ತಿಂಗಳ ಪುಟ್ಟ ಮಗುವಿಗೆ ಮುಖ ತೋರಿಸಲು ಭಯ ಆಗ್ತಿದೆ: ನಾಯಿ ದಾಳಿಯಿಂದಾಗಿ ವಿರೂಪಗೊಂಡ ತಾಯಿಯ ನೋವಿನ ನೋಡಿ | Hsr Layout Dog Attack Case Afraid To Show My Face To Child Mothers Painful Talk

17 ತಿಂಗಳ ಪುಟ್ಟ ಮಗುವಿಗೆ ಮುಖ ತೋರಿಸಲು ಭಯ ಆಗ್ತಿದೆ: ನಾಯಿ ದಾಳಿಯಿಂದಾಗಿ ವಿರೂಪಗೊಂಡ ತಾಯಿಯ ನೋವಿನ ನೋಡಿ | Hsr Layout Dog Attack Case Afraid To Show My Face To Child Mothers Painful Talk



17 ತಿಂಗಳ ಪುಟ್ಟ ಮಗುವಿಗೆ ಮುಖ ತೋರಿಸಲು ಭಯ ಆಗ್ತಿದೆ: ನಾಯಿ ದಾಳಿಯಿಂದಾಗಿ ವಿರೂಪಗೊಂಡ ತಾಯಿಯ ನೋವಿನ ನೋಡಿ | Hsr Layout Dog Attack Case Afraid To Show My Face To Child Mothers Painful Talk

ನನ್ನ ಮಗಳಿಗೆ ನನ್ನ ಈ ವಿರೂಪಗೊಂಡ ಮುಖ ತೋರಿಸಲು ಭಯ ಆಗ್ತಿದೆ. ಬೆಂಗಳೂರಿನಲ್ಲಿ ವಾಕಿಂಗ್ ವೇಳೆ ವ್ಯಕ್ತಿಯೊಬ್ಬರ ರಾಟ್ ವಿಲ್ಲರ್ ತಳಿಯ ನಾಯಿಯ ಭೀಕರ ದಾಳಿಗೆ ತುತ್ತಾಗಿ ತಮ್ಮ ಮುಖದ ರೂಪವನ್ನೇ ಕಳೆದುಕೊಂಡ ಶಾಲಿನಿ ದುಬೆ ಅವರ ನೋವಿನ ನುಡಿ ಇದು. ಅಪಾಯದಿಂದ ಚೇತರಿಸಿಕೊಂಡರು ಅವರು ಆಘಾತದಿಂದ ಹೊರಬಂದಿಲ್ಲ.

ಮಗಳಿಗೆ ಮುಖ ತೋರಿಸೋದು ಹೇಗೆ?

ನನ್ನ ಮಗಳಿಗೆ ನನ್ನ ಈ ವಿರೂಪಗೊಂಡ ಮುಖ ತೋರಿಸಲು ಭಯ ಆಗ್ತಿದೆ. ಬೆಂಗಳೂರಿನಲ್ಲಿ ವಾಕಿಂಗ್ ವೇಳೆ ವ್ಯಕ್ತಿಯೊಬ್ಬರ ರಾಟ್ ವಿಲ್ಲರ್ ತಳಿಯ ನಾಯಿಯ ಭೀಕರ ದಾಳಿಗೆ ತುತ್ತಾಗಿ ತಮ್ಮ ಮುಖದ ರೂಪವನ್ನೇ ಕಳೆದುಕೊಂಡ ಶಾಲಿನಿ ದುಬೆ ಅವರ ನೋವಿನ ನುಡಿ ಇದು. ಹೌದು ವಾರದ ಹಿಂದೆ ಅಂದರೆ ಜನವರಿ 26ರಂದು ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಮುಂಜಾನೆ ವಾಕಿಂಗ್ ಹೋಗ್ತಿದ್ದ ಮಹಿಳೆಯೊಬ್ಬರ ಮೇಲೆ ಸಾಕು ನಾಯಿಯೊಂದು ದಾಳಿ ನಡೆದಿತ್ತು. ಈ ದಾಳಿಯಿಂದಾಗಿ ಮೂಲತಃ ಭೋಪಾಲ್‌ನವರಾದ ಹೆಚ್‌ಎಸ್‌ಆರ್ ಲೇಔಟ್‌ನ ಟೀಚರ್ಸ್ ಕಾಲೋನಿಯಲ್ಲಿ ವಾಸ ಮಾಡುವ ಶಾಲಿನಿ ದುಬೆ ಅವರ ಕುತ್ತಿಗೆ ಸೇರಿದಂತೆ ಮುಖ, ಕೈ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು. ವೈದ್ಯರು ಅವರಿಗೆ ಸುಮಾರು 100ಕ್ಕೂ ಹೆಚ್ಚು ಹೊಲಿಗೆ ಹಾಕಿದ್ದರು.

ಈ ದಾಳಿ ನಡೆದ ಸುಮಾರು ಒಂದು ವಾರದ ನಂತರ ಅವರ ಪತಿ ಸತ್ಯ ಪ್ರಕಾಶ್ ದುಬೆ ಅವರು ಮಾಧ್ಯಮವೊಂದಕ್ಕೆ ಮಾತನಾಡಿ, ಈ ಘಟನೆಯಿಂದ ಅವರ ಮುಖ ಗುರುತೇ ಸಿಗದಷ್ಟು ವಿರೂಪಗಗೊಂಡಿದೆ. ಅವರ 17 ತಿಂಗಳ ಮಗುವಿಗೆ ಮುಖ ತೋರಿಸುವುದಕ್ಕೆ ಅವರು ಹೆದರುತ್ತಿದ್ದಾರೆ. ಆಕೆಯ ಮುಖದಲ್ಲಿ ಹಲವಾರು ಸ್ಟಿಚ್‌ಗಳಿವೆ. ಹೀಗಾಗಿ ನಮ್ಮ ಮಗುವಿಗೆ ಮುಖ ತೋರಿಸುವುದಕ್ಕೆ ಭಯವಾಗುತ್ತಿದೆ. ನಾವು ಘಟನೆಯಿಂದ ಸಂಪೂರ್ಣವಾಗಿ ಕುಸಿದು ಹೋಗಿದ್ದೇವೆ ಎಂದು ಅವರು ಹೇಳಿದ್ದಾರೆ.

ನಾಯಿ ದಾಳಿಗೆ ತುತ್ತಾದ ಶಾಲಿನಿ ಕುಮಾರಿ ದುಬೆ ನಗರದ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸತ್ಯಪ್ರಕಾಶ್ ದುಬೆ ಅವರು ಆಟೋಮೇಟಿವ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಮಧ್ಯಪ್ರದೇಶದ ಭೋಪಾಲ್‌ನವರಾಗಿದ್ದು, ಉದ್ಯೋಗ ನಿಮಿತ ಬೆಂಗಳೂರಿನಲ್ಲಿ ನೆಲೆಸಿದ್ದರು. ನಾಯಿ ದಾಳಿಯಿಂದಾಗಿ ಆಕೆ 8 ಗಂಟೆಗಳ ದೀರ್ಘ ಶಸ್ತ್ರಚಿಕಿತ್ಸೆಗ ಒಳಗಾದಳು. ಅವಳಿಗೆ ಆದ ಗಾಯಗಳು ಬಹಳ ಆಳವಾಗಿದ್ದವು. ಆಕೆಯ ಮುಖದಲ್ಲೇ ಹಲವು ಸ್ಟಿಚ್‌ಗಳನ್ನು ಹಾಕಲಾಗಿದೆ. ಮಗು ಆಕೆಯ ಮುಖ ನಡಿ ಶಾಕ್ ಆದರೆ ಏನು ಮಾಡುವುದು, ಅವಳು ಅಪಾಯದಿಂದ ಪರಾಗಿದ್ದರೂ ಆಕೆ ಇನ್ನೂ ಆಘಾತದಲ್ಲೇ ಇದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಕೆಯ ಪತಿ ಸತ್ಯಪ್ರಕಾಶ್ ದುಬೆ ಅವರು ಹೇಳಿದ್ದಾರೆ. ಅವರು ನಾಯಿಯ ಮಾಲೀಕನ ವಿರುದ್ಧ ಹಚ್‌ಎಸ್‌ಆರ್ ಲೇಔಟ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಸುಳ್ಳು ರೇಪ್ ಕೇಸಲ್ಲಿ 20 ವರ್ಷ ಜೈಲಲ್ಲಿ ಕಳೆದ ವ್ಯಕ್ತಿ ಅಳುತ್ತಿರುವ ವೀಡಿಯೋ ಮತ್ತೆ ವೈರಲ್

ವಿಡಿಯೋಗಳು ವೈರಲ್ ಆದ ನಂತರ ಆರೋಪಿ ನಾಯಿಯ ಮಾಲೀಕ ಅಮರೇಶ್ರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರು ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು ಅಬಕಾರಿ ವ್ಯವಹಾರ ನಡೆಸುತ್ತಿದ್ದು, ನಾವು ಅವರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾಯಿಯ ಮಾಲೀಕ ಬೇಜವಾಬ್ದಾರಿಯುತ ನಡೆಗೆ ನಾವು ಬೆಲೆ ತೇರುತ್ತಿದ್ದೇವೆ. ಶ್ವಾನ ಆಕ್ರಮಣಕಾರಿಯಾಗಿದೆ ಎಂದು ತಿಳಿದಿದ್ದಾಗ ಅವರು ಅದನ್ನು ಸಂಕೋಲೆಯಿಂದ ಕಟ್ಟಿ ಹಾಕಬೇಕಿತ್ತು. ಘಟನೆ ನಡೆದ ಮೊದಲ ದಿನ ಆಸ್ಪತ್ರೆಗೆ ಬಂದಿದ್ದ. ಆದರೆ ಘಟನೆಯ ವೀಡಿಯೋ ವೈರಲ್ ಆದ ಬಳಿ ಆತ ನಾಪತ್ತೆಯಾಗಿದ್ದಾನೆ ಎಂದು ಸತ್ಯ ದುಬೆ ಹೇಳಿದ್ದಾರೆ.

ಘಟನೆಯ ಸಿಸಿಟಿವಿ ದೃಶ್ಯಗಳಲ್ಲಿ, ನಾಯಿಯ ಮಾಲೀಕ ಶಾಲಿನಿ ಗೇಟ್ ತೆರೆಯುತ್ತಿದ್ದಂತೆ ನಾಯಿ ಅವರ ಮೇಲೆ ದಾಳಿ ಮಾಡಿದೆ. ನಾಯಿ ಆಕೆಯ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಿದಾಗ, ಅದರ ಮಾಲೀಕ ಅಸಹಾಯಕನಾಗಿ ನಿಂತಿದ್ದ. ಪೊಲೀಸರು ನಾಯಿಯ ಮಾಲೀಕ ಅಮರೇಶ್ ರೆಡ್ಡಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 117 (3) (ಸ್ವಯಂಪ್ರೇರಿತವಾಗಿ ಗಂಭೀರ ಗಾಯಗೊಳಿಸುವುದು), 125 (ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವುದು) ಮತ್ತು 291 (ಪ್ರಾಣಿಗಳ ಬಗ್ಗೆ ನಿರ್ಲಕ್ಷ್ಯ ವರ್ತನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಸಿಹಿತಿನಿಸು ತಯಾರಿಸುವ ಹಿಟ್ಟನ್ನು ಕಾಲಿನಲ್ಲಿ ತುಳಿದು ಹದಗೊಳಿಸಿದ ವ್ಯಕ್ತಿ: ತಿಂಡಿ ಅಂಗಡಿ ವೀಡಿಯೋಗೆ ನೆಟ್ಟಿಗರ ಸಮರ್ಥನೆ



Source link

Leave a Reply

Your email address will not be published. Required fields are marked *