ಕೋರ್ಟ್ ಕಟಕಟೆಯೇರಿದ ಸ್ಯಾಂಡಲ್‌ವುಡ್ ನಟಿ ರಮ್ಯಾ! ‘ನಾನು ಹೇಳುವುದೆಲ್ಲಾ ಸತ್ಯ’ವೆಂದು ಪ್ರಮಾಣಿಸಿ ಹೇಳಿಕೆ.., | Actress Ramya Appears In Bengaluru Court For Obscene Message Case Trial Sat

ಕೋರ್ಟ್ ಕಟಕಟೆಯೇರಿದ ಸ್ಯಾಂಡಲ್‌ವುಡ್ ನಟಿ ರಮ್ಯಾ! ‘ನಾನು ಹೇಳುವುದೆಲ್ಲಾ ಸತ್ಯ’ವೆಂದು ಪ್ರಮಾಣಿಸಿ ಹೇಳಿಕೆ.., | Actress Ramya Appears In Bengaluru Court For Obscene Message Case Trial Sat



ಕೋರ್ಟ್ ಕಟಕಟೆಯೇರಿದ ಸ್ಯಾಂಡಲ್‌ವುಡ್ ನಟಿ ರಮ್ಯಾ! ‘ನಾನು ಹೇಳುವುದೆಲ್ಲಾ ಸತ್ಯ’ವೆಂದು ಪ್ರಮಾಣಿಸಿ ಹೇಳಿಕೆ.., | Actress Ramya Appears In Bengaluru Court For Obscene Message Case Trial Sat

ನಟಿ ಹಾಗೂ ಮಾಜಿ ಸಂಸದೆ ರಮ್ಯಾ ತಮಗೆ ಬಂದಿದ್ದ ಅಶ್ಲೀಲ ಸಂದೇಶ ಮತ್ತು ಅತ್ಯಾ*ಚಾರ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದರು. ಪ್ರಕರಣದ ಸೂಕ್ಷ್ಮತೆಯಿಂದಾಗಿ ‘ಇನ್-ಕ್ಯಾಮರಾ’ ವಿಚಾರಣೆ ನಡೆಸಲಾಗಿದ್ದು, 12 ಆರೋಪಿಗಳ ವಿರುದ್ಧ ರಮ್ಯಾ ತಮ್ಮ ಹೇಳಿಕೆ ದಾಖಲಿಸಿದರು.

ಬೆಂಗಳೂರು (ಮಾ.10): ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಹಾಗೂ ಮಾಜಿ ಸಂಸದೆ ರಮ್ಯಾ (ದಿವ್ಯಾ ಸ್ಪಂದನ) ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಹಾಗೂ ಅತ್ಯಾ*ಚಾರದ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ನ್ಯಾಯಾಲಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ವಿಚಾರಣೆ (Trial) ಇಂದಿನಿಂದ ಆರಂಭವಾಗಿದ್ದು, ದೂರುದಾರೆ ರಮ್ಯಾ ಅವರು ಕೋರ್ಟ್‌ಗೆ ಹಾಜರಾಗಿ ಸಾಕ್ಷಿ ನುಡಿದರು.

ಕೋರ್ಟ್ ಕಟಕಟೆಯಲ್ಲಿ ರಮ್ಯಾ:

ಬೆಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ 46ನೇ ಸೆಷನ್ಸ್ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು. ಪ್ರಕರಣದ ಮೊದಲ ಸಾಕ್ಷಿ (PW1) ಆಗಿರುವ ರಮ್ಯಾ ಅವರು ಇಂದು ನ್ಯಾಯಾಧೀಶರಾದ ರಾಜೀವ್ ಗೌಡ ಅವರ ಮುಂದೆ ಹಾಜರಾದರು. ಕಟಕಟೆಯಲ್ಲಿ ನಿಂತ ನಟಿ ರಮ್ಯಾ, “ನಾನು ಹೇಳುವುದೆಲ್ಲವೂ ಸತ್ಯ” ಎಂದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ತಮ್ಮ ಹೇಳಿಕೆಯನ್ನು ದಾಖಲಿಸಲು ಆರಂಭಿಸಿದರು.

‘ಇನ್-ಕ್ಯಾಮರಾ’ ಪ್ರೊಸೀಡಿಂಗ್ಸ್:

ಈ ಪ್ರಕರಣದಲ್ಲಿ ಅತ್ಯಾ*ಚಾರದ ಬೆದರಿಕೆ ಹಾಗೂ ಅತ್ಯಂತ ಅಶ್ಲೀಲವಾದ ಪದಬಳಕೆಯ ಆರೋಪಗಳು ಇರುವುದರಿಂದ, ಸಂತ್ರಸ್ತೆಯ ಗೌರವ ಹಾಗೂ ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿದ ನ್ಯಾಯಾಲಯವು ‘ಇನ್-ಕ್ಯಾಮರಾ’ (In-Camera Proceedings) ವಿಚಾರಣೆಗೆ ಆದೇಶಿಸಿತು. ಇದರನ್ವಯ, ಪ್ರಕರಣದ ಆರೋಪಿಗಳು ಹಾಗೂ ಸಂಬಂಧಪಟ್ಟ ವಕೀಲರನ್ನು ಹೊರತುಪಡಿಸಿ, ಸಾರ್ವಜನಿಕರು ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕಳುಹಿಸಲಾಯಿತು. ಮುಚ್ಚಿದ ಬಾಗಿಲಿನ ಒಳಗಡೆ ರಮ್ಯಾ ಅವರ ಹೇಳಿಕೆ ಪಡೆಯುವ ಪ್ರಕ್ರಿಯೆ ನಡೆಯಿತು.

ತನ್ನ ಹಿನ್ನೆಲೆ ವಿವರಿಸಿದ ಮಾಜಿ ಸಂಸದೆ:

ವಿಚಾರಣೆ ವೇಳೆ ರಮ್ಯಾ ಅವರು ತಮ್ಮ ವೃತ್ತಿಜೀವನ ಹಾಗೂ ಸಾಮಾಜಿಕ ಗೌರವದ ಬಗ್ಗೆ ಮಾಹಿತಿ ನೀಡಿದರು. ‘ನಾನೊಬ್ಬಳು ಚಿತ್ರನಟಿ ಹಾಗೂ ರಾಜಕಾರಣಿ. 2014ರವರೆಗೆ 40ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದೇನೆ ಹಾಗೂ ಒಂದು ಚಿತ್ರವನ್ನು ನಿರ್ಮಾಣ ಮಾಡಿದ್ದೇನೆ. 2014ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿದ್ದೆ. 2012ರಲ್ಲಿ ‘ರಮ್ಯಾ/ದಿವ್ಯಾ ಸ್ಪಂದನ’ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆ ಆರಂಭಿಸಿದ್ದು, ಪ್ರಸ್ತುತ 1.2 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇನ್ನು ಎಕ್ಸ್ ಖಾತೆಯಲ್ಲಿ 8 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ ಎಂದು ಕೋರ್ಟ್‌ಗೆ ವಿವರಿಸಿದರು.

12 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್:

ಈ ಹಿಂದೆ ರಮ್ಯಾ ಅವರ ಇನ್‌ಸ್ಟಾಗ್ರಾಂ ಹಾಗೂ ಇತರ ಸೋಷಿಯಲ್ ಮೀಡಿಯಾ ಖಾತೆಗಳಿಗೆ ಅಶ್ಲೀಲ ಸಂದೇಶ ಕಳುಹಿಸಿ ವಿಕೃತಿ ಮೆರೆದಿದ್ದ 12 ಮಂದಿ ಆರೋಪಿಗಳನ್ನು ಸೈಬರ್ ಪೊಲೀಸರು ಬಂಧಿಸಿದ್ದರು. ತನಿಖೆ ಪೂರ್ಣಗೊಳಿಸಿ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ನ್ಯಾಯಾಲಯವು ಈ ಚಾರ್ಜ್‌ಶೀಟ್ ಆಧರಿಸಿ ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ (Charge Frame) ಸಿದ್ಧಪಡಿಸಿತ್ತು. ಇಂದು ವಿಚಾರಣೆ ವೇಳೆ ಎಲ್ಲಾ 12 ಮಂದಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು.



Source link

Leave a Reply

Your email address will not be published. Required fields are marked *