29ರ ಅತ್ತೆ–18ರ ಸೋದರಳಿಯ ಲವ್ವಿ ಡವ್ವಿ ವೈರಲ್ ಆಗ್ತಿದ್ದಂತೆ ಮನೆ ಬಿಟ್ಟು ಪರಾರಿ affair news | 29 Year Old Aunty Affair With Her 18 Year Old Nephew Uncle Files Case Suh

29 year old Aunty affair with her 18 year old nephew 29 ವರ್ಷದ ಅತ್ತೆಯೊಬ್ಬರು ತಮ್ಮ 18 ವರ್ಷದ ಸೋದರಳಿಯನೊಂದಿಗೆ ಮನೆಯಿಂದ ಓಡಿಹೋಗಿರುವ ಘಟನೆ ಭಾರೀ ಸಂಚಲನಕ್ಕೆ ಕಾರಣವಾಗಿದೆ. 

ಅಲಿಗಢ (ಉತ್ತರ ಪ್ರದೇಶ): 29 ವರ್ಷದ ಅತ್ತೆಯೊಬ್ಬರು ತಮ್ಮ 18 ವರ್ಷದ ಸೋದರಳಿಯನೊಂದಿಗೆ ಮನೆಯಿಂದ ಓಡಿಹೋಗಿರುವ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಅತ್ತೆ ಮತ್ತು ಸೋದರಳಿಯ ನಡುವೆ ಅಕ್ರಮ ಸಂಬಂಧ ಇತ್ತು ಎಂಬ ಆರೋಪ ಕೇಳಿಬಂದಿದ್ದು, ಅವರ ಹಠಾತ್ ನಾಪತ್ತೆ ಕುಟುಂಬದಲ್ಲಿ ತೀವ್ರ ಆತಂಕ ಮೂಡಿಸಿದೆ.

ಗೋಧಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಜನವರಿ 23ರಂದು ಅತ್ತೆ ತನ್ನ ಸೋದರಳಿಯನೊಂದಿಗೆ ಮನೆಯಿಂದ ಪರಾರಿಯಾಗಿದ್ದಾರೆ ಎಂದು ಮಹಿಳೆಯ ಪತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೀರ್ಘಕಾಲದಿಂದ ಸೋದರಳಿಯ ಮನೆಗೆ ಆಗಾಗ್ಗೆ ಬರುತ್ತಿದ್ದರೂ, ಇಬ್ಬರ ನಡುವೆ ಇಂತಹ ಸಂಬಂಧ ಬೆಳೆದಿದೆ ಎಂಬುದು ಕುಟುಂಬಕ್ಕೆ ತಿಳಿದಿರಲಿಲ್ಲ ಎಂದು ಪತಿ ತಿಳಿಸಿದ್ದಾರೆ.

ಪತಿ ಆರೋಪವೇನು?

2019ರಲ್ಲಿ ಪ್ರೇಮ ವಿವಾಹವಾಗಿದ್ದೇನೆ. ಕುಟುಂಬ ನೆಡೆಸಲು ಹಗಲಿರುಳು ದುಡಿಯುತ್ತಿದ್ದೆ. ಈ ನಡುವೆ ಪತ್ನಿಯ ಸೋದರಳಿಯ ಮನೆಗೆ ಬರುತ್ತಿದ್ದ. ಆದರೆ ಇಬ್ಬರ ನಡುವೆ ಪ್ರಣಯ ಸಂಬಂಧವಿದೆ ಎಂಬ ಅನುಮಾನ ನನಗೆ ಇರಲಿಲ್ಲ. ಜನವರಿ 23ರಂದು ಇಬ್ಬರೂ ಮನೆಯಿಂದ ಕಾಣೆಯಾಗಿದ್ದಾರೆ ಎಂದು ಪತಿ ಪೊಲೀಸರಿಗೆ ತಿಳಿಸಿದ್ದಾರೆ.

ಘಟನೆಯ ಬಳಿಕ ಕುಟುಂಬದವರು ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗಲಿಲ್ಲ. ಇದರಿಂದ ಬೇಸತ್ತ ಪತಿ ಗೋಧಾ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದಾರೆ.

ಪೊಲೀಸರ ಕ್ರಮ

ದೂರು ಆಧರಿಸಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅತ್ತೆ ಮತ್ತು ಸೋದರಳಿಯನಿಗಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಂಭಾವ್ಯ ಅಡಗುತಾಣಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಗೋಧಾ ಠಾಣೆಯ ಇನ್ಸ್‌ಪೆಕ್ಟರ್-ಇನ್-ಚಾರ್ಜ್ ಲೋಕೇಶ್ ವೇಶ್ಲಾ ತಿಳಿಸಿದ್ದಾರೆ.

Source link

Leave a Reply

Your email address will not be published. Required fields are marked *