ಪುರುಷರಿಗೆ ಪೀರಿಯಡ್ಸ್ ಆಗುತ್ತದೆಯೇ? ಇರಿಟೆಬಲ್ ಮೇಲ್ ಸಿಂಡ್ರೋಮ್ ಬಗ್ಗೆ ತಿಳ್ಕೊಳ್ಳಿ | Learn Interesting Things About Male Menopause Irritable Male Syndrome Bni

ಪುರುಷರಿಗೆ ಪೀರಿಯಡ್ಸ್ ಆಗುತ್ತದೆಯೇ? ಇರಿಟೆಬಲ್ ಮೇಲ್ ಸಿಂಡ್ರೋಮ್ ಬಗ್ಗೆ ತಿಳ್ಕೊಳ್ಳಿ | Learn Interesting Things About Male Menopause Irritable Male Syndrome Bni



ಪುರುಷರಿಗೆ ಪೀರಿಯಡ್ಸ್ ಆಗುತ್ತದೆಯೇ? ಇರಿಟೆಬಲ್ ಮೇಲ್ ಸಿಂಡ್ರೋಮ್ ಬಗ್ಗೆ ತಿಳ್ಕೊಳ್ಳಿ | Learn Interesting Things About Male Menopause Irritable Male Syndrome Bni

ಹೆಣ್ಣುಮಕ್ಕಳ ಪೀರಿಯೆಡ್ಸ್ ಬಗ್ಗೆ, ಮೆನೋಪಾಸ್ (menopause) ಬಗ್ಗೆ ಓಪನ್ ಆಗಿ ಮಾತಾಡೋ ಮಂದಿ ಪುರುಷರ ಪೀರಿಯೆಡ್ಸ್ ಅಥವಾ ಮೆನೋಪಾಸ್ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಲ್ಲ? ಹಾಗೊಂದು ಇದೆ, ಅದಕ್ಕೊಂದು ಹೆಸರೂ ಇದೆ. ತಿಳ್ಕೊಳ್ಳಿ.

ಸೌರಭ್ ನಲವತ್ತೈದರ ಐಟಿ ಉದ್ಯೋಗಿ. ಇತ್ತೀಚೆಗೆ ತಾನೇ ಆತನ ಡಿವೋರ್ಸ್ ಆಯ್ತು. ಕಾರಣ ಸಂಬಂಧದಲ್ಲಿ ಕಲಹ. ಹೆಂಡ್ತಿ ಗಂಡನ ಅಸಹನೆ, ಸಿಟ್ಟನ್ನು ಸಹಿಸುವಷ್ಟು ಸಹಿಸಿದಳು, ಕ್ರಮೇಣ ಇನ್ನೊಬ್ಬನ ಜೊತೆ ಸ್ನೇಹವಾಯ್ತು. ಈತನಿಗೆ ಗುಡ್ ಬೈ ಹೇಳಿ ಹೊರಟೇ ಹೋದಳು. ಸೌರಭ್ ಹೆಂಡ್ತಿಗೆ ಹಿಡಿಶಾಪ ಹಾಕುತ್ತಲೇ ಇದ್ದ. ಅವನ ಸ್ಥಿತಿ ನೋಡಲಾಗದ ಅವನ ಫ್ರೆಂಡ್ ಒಬ್ಬಳು ಆತನನ್ನು ಮನಃಶಾಸ್ತ್ರರಲ್ಲಿ ಕರೆತಂದಳು. ಅವರು ಸೌರಭ್ ಹಾಗೂ ಆತನ ಫ್ರೆಂಡ್ ಧಾರಿಣಿಗೆ ಇರಿಟೇಬಲ್ ಮೇಲ್ ಸಿಂಡ್ರೋಮ್ ಬಗ್ಗೆ ಹೇಳಿದಾಗ ಸೌರಭ್ ಮಾತ್ರ ಅಲ್ಲ, ಅವನ ಫ್ರೆಂಡ್ ಧಾರಣಿಯೂ ಕಕ್ಕಾಬಿಕ್ಕಿಯಾದಳು.

ಹೆಂಗಸರ ಹಾಗೆ ರಕ್ತಸ್ರಾವ ಆಗದೇ ಇರಬಹುದು, ಆದರೆ ಆ ಹೊತ್ತಿನ ಮೂಡ್ ಸ್ವಿಂಗ್, ಸುಸ್ತು, ಬೇಸರಗಳನ್ನೆಲ್ಲ ಪುರುಷ ಮಹಾಶಯರಿಗೆ ದಯಪಾಲಿಸೋದೇ ಇರಿಟೆಬಲ್ ಮೇಲ್ ಸಿಂಡ್ರೋಮ್. ಇದು ತಿಂಗಳು ತಿಂಗಳು ಬರಬೇಕು ಅಂತಿಲ್ಲ. ಕೆಲವರಲ್ಲಿ ಹೆಂಗಸರಲ್ಲಾಗುವ ಮೆನೋಪಾಸ್ ರೀತಿ ಕಾಣಿಸಿಕೊಳ್ಳುತ್ತದೆ. ಮತ್ತೇನಲ್ಲ, ಕೆಲವು ಸಮಯದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವು ದಿನದಿಂದ ದಿನಕ್ಕೆ ಬದಲಾಗುತ್ತದೆ, ಇದು ಕೆಲವು ಮಾನಸಿಕ ಮತ್ತು ದೈಹಿಕ ಪರಿಣಾಮಗಳನ್ನು ಉಂಟುಮಾಡಬಹುದು.

ಮಹಿಳೆಯರಂತೆಯೇ, ಪುರುಷರೂ ಸಹ ಹಾರ್ಮೋನ್ ಬದಲಾವಣೆಗಳನ್ನು ಅನುಭವಿಸುತ್ತಾರೆ. ಪ್ರತಿದಿನ, ಪುರುಷನ ಟೆಸ್ಟೋಸ್ಟೆರಾನ್ ಮಟ್ಟವು ಬೆಳಿಗ್ಗೆ ಏರುತ್ತದೆ ಮತ್ತು ಸಂಜೆ ಇಳಿಯುತ್ತದೆ. ಟೆಸ್ಟೋಸ್ಟೆರಾನ್ ಮಟ್ಟವು ದಿನದಿಂದ ದಿನಕ್ಕೆ ಕೂಡ ಬದಲಾಗಬಹುದು. ಈ ಹಾರ್ಮೋನ್ ಏರುಪೇರುಗಳು ಮಹಿಳೆಯರ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (PMS) ಲಕ್ಷಣಗಳನ್ನು ಹೋಲುವ ಲಕ್ಷಣಗಳನ್ನು ಉಂಟುಮಾಡಬಹುದು. ಇದರಲ್ಲಿ ಖಿನ್ನತೆ, ಆಯಾಸ ಮತ್ತು ಮೂಡ್ ಸ್ವಿಂಗ್‌ಗಳು ಸೇರಿವೆ.

ಮ್ಯಾನ್-ಸ್ಟ್ರುಯೇಶನ್ ಪೀರಿಯೆಡ್

ಸೈಕೋಥೆರಪಿಸ್ಟ್ ಜೆಡ್ ಡೈಮಂಡ್ ಇರಿಟೇಬಲ್ ಮೇಲ್ ಸಿಂಡ್ರೋಮ್ ಎಂಬ ಪದವನ್ನು ಈ ಹಾರ್ಮೋನ್ ಏರುಪೇರುಗಳು ಮತ್ತು ಅವು ಉಂಟುಮಾಡುವ ಲಕ್ಷಣಗಳನ್ನು ವಿವರಿಸಲು ಬಳಸಿದ್ದಾರೆ. ಅವರ ಪ್ರಕಾರ ಕೆಲವು ಪುರುಷರು ಮಹಿಳೆಯರಂತೆಯೇ ಹಾರ್ಮೋನ್ ಚಕ್ರಗಳನ್ನು ಅನುಭವಿಸುತ್ತಾರಂತೆ. ಅದಕ್ಕಾಗಿಯೇ ಇದನ್ನು “ಮ್ಯಾನ್-ಸ್ಟ್ರುಯೇಶನ್’ ಅಥವಾ ಮೇಲ್ ಪಿರಿಯಡ್ ಎನ್ನುತ್ತಾರೆ.

(30 ವರ್ಷ ವಯಸ್ಸಿನಿಂದಲೇ ಪುರುಷನ ಟೆಸ್ಟೋಸ್ಟೆರಾನ್ ಮಟ್ಟ ಕುಸಿಯಲು ಪ್ರಾರಂಭಿಸುತ್ತದೆ. ಒತ್ತಡ, ಆಹಾರ ಅಥವಾ ತೂಕದಲ್ಲಿನ ಬದಲಾವಣೆಗಳು, ಅನಾರೋಗ್ಯ, ನಿದ್ರೆಯ ಕೊರತೆ ಇತ್ಯಾದಿಗಳಿಂದ ಈ ಲಕ್ಷಣ ನಲವತ್ತಕ್ಕೂ ಮೊದಲೇ ಕಾಣಬಹುದಂತೆ. ಆಯಾಸ, ಗೊಂದಲ, ಖಿನ್ನತೆ, ಕೋಪ, ಆತ್ಮವಿಶ್ವಾಸದ ಕೊರತೆ, ಕಡಿಮೆ ಲೈಂಗಿಕ ಆಸಕ್ತಿ ಮೊದಲಾದ ಲಕ್ಷಣಗಳಿವೆ.

ಮಧ್ಯವಯಸ್ಕ ಪುರುಷರು ತಮ್ಮ ಟೆಸ್ಟೋಸ್ಟೆರಾನ್ ಮಟ್ಟವು ಕುಸಿಯಲು ಪ್ರಾರಂಭಿಸಿದಾಗ ಲಕ್ಷಣಗಳನ್ನು ಅನುಭವಿಸಬಹುದು. ಈ ಸ್ಥಿತಿಯನ್ನು ‘ಆಂಡ್ರೋಪಾಸ್’ (Andropause) ಅಥವಾ ‘ಪುರುಷರ ಮೆನೋಪಾಸ್’ ಎಂದೂ ಕರೆಯುತ್ತಾರೆ. “ಆಂಡ್ರೋಪಾಸ್ ವಿಷಯಕ್ಕೆ ಬಂದರೆ, ಲಕ್ಷಣಗಳು ಆಯಾಸ, ಕಡಿಮೆ ಲೈಂಗಿಕ ಆಸಕ್ತಿ ಆಗಿರುತ್ತವೆ ಮತ್ತು ಕಡಿಮೆ ಟೆಸ್ಟೋಸ್ಟೆರಾನ್ ಮಟ್ಟದಿಂದಾಗಿ ಇದು ಮಧ್ಯವಯಸ್ಕ ಪುರುಷರ ಮೇಲೆ ಪರಿಣಾಮ ಬೀರುತ್ತದೆ,” ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ.

ವ್ಯಾಯಾಮ ಮಾಡುವುದು, ಆರೋಗ್ಯಕರ ಆಹಾರ ಸೇವಿಸುವುದು, ಒತ್ತಡ ನಿವಾರಣೆಗೆ ದಾರಿಗಳನ್ನು ಹುಡುಕುವುದು ಮತ್ತು ಮದ್ಯಪಾನ ಹಾಗೂ ಧೂಮಪಾನವನ್ನು ತಪ್ಪಿಸುವುದು ಈ ಸಮಸ್ಯೆಯನ್ನು ತಡೆಯಲು ಸಹಾಯ ಮಾಡಬಹುದು. ಯಾವುದಕ್ಕೂ ಇಂಥಾ ಲಕ್ಷಣ ಕಂಡುಬಂದರೆ ಹುಷಾರಾಗಿರಿ.



Source link

Leave a Reply

Your email address will not be published. Required fields are marked *