Headlines

ಮುಂಬರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತದ ಪಂದ್ಯ ಬಹಿಷ್ಕರಿಸಿದ ಪಾಕ್‌ ಕ್ರಿಕೆಟ್‌ ತಂಡ ! | Pakistan Skips India Clash In T20 World Cup

ಮುಂಬರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತದ ಪಂದ್ಯ ಬಹಿಷ್ಕರಿಸಿದ ಪಾಕ್‌ ಕ್ರಿಕೆಟ್‌ ತಂಡ ! | Pakistan Skips India Clash In T20 World Cup



ಮುಂಬರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತದ ಪಂದ್ಯ ಬಹಿಷ್ಕರಿಸಿದ ಪಾಕ್‌ ಕ್ರಿಕೆಟ್‌ ತಂಡ ! | Pakistan Skips India Clash In T20 World Cup

ಮುಂಬರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡ ಪಾಲ್ಗೊಳ್ಳಲಿದೆ ಎಂದು ಪಾಕಿಸ್ತಾನ ಸರ್ಕಾರ ಭಾನುವಾರ ಅಧಿಕೃತವಾಗಿ ಘೋಷಿಸಿದೆ. ಆದರೆ ಫೆ.15ರಂದು ನಡೆಯಬೇಕಿದ್ದ ಭಾರತ ವಿರುದ್ಧದ ಮಹತ್ವದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪ್ರಕಟಿಸಿದೆ.

ಲಾಹೋರ್‌: ಮುಂಬರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್‌ ತಂಡ ಪಾಲ್ಗೊಳ್ಳಲಿದೆ ಎಂದು ಪಾಕಿಸ್ತಾನ ಸರ್ಕಾರ ಭಾನುವಾರ ಅಧಿಕೃತವಾಗಿ ಘೋಷಿಸಿದೆ. ಆದರೆ ಫೆ.15ರಂದು ನಡೆಯಬೇಕಿದ್ದ ಭಾರತ ವಿರುದ್ಧದ ಮಹತ್ವದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪ್ರಕಟಿಸಿದೆ.

ಬಾಂಗ್ಲಾದೇಶವನ್ನು ಐಸಿಸಿ ಟೂರ್ನಿಯಿಂದ ಹೊರಗಿಟ್ಟಿದ್ದಕ್ಕೆ ಪ್ರತಿಯಾಗಿ ಪಾಕ್‌ ಸರ್ಕಾರ ವಿಶ್ವಕಪ್‌ನಲ್ಲಿ ಪಾಕ್‌ ತಂಡದ ಪಾಲ್ಗೊಳ್ಳುವಿಕೆ ಬಗ್ಗೆ ಮರುಪರಿಶೀಲಿಸುವುದಾಗಿ ಹೇಳಿತ್ತು. ಭಾನುವಾರ ಎಕ್ಸ್‌ ಖಾತೆಯಲ್ಲಿ ಮಾಹಿತಿ ಪ್ರಕಟಿಸಿದ ಪಾಕ್‌ ಸರ್ಕಾರ, ‘ಪಾಕ್‌ ಕ್ರಿಕೆಟ್‌ ತಂಡ ವಿಶ್ವಕಪ್‌ನಲ್ಲಿ ಆಡಲು ಸರ್ಕಾರ ಅನುಮತಿ ನೀಡಿದೆ. ಆದರೆ ಫೆ.15ರಂದು ನಡೆಯಬೇಕಿದ್ದ ಭಾರತ ವಿರುದ್ಧ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ’ ಎಂದಿದೆ. ಇದರೊಂದಿಗೆ ಭಾರತ-ಪಾಕ್ ರದ್ದುಗೊಂಡಿದ್ದು, ಭಾರತಕ್ಕೆ 2 ಅಂಕ ಲಭಿಸಲಿದೆ.

ಫೆ.7ಕ್ಕೆ ವಿಶ್ವಕಪ್‌ ಆರಂಭಗೊಳ್ಳಲಿದ್ದು, ಭಾರತದ 5, ಶ್ರೀಲಂಕಾದ 3 ನಗರ ಆತಿಥ್ಯ ವಹಿಸಲಿದೆ. ‘ಎ’ ಗುಂಪಿನಲ್ಲಿರುವ ಪಾಕ್‌ ಫೆ.7ಕ್ಕೆ ಕೊಲಂಬೊದಲ್ಲಿ ನೆದರ್‌ಲ್ಯಾಂಡ್‌ ವಿರುದ್ಧ ಮೊದಲ ಪಂದ್ಯ ಆಡಲಿದೆ. ಫೆ.10ಕ್ಕೆ ಯುಎಸ್‌ಎ, ಫೆ.18ಕ್ಕೆ ನಮೀಬಿಯಾ ವಿರುದ್ಧ ಆಡಲಿದೆ.

ಬಹಿಷ್ಕಾರದ ಪರಿಣಾಮ ಏನು?

1. ಬಹಿಷ್ಕಾರದ ಮೊದಲ ಪರಿಣಾಮ ಪಾಕ್‌ಗೇ ತಟ್ಟಲಿದೆ. ತಂಡ ನಾಕೌಟ್‌ಗೇರಲು ಉಳಿದ 3 ಪಂದ್ಯಗಳಲ್ಲೂ ಗೆಲ್ಲಬೇಕು.

2. ಪಾಕ್‌ ನಾಕೌಟ್‌ಗೇರಿ, ಭಾರತ ವಿರುದ್ಧ ಆಡಬೇಕಿದ್ದರೆ ಆ ಪಂದ್ಯವನ್ನೂ ಬಹಿಷ್ಕರಿಸಲಿದೆಯೇ? ಬಹಿಷ್ಕರಿಸಿದರೆ ಪಾಕ್‌ ಹೊರಕ್ಕೆ.

3. ಕಾರಣವಿಲ್ಲದೆ ಬಹಿಷ್ಕರಿಸಿದ್ದರಿಂದ ಪಾಕ್‌ ವಿರುದ್ಧ ಐಸಿಸಿ ಕ್ರಮ(ದಂಡ, ನಿಷೇಧ) ಕೈಗೊಳ್ಳಬಹುದು.

4. ವಿಶ್ವಕಪ್‌ ವೀಕ್ಷಣೆ ಸಂಖ್ಯೆ, ಪ್ರಾಯೋಜಕತ್ವ, ಪ್ರಸಾರ ಆದಾಯದ ಮೇಲೆ ಭಾರೀ ಹೊಡೆತ. ಐಸಿಸಿಗೆ ನಷ್ಟ.

5. ವಿಶ್ವಕಪ್‌ ಮಾತ್ರವಲ್ಲದೆ ಭವಿಷ್ಯದಲ್ಲೂ ಪಾಕ್‌ ಕ್ರಿಕೆಟ್‌ಗೆ ಭಾರೀ ಆರ್ಥಿಕ ಹೊಡೆತ ಬೀಳುವ ಸಾಧ್ಯತೆ.

ನಾಕೌಟ್‌ ಪಂದ್ಯವೂ

ಬಹಿಷ್ಕರಿಸುತ್ತಾ ಪಾಕ್?

ಭಾರತ ವಿರುದ್ಧ ಗುಂಪು ಹಂತದ ಪಂದ್ಯವನ್ನು ಆಡಲ್ಲ ಎಂದು ಪಾಕಿಸ್ತಾನ ತಿಳಿಸಿದೆ. ಒಂದು ವೇಳೆ ಪಾಕ್‌ಗೆ ಸೂಪರ್‌-8 ಹಾಗೂ ನಾಕೌಟ್‌ ಹಂತದಲ್ಲಿ ಭಾರತ ವಿರುದ್ಧ ಪಂದ್ಯ ಸಿಕ್ಕರೆ ಆ ಪಂದ್ಯವನ್ನೂ ಬಹಿಷ್ಕರಿಸಲಿದೆಯೇ ಎಂಬುದನ್ನು ಪಾಕ್‌ ಸರ್ಕಾರ ಸ್ಪಷ್ಟಪಡಿಸಿಲ್ಲ.



Source link

Leave a Reply

Your email address will not be published. Required fields are marked *