Headlines

2,400 ಕಿಮೀ ಟ್ರೆಕ್ಕಿಂಗ್ ಮಾಡಿ ಸುಸ್ತಾಗಿದೆ ಎಂದು ಆಸ್ಪತ್ರೆಗೆ ಹೋದ್ರೆ, ಡೆಲಿವರಿ ಮಾಡಿ ಮಗು ಕೈಗಿಟ್ಟ ಡಾಕ್ಟರ್! | Chinese Woman Treks 2400 Km Unaware Of Pregnancy Gives Birth After Car Crash Sat

2,400 ಕಿಮೀ ಟ್ರೆಕ್ಕಿಂಗ್ ಮಾಡಿ ಸುಸ್ತಾಗಿದೆ ಎಂದು ಆಸ್ಪತ್ರೆಗೆ ಹೋದ್ರೆ, ಡೆಲಿವರಿ ಮಾಡಿ ಮಗು ಕೈಗಿಟ್ಟ ಡಾಕ್ಟರ್! | Chinese Woman Treks 2400 Km Unaware Of Pregnancy Gives Birth After Car Crash Sat



2,400 ಕಿಮೀ ಟ್ರೆಕ್ಕಿಂಗ್ ಮಾಡಿ ಸುಸ್ತಾಗಿದೆ ಎಂದು ಆಸ್ಪತ್ರೆಗೆ ಹೋದ್ರೆ, ಡೆಲಿವರಿ ಮಾಡಿ ಮಗು ಕೈಗಿಟ್ಟ ಡಾಕ್ಟರ್! | Chinese Woman Treks 2400 Km Unaware Of Pregnancy Gives Birth After Car Crash Sat

ಈ ಮಹಿಳೆ 2,400 ಕಿ.ಮೀ ಟ್ರೆಕ್ಕಿಂಗ್ ಮುಗಿಸಿ, ಸುಸ್ತಾಗಿದೆಯೆಂದು ಆಸ್ಪತ್ರೆಗೆ ತೆರಳುವಾಗ ಅಪಘಾತಕ್ಕೀಡಾಗುತ್ತಾರೆ. ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಆಕೆಗೆ ತಾನು ಗರ್ಭಿಣಿ ಆಗಿರುವುದೇ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

ಬರೋಬ್ಬರಿ 2,400 ಕಿ.ಮೀ ಟ್ರೆಕ್ಕಿಂಗ್ ಮಾಡಿದ ಮಹಿಳೆ ನನಗೇಕೋ ಸುಸ್ತಾಗಿದೆ ಎಂದು ಆಸ್ಪತ್ರೆಗೆ ಕಾರಿನಲ್ಲಿ ಹೊರಟಿದ್ದಾರೆ. ಆದರೆ, ಕಾರಿನಲ್ಲಿ ಹೋಗುವಾಗ ಆಕ್ಸಿಡೆಂಟ್ ಆಗಿದ್ದು, ಅಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಗೆ ಸೇರಿದ್ದಾರೆ. ಅಲ್ಲಿ ಡಾಕ್ಟರ್, ನೀವು ತಾಯಿ ಆಗಿದ್ದೀರಿ ಎಂದು ಮಗುವನ್ನು ಕೈಗಿಟ್ಟಿದ್ದಾರೆ. ಇದೆಲ್ಲವನ್ನೂ ನೋಡಿದ ಮಹಿಳೆ ನಾನು ಗರ್ಭಿಣಿಯೇ ಆಗದೆ, ನನ್ನ ಹೊಟ್ಟೆಯಲ್ಲಿ ಮಗು ಹೇಗೆ ಬಂತು ಎಂದು ಪ್ರಶ್ನೆ ಮಾಡಿದ್ದಾರೆ.

ಜೀವನ ಅಂದ್ರೆನೇ ಹಾಗೆ, ಯಾವಾಗ ಯಾವ ತಿರುವು ಕೊಡುತ್ತೆ ಅಂತ ಹೇಳೋಕಾಗಲ್ಲ. ಚೀನಾದ ‘ಡಾಂಗ್’ ಅನ್ನೋ ಮಹಿಳೆ ಜೀವನದಲ್ಲೂ ಇಂಥದ್ದೇ ಒಂದು ಅಚ್ಚರಿ ನಡೆದಿದೆ. 1,500 ಮೈಲಿ (ಸುಮಾರು 2,400 ಕಿ.ಮೀ) ಟ್ರೆಕ್ಕಿಂಗ್ ಮುಗಿಸಿ, ಸುಸ್ತಾಗಿದೆ ಅಂತ ಆಸ್ಪತ್ರೆಗೆ ಹೊರಟಿದ್ದಾರೆ. ದಾರಿಯಲ್ಲಿ ಕಾರ್ ಅಪಘಾತವಾಗಿದೆ. ಕೊನೆಗೆ ಆಸ್ಪತ್ರೆ ತಲುಪಿದಾಗ, ತಾನು ಗರ್ಭಿಣಿ ಅನ್ನೋ ಸತ್ಯ ಗೊತ್ತಾಗಿದೆ. ಅಷ್ಟೇ ಅಲ್ಲ, ಕೆಲವೇ ಗಂಟೆಗಳಲ್ಲಿ ಎರಡೂವರೆ ಕೆ.ಜಿ. ತೂಕದ ಆರೋಗ್ಯವಂತ ಮಗುವಿಗೂ ಜನ್ಮ ನೀಡಿದ್ದಾರೆ. ಆದ್ರೆ, ತನಗೆ ಗರ್ಭಿಣಿ ಅನ್ನೋ ವಿಚಾರವೇ ಗೊತ್ತಿರಲಿಲ್ಲ ಅಂತ ಡಾಂಗ್ ಹೇಳಿಕೊಂಡಿದ್ದಾರೆ.

139 ದಿನ, 2,400 ಕಿಲೋಮೀಟರ್ ಪ್ರಯಾಣ

ಚೀನಾದ ಉತ್ತರದ ಹಾಮಿಯಿಂದ ಹೆನಾನ್ ಪ್ರಾಂತ್ಯದ ಲುವೊಯಾಂಗ್‌ಗೆ 1,500 ಮೈಲಿ ನಡೆಯುವುದು ಅಂದ್ರೆ ಸುಲಭದ ಮಾತಲ್ಲ. ಎತ್ತರದ ಪರ್ವತಗಳು, ಸುಡುವ ಮರುಭೂಮಿ, ಹಿಮಗಾಳಿ ಹೀಗೆ ಎಲ್ಲವನ್ನೂ ಎದುರಿಸಬೇಕು. ಈ ಎಲ್ಲಾ ಸವಾಲುಗಳನ್ನು ದಾಟಿ, ಡಾಂಗ್ ಮತ್ತು ಆಕೆಯ ಪತಿ 139 ದಿನಗಳಲ್ಲಿ 2,400 ಕಿ.ಮೀ. ದೂರದ ಕಠಿಣ ಟ್ರೆಕ್ಕಿಂಗ್ ಮುಗಿಸಿದ್ದರು. ಮನೆಗೆ ಬಂದಾಗ ಸ್ವಲ್ಪ ನೆಗಡಿ ಆದ ಹಾಗೆ ಅನಿಸಿದೆ. ತಕ್ಷಣ ಆಸ್ಪತ್ರೆಗೆ ಹೋಗಲು ಕಾರಿನಲ್ಲಿ ಹೊರಟಿದ್ದಾರೆ.

ಕಾರ್ ಅಪಘಾತ, ಆಸ್ಪತ್ರೆ, ನಂತರ ಹೆರಿಗೆ!

ಆಸ್ಪತ್ರೆ ತಲುಪುವ ಸ್ವಲ್ಪ ಮುನ್ನ ಡಾಂಗ್ ಅವರ ಕಾರು ಅಪಘಾತಕ್ಕೀಡಾಗಿದೆ. ಏರ್‌ಬ್ಯಾಗ್‌ಗಳು ಇದ್ದಿದ್ದರಿಂದ ಅದೃಷ್ಟವಶಾತ್ ದೊಡ್ಡ ಗಾಯಗಳೇನೂ ಆಗಿಲ್ಲ. ಆದರೆ ಆಸ್ಪತ್ರೆಯಲ್ಲಿ ಅವರಿಗೆ ದೊಡ್ಡ ಶಾಕ್ ಕಾದಿತ್ತು. ವೈದ್ಯರು ನೀವು 9 ತಿಂಗಳ ಗರ್ಭಿಣಿ, ಹೆರಿಗೆ ಸಮಯ ಹತ್ತಿರ ಬಂದಿದೆ ಎಂದಾಗ ಡಾಂಗ್‌ಗೆ ನಂಬೋಕೆ ಆಗ್ಲಿಲ್ಲ. ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ ಅವರು ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಷ್ಟು ದೀರ್ಘ ಪ್ರಯಾಣದ ವೇಳೆ ತಾನು ಗರ್ಭಿಣಿ ಎಂಬ ಸಣ್ಣ ಸುಳಿವು ಕೂಡ ತನಗಾಗಲಿ, ತನ್ನ ಪತಿಗಾಗಲಿ ಇರಲಿಲ್ಲ ಎಂದು ಡಾಂಗ್ ಹೇಳಿದ್ದಾರೆ.

‘ನಿಗೂಢ ಗರ್ಭಧಾರಣೆ’ ಎಂದರೇನು?

ಡಾಂಗ್ ಅವರ ಈ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ‘ಕ್ರಿಪ್ಟಿಕ್ ಪ್ರೆಗ್ನೆನ್ಸಿ’ (ನಿಗೂಢ ಗರ್ಭಧಾರಣೆ) ಅಂತ ಕರೆಯುತ್ತಾರೆ. ಅಂದ್ರೆ, ಹೆರಿಗೆಯ ಕೊನೆಯ ಹಂತದವರೆಗೂ ಅಥವಾ ಹೆರಿಗೆಯ ಸಮಯದಲ್ಲಿಯೂ ತಾನು ಗರ್ಭಿಣಿ ಅನ್ನೋದು ಮಹಿಳೆಗೆ ಗೊತ್ತಾಗುವುದೇ ಇಲ್ಲ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ಇರೋರಿಗೆ ಹೀಗಾಗುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಯಿಂದ ಹಾರ್ಮೋನ್ ಅಸಮತೋಲನ, ಅನಿಯಮಿತ ಮುಟ್ಟು ಉಂಟಾಗಿ, ಗರ್ಭಧಾರಣೆಯ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಡಾಂಗ್ ಅವರಿಗೂ ವಾಂತಿ, ಸುಸ್ತು (ಮಾರ್ನಿಂಗ್ ಸಿಕ್‌ನೆಸ್) ಮುಂತಾದ ಯಾವುದೇ ಗರ್ಭಾವಸ್ಥೆಯ ಲಕ್ಷಣಗಳು ಇರಲಿಲ್ಲ. ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ದೇಹದ ತೂಕ ಹೆಚ್ಚಾಗಿದೆ ಎಂದು ಅವರು ಭಾವಿಸಿದ್ದರು ಎನ್ನುತ್ತಾರೆ ವೈದ್ಯರು.

‘ಲಕ್ಕಿ ಬೇಬಿ’

ಒಂದು ತಿಂಗಳು ಮುಂಚಿತವಾಗಿ ಮಗು ಜನಿಸಿದರೂ, ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಇಷ್ಟು ಬೇಗ ತಾನು ಅಪ್ಪನಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ ಅಂತ ಡಾಂಗ್ ಪತಿ ಸಂತಸ ವ್ಯಕ್ತಪಡಿಸಿದ್ದಾರೆ. ದೀರ್ಘ ಪ್ರಯಾಣ, ಕಾರ್ ಅಪಘಾತ ಎಲ್ಲವನ್ನೂ ದಾಟಿ ಆರೋಗ್ಯವಾಗಿ ಜನಿಸಿದ ಮಗುವಿಗೆ ಇಬ್ಬರೂ ಸೇರಿ ‘ಲಕ್ಕಿ ಬೇಬಿ’ ಎಂದು ಹೆಸರಿಟ್ಟಿದ್ದಾರೆ.



Source link

Leave a Reply

Your email address will not be published. Required fields are marked *