
ಪಕ್ಷಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಾಕಾಯ್ತು ಸಹವಾಸ ಎಂದು ರಾಜೀನಾಮೆ ಪತ್ರವನ್ನು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ರವಾನಿಸಿದ್ದಾರೆ. ಖರ್ಗೆ ರಾಜೀನಾಮೆ ಪತ್ರ ಓದಿ ಮುಗಿಸುವಷ್ಟರಲ್ಲೇ ನಾಯಕ ಯೂ ಟರ್ನ್ ಹೊಡೆದಿದ್ದಾರೆ.
ನವದೆಹಲಿ (ಫೆ.16) ಪಕ್ಷಕ್ಕೆ ರಾಜೀನಾಮೆ ನೀಡಿ ಮತ್ತೊಂದು ಪಕ್ಷ ಸೇರಿಕೊಳ್ಳುವುದು, ಹೊಸ ಪಕ್ಷ ಕಟ್ಟುವುದು ಹೊಸದೇನಲ್ಲ. ಅದರಲ್ಲೂ ಚುನಾವಣೆ ಸಂದರ್ಭಗಳಲ್ಲಿ ಟಿಕೆಟ್ ಸಿಕ್ಕಿಲ್ಲ, ಕಡೆಗಣಿಸಿದ್ದಾರೆ ಎಂಬ ಕಾರಣ ನೀಡಿದ ರಾಜೀನಾಮೆ,ಪಕ್ಷ ಬದಲಿಸುವುದು ಸಾಮಾನ್ಯವಾಗಿ ನಡೆಯುತ್ತದೆ. ಹೀಗೆ ಕಾಂಗ್ರೆಸ್ ಪಕ್ಷ ತನ್ನನ್ನು ಕಡೆಗಣಿಸುತ್ತಿದೆ. ತನಗೆ ನಾಯಕತ್ವ ನೀಡುತ್ತಿಲ್ಲ. ಬೇರೆಯವರಿಗೆ ಮಣೆ ಹಾಕುವ ಭರದಲ್ಲಿ ತನ್ನನ್ನು ನಿರ್ಲಕ್ಷ್ಯಿಸಿದ್ದಾರೆ ಎಂದು ಆರೋಪಿಸಿ ಪ್ರಮುಖ ನಾಯಕ, ಮಾಜಿ ರಾಜ್ಯ ಅಧ್ಯಕ್ಷ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ರವಾನಿಸಿದ್ದಾರೆ. ಆದರೆ ಖರ್ಗೆ ಈ ರಾಜೀನಾಮೆ ಪತ್ರ ಓದಿ ಮುಗಿಸುವಷ್ಟರಲ್ಲಿ ನಾಯಕ ಯೂ ಟೂರ್ನ್ ಹೊಡೆದಿದ್ದಾರೆ. ಇಷ್ಟೇ ಅಲ್ಲ ರಾಜೀನಾಮೆ ವಾಪಸ್ ಪಡೆದಿದ್ದಾರೆ.
ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೆನ್ ಕುಮಾರ್ ಬೋರಾ ಪಕ್ಷದಿಂದ ಹೊರನಡೆಯುತ್ತಿದ್ದೇನೆ ಎಂದು ರಾಜೀನಾಮೆ ಪತ್ರ ನೀಡಿ ಬಳಿಕ ವಾಪಸ್ ಪಡಿದ್ದಾರೆ. ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ರವಾನಿಸಿದ ಬಳಿಕ ನಡೆದ ಬೆಳವಣಿಗೆಯಲ್ಲಿ ಭೂಪೆನ್ ಕುಮಾರ್ ಬೋರಾ ರಾಜೀನಾಮೆ ಪತ್ರ ಪಾವಸ್ ಪಡೆದು ಅಚ್ಚರಿ ಮೂಡಿಸಿದ್ದಾರೆ.
ಪಾರ್ಚಿಯಿಂದ ಕಡೆಗಣಿಸಿದ್ದ ರಾಜೀನಾಮೆ
ಮಲ್ಲಿಕಾರ್ಜುನ ಖರ್ಗೆಗೆ ರವಾನಿಸಿದ ರಾಜೀನಾಮೆ ಪತ್ರದಲ್ಲಿ, ತನ್ನನ್ನು ಕಡೆಗಣಿಸಲಾಗಿದೆ. ರಾಜ್ಯ ನಾಯಕರು ಹಾಗೂ ಕೇಂದ್ರ ನಾಯಕರು ಕಡೆಗಣಿಸಿದ್ದಾರೆ. ಹೀಗಾಗಿ ಪಕ್ಷಕ್ಕೆ, ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬುಪೆನ್ ಬೋರಾ ಹೇಳಿದ್ದರು. ಆದರೆ ರಾಜೀನಾಮೆ ಸುದ್ದಿ ಬಹಿರಂಗವಾಗುತ್ತಿದ್ದಂತೆ ಅಸ್ಸಾಂ ಮುಖ್ಯಮಂತ್ರಿ, ಈಶಾನ್ಯ ರಾಜ್ಯಗಳ ಬಿಜೆಪಿ ಸಂಘಟನಾ ಜವಾಬ್ದಾರಿ ಹೊತ್ತಿರುವ ಹಿಮಂತ ಬಿಸ್ವ ಶರ್ಮಾ, ಟ್ವೀಟ್ ಮೂಲಕ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದರು. ಇದು ಕಾಂಗ್ರೆಸ್‌ನಲ್ಲಿ ಕೋಲಾಹಲ ಸೃಷ್ಟಿಸಿತ್ತು.
ಅಸ್ಸಾಂ ಕಾಂಗ್ರೆಸ್‌ನಲ್ಲಿದ್ದ ಕೊನೆಯ ಹಿಂದೂ ನಾಯಕ
ಭುಪೆನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಹಿಮಂತ ಬಿಸ್ವ ಶರ್ಮಾ ಟ್ವೀಟ್ ಮಾಡಿದ್ದರು. ಅಸ್ಸಾಂ ಕಾಂಗ್ರೆಸ್‌ನಲ್ಲಿದ್ದ ಕೊನೆಯ ಹಿಂದೂ ಎಂದು ಭೂಪೆನ್ ಕುಮಾರ್‌ಗೆ ಕರೆದಿದ್ದರು. ಇಷ್ಟೇ ಅಲ್ಲ ಕೆಲ ವರ್ಷಗಳ ಮೊದಲೇ ಭುಪೆನ್ ಕುಮಾರ್‌ಗೆ ಉತ್ತಮ ಸ್ಥಾನ ನೀಡಲು ನಾವು ತಯಾರಿದ್ದೆವು. ಸದ್ಯ ಅಸ್ಸಾಂನಲ್ಲಿನ ಕಾಂಗ್ರೆಸ್ ನಾಯಕರು ಮೆಲ್ಲನೆ ಹೊರಗೆ ಕಾಲಿಡುತ್ತಿದ್ದಾರೆ. ಅಸ್ಸಾಂ ಕಾಂಗ್ರೆಸ್ ನಾಯಕ ಗೌರವ್ ಗೋಗೋಯ್ ಅವರ ಪಾಕಿಸ್ತಾನ ಲಿಂಕ್ ಬಹಿರಂಗವಾಗುತ್ತಿದ್ದಂತೆ ದೇಶದ ಮೇಲೆ ನಿಷ್ಠೆ ಇರುವ ನಾಯಕರು ಪಕ್ಷದಿಂದ ಜಾರಿಕೊಳ್ಳುತ್ತಿದ್ದಾರೆ ಎಂದು ಶರ್ಮಾ ಹೇಳಿದ್ದರು.
ತಕ್ಷಣವೇ ಭೂಪೆನ್ ಸಂಪರ್ಕಿಸಲು ಹೈಕಮಾಂಡ್ ಸೂಚನೆ
ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ ಸಲ್ಲಿಕೆ ಬಳಿಕ ಹಿಮಂತ ಬಿಸ್ವ ಶರ್ಮಾ ಹೇಳಿಕೆ ಕೋಲಾಹಲ ಸೃಷ್ಟಿಸಿತ್ತು. ಇನ್ನು ನಾಲ್ಕರಿಂದ ಐವರು ನಾಯಕರು ಇದೇ ರೀತಿ ಕಾಂಗ್ರೆಸ್ ತೊರೆಯಲಿದ್ದಾರೆ ಎಂದು ಬಾಂಬ್ ಸಿಡಿಸಿದ್ದು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್, ಅಸ್ಸಾಂ ರಾಜ್ಯ ನಾಯಕರಿಗೆ ಖಡಕ್ ಸೂಚನೆ ನೀಡಿತ್ತು. ಭೂಪೆನ್ ಭೇಟಿಯಾಗಿ ಮನ ಒಲಿಸಲು ಸೂಚಿಸಿತ್ತು. ಇದರಂತೆ ಗೌರವ್ ಗೊಗೊಯ್, ಭನ್ವರಾ ಜೀತೇಂದ್ರ ಸಿಂಗ್, ಪ್ರದ್ಯುತ್ ಬರ್ದೋಲೊಯಿ ಸೇರಿದಂತೆ ಪ್ರಮುಖ ನಾಯಕರು ಭಪೆನ್ ಮನೆಗೆ ತೆರಳಿ ಮನ ಒಲಿಸಿದ್ದರು. ಹೀಗಾಗಿ ಭೂಪೆನ್ ರಾಜೀನಾಮೆ ಪತ್ತ ಹಿಂಪಡೆದು, ಕಾಂಗ್ರೆಸ್‌ನಲ್ಲೇ ಉಳಿಯುವುದಾಗಿ ಹೇಳಿದ್ದರು.