ಐಎಎಸ್‌, ಐಎಫ್ಎಸ್‌ಗಳಿಗೆ ಯುಪಿಎಸ್ಸಿ 2ನೇ ಚಾನ್ಸ್‌ ಇಲ್ಲ – ಯುಪಿಎಸ್ಸಿ ನಿಯಮ ಬದಲು | No Second Chance For Ias Ifs In Upsc

ಐಎಎಸ್‌, ಐಎಫ್ಎಸ್‌ಗಳಿಗೆ ಯುಪಿಎಸ್ಸಿ 2ನೇ ಚಾನ್ಸ್‌ ಇಲ್ಲ – ಯುಪಿಎಸ್ಸಿ ನಿಯಮ ಬದಲು | No Second Chance For Ias Ifs In Upsc



ಐಎಎಸ್‌, ಐಎಫ್ಎಸ್‌ಗಳಿಗೆ ಯುಪಿಎಸ್ಸಿ 2ನೇ ಚಾನ್ಸ್‌ ಇಲ್ಲ – ಯುಪಿಎಸ್ಸಿ ನಿಯಮ ಬದಲು | No Second Chance For Ias Ifs In Upsc

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ತನ್ನ ಪರೀಕ್ಷಾ ನಿಯಮದಲ್ಲಿ ಹಲವು ಕಠಿಣ ಬದಲಾವಣೆ ತಂದಿದೆ. ಅದರನ್ವಯ ಪರೀಕ್ಷೆ ಬರೆದು ಒಮ್ಮೆ ಐಎಎಸ್‌ ಹಾಗೂ ಐಎಫ್‌ಎಸ್‌ ಹುದ್ದೆಗೆ ಅರ್ಹತೆ ಪಡೆದವರು ಮತ್ತೆ ಪರೀಕ್ಷೆ ಬರೆಯುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ತನ್ನ ಪರೀಕ್ಷಾ ನಿಯಮದಲ್ಲಿ ಹಲವು ಕಠಿಣ ಬದಲಾವಣೆ ತಂದಿದೆ. ಅದರನ್ವಯ ಪರೀಕ್ಷೆ ಬರೆದು ಒಮ್ಮೆ ಐಎಎಸ್‌ ಹಾಗೂ ಐಎಫ್‌ಎಸ್‌ ಹುದ್ದೆಗೆ ಅರ್ಹತೆ ಪಡೆದವರು ಮತ್ತೆ ಪರೀಕ್ಷೆ ಬರೆಯುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

ಯುಪಿಎಸ್ಸಿಯು 2026ನೇ ಸಾಲಿನ 993 ಹುದ್ದೆಗಳ ಪರೀಕ್ಷೆಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಅಧಿಸೂಚನೆಯಲ್ಲಿ ಹಲವು ಬದಲಾವಣೆಗಳನ್ನು ಪರಿಚಯಿಸಿದೆ. ಅದರ ಪ್ರಕಾರ, ಐಪಿಎಸ್‌ ಅಥವಾ ಇತರ ಗ್ರೂಪ್‌ ಎ ಹುದ್ದೆಗಳಲ್ಲಿ (ಐಎಎಸ್, ಐಎಫ್‌ಎಸ್‌ಯೇತರ) ಸೇವೆ ಸಲ್ಲಿಸುತ್ತಿರುವವರು ತನ್ನ ರ್‍ಯಾಂಕ್‌ ಸುಧಾರಣೆಗಾಗಿ ಮತ್ತೆ ಪರೀಕ್ಷೆ ಬರೆಯುವುದಕ್ಕೆ ಮುಂದಾದರೆ ಅವರಿಗೆ 2027ರಲ್ಲಿ ಒಮ್ಮೆ ಮಾತ್ರ ಪರೀಕ್ಷೆಗೆ ಅವಕಾಶ ಸಿಗಲಿದೆ. ಆದರೆ ಅದಾದ ಮೇಲೆಯೂ ಅವರು ತರಬೇತಿ ಪಡೆದು, ಹುದ್ದೆಗೆ ಸೇರ್ಪಡೆಯಾಗದಿದ್ದಲ್ಲಿ ಅವರ ನೇಮಕಾತಿಯೇ ರದ್ದಾಗಲಿದೆ.

ಪರೀಕ್ಷೆ ಬರೆಯುವುದಕ್ಕೆ ಮುಂದಾದರೆ ರಾಜೀನಾಮೆ ನೀಡಬೇಕು

ಅರ್ಥಾತ್‌, ಅವರು ತಾವು ನೌಕರಿಯಲ್ಲಿ ಮುಂದುವರಿಯಲು ಹುದ್ದೆ ಸ್ವೀಕರಿಸಲೇಬೇಕು.ಒಂದು ವೇಳೆ ಅವರು ಹುದ್ದೆ ಸ್ವೀಕರಿಸಿ ತರಬೇತಿಗೆ ಸೇರ್ಪಡೆಗೊಂಡ ಬಳಿಕ 2028ರಲ್ಲಿ ಮತ್ತೆ ಪರೀಕ್ಷೆ ಬರೆಯುವುದಕ್ಕೆ ಮುಂದಾದರೆ, ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗಲೇ ಹಿಂದೆ ಸೇವೆ ಸಲ್ಲಿಸುತ್ತಿದ್ದ ಹುದ್ದೆಗೆ ರಾಜೀನಾಮೆ ನೀಡಬೇಕು ಎನ್ನುವ ನಿಯಮ ತರಲಾಗಿದೆ.

ಐಎಎಸ್‌, ಐಎಫ್‌ಎಸ್‌ಗೆ ಅವಕಾಶವಿಲ್ಲ:

ಪರಿಷ್ಕೃತ ನಿಯಮಗಳ ಪ್ರಕಾರ ಈಗಾಗಲೇ ಹಿಂದಿನ ಪರೀಕ್ಷೆಯ ಆಧಾರದಲ್ಲಿ ಐಎಎಸ್‌ ಮತ್ತು ಐಎಫ್‌ಎಸ್‌ ಹುದ್ದೆಯಲ್ಲಿ ಇರುವವರು ತಮ್ಮ ಶ್ರೇಣಿ ಸುಧಾರಣೆಗೆ ಮತ್ತೊಮ್ಮೆ ಪರೀಕ್ಷೆ ಬರೆಯುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದು ಎಲ್ಲಾ ಹಂತಗಳಿಗೂ ಅನ್ವಯಿಸುತ್ತದೆ. ಹಾಗೊಂದು ವೇಳೆ ಪರೀಕ್ಷೆ ಬರೆಯಬೇಕಾದರೆ ಹಾಲಿ ಹುದ್ದೆಗೆ ರಾಜೀನಾಮೆ ನೀಡುವುದು ಕಡ್ಡಾಯಗೊಳಿಸಲಾಗಿದೆ.



Source link

Leave a Reply

Your email address will not be published. Required fields are marked *