Headlines

ಛೀ ಇದೆಂಥಾ ಅಸಹ್ಯ ! ತಂದೂರಿ ರೊಟ್ಟಿಗೆ ಎಂಜಲು ಹಾಕ್ತಿದ್ದ ಭೂಪ, ವಿಡಿಯೋ ವೈರಲ್ | Aligarh Making Roti Using Spit Video Goes Viral

ಛೀ ಇದೆಂಥಾ ಅಸಹ್ಯ ! ತಂದೂರಿ ರೊಟ್ಟಿಗೆ ಎಂಜಲು ಹಾಕ್ತಿದ್ದ ಭೂಪ, ವಿಡಿಯೋ ವೈರಲ್ | Aligarh Making Roti Using Spit Video Goes Viral



ಛೀ ಇದೆಂಥಾ ಅಸಹ್ಯ ! ತಂದೂರಿ ರೊಟ್ಟಿಗೆ ಎಂಜಲು ಹಾಕ್ತಿದ್ದ ಭೂಪ, ವಿಡಿಯೋ ವೈರಲ್ | Aligarh Making Roti Using Spit Video Goes Viral

ಬೀದಿ ಬದಿಯಲ್ಲಿ ಆಹಾರ ಸೇವಿಸೋ ಮುನ್ನ ಎಚ್ಚರ. ಕಲಬೆರಕೆ ಆಹಾರ ಮಾತ್ರವಲ್ಲ ಎಂಜಲು ಕೂಡ ಹಾಕ್ತಾರೆ. ಈಗ ಇಂಥ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಈಗಿನ ದಿನಗಳಲ್ಲಿ ಆಹಾರ ತಿನ್ನೋದೇ ಕಷ್ಟಕ್ಕೆ ಬಂದಿದೆ. ಒಂದ್ಕಡೆ ಆಹಾರ ಪದಾರ್ಥಗಳು ಕಲಬೆರಕೆ ಆಗ್ತಿದ್ರೆ ಇನ್ನೊಂದು ಕಡೆ ಆಹಾರ ತಯಾರಿಸುವವರ ಶುಚಿತ್ವ ಭಯ ಹುಟ್ಟಿಸುತ್ತಿದೆ. ಕೊಳಕು ಪ್ರದೇಶದಲ್ಲಿ, ಎಷ್ಟೂ ವರ್ಷಗಳಿಂದ ಒಂದೇ ಪಾತ್ರೆ, ಒಂದೇ ಆಯಿಲ್ ಬಳಸ್ತಾ ಅನೇಕ ಹೊಟೇಲ್, ಬೀದಿ ಬದಿ ವ್ಯಾಪಾರಿಗಳು ಸಾಮಾನ್ಯ ಜನರ ಆರೋಗ್ಯವನ್ನು ಹಾಳು ಮಾಡ್ತಿದ್ದಾರೆ. ಇನ್ನೊಂದು ಕಡೆ ವ್ಯಾಪಾರಸ್ಥರ ಅಸಭ್ಯ ವರ್ತನೆ ಹೇಸಿಗೆ ತರಿಸ್ತಿದೆ. ಉಗುಳು ಹಾಕಿ ಹಣ್ಣು, ತರಕಾರಿ ಮಾತ್ರವಲ್ಲ ಆಹಾರ ತಯಾರಿಸುವವರ ಸಂಖ್ಯೆ ಹೆಚ್ಚಾಗ್ತಿದೆ. ಈಗ ತಂದೂರಿ ರೊಟ್ಟಿಗೆ ಉಗುಳು ಹಾಕ್ತಿರುವ ಇನ್ನೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತಂದೂರಿ ರೊಟ್ಟಿ (Tandoori Roti ) ಗೆ ಉಗುಳು ಹಾಕ್ತಿದ್ದ

ಉತ್ತರ ಪ್ರದೇಶದ ಅಲಿಘಡ್ ನಲ್ಲಿ ತಂದೂರಿ ರೊಟ್ಟಿ ತಯಾರಿಸುವಾಗ ಉಗುಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೀದಿ ಬದಿ ಹೊಟೇಲ್ ನಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ರೊಟ್ಟಿ ತಯಾರಿಸಿದ ಮೇಲೆ ಅದಕ್ಕೆ ಉಗುಳೋದನ್ನು ನೋಡಬಹುದು. ವಿಡಿಯೋದಲ್ಲಿ ಮೂವರು ರೊಟ್ಟಿ ತಯಾರಿಸ್ತಿರೋದನ್ನು ನೀವು ನೋಡ್ಬಹುದು. ಒಬ್ಬರು ಹಿಟ್ಟು ಹದ ಮಾಡ್ತಿದ್ದರೆ ಇನ್ನೊಬ್ಬರು ಕೈನಲ್ಲಿ ರೊಟ್ಟಿ ತಟ್ತಿದ್ದಾರೆ. ತಟ್ಟಿದ ರೊಟ್ಟಿಗೆ ಉಗುಳು ಹಾಕ್ತಿದ್ದಾರೆ. ಇದನ್ನು ಅಲ್ಲಿರುವವರು ನೋಡಿದ್ರೂ ಮಾತನಾಡ್ತಿಲ್ಲ. ವಿಶೇಷ ಅಂದ್ರೆ ಗ್ರಾಹಕರ ಮುಂದೆಯೇ ಈ ಕೆಲ್ಸ ನಡೆಯುತ್ತಿದೆ. ಇದನ್ನು ವಿಡಿಯೋ ಮಾಡಲಾಗಿದ್ದು, ಆರು ಸೆಕೆಂಡಿನ ಎರಡು ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.

Expired Food Seized: 2022ರಲ್ಲೇ ಎಕ್ಸ್ಪೈರಿ ಆದ ಖರ್ಜೂರ ರೀ ಪ್ಯಾಕ್ ಮಾಡಿ

ರೋರಾವಾರ್ ಪೊಲೀಸ್ ಠಾಣೆ ಪ್ರದೇಶದ ತೆಲಿಪಾಡಾದಲ್ಲಿರುವ ಶಾದಾಬ್ ಚಿಕನ್ ದರ್ಬಾರ್ ಹೋಟೆಲ್ನಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ವೇಗವಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಪೊಲೀಸರು ಮತ್ತು ಆಹಾರ ಇಲಾಖೆ ಕ್ರಮ ಕೈಗೊಂಡಿದೆ. ಆರೋಪಿ ಕೆಲಸಗಾರನನ್ನು ಪೊಲೀಸರು ಬಂಧಿಸಿದ್ದಾರೆ. ಆಹಾರ ಇಲಾಖೆ ಅಧಿಕಾರಿಗಳು ಹೋಟೆಲ್ನಿಂದ ಆಹಾರ ಮಾದರಿಗಳನ್ನು ಸಂಗ್ರಹಿಸಿದ್ದು, ಪರೀಕ್ಷೆ ನಡೆಯುತ್ತಿದೆ. ಸದ್ಯ ಹೊಟೇಲ್ ಗೆ ಬೀಗ ಜಡಿಯಲಾಗಿದೆ.

ಉತ್ತರ ಪ್ರದೇಶದಲ್ಲಿ ಇಂಥ ಘಟನೆಗಳು ಬೆಳಕಿಗೆ ಬಂದಿದ್ದು ಇದೇ ಮೊದಲಲ್ಲ. ಈ ಹಿಂದೆ ಲಗ್ನೋದಲ್ಲೂ ಇಂಥ ಘಟನೆ ನಡೆದಿತ್ತು. ರೊಟ್ಟಿಗೆ ಉಗುಳು ಹಾಕ್ತಿದ್ದ ವಿಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಕಾಕೋರಿಯ ರಸ್ತೆ ಬದಿಯಲ್ಲಿರುವ ಇಮಾಮ್ ಅಲಿ ಹೊಟೇಲ್ ನಲ್ಲಿ ಈ ಘಟನೆ ನಡೆದಿತ್ತು. ಗಾಜಿಯಾಬಾದ್, ಮೀರತ್ ಸೇರಿದಂತೆ ಅನೇಕ ಕಡೆ ಆಗಾಗ ಇಂಥ ವಿಡಿಯೋಗಳು ವೈರಲ್ ಆಗ್ತಿರುತ್ತವೆ. ಪೊಲೀಸರು ಎಷ್ಟೇ ಕ್ರಮಕೈಗೊಂಡ್ರೂ ಇದನ್ನು ನಿಲ್ಲಿಸಲು ಸಾಧ್ಯವಾಗ್ತಿಲ್ಲ. ಬರೀ ಉಗುಳು ಮಾತ್ರವಲ್ಲ ಅಸ್ಸಾಂನಲ್ಲಿ ಪಾನಿಪುರಿಗೆ ಮೂತ್ರ ಹಾಕಿದ್ದ ವಿಡಿಯೋ ಕೂಡ ಹಿಂದೆ ವೈರಲ್ ಆಗಿತ್ತು.

60 ಸಾವಿರದ ಕ್ಯಾಮೆರಾ ಆರ್ಡರ್​ ಮಾಡಿದ್ರೆ ಬಂತು ವಾಷಿಂಗ್​ ಪೌಡರ್​: ಹುಬ್ಬಳ್ಳಿಯಲ್ಲಿ ದುಬೈವಾಲಾನಿಗೆ ಮೋಸ!

ಬೀದಿ ಬದಿ ಆಹಾರ ಸೇವನೆ ಮಾಡುವಾಗ ಎಚ್ಚರಿಕೆ ವಹಿಸೋದು ಅಗತ್ಯ. ಶುಚಿತ್ವ ಇಲ್ಲಿ ಮುಖ್ಯವಾಗುತ್ತದೆ. ಕೊಳಕು ಆಹಾರ ಸೇವನೆ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬೇರೆಯವರ ಉಗುಳು ನಿಮ್ಮನ್ನು ಆಸ್ಪತ್ರೆ ಸೇರುವಂತೆ ಮಾಡ್ಬಹುದು. ಪ್ರತಿ ಬಾರಿ ಬೀದಿ ಬದಿ ಅಥವಾ ಹೊಟೇಲ್ ನಲ್ಲಿ ಆಹಾರ ಸೇವನೆ ಮಾಡುವ ಮುನ್ನ ಅಲ್ಲಿನ ಶುಚಿತ್ವ, ಆಹಾರ ತಯಾರಿ ವಿಧಾನಗಳ ಬಗ್ಗೆ ಗಮನ ಇರಲಿ.



Source link

Leave a Reply

Your email address will not be published. Required fields are marked *