Headlines

Price hike ನಾನ್ ವೆಜ್ ಪ್ರಿಯರಿಗೆ ಶಾಕ್, ಕರ್ನಾಟಕದಲ್ಲಿ ಚಿಕನ್ ದರ 340 ರೂಪಾಯಿಗೆ ಏರಿಕೆ | Shock For Non Veg Lovers Chicken Prices Skyrocket To Rs 340 Per Kg In Karnataka

ನಾನ್ ವೆಜ್ ಪ್ರಿಯರಿಗೆ ಶಾಕ್, ರಾಜ್ಯದಲ್ಲಿ ಚಿಕನ್ ದರ 300 ರಿಂದ 340 ರೂಪಾಯಿಗೆ ಏರಿಕೆ, ಕೋಳಿ ಮಾಂಸ ದರ ಏರಿಕೆ ಬೆನ್ನಲ್ಲೇ ಇತ್ತ ಮೇಕೆ ಹಾಗೂ ಕುರಿ ಮಾಂಸದ ಬೆಲೆಯೂ ದುಬಾರಿಯಾಗಿದೆ.

ಬೆಂಗಳೂರು (ಜ.23) ನಾನ್ ವೆಜ್ ಪ್ರಿಯರಿಗೆ ಇದೀಗ ಶಾಕ್ ಎದುರಾಗಿದೆ. ರಾಜ್ಯದಲ್ಲಿ ಚಿಕನ್, ಕುರಿ, ಮೇಕೆ ಸೇರಿದಂತೆ ಮಾಂಸಗಳ ಬೆಲೆ ಏರಿಕೆಯಾಗಿದೆ. ಪೂರೈಕೆ ಕೊರತೆ, ಉತ್ಪಾದನೆ ಪ್ರಮಾಣ ಕುಸಿತದಿಂದ ಕರ್ನಾಟಕದಲ್ಲಿ ಕೋಳಿ ಮಾಂಸದ ಬೆಲೆ ಭಾರಿ ಏರಿಕೆಯಾಗಿದೆ. ರಾಜ್ಯದಲ್ಲಿ 200 ರೂಪಾಯಿ ಇದ್ದ ಕೋಳಿ ಮಾಂಸ ಇದೀಗ ದಿಢೀರ್ ಪ್ರತಿ ಕೆಜಿಗೆ 300 ರಿಂದ 340 ರೂಪಾಯಿಗೆ ಏರಿಕೆಯಾಗಿದೆ. ದರ ಏರಿಕೆಯಿಂದ ನಾನ್ ವೆಜ್ ಪ್ರಿಯರು ಹೈರಾಣಾಗಿದ್ದಾರೆ.

ಚಿಕನ್ ಪ್ರತಿ ಕೆಜೆಗಿ ಗರಿಷ್ಠ 340 ರೂಪಾಯಿಗೆ ಏರಿಕೆಯಾಗಿದ್ದರೆ, ಇತ್ತ ಕುರಿ, ಮೇಕೆ ಮಾಂಸದ ದರ ಬೆಂಗಳೂರಿನಲ್ಲಿ ಪ್ರತಿ ಕೆಜಿಗೆ 800 ರಿಂದ 900 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ದಿನ ಮಾಂಸಾಹಾರ ಸೇವನೆ ಮಾಡುವವರು ಈ ಬೆಲೆಯಿಂದ ಕಂಗಾಲಾಗಿದ್ದಾರೆ. ಇತ್ತ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಕಾರಣ ನಾನ್ ವೆಜ್ ಪ್ರಿಯರು ಒಂದು ಹೊತ್ತಿನ ಆಹಾರ ಸೇವನೆ ದುಬಾರಿಯಾಗುತ್ತಿದೆ.

ರೆಸ್ಟೋರೆಂಟ್‌ಗಳಲ್ಲಿ ಮಾಂಸಾಹಾರ ಬೆಲೆ ದುಬಾರಿ

ಚಿಕನ್, ಮಟನ್ ಸೇರಿದಂತೆ ಮಾಂಸಗಳ ಬಲೆ ಏರಿಕೆಯಿಂದ ಹೊಟೆಲ್ ಸೇರಿದಂತೆ ರೆಸ್ಟೋರೆಂಟ್‌ಗಳಲ್ಲಿ ಕಬಾಬ್, ಚಿಕನ್ ಫ್ರೈ, ಡ್ರೈ, ಮಟನ್ , ಸೂಪ್ ಸೇರಿದಂತೆ ಮಾಂಸಾಹಾರ ಬೆಲೆಗಳು ಏರಿಕೆಯಾಗಿದೆ. ಇದರಿಂದ ಹೊಟೆಲ್‌ಗಳಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ವ್ಯಾಪಾರದಲ್ಲಿ ಹೆಚ್ಚಿನ ವ್ಯತ್ಯಾಸ ಆಗಿಲ್ಲ ಎಂದ ವ್ಯಾಪಾರಿಗಳು

ದರ ಏರಿಕೆಯಾದರೂ ಚಿಕನ್ ತಿನ್ನೋದು ಜನರು ಬಿಡಲ್ಲ. ಬೆಲೆ ಏರಿಕೆಯಿಂದ ವ್ಯಾಪಾರದ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಬೆಲೆ ಏರಿಕೆಯಿಂದ ಸದ್ಯ ಶೇಕಡಾ 10 ರಷ್ಟು ವ್ಯಾಪಾರದಲ್ಲಿ ಕುಸಿತವಾಗಿದೆ.ಮೀನು, ಮಟನ್ ರೇಟ್ ಜಾಸ್ತಿ ಇರೋದ್ರಿಂದ ಚಿಕನ್ ವ್ಯಾಪಾರಕ್ಕೆ ಅಷ್ಟೇನೂ ಪರಿಣಾಮ ಬೀರಲ್ಲ ಎಂದು ವ್ಯಾಪಾರಿ ಹೇಳಿದ್ದಾರೆ. ಚಿಕನ್ ತಿನ್ನೋರ ಸಂಖ್ಯೆ ತುಂಬಾ ಜಾಸ್ತಿ ಇದೆ, ರೇಟ್ ಜಾಸ್ತಿ ಆದರೂ ತಿನ್ನುತ್ತಾರೆ ಎಂದಿದ್ದಾರೆ.

Source link

Leave a Reply

Your email address will not be published. Required fields are marked *