Headlines

ದುಬಾರಿ ಮೆಟ್ರೋ ವಿರುದ್ಧ ಜನಾಕ್ರೋಶ! ದೇಶದಲ್ಲೇ ದುಬಾರಿ ದರ; ದುಡ್ಡಿದ್ರೆ ನಮ್ಮ ಮೆಟ್ರೋ ಮುಟ್ರೋ ಎಂದ ನೆಟ್ಟಿಗರು | Bengaluru Metro Fare Hike Sparks Public Anger Demand Govt Intervention Kvn

ದುಬಾರಿ ಮೆಟ್ರೋ ವಿರುದ್ಧ ಜನಾಕ್ರೋಶ! ದೇಶದಲ್ಲೇ ದುಬಾರಿ ದರ; ದುಡ್ಡಿದ್ರೆ ನಮ್ಮ ಮೆಟ್ರೋ ಮುಟ್ರೋ ಎಂದ ನೆಟ್ಟಿಗರು | Bengaluru Metro Fare Hike Sparks Public Anger Demand Govt Intervention Kvn



ದುಬಾರಿ ಮೆಟ್ರೋ ವಿರುದ್ಧ ಜನಾಕ್ರೋಶ! ದೇಶದಲ್ಲೇ ದುಬಾರಿ ದರ; ದುಡ್ಡಿದ್ರೆ ನಮ್ಮ ಮೆಟ್ರೋ ಮುಟ್ರೋ ಎಂದ ನೆಟ್ಟಿಗರು | Bengaluru Metro Fare Hike Sparks Public Anger Demand Govt Intervention Kvn

ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣ ದರವನ್ನು ಮತ್ತೆ ಹೆಚ್ಚಿಸಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದೇಶದ ಇತರ ಮೆಟ್ರೋಗಳಿಗೆ ಹೋಲಿಸಿದರೆ ಇದು ಅತ್ಯಂತ ದುಬಾರಿಯಾಗಿದ್ದು, ದರ ಏರಿಕೆಯನ್ನು ಹಿಂಪಡೆಯುವಂತೆ ಪ್ರಯಾಣಿಕರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಬೆಂಗಳೂರು: ದೇಶದಲ್ಲೆ ದುಬಾರಿ ಎನ್ನಿಸಿಕೊಂಡಿದ್ದ ನಮ್ಮ ಮೆಟ್ರೋ ಪ್ರಯಾಣಿಕ ದರವನ್ನು ಒಂದೇ ವರ್ಷದಲ್ಲಿ ಪುನಃ ಹೆಚ್ಚಳ ಮಾಡಿರುವುದು ಜನಾಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯ, ಕೇಂದ್ರ ಸರ್ಕಾರಗಳು ಮಧ್ಯಪ್ರವೇಶಿಸಿ ದರ ಹೆಚ್ಚಳವನ್ನು ಕಡಿಮೆ ಮಾಡುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಫೆ.9ರಂದು ಮೆಟ್ರೋ ಟಿಕೆಟ್ ದರವನ್ನು ಶೇ.101.5ರಷ್ಟು ದರ ಹೆಚ್ಚಳ ಮಾಡಲಾಗಿತ್ತು. ಬಳಿಕ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಸರ್ಕಾರದ ಸೂಚನೆ ಮೇರೆಗೆ ಬಿಎಂಆರ್​ಸಿಎಲ್​​ ಶೇ.71.5ಕ್ಕೆ ದರ ಇಳಿಕೆ ಮಾಡಿತ್ತು. ನೂತನ ಪರಿಷ್ಕರಣೆಯಿಂದ 2 ವರ್ಷದಲ್ಲಿ ಮೆಟ್ರೋ ಪ್ರಯಾಣಿಕ ದರ ಒಟ್ಟಾರೆ ಶೇ.76ರಷ್ಟು ಹೆಚ್ಚಾದಂತಾಗಿದೆ. ದರ ಏರಿಕೆ ಖಂಡಿಸಿ ಹೋರಾಟ, ಸರ್ಕಾರಕ್ಕೆ ಒತ್ತಾಯದ ಕುರಿತು ಮೆಟ್ರೋ ಪ್ರಯಾಣಿಕರ ಸಂಘಟನೆ ತೀರ್ಮಾನ ಕೈಗೊಳ್ಳಲಿದೆ ಎಂದು ಸಂಘಟನೆಯ ಸಂಚಾಲಕ ರಾಜೇಶ್‌ ಭಟ್‌ ತಿಳಿಸಿದ್ದಾರೆ.

ದುಡ್ಡಿದ್ರೆ ನಮ್ಮ ಮುಟ್ರೋ!

‘ಎಕ್ಸ್‌’, ‘ಫೇಸ್‌ಬುಕ್‌’ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ದರ ಏರಿಕೆಗೆ ಪ್ರಯಾಣಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಾರದಲ್ಲಿ ಒಂದು ದಿನ ಮೆಟ್ರೋ ಪ್ರಯಾಣ ಬಹಿಷ್ಕರಿಸಿ ಪ್ರತಿಭಟನೆ ತೋರ್ಪಡಿಸುವುದಾಗೂ ಆಕ್ರೋಶ ಹೊರಹಾಕಿದ್ದಾರೆ. ಮೊದಲು ‘ನಮ್ಮ ಮೆಟ್ರೊ’, ಈಗ ದುಡ್ಡಿದ್ರೆ ‘ನಮ್ಮ ಮುಟ್ರೋ’, ‘ದುಬಾರಿ ಮೆಟ್ರೋ ಹತ್ತಿದ್ರೆ ಕೆಟ್ರೋ’ ಎಂಬಂತ ಸಾಕಷ್ಟು ಮೀಮ್‌ಗಳು ಹರಿದಾಡಿವೆ.

ದೇಶದಲ್ಲೆ ದುಬಾರಿ

ಒಟ್ಟು 96ಕಿಮೀ ಇರುವ ಬೆಂಗಳೂರು (ನಮ್ಮ ಮೆಟ್ರೋ) ಗರಿಷ್ಠ ದರ: ₹95 ಇದೆ. 60ಕಿಮೀ ಇರುವ (ಮುಂಬೈ ಮೆಟ್ರೋ) ಗರಿಷ್ಠ ದರ: ₹80, 71 ಕಿಮೀ ಇರುವ ಹೈದರಾಬಾದ್ ಮೆಟ್ರೋ ಗರಿಷ್ಠ ದರ: ₹69, 394ಕಿಮೀ ಇರುವ ದೆಹಲಿ ಮೆಟ್ರೋ ಗರಿಷ್ಠ ದರ: ₹64, 23 ಕಿಮೀ ಇರುವ ಲಕ್ನೋ (ಯುಪಿ ಮೆಟ್ರೋ) ಗರಿಷ್ಠ ದರ: ₹60, 54ಕಿಮೀ ಚೆನ್ನೈ ಮೆಟ್ರೋ ಗರಿಷ್ಠ ದರ: ₹50, 48 ಕಿಮೀ ಇರುವ ಕೋಲ್ಕತ್ತಾ ಮೆಟ್ರೋ ಗರಿಷ್ಠ ದರ: ₹50 ಇದೆ. ದೇಶದ ಉಳಿದ ಮೆಟ್ರೋಗಳಲ್ಲಿ ವೃದ್ಧರು, ಅಂಗವಿಕಲರು, ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್‌ ಸೇರಿ ಇತರ ಸೌಲಭ್ಯವಿದೆ. ಅದರೆ, ನಮ್ಮ ಮೆಟ್ರೋದಲ್ಲಿ ಅಂತಹ ಯಾವುದೇ ವಿಶೇಷ ಸೌಲಭ್ಯ ಇಲ್ಲ. ಆದರೂ ನಮ್ಮ ಮೆಟ್ರೋ ದರ ಮತ್ತೊಮ್ಮೆ ದುಬಾರಿಯಾಗಿದೆ.

ದರ ಹೆಚ್ಚಳದಿಂದ ಜನ ಮೆಟ್ರೋದಿಂದ ದೂರವಾಗುತ್ತಾರೆ. ಟ್ರಾಫಿಕ್‌ ಹೆಚ್ಚಳದಿಂದ ಜನರಲ್ಲಿ ಅಸ್ತಮಾದಂತ ಶ್ವಾಸಕೋಶ ಸಂಬಂಧಿ ರೋಗಗಳು ಹೆಚ್ಚಾಗಲಿವೆ.-  ಡಾ.ಸುಧಾ ಕಾಮತ್‌, ಇಎಸ್‌ಐ ನಿವೃತ್ತ ವೈದ್ಯೆ

ಪೀಕ್‌ ಅವರ್‌ನಲ್ಲಿ ಮೆಟ್ರೋ ರೈಲಲ್ಲಿ ಕಾಲಿಡಲು ಜಾಗವಿರಲ್ಲ, ಮಹಿಳೆಯರಿಗೆ ತೀರಾ ಅಗತ್ಯವಾಗುತ್ತಿರುವ ಮೆಟ್ರೋ ಸಾರ್ವಜನಿಕ ಸಾರಿಗೆಯನ್ನು ಸಂಸ್ಥೆ, ಸರ್ಕಾರ ಲಾಭದ ದೃಷ್ಟಿಯಿಂದ ನೋಡುತ್ತಿರುವುದು ತಪ್ಪು.– ಎಚ್‌.ಎಲ್‌.ನಿರ್ಮಲಾ, ಮೆಟ್ರೋ ಪ್ರಯಾಣಿಕರು

ದರ ಪರಿಷ್ಕರಣೆ ಸಮಿತಿ ಪ್ರತಿ ವರ್ಷ ದರ ಏರಿಸಿ ಎಂದಿರುವುದು ಸೂಚನೆಯಲ್ಲ. ವಿವೇಚನೆಯಿಂದ ಕೈಗೊಳ್ಳಬೇಕಾದ ತೀರ್ಮಾನ. ಕೂಡಲೆ ದರ ಏರಿಕೆ ವಾಪಸ್‌ ಪಡೆಯಬೇಕು. – ಡಾ.ಜಿ.ಶಶಿಕುಮಾರ್‌, ಬೆಂಗಳೂರು ಉಳಿಸಿ ಸಮಿತಿ ಸಂಚಾಲಕ

ದೆಹಲಿ, ಕಲ್ಕತ್ತಾಗೆ ಹೋಲಿಸಿದರೆ ನಮ್ಮ ಮೆಟ್ರೋ ದುಬಾರಿ ಆಗಿದೆ. ನಾವು ಕಡಿಮೆ ಮಾಡಿ ಎಂದು ಆಗ್ರಹಿಸುತ್ತಿರುವುದರ ನಡುವೆ ಮೆಟ್ರೋ ದರ ಪುನಃ ಏರಿಕೆ ಮಾಡುವುದು ಆಘಾತಕಾರಿ. – ಕೆ.ವೇಣುಗೋಪಾಲ ಭಟ್‌, ಪ್ರಯಾಣಿಕರು



Source link

Leave a Reply

Your email address will not be published. Required fields are marked *