YouTuber Khwaja Shirahatti: ಮುಕಳೆಪ್ಪ ವಿವಾಹ ಪ್ರಕರಣ; ರಿಜಿಸ್ಟರ್ ಕಚೇರಿಯೇ ಬಂದ್‌! | Mundgod Sub Registrar Office Shut Amid Youtuber Khwaja Shirahatti Marriage Case

YouTuber Khwaja Shirahatti : ಕಾಮಿಡಿ ಯೂಟ್ಯೂಬರ್ ಖ್ವಾಜಾ ಶಿರಹಟ್ಟಿಯ ವಿವಾಹ ಪ್ರಕರಣಕ್ಕೆ ಸಂಬಂಧ, ನಕಲಿ ದಾಖಲೆ ಸೃಷ್ಟಿಸಿದ ಆರೋಪದ ಮೇಲೆ ಮುಂಡಗೋಡ ಸಬ್ ರಿಜಿಸ್ಟ್ರರ್ ಸೇರಿ ಏಳು ಜನರ ವಿರುದ್ಧ ಪ್ರಕರಣ ದಾಖಲು ಬಂಧನ ಭೀತಿಯಿಂದ ಸಿಬ್ಬಂದಿ ಕಚೇರಿಗೆ ಗೈರು, ಸಬ್ ರಿಜಿಸ್ಟ್ರರ್ ಕಚೇರಿ ಸಂಪೂರ್ಣ ಬಂದ್.

ಮುಂಡಗೋಡ (ಸೆ.25): ಕಾಮಿಡಿ ಯೂಟ್ಯೂಬರ್ ಖ್ವಾಜಾ ಶಿರಹಟ್ಟಿಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಡಗೋಡ ಸಬ್ ರಿಜಿಸ್ಟ್ರರ್ ಸೇರಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ, ಮುಂಡಗೋಡ ಸಬ್ ರಿಜಿಸ್ಟ್ರರ್ ಕಚೇರಿ ಬುಧವಾರ ಇಡೀ ದಿನ ಬಂದ್ ಆಗಿತ್ತು.

ಸಬ್ ರಿಜಿಸ್ಟ್ರರ್ ದೀಪಾ, ಕಂಪ್ಯೂಟರ್ ಆಪರೇಟರ್‌ಗಳಾದ ದೇವರಾಜ ಮತ್ತು ಹೇಮಾ ಸೇರಿದಂತೆ ಯಾರೂ ಕಚೇರಿಗೆ ಆಗಮಿಸದ ಕಾರಣ ಕಚೇರಿಯ ಬೀಗ ತೆಗೆಯಲೇ ಇಲ್ಲ.

ನಕಲಿ ದಾಖಲೆ ಸೃಷ್ಟಿಸಿ ತಮ್ಮ ಮಗಳನ್ನು ಖ್ವಾಜಾ ಶಿರಹಟ್ಟಿಯೊಂದಿಗೆ ವಿವಾಹ ಮಾಡಲಾಗಿದೆ ಎಂದು ಯುವತಿಯ ತಾಯಿ ಶಿವಕ್ಕ ಜಾಲಿಹಾಳ ದೂರು ದಾಖಲಿಸಿದ್ದಾರೆ. ಈ ಆರೋಪದ ಹಿನ್ನೆಲೆಯಲ್ಲಿ ಬಂಧನದ ಭೀತಿಯಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗೆ ಗೈರು ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮುಕಳೆಪ್ಪನದು ನಿಯಮ ಬಾಹಿರ ವಿವಾಹ ನೋಂದಣಿ, ಠಾಣೆ ಮೆಟ್ಟಲೇರಿದ ಪತ್ನಿ!

ಕಚೇರಿಯ ಕಾರ್ಯನಿರ್ವಹಣೆ ಸಂಪೂರ್ಣ ಸ್ಥಗಿತಗೊಂಡಿದೆ ಇದರಿಂದಾಗಿ ಸ್ಥಳೀಯರ ಕೆಲಸಕಾರ್ಯಗಳಿಗೆ ತೊಂದರೆ ಅನುಭವಿಸುವಂತಾಗಿದೆ.

ಈ ಪ್ರಕರಣವು ಸ್ಥಳೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಕಾನೂನು ಕ್ರಮದ ಬಗ್ಗೆ ಕುತೂಹಲ ಮೂಡಿಸಿದೆ.

Source link

Leave a Reply

Your email address will not be published. Required fields are marked *