Delhi BMW crash ಅಪಘಾತ ಬಳಿಕ ಬೇಡಿಕೊಂಡರು ಕರಗದ ಹೃದಯ, ವಿತ್ತ ಸಚಿವಾಲಯ ಅಧಿಕಾರಿ ಸಾವಿನ ಹಿಂದೆ ನೋವಿನ ಕತೆ | Pleads Bmw Owner To Take Us Nearby Hospital Finance Official Wife Reveals Case

Delhi BMW crash ಅಪಘಾತ ಬಳಿಕ ಬೇಡಿಕೊಂಡರು ಕರಗದ ಹೃದಯ, ವಿತ್ತ ಸಚಿವಾಲಯ ಅಧಿಕಾರಿ ಸಾವಿನ ಹಿಂದೆ ನೋವಿನ ಕತೆ | Pleads Bmw Owner To Take Us Nearby Hospital Finance Official Wife Reveals Case



Delhi BMW crash ಅಪಘಾತ ಬಳಿಕ ಬೇಡಿಕೊಂಡರು ಕರಗದ ಹೃದಯ, ವಿತ್ತ ಸಚಿವಾಲಯ ಅಧಿಕಾರಿ ಸಾವಿನ ಹಿಂದೆ ನೋವಿನ ಕತೆ | Pleads Bmw Owner To Take Us Nearby Hospital Finance Official Wife Reveals Case

ಅಪಘಾತ ಬಳಿಕ ಬೇಡಿಕೊಂಡರು ಕರಗದ ಹೃದಯ, ವಿತ್ತ ಸಚಿವಾಲಯ ಅಧಿಕಾರಿ ಸಾವಿನ ಹಿಂದೆ ನೋವಿನ ಕತೆ, ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿ ನವಜೋತ್ ಸಿಂಗ್ ಅಪಘಾತದಲ್ಲಿ ಮೃತಪಟ್ಟಿದ್ದರೆ, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಹಿಂದಿನ ನೋವಿನ ಕತೆಯೊಂದು ಬಹಿರಂಗವಾಗಿದೆ.

ನವದೆಹಲಿ (ಸೆ.15) ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿ ನವಜೋತ್ ಸಿಂಗ್ ಹಾಗೂ ಪತ್ನಿ ಸಂದೀಪ್ ಕೌರ್ ಬೈಕ್ ಮೂಲಕ ಮನೆಗೆ ಮರಳುತ್ತಿರುವಾಗ ನಡೆದ ಭೀಕರ ಅಪಘಾತ ಹಲವರನ್ನು ಬೆಚ್ಚಿ ಬೀಳಿಸಿದೆ. BMW ಕಾರು ವೇಗವಾಗಿ ಬಂದು ಬೈಕ್ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಬೈಕ್‌ನಲ್ಲಿದ್ದ ನವಜೋತ್ ಸಿಂಗ್ ಆಸ್ಪತ್ರೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ. ಇತ್ತ ಅಧಿಕಾರಿ ಪತ್ನಿ ಸಂದೀಪ್ ಕೌರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅತೀ ವೇಗದ ಚಾಲನೆ ಮಾತ್ರವಲ್ಲ, ಇದೀಗ BMW ಕಾರು ಚಲಾಯಿಸುತ್ತಿದ್ದ ಮಹಿಳೆ ವಿರುದ್ದ ಗಂಭೀರ ಆರೋಪ ಕೇಳಿಬಂದಿದೆ. ತಕ್ಷಣ ಚಿಕಿತ್ಸೆ ಕೊಡಿಸಲು ವಿಳಂಬ ಮಾಡಿದ್ದು ಮಾತ್ರವಲ್ಲ, ಸ್ಥಳೀಯ ಆಸ್ರತ್ರೆ ದಾಖಲಿಸಿ 22 ಕಿಲೋಮೀಟರ್ ದೂರದ ಆಸ್ಪತ್ರೆ ದಾಖಲಿಸಿ ವಿಳಂಬ ಮಾಡಿದ ಆರೋಪ ಕೇಳಿಬಂದಿದೆ. ಖುದ್ದು ಸಂದೀಪ್ ಕೌರ್ ನಡೆದ ಘಟನೆಯನ್ನು ಪೊಲೀಸರಿಗೆ ವಿವರಿಸಿದ್ದಾರೆ.

ಮಹಿಳೆ ಅತೀ ವೇಗವಾಗಿ ಕಾರು ಚಾಲನೆ, ಹೇಳಿಕೆ ನೀಡಿದ ಸಂದೀಪ್ ಕೌರ್

BMW ಕಾರು ಚಲಾಯಿಸುತ್ತಿದ್ದ ಮಹಿಳೆ ಅತೀ ವೇಗವಾಗಿ ಕಾರು ಚಲಾಯಿಸಿದ್ದಾರೆ. ಪಕ್ಕದಲ್ಲಿ ಮಹಿಳೆ ಪತಿಯೂ ಇದ್ದರು. ಅತೀ ವೇಗವಾಗಿ ಬಂದ ಕಾರು ನಾವು ಪ್ರಯಾಣಿಸುತ್ತಿದ್ದ ಬೈಕ್‌ಗೆ ಡಿಕ್ಕಿಯಾಗಿದೆ. ಒಂದು ಕ್ಷಣದಲ್ಲಿ ಏನಾಗುತ್ತಿದೆ ಅನ್ನೋವಷ್ಟರಲ್ಲೇ ಪತಿ ನವಜೋತ್ ಸಿಂಗ್ ರಕ್ತದ ಮಡುವಿನಲ್ಲಿದ್ದರು. ನನಗೆ ಗಾಯಗಳಾಗಿತ್ತು. ಆದರೆ ಪ್ರಜ್ಞೆ ಇತ್ತು. ತಕ್ಷಣವೇ ಪತಿಯನ್ನು ಹಾಗೂ ತನ್ನನ್ನು ಪಕ್ಕದ ಆಸ್ಪತ್ರೆಗೆ ದಾಖಲಿಸಲು ಮನವಿ ಮಾಡಿದೆ. ನನಗೆ ಏಳಲು ಸಾಧ್ಯವಾಗುತ್ತಿರಲಿಲ್ಲ. ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆ ದಾಖಲಿಸಲು ಮನವಿ ಮಾಡಿದ್ದೆ. ಆದರೆ BMW ಕಾರು ಚಾಲನೆ ಮಾಡುತ್ತಿದ್ದ ಮಹಿಳೆ ಹಾಗೂ ಆಕೆಯ ಪತಿ ವಿಳಂಬ ಮಾಡಿದರು ಎಂದು ಸಂದೀಪ್ ಕೌರ್ ಆರೋಪಿಸಿದ್ದಾರೆ.

ಹಣಕಾಸು ಸಚಿವಾಲಯ ಅಧಿಕಾರಿ ಬೈಕ್‌ಗೆ ಕಾರು ಡಿಕ್ಕಿ, ನವಜೋತ್ ಸಿಂಗ್ ಸಾವು, ಪತ್ನಿ ಗಂಭೀರ

ಹತ್ತಿರದಲ್ಲೇ ಉತ್ತಮ ಆಸ್ಪತ್ರೆ ಇದ್ದರೂ ದೂರದ ಸಣ್ಣ ಆಸ್ರತ್ರೆಗೆ ದಾಖಲು

ಹತ್ತಿರದಲ್ಲೇ ಉತ್ತಮ ಆಸ್ಪತ್ರೆಗಳಿತ್ತು. ಆದರೆ BMW ಮಹಿಳೆ 22 ಕಿಲೋಮೀಟರ್ ದೂರದ ಆಸ್ಪತ್ರೆಗೆ ದಾಖಲಿಸಿದ್ದಾರೆ. 22 ಕಿಲೋಮೀಟರ್ ದೆಹಲಿಯಲ್ಲಿ ತೆರಳುವುದು ಹೆಚ್ಚಿನ ಸಮಯ ಬೇಕಿದೆ. ಸಣ್ಣ ಆಸ್ಪತ್ರೆಯಲ್ಲಿ ತಕ್ಷಣದ ಚಿಕಿತ್ಸೆ ಸಿಗಲಿಲ್ಲ. ನನ್ನ ಪತಿಗೆ ಪ್ರಜ್ಞೆ ಇರಲಿಲ್ಲ. ಜೊತೆಗೆ ವಿಳಂಬವಾಗಿದ್ದ ಕಾರಣ ಮೃತಪಟ್ಟಿದ್ದಾರೆ. ಮಹಿಳೆ ಉದ್ದೇಶಪೂರ್ವಕವಾಗಿ ಸಣ್ಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಂದೀಪ್ ಕೌರ್ ಆರೋಪಿಸಿದ್ದಾರೆ.

ಆಸ್ಪತ್ರೆಯಲ್ಲೂ ನಿರ್ಲಕ್ಷ್ಯ

ಆಸ್ಪತ್ರೆ ಸಿಬ್ಬದಿಗಳೂ ನಿರ್ಲಕ್ಷ್ಯ ತೋರಿದ್ದಾರೆ. ತಂದೆ ಸ್ಟ್ರೆಚರ್‌ನಲ್ಲಿ ಮಲಗಿದ್ದರೂ ಭಾರಿ ವಿಳಂಬ ಮಾಡಿದ್ದಾರೆ. ಹಲವು ಹೊತ್ತು ಕಾಯಿಸಿದ್ದಾರೆ. ತುರ್ತು ಚಿಕಿತ್ಸೆಯ ಅಗತ್ಯವಿತ್ತು. ಆದರೆ ನಿರ್ಲಕ್ಷ್ಯ, ವಿಳಂಬ ನೀತಿಯಿಂದ ಪತಿ ಮೃತಪಟ್ಟಿದ್ದಾರೆ. ತಕ್ಷಣದಲ್ಲೇ ಚಿಕಿತ್ಸೆ ಸಿಕ್ಕಿದ್ದರೆ ಬದುಕುಳಿಯುತ್ತಿದ್ದರು ಎಂದು ನವಜೋತ್ ಸಿಂಗ್ ಪುತ್ರ ನವನೂರ್ ಸಿಂಗ್ ಹೇಳಿದ್ದಾರೆ. ಸಣ್ಣ ಆಸ್ಪತ್ರೆಗೆ ದಾಖಲಿಸುವ ಮೂಲಕ ಸಣ್ಣತನ ತೋರಿದ್ದಾರೆ. ಸೂಕ್ತ ಚಿಕಿತ್ಸೆ ಸಿಗದೆ ತಂದೆ ಮೃತಪಟ್ಟಿದ್ದಾರೆ ಎಂದು ನವನೂರ್ ಆರೋಪಿಸಿದ್ದಾರೆ.

ಫ್ಲೈಒವರ್‌ನಿಂದ ಪಲ್ಟಿಯಾಗಿ ರೈಲ್ವೆ ಹಳಿಗೆ ಬಿದ್ದ ಕಾರು: ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಅಪಘಾತದಲ್ಲಿ ಪಲ್ಟಿಯಾಗಿದ್ದ BMW ಕಾರು

ಅಪಘಾತದ ತೀವ್ರತೆ ಎಷ್ಟಿತ್ತು ಎಂದರೆ BMW ಕಾರು ಹಲವು ಪಲ್ಟಿಯಾಗಿದೆ. BMW ಕಾರು ಬಹುತೇಕ ನಜ್ಜುಗುಜ್ಜಾಗಿದೆ. ಈ ಘಟನೆಯಲ್ಲಿ ಕಾರು ಚಲಾಯಿಸುತ್ತಿದ್ದ ಮಹಿಳೆಗೆ ಯಾವುದೇ ಗಾಯವಾಗಿಲ್ಲ. ಆಕೆಯ ಪತಿಗೆ ಗಾಯವಾಗಿದೆ.

 



Source link

Leave a Reply

Your email address will not be published. Required fields are marked *