Headlines

Kanpur Heartbreak ಬಿಸಿಲ ಬೇಗೆಯಲ್ಲಿ ಕುಸಿದು ಬಿದ್ದ ತಾಯಿ ರಕ್ಷಿಸಲು ಬಾಲಕನ ಪ್ರಯತ್ನ, ರೀಲ್ಸ್ ಮಾಡುತ್ತಾ ನಿಂತ ಜನ | Young Boy Struggles To Save Mother Collapsed In Heat While Bystanders Record Reels

Kanpur Heartbreak ಬಿಸಿಲ ಬೇಗೆಯಲ್ಲಿ ಕುಸಿದು ಬಿದ್ದ ತಾಯಿ ರಕ್ಷಿಸಲು ಬಾಲಕನ ಪ್ರಯತ್ನ, ರೀಲ್ಸ್ ಮಾಡುತ್ತಾ ನಿಂತ ಜನ | Young Boy Struggles To Save Mother Collapsed In Heat While Bystanders Record Reels



Kanpur Heartbreak ಬಿಸಿಲ ಬೇಗೆಯಲ್ಲಿ ಕುಸಿದು ಬಿದ್ದ ತಾಯಿ ರಕ್ಷಿಸಲು ಬಾಲಕನ ಪ್ರಯತ್ನ, ರೀಲ್ಸ್ ಮಾಡುತ್ತಾ ನಿಂತ ಜನ | Young Boy Struggles To Save Mother Collapsed In Heat While Bystanders Record Reels

ಬಿಸಿಲ ಬೇಗೆಯಲ್ಲಿ ಕುಸಿದು ಬಿದ್ದ ತಾಯಿ ರಕ್ಷಿಸಲು ಬಾಲಕನ ಪ್ರಯತ್ನ, ರೀಲ್ಸ್ ಮಾಡುತ್ತಾ ನಿಂತ ಜನ, ಕರುಳು ಹಿಂಡುವ ಈ ವಿಡಿಯೋ ದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಪುಟ್ಟ ಬಾಲಕನ ಪರಿಸ್ಥಿತಿ ಯಾರಿಗೂ ಅರ್ಥವಾಗಲಿಲ್ಲವೇ ಎಂದು ಹಲವರು ಪ್ರಶ್ನಿಸಿದ್ದಾರೆ.

ಕಾನ್ಪುರ (ಏ.03) ದೇಶಾದ್ಯಂತ ತಾಪಮಾನ ಏರಿಕೆಯಾಗುತ್ತಿದೆ. ಉರಿ ಬಿಸಿಲಿಗೆ ಜನರು ತತ್ತರಿಸುತ್ತಿದ್ದಾರೆ. ಹಲವರು ಅಸ್ವಸ್ಥಗೊಳ್ಳುತ್ತಿದ್ದಾರೆ. ಹೀಗೆ ಪುಟ್ಟ ಮಗನ ಜೊತೆ ಕೂಲಿ ಕೆಲಸ ಮಾಡುವ ಮಹಿಳೆ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಬೀಸಿಲ ಬೇಗೆಗೆ ದಾರಿಯಲ್ಲೇ ತಾಯಿ ಬಿದ್ದರೆ ಪುಟ್ಟ ಬಾಲಕ ಗಾಬರಿಗೊಂಡಿದ್ದಾನೆ. ತಾಯಿ ನೀರಿಗಾಗಿ ಪರಿತಪಿಸಿದ್ದಾಳೆ. ಹೀಗಾಗಿ ಉರಿ ಬಿಸಿಲಿನಲ್ಲೇ ಬರಿಗಾಲಿನಲ್ಲಿ ಓಡೋಡಿದ ಬಾಲಕ ನೀರು ತಂದು ತಾಯಿ ಮುಖಕ್ಕೆ ಚಿಮುಕಿಸಿದ್ದಾನೆ. ಆದರೆ ಯಾರೂ ಕೂಡ ನೆರವಿಗೆ ಬಂದಿಲ್ಲ. ಕನಿಷ್ಠ ಈ ವಿಡಿಯೋ ಮಾಡಿದಾತ ಕೂಡ ನೆರವಿಗೆ ಬಂದಿಲ್ಲ ಅನ್ನೋದೇ ದುರಂತ.

ಕಾನ್ಪುರದ ವಿಡಿಯೋ ವಿವಾದ

ಕಾನ್ಪುರದಲ್ಲಿ ನಡೆದಿದೆ ಎನ್ನಲಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪುಟ್ಟ ಬಾಲಕ ಬಿಸಿಲಿನ ಬೇಗೆ ನಡುವೆ ಬರಿಗಾಲಲ್ಲಿ ನೀರು ಹಿಡಿದು ಓಡೋಡಿ ಬರುವ ದೃಶ್ಯವಿದೆ. ಸುಡುವ ರಸ್ತೆಯಲ್ಲಿ ಹೆಜ್ಜೆ ಇಡುತ್ತಾ ಬಂದ ಬಾಲಕ ನೀರಿನ ಬಾಟಲಿ ಹಿಡಿದು ತಂದಿದ್ದಾನೆ. ದಾರಿಯಲ್ಲಿ ಅಸ್ವಸ್ಥಗೊಂಡು ಬಿದ್ದ ತಾಯಿ ಮುಖಕ್ಕೆ ನೀರು ಚಿಮುಕಿಸಿದ್ದಾನೆ. ನೀರು ಕುಡಿಸುವ ಪ್ರಯತ್ನ ಮಾಡಿದ್ದಾನೆ. ಅದೇ ರಸ್ತೆಯಲ್ಲಿ ಕೆಲವರು ಬೈಕ್ ಮೂಲಕ ಸಾಗಿದ್ದಾರೆ. ದೂರದಲ್ಲಿ ಕೆಲವರು ನಿಂತಿದ್ದಾರೆ. ಯಾರೂ ಕೂಡ ನೆರವಿಗೆ ಬಂದಿಲ್ಲ.

ವಿಡಿಯೋ ಮಾಡಿ ಹರಿಬಿಟ್ಟ, ನೆರವು ನೀಡಲೇ ಇಲ್ಲ

ಪುಟ್ಟ ಬಾಲಕ ಓಡಿ ಬಂದು ತಾಯಿಗೆ ನೀರು ಕುಡಿಸುವ ಪ್ರಯತ್ನ, ಬಾಲಕ ಕಣ್ಣೀರಿಡುತ್ತಾ, ಗಾಬರಿಯಿಂದ ತಾಯಿ ಬಳಿ ಬಂದಿದ್ದಾನೆ. ಈ ವೇಳೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಹಾಕುವ ಬದಲು ಮಹಿಳೆಗೆ ನರೆವು ನೀಡಬಹುದಿತ್ತು ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ವಿಡಿಯೋವನ್ನು ಹಲವರು ಉತ್ತರ ಪ್ರದೇಶ ಹಾಗೂ ಕಾನ್ಪುರ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಈ ವಿಡಿಯೋ ಕುರಿತು ತನಿಖೆ ಆರಂಭಿಸಿದ್ದಾರೆ.

Scroll to load tweet…

ವಿಡಿಯೋ ಕುರಿತು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ರೀಲ್ಸ್ ಶೋಕಿಗಳು ಬಡವರ ಮುಗ್ದತೆಯನ್ನೇ ಬಂಡವಾಳ ಮಾಡಿಕೊಂಡಿದ್ದಾರ ಎಂದು ಕೆಲವರು ಪ್ರಶ್ನಿಸಿದ್ದಾರೆ. ಈ ಘಟನೆ ಸತ್ಯವಾಗಿದ್ದರೆ, ನೆರವು ನೀಡದೆ ವಿಡಿಯೋ ಮಾಡಿದವ, ಅದೇ ರಸ್ತೆಯಲ್ಲಿ ಇದ್ದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಕಾನೂನಿನ ಅಡಿ ಕ್ರಮ ಕೈಗೊಳ್ಳಲು ಅವಕಾಶ ಇಲ್ಲದಿದ್ದರೂ ಈ ಕಲ್ಲು ಹೃದಯ ಇರುವ ವ್ಯಕ್ತಿಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ ,ಸಾಕು, ಉಳಿದ ಶಿಕ್ಷೆ ಸೋಶಿಯಲ್ ಮೀಡಿಯಾ ಮೂಲಕವೇ ನಾವು ಕೊಡುತ್ತೇವೆ ಎಂದು ಹಲವು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.



Source link

Leave a Reply

Your email address will not be published. Required fields are marked *