River Indie – ರಿವರ್ ಇಂಡಿ ಯಶೋಗಾಥೆ: ಯಮಹಾದೊಂದಿಗೆ ಇ-6 ಹೊಸ ಆವೃತ್ತಿ ಬಿಡುಗಡೆ, ತಿಂಗಳಿಗೆ 8 ಸಾವಿರ ಸ್ಕೂಟರ್ ನಿರ್ಮಾಣ | Yamaha Partnership Unleashes 6 New E Cooter Variants Production Reaches 8000 Units Monthly Sales At 2500

River Indie – ರಿವರ್ ಇಂಡಿ ಯಶೋಗಾಥೆ: ಯಮಹಾದೊಂದಿಗೆ ಇ-6 ಹೊಸ ಆವೃತ್ತಿ ಬಿಡುಗಡೆ, ತಿಂಗಳಿಗೆ 8 ಸಾವಿರ ಸ್ಕೂಟರ್ ನಿರ್ಮಾಣ | Yamaha Partnership Unleashes 6 New E Cooter Variants Production Reaches 8000 Units Monthly Sales At 2500


ಹೊಸಕೋಟೆಯ ಹೊರವಲಯದಲ್ಲಿ 2.75 ಎಕರೆ ವಿಶಾಲ ಜಾಗದಲ್ಲಿ ಅ. 2023ರಲ್ಲಿ ಆರಂಭವಾದ ಉತ್ಪಾದನಾ ಘಟಕವು ಇಂದು ದಿನಕ್ಕೆ 200ರ ಸರಾಸರಿಯಂತೆ ತಿಂಗಳಿಗೆ 6- 8 ಸಾವಿರಕ್ಕೂ ಹೆಚ್ಚು ಸ್ಕೂಟರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ 467 ನುರಿತ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ, ಹೊಸಕೋಟೆ

2021ರಲ್ಲಿ ಅರವಿಂದ್ ಮಣಿ ಹಾಗೂ ವಿಪಿನ್ ಜಾರ್ಜ್ ಎಂಬ ಯುವಕರು ಕಟ್ಟಿದ್ದ ರಿವರ್ ಇಂಡಿ (Rivere Indie) ಕಂಪನಿಯು ವಾರ್ಷಿಕ 20 ಸಾವಿರ ಸ್ಕೂಟರ್‌ಗಳನ್ನು ಮಾರಾಟ ಮಾಡಿ ಇಂದು ದೇಶದ 7ನೇ ಅತಿದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಾಗಿ ಹೊರಹೊಮ್ಮಿದೆ. 2026 ಮಾರ್ಚ್ ಗೆ ರಿವರ್ ಮೊಬೈಲಿಟಿ 5 ವರ್ಷ ಪೂರೈಸುತ್ತಿರುವ ಹಿನ್ನೆಲೆ ಹೊಸಕೋಟೆಯ ರಿವರ್ ಉತ್ಪಾದನಾ ಘಟಕದಲ್ಲಿ ಪತ್ರಕರ್ತರಿಗೆ ಏರ್ಪಡಿಸಿದ್ದ ಫ್ಯಾಮ್ ಟ್ರಿಪ್ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅರವಿಂದ್ ಮಾತನಾಡಿ, ತಮ್ಮ ರಿವರ್ ಉದ್ಯಮದ ಸಾಹಸಗಾಥೆ ತಿಳಿಸಿದರು.

ಗೆಳೆಯ ವಿಪಿನ್ ಜಾರ್ಜ್ ಜೊತೆ ಸೇರಿ 2 ಮಿಲಿಯನ್ ಡಾಲರ್ (₹18 ಕೋಟಿ) ಬಂಡವಾಳ ಹೂಡಿ ಉದ್ಯಮ ಸ್ಥಾಪಿಸಿದ್ದು, ಇಂದು ವಾರ್ಷಿಕ ₹575 ಕೋಟಿ ವಹಿವಾಟು ನಡೆಯುತ್ತಿದೆ. ದೇಶಾದ್ಯಂತ 60ಕ್ಕೂ ಹೆಚ್ಚಿನ ಶೋ ರೂಮ್ ಗಳನ್ನು ಹೊಂದಿದ್ದು, ತಿಂಗಳಿಗೆ 2,500ಕ್ಕೂ ಅಧಿಕ ಸ್ಕೂಟರ್ ಮಾರಾಟ ಮಾಡಿ ಮೈಲುಗಲ್ಲು ಸ್ಥಾಪಿಸಿದೆ ಎಂದು ತಿಳಿಸಿದರು.

ರೈತರು, ಕಾರ್ಮಿಕರು, ಸಣ್ಣ ಪುಟ್ಟ ಅಂಗಡಿ ವ್ಯಾಪಾರಿಗಳು ಸೇರಿ ಮಧ್ಯಮ ವರ್ಗದ ಜನರ ದೈನಂದಿನ ಚಟುವಟಿಕೆಗಳಿಗೆ ಪೂರಕ ಸೌಲಭ್ಯವನ್ನು ರಿವರ್ ಸ್ಕೂಟರ್ ಹೊಂದಿದೆ ಎಂದು ಹೇಳಿದರು.

ದಿನಕ್ಕೆ 150- 200 ಸ್ಕೂಟರ್ ಉತ್ಪಾದಿಸುವ ಘಟಕ:

ಹೊಸಕೋಟೆಯ ಹೊರವಲಯದಲ್ಲಿ 2.75 ಎಕರೆ ವಿಶಾಲ ಜಾಗದಲ್ಲಿ ಅ. 2023ರಲ್ಲಿ ಆರಂಭವಾದ ಉತ್ಪಾದನಾ ಘಟಕವು ಇಂದು ದಿನಕ್ಕೆ 200ರ ಸರಾಸರಿಯಂತೆ ತಿಂಗಳಿಗೆ 6- 8 ಸಾವಿರಕ್ಕೂ ಹೆಚ್ಚು ಸ್ಕೂಟರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ 467 ನುರಿತ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ, ಬ್ಯಾಟರಿ, ಅತ್ಯಾಧುನಿಕ ತಂತ್ರಜ್ಞಾನದ ಎಂಜಿನ್ ಸೇರಿ ರಿವರ್ ಇಂಡಿ ಸ್ಕೂಟರ್ ನ ಮುಕ್ಕಾಲು ಪಾಲು ಬಿಡಿ ಭಾಗಗಳೆಲ್ಲ ಇಲ್ಲೇ ತಯಾರಾಗುತ್ತವೆ ಎಂದು ತಮ್ಮ ಪ್ಯಾಕ್ಟರಿ ಬಗ್ಗೆ ತಿಳಿಸಿದರು.

ಯಮಹಾದೊಂದಿಗೆ ಪಾಲುದಾರಿಕೆ:

2024ರಲ್ಲಿ ದೈತ್ಯ ಆಟೋ ಮೊಬೈಲ್ ಸಂಸ್ಥೆ ಯಮಹಾ 40 ಮಿಲಿಯನ್ ಹೂಡಿಕೆಯೊಂದಿಗೆ ರಿವರ್ ಇಂಡಿ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದು ರಿವರ್ ಸಂಸ್ಥೆಯ ಜಾಗತಿಕ ಬೆಳವಣಿಗೆಗೆ ಉತ್ತೇಜನ ನೀಡಿದೆ, ಕಳೆದ ಜನವರಿಯಲ್ಲಿ ಹೊಸಕೋಟೆಯ ಉತ್ಪಾದನಾ ಘಟಕದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್ ಯಮಹಾ ಇಸಿ – 06 ಎಂಬ ಮೊದಲ ಆವೃತ್ತಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಯಮಹಾ ಅಧ್ಯಕ್ಷ ಜಿಮ್ ಔಟಾ ಅವರಿಗೆ ಹಸ್ತಾಂತರಿಸುವ ಮೂಲಕ ಮಾರುಕಟ್ಟೆಗೆ ಲೋಕಾರ್ಪಣೆಗೊಳಿಸಿರುವುದಾಗಿ ಹೇಳಿದರು.



Source link

Leave a Reply

Your email address will not be published. Required fields are marked *