ರೈಲು ಪ್ರಯಾಣಿಕರಿಗೆ ಕಠಿಣ ನಿಯಮ ಜಾರಿಗೊಳಿಸಿದ ಭಾರತೀಯ ರೈಲ್ವೆ, ಈ ತಪ್ಪು ಮಾಡಿದರೆ ತಕ್ಷಣವೇ ಟಿಕೆಟ್ ರದ್ದು!! | Indian Railways Introduces New Rule Reserved Seats To Be Cancelled If Passenger Misses Boarding Station

ರೈಲು ಪ್ರಯಾಣಿಕರಿಗೆ ಕಠಿಣ ನಿಯಮ ಜಾರಿಗೊಳಿಸಿದ ಭಾರತೀಯ ರೈಲ್ವೆ, ಈ ತಪ್ಪು ಮಾಡಿದರೆ ತಕ್ಷಣವೇ ಟಿಕೆಟ್ ರದ್ದು!! | Indian Railways Introduces New Rule Reserved Seats To Be Cancelled If Passenger Misses Boarding Station



ರೈಲು ಪ್ರಯಾಣಿಕರಿಗೆ ಕಠಿಣ ನಿಯಮ ಜಾರಿಗೊಳಿಸಿದ ಭಾರತೀಯ ರೈಲ್ವೆ, ಈ ತಪ್ಪು ಮಾಡಿದರೆ ತಕ್ಷಣವೇ ಟಿಕೆಟ್ ರದ್ದು!! | Indian Railways Introduces New Rule Reserved Seats To Be Cancelled If Passenger Misses Boarding Station

ಭಾರತೀಯ ರೈಲ್ವೆಯು ಹೊಸ ನಿಯಮವನ್ನು ಜಾರಿಗೆ ತಂದಿದ್ದು, ನಿಗದಿತ ನಿಲ್ದಾಣದಲ್ಲಿ ರೈಲು ಹತ್ತದಿದ್ದರೆ ಕಾಯ್ದಿರಿಸಿದ ಟಿಕೆಟ್ ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಅಲ್ಲದೆ, ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನ ನಾಯಂಡಹಳ್ಳಿ ನಿಲ್ದಾಣದಲ್ಲಿ ನಾಲ್ಕು ಪ್ರಮುಖ ರೈಲುಗಳಿಗೆ ಪ್ರಾಯೋಗಿಕ ನಿಲುಗಡೆ ನೀಡಲಾಗಿದೆ.

ನವದೆಹಲಿ: ಭಾರತೀಯ ರೈಲ್ವೆ ಕಾಯ್ದಿರಿಸುವ ಟಿಕೆಟ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಕಾಯ್ದಿರಿಸಿದ ಟಿಕೆಟ್ ಹೊಂದಿರುವ ಪ್ರಯಾಣಿಕರು ತಮ್ಮ ಟಿಕೆಟ್‌ನಲ್ಲಿ ಉಲ್ಲೇಖಿಸಿರುವ ನಿಗದಿತ ನಿಲ್ದಾಣದಲ್ಲಿ ರೈಲು ಏರದಿದ್ದಲ್ಲಿ, ಅವರ ಕಾಯ್ದಿರಿಸಿದ ಸೀಟ್ ಸ್ವಯಂಚಾಲಿತವಾಗಿ ರದ್ದುಗೊಳ್ಳಲಿದೆ.

ಈ ಹೊಸ ನಿಯಮದ ಅನುಷ್ಠಾನಕ್ಕಾಗಿ ರೈಲ್ವೆ ಇಲಾಖೆ ಟಿಕೆಟ್ ಪರಿಶೀಲಕರಿಗೆ (ಟಿಟಿಇ) ಹೊಸ ಹ್ಯಾಂಡ್ ಹೆಲ್ಡ್ ಟರ್ಮಿನಲ್ (HHT) ಟ್ಯಾಬ್ಲೆಟ್‌ಗಳು ಒದಗಿಸಿದೆ. ಕಾಯ್ದಿರಿಸಿದ ಪ್ರಯಾಣಿಕರು ನಿಗದಿತ ನಿಲ್ದಾಣದಲ್ಲಿ ರೈಲು ಏರದಿದ್ದರೆ, ಟಿಟಿಇ ತಕ್ಷಣವೇ ಆ ಮಾಹಿತಿಯನ್ನು ಈ ಸಾಧನದಲ್ಲಿ ದಾಖಲಿಸುತ್ತಾರೆ. ಈ ದಾಖಲೆಯ ಆಧಾರದ ಮೇಲೆ, ಆ ಸೀಟ್ ಅನ್ನು ತಕ್ಷಣವೇ ಕಾಯುವಿಕೆ ಪಟ್ಟಿಯಲ್ಲಿರುವ ಪ್ರಯಾಣಿಕರಿಗೆ ಹಂಚಲಾಗುತ್ತದೆ.

ಮತ್ತೊಂದೆಡೆ, ಅವರ ಕಾಯ್ದಿರಿಸಿದ ಆಸನವನ್ನು ಮತ್ತೊಬ್ಬರಿಗೆ ನೀಡಲಾಗಿದೆ ಎಂಬ ಮಾಹಿತಿ ಮೂಲ ಪ್ರಯಾಣಿಕರಿಗೆ ಎಸ್‌ಎಂಎಸ್ ಮೂಲಕ ತಿಳಿಸಲಾಗುತ್ತದೆ. ಈ ಹಿಂದೆ, ಕಾಯ್ದಿರಿಸಿದ ಪ್ರಯಾಣಿಕರು ಏರದಿದ್ದರೂ ಆ ಸೀಟ್ ಅನ್ನು ಮುಂದಿನ ಎರಡು ನಿಲ್ದಾಣಗಳವರೆಗೆ ಖಾಲಿ ಬಿಡಲಾಗುತ್ತಿತ್ತು. ಹೊಸ ನಿಯಮದಿಂದಾಗಿ ಸೀಟ್ ವ್ಯರ್ಥವಾಗುವುದನ್ನು ತಡೆಯುವ ಜೊತೆಗೆ ಕಾಯುವಿಕೆ ಪಟ್ಟಿಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ನಾಯಂಡಹಳ್ಳಿಯಲ್ಲಿ ಪ್ರಮುಖ ರೈಲುಗಳಿಗೆ ಪ್ರಾಯೋಗಿಕ ನಿಲುಗಡೆ

ಬೆಂಗಳೂರು: ಪ್ರಯಾಣಿಕರ ಅನುಕೂಲಕ್ಕಾಗಿ South Western Railway ಬೆಂಗಳೂರು ವಿಭಾಗವು, ಮಂಗಳವಾರದಿಂದ ನಾಲ್ಕು ಜೋಡಿ ಪ್ರಮುಖ ರೈಲುಗಳಿಗೆ ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆ ವ್ಯವಸ್ಥೆ ಜಾರಿಗೊಳಿಸಿದೆ.

ಈ ವ್ಯವಸ್ಥೆಯಂತೆ, 

  • ಚಾಮುಂಡಿ ಎಕ್ಸ್‌ಪ್ರೆಸ್ (16215) ಮೈಸೂರು–ಕೆಎಸ್‌ಆರ್ ಬೆಂಗಳೂರು ನಡುವೆ ಸಂಚರಿಸಿ ಬೆಳಿಗ್ಗೆ 8.45ಕ್ಕೆ ನಾಯಂಡಹಳ್ಳಿಗೆ ಆಗಮಿಸಿ 8.46ಕ್ಕೆ ನಿರ್ಗಮಿಸಲಿದೆ.
  • ವಾಪಸ್ಸು ಹೋಗುವ ಕೆಎಸ್‌ಆರ್ ಬೆಂಗಳೂರು–ಮೈಸೂರು (16216) ರೈಲು ಸಂಜೆ 6.39ಕ್ಕೆ ಬಂದು 6.40ಕ್ಕೆ ತೆರಳಲಿದೆ.
  • ಬಸವ ಎಕ್ಸ್‌ಪ್ರೆಸ್ (17307) ಮೈಸೂರು–ಬಾಗಲಕೋಟೆ ರೈಲು ಮಧ್ಯಾಹ್ನ 3.16ಕ್ಕೆ ಆಗಮಿಸಿ 3.17ಕ್ಕೆ ಹೊರಡಲಿದೆ.
  • ವಾಪಸಾಗುವ ಬಾಗಲಕೋಟೆ–ಮೈಸೂರು (17308) ರೈಲು ಬೆಳಿಗ್ಗೆ 8.19ಕ್ಕೆ ಬಂದು 8.20ಕ್ಕೆ ನಿರ್ಗಮಿಸಲಿದೆ.
  • ತೂತುಕುಡಿ–ಮೈಸೂರು ಎಕ್ಸ್‌ಪ್ರೆಸ್ (16235) ಬೆಳಿಗ್ಗೆ 6.49ಕ್ಕೆ ಆಗಮಿಸಿ 6.50ಕ್ಕೆ ಹೊರಡಲಿದೆ.
  • ವಾಪಸಾಗುವ ಮೈಸೂರು–ತೂತುಕುಡಿ (16236) ರೈಲು ರಾತ್ರಿ 8.14ಕ್ಕೆ ಬಂದು 8.15ಕ್ಕೆ ತೆರಳಲಿದೆ.
  • ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ (16535) ಮೈಸೂರು–ಪಂಢರಪುರ ಮಾರ್ಗದಲ್ಲಿ ಸಂಜೆ 5.40ಕ್ಕೆ ಬಂದು 5.41ಕ್ಕೆ ನಿರ್ಗಮಿಸಲಿದೆ.
  • ವಾಪಸ್ಸು ಸಂಚರಿಸುವ ಪಂಢರಪುರ–ಮೈಸೂರು (16536) ರೈಲು ಬೆಳಿಗ್ಗೆ 7.44ಕ್ಕೆ ಆಗಮಿಸಿ 7.45ಕ್ಕೆ ಹೊರಡಲಿದೆ.

ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ

ನಾಯಂಡಹಳ್ಳಿ ಪ್ರದೇಶದ ನಿವಾಸಿಗಳಿಗೆ ಬೆಂಗಳೂರು ನಗರ ಹಾಗೂ ಮೈಸೂರು ಕಡೆಗೆ ಸಂಚರಿಸಲು ಈ ಹೊಸ ನಿಲುಗಡೆ ವ್ಯವಸ್ಥೆ ಬಹಳ ಸಹಕಾರಿಯಾಗಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ. ಈ ಕ್ರಮದಿಂದ ಪ್ರಯಾಣಿಕರ ಸಮಯ ಉಳಿತಾಯವಾಗುವ ಜೊತೆಗೆ ಸಾರಿಗೆ ವ್ಯವಸ್ಥೆಯ ಪರಿಣಾಮಕಾರಿತ್ವವೂ ಹೆಚ್ಚಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.



Source link

Leave a Reply

Your email address will not be published. Required fields are marked *