Headlines

ಹಿಜಾಬ್‌, ಘುಂಗಟ್ ಧರಿಸಿದರಿಗೆ ಚಿನ್ನದಂಗಡಿಗೆ ಪ್ರವೇಶವಿಲ್ಲ: ಹೊಸ ನಿಯಮ ತಂದ ಜ್ಯುವೆಲ್ಲರ್ಸ್‌ ಅಸೋಸಿಯೇಷನ್‌! | Bihar Jewellers Ban Hijab Ghunghat Helmets Inside Shops Security Reasons San

ಹಿಜಾಬ್‌, ಘುಂಗಟ್ ಧರಿಸಿದರಿಗೆ ಚಿನ್ನದಂಗಡಿಗೆ ಪ್ರವೇಶವಿಲ್ಲ: ಹೊಸ ನಿಯಮ ತಂದ ಜ್ಯುವೆಲ್ಲರ್ಸ್‌ ಅಸೋಸಿಯೇಷನ್‌! | Bihar Jewellers Ban Hijab Ghunghat Helmets Inside Shops Security Reasons San



ಹಿಜಾಬ್‌, ಘುಂಗಟ್ ಧರಿಸಿದರಿಗೆ ಚಿನ್ನದಂಗಡಿಗೆ ಪ್ರವೇಶವಿಲ್ಲ: ಹೊಸ ನಿಯಮ ತಂದ ಜ್ಯುವೆಲ್ಲರ್ಸ್‌ ಅಸೋಸಿಯೇಷನ್‌! | Bihar Jewellers Ban Hijab Ghunghat Helmets Inside Shops Security Reasons San

ಬಿಹಾರದ ಜ್ಯುವೆಲ್ಲರ್ಸ್‌ ಅಸೋಸಿಯೇಷನ್‌, ರಾಜ್ಯದಲ್ಲಿ ಹೆಚ್ಚುತ್ತಿರುವ ದರೋಡೆ ಪ್ರಕರಣಗಳನ್ನು ತಡೆಯಲು ಭದ್ರತಾ ಕಾರಣಗಳಿಗಾಗಿ ಚಿನ್ನದ ಅಂಗಡಿಗಳಲ್ಲಿ ಹಿಜಾಬ್, ನಖಾಬ್ ಹಾಗೂ ಹೆಲ್ಮೆಟ್‌ ಧರಿಸಿ ಪ್ರವೇಶಿಸುವುದನ್ನು ನಿಷೇಧಿಸಿದೆ. ಈ ನಿರ್ಧಾರವು ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಪಾಟ್ನಾ (ಜ.7): ಅತ್ಯಂತ ಮಹತ್ವದ ಬೆಳವಣಿೆಯಲ್ಲಿ ಬಿಹಾರದ ಜ್ಯುವೆಲ್ಲರ್ಸ್‌ ಅಸೋಸಿಯೇಷನ್‌, ಹಿಜಾಬ್‌, ನಖಾಬ್‌ ಹಾಗೂ ಹೆಲ್ಮೆಟ್‌ ಧರಿಸಿ ಚಿನ್ನದ ಅಂಗಡಿಗೆ ಪ್ರವೇಶಿಸುವುದನ್ನು ನಿಷೇಧಿಸಿದೆ. ಉತ್ತರ ಪ್ರದೇಶದ ಝಾನ್ಸಿಯಲ್ಲಿ ಇದೇ ರೀತಿಯ ನಿಯಮ ಜಾರಿ ಮಾಡಿದ ಬಳಿಕ, ಬಿಹಾರ ಆಭರಣ ವ್ಯಾಪಾರಿಗಳ ಸಂಘವು ಬುಧವಾರರಾಜ್ಯಾದ್ಯಂತ ಜ್ಯುವೆಲ್ಲರ್ಸ್‌ ಮಳಿಗೆಗಳ ಭದ್ರತಾ ವ್ಯವಸ್ಥೆಗಳ ಕುರಿತು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿತು. ಹಿಜಾಬ್, ನಿಖಾಬ್ ಅಥವಾ ಘುಂಗಟ್ ಧರಿಸಿದ ವ್ಯಕ್ತಿಗಳು ಇನ್ನು ಮುಂದೆ ಬಿಹಾರದಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣ ಅಂಗಡಿಗಳಿಗೆ ಪ್ರವೇಶಿಸಲು ಅವಕಾಶವಿರುವುದಿಲ್ಲ ಎಂದು ಸಂಘವು ಘೋಷಿಸಿದೆ.

ಇದಲ್ಲದೆ, ಹೆಲ್ಮೆಟ್ ಅಥವಾ ಪೇಟ (ಮುರೇತಾ) ಧರಿಸಿದ ಪುರುಷರಿಗೂ ಪ್ರವೇಶವನ್ನು ನಿಷೇಧಿಸಲಾಗಿದೆ. ಆಭರಣ ವ್ಯಾಪಾರಿಗಳು ತಮ್ಮ ಅಂಗಡಿಗಳ ಹೊರಗೆ ಮಾಸ್ಕ್‌, ಬುರ್ಖಾ, ಹೆಲ್ಮೆಟ್‌ ಮತ್ತು ನಿಖಾಬ್‌ ಆವರಣದೊಳಗೆ ನಿಷೇಧಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳುವ ನೋಟಿಸ್‌ ಹಾಕಲು ಪ್ರಾರಂಭಿಸಿದ್ದಾರೆ.

ರಾಜಕೀಯ ವಿವಾದಕ್ಕೆ ಕಾರಣವಾದ ನಿರ್ಧಾರ

ಈ ಕ್ರಮವು ಬಿಹಾರದಲ್ಲಿ ರಾಜಕೀಯ ವಿವಾದವನ್ನು ಹುಟ್ಟುಹಾಕಿದೆ. ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಈ ನಿರ್ಧಾರವನ್ನು ಟೀಕಿಸಿದ್ದು, ಭದ್ರತೆಯ ಹೆಸರಿನಲ್ಲಿ ಹಿಜಾಬ್ ಮತ್ತು ನಿಖಾಬ್ ಅನ್ನು ಗುರಿಯಾಗಿಸಿಕೊಂಡಿರುವುದು ತಪ್ಪು ಮತ್ತು ಸಂವಿಧಾನಬಾಹಿರ ಎಂದು ಹೇಳಿದೆ. ಟೀಕೆಗೆ ಪ್ರತಿಕ್ರಿಯಿಸಿದ ಭಾರತೀಯ ಜನತಾ ಪಕ್ಷ (ಬಿಜೆಪಿ), ‘ಇದು ಭಾರತ, ಇಸ್ಲಾಮಿಕ್ ದೇಶವಲ್ಲ. ಇಲ್ಲಿ ಹಿಜಾಬ್‌ನಿಂದ ಏನು ಪ್ರಯೋಜನ?’ ಎಂದು ಕೇಳಿದೆ. ಆದರೆ, ಈ ನಿರ್ಧಾರವು ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿರಿಸಿಕೊಂಡಿಲ್ಲ ಎಂದು ಆಭರಣ ವ್ಯಾಪಾರಿಗಳು ಸಮರ್ಥಿಸಿಕೊಂಡಿದ್ದಾರೆ.

ಅಪರಾಧ ಪ್ರಕರಣಗಳ ಹೆಚ್ಚಳ ಪ್ರಮುಖ ಕಾರಣ

ಈ ಕ್ರಮವು ಸಂಪೂರ್ಣವಾಗಿ ಭದ್ರತಾ ಕಾರಣಗಳಿಗಾಗಿ ತೆಗೆದುಕೊಳ್ಳಲಾಗಿದೆ ಮತ್ತು ಯಾವುದೇ ಸಮುದಾಯ ಅಥವಾ ವರ್ಗದ ವಿರುದ್ಧವಲ್ಲ ಎಂದು ಚಿನ್ನದ ವ್ಯಾಪಾರಿಗಳು ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ, ಬಿಹಾರದ ಹಲವಾರು ಜಿಲ್ಲೆಗಳ ಆಭರಣ ಅಂಗಡಿಗಳಲ್ಲಿ ದರೋಡೆ ಮತ್ತು ಕಳ್ಳತನದ ಘಟನೆಗಳು ವರದಿಯಾಗಿವೆ.

ಹಲವು ಪ್ರಕರಣಗಳಲ್ಲಿ, ಅಪರಾಧಿಗಳು ತಮ್ಮ ಗುರುತು ಮರೆಮಾಡಲು ಮುಖ ಮುಚ್ಚಿಕೊಂಡು ಅಂಗಡಿಗಳಿಗೆ ಪ್ರವೇಶಿಸಿ ಅಪರಾಧಗಳನ್ನು ಎಸಗಿ ಪರಾರಿಯಾಗುತ್ತಾರೆ ಎಂದು ವರದಿಯಾಗಿದೆ. ಪರಿಣಾಮವಾಗಿ, ಗ್ರಾಹಕರು, ಸಿಬ್ಬಂದಿ ಮತ್ತು ಅಂಗಡಿ ಮಾಲೀಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಗಂಭೀರ ಸವಾಲಾಗಿ ಪರಿಣಮಿಸಿದೆ.

ಅಖಿಲ ಭಾರತ ಚಿನ್ನ ಮತ್ತು ಆಭರಣ ವ್ಯಾಪಾರಿಗಳ ಸಂಘದ ರಾಜ್ಯ ಅಧ್ಯಕ್ಷ ಅಶೋಕ್ ಕುಮಾರ್ ವರ್ಮಾ ಮಾತನಾಡಿ, “ಚಿನ್ನ-ಬೆಳ್ಳಿ ವ್ಯವಹಾರವು ಯಾವಾಗಲೂ ಅಪರಾಧಿಗಳಿಗೆ ಗುರಿಯಾಗಿತ್ತು. ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ನಾವು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಅಂಗಡಿಗಳಲ್ಲಿ ಲೂಟಿ ಘಟನೆಗಳು ಪ್ರತಿದಿನ ನಡೆಯುತ್ತಿವೆ. ಮುಖಗಳನ್ನು ಮುಚ್ಚಿದಾಗ, ಅಪರಾಧಿಗಳನ್ನು ಗುರುತಿಸುವುದು ಕಷ್ಟವಾಗುತ್ತದೆ. ಅಂತಹ ಅಪರಾಧಗಳನ್ನು ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದರು.

ಮಿಶ್ರ ಪ್ರತಿಕ್ರಿಯೆ

ಬಿಹಾರದ ವಿವಿಧ ನಗರಗಳ ಆಭರಣ ವ್ಯಾಪಾರಿಗಳು ಈ ನಿರ್ಧಾರದ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಗಯಾದಲ್ಲಿ, ಆಭರಣ ವ್ಯಾಪಾರಿ ನೀರಜ್ ಕುಮಾರ್ ವರ್ಮಾ, ಅಂಗಡಿಗಳ ಒಳಗೆ ಬುರ್ಖಾ, ಹೆಲ್ಮೆಟ್ ಅಥವಾ ಮಾಸ್ಕ್‌ಗಳನ್ನು ತೆಗೆದುಹಾಕಲು ಯಾವುದೇ ಆಕ್ಷೇಪಣೆ ಇರಬಾರದು ಎಂದು ಹೇಳಿದರು. “ಇದು ನಮ್ಮ ಸುರಕ್ಷತೆಗಾಗಿ. ನಾಳೆ ಪೊಲೀಸರು ಗುರುತಿನ ಚೀಟಿ ಕೇಳಿದರೆ, ನಾವು ಏನು ಹೇಳುತ್ತೇವೆ? ಈ ನಿರ್ಧಾರ ಎಲ್ಲರ ಸುರಕ್ಷತೆಗಾಗಿ ಸರಿಯಾಗಿದೆ” ಎಂದು ಅವರು ಹೇಳಿದರು.

ಕತಿಹಾರ್‌ನಲ್ಲಿ, ಕಲ್ಯಾಣ್ ಜ್ಯುವೆಲ್ಲರ್ಸ್‌ನ ಮಾಲೀಕ ಮೊಹಮ್ಮದ್ ಅಶ್ಫಾಕ್ ಈ ಕ್ರಮವನ್ನು ಬೆಂಬಲಿಸಿದರು, ಭದ್ರತಾ ದೃಷ್ಟಿಕೋನದಿಂದ ಇದು ಸರಿ ಎಂದು ಹೇಳಿದರು. ಅವರ ಅಂಗಡಿಯು ಇನ್ನೂ ನೋಟಿಸ್ ಅನ್ನು ಹಾಕಿಲ್ಲವಾದರೂ, ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಅಂತಹ ವಿಷಯಗಳ ಬಗ್ಗೆ ಜಾಗರೂಕರಾಗಿದ್ದಾರೆ ಎಂದು ಅವರು ಹೇಳಿದರು.



Source link

Leave a Reply

Your email address will not be published. Required fields are marked *