ಕೊಲಂಬೊ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ತಂಡವು ಪರದಾಡಿ ಗೆಲುವು ಸಾಧಿಸಿದೆ. ಕ್ರಿಕೆಟ್ ಶಿಶು ನೆದರ್ಲೆಂಡ್ ಎದುರು ಪಾಕಿಸ್ತಾನ ತಂಡವು 3 ವಿಕೆಟ್ ರೋಚಕ ಗೆಲುವು ಸಾಧಿಸಿದೆ. ಸೋಲಿನ ಹೊಸ್ತಿಲಲ್ಲಿದ್ದ ಪಾಕಿಸ್ತಾನ, ಕೊನೆಯ ಓವರ್ನಲ್ಲಿ ಪರದಾಡಿ ಗೆಲುವು ದಾಖಲಿಸಿದೆ. ಭಾರತದ ಎದುರು ಸಡ್ಡು ಹೊಡೆಯುತ್ತಿರುವ ಪಾಕಿಸ್ತಾನ, ತನ್ನ ಪ್ರದರ್ಶನದ ಬಗ್ಗೆ ಮೊದಲ ಪಂದ್ಯದಲ್ಲೇ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡಿದೆ ಈ ಫಲಿತಾಂಶ. ವಿಶ್ವಶ್ರೇಯಾಂಕದಲ್ಲಿ 13ನೇ ಸ್ಥಾನದಲ್ಲಿರುವ ನೆದರ್ಲೆಂಡ್ ಎದುರು ಕೊನೆಯ ಕ್ಷಣದಲ್ಲಿ ಸೋಲಿನಿಂದ ಪಾಕ್ ಬಚಾವಾಗಿದೆ.

ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ

ಇಲ್ಲಿನ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ 2026ರ ಐಸಿಸಿ ಟೊರ್ನಿಯ ಮೊದಲ ಪಂದ್ಯದಲ್ಲಿ ಗೆಲ್ಲಲು 148 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು 27 ರನ್ ಗಳಿಸುವಷ್ಟರಲ್ಲಿ ಸೈಮ್ ಆಯೂಬ್ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಸಾಹಿಬ್ಝಾದ್ ಫರ್ಹಾನ್ ಹಾಗೂ ಸಲ್ಮಾನ್ ಅಘಾ ಎರಡನೇ ವಿಕೆಟ್ಗೆ 26 ರನ್ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಇನ್ನು ಬಾಬರ್ ಅಜಂ ಹಾಗೂ ಫರ್ಹಾನ್ ಮೂರನೇ ವಿಕೆಟ್ಗೆ 45 ರನ್ಗಳ ಜತೆಯಾಟವಾಡುವ ಮೂಲಕ ಕೊಂಚ ಆಸರೆಯಾದರು. ಫರ್ಹಾನ್ 47 ರನ್ ಬಾರಿಸಿದರೆ, ಬಾಬರ್ ಅಜಂ 18 ಎಸೆತಗಳಲ್ಲಿ 15 ರನ್ ಸಿಡಿಸಿದರು.

A vital cameo from Faheem Ashraf carries Pakistan to victory in the #T20WorldCup opener : https://t.co/MB0N9eUpvK pic.twitter.com/bDjr74RC0a

— ICC (@ICC) February 7, 2026

ಇನ್ನು ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಉಸ್ಮಾನ್ ಖಾನ್ ಶೂನ್ಯ ಸುತ್ತಿದರೆ, ಶಾದಾಬ್ ಖಾನ್ 8 ಹಾಗೂ ಮೊಹಮ್ಮದ್ ನವಾಜ್ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದಾಗ ಪಾಕಿಸ್ತಾನದ ಸ್ಕೋರ್ 7 ವಿಕೆಟ್ ನಷ್ಟಕ್ಕೆ 114 ರನ್. ಬಹುತೇಕ ಸೋಲಿನ ಸುಳಿಗೆ ಸಿಲುಕಿದ್ದ ಪಾಕಿಸ್ತಾನಕ್ಕೆ 19ನೇ ಓವರ್ನಲ್ಲಿ ಫಾಹೀಮ್ ಅಶ್ರಫ್ 24 ರನ್ ಚಚ್ಚುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಫಾಹೀಮ್ ಅಶ್ರಫ್ ಕೇವಲ 11 ಎಸೆತಗಳಲ್ಲಿ 2 ಬೌಂಡರಿ ಹಾಗೂ ಮೂರು ಸಿಕ್ಸರ್ ಸಹಿತ ಅಜೇಯ 29 ರನ್ ಬಾರಿಸಿ ಗೆಲುವಿನ ರೂವಾರಿಯಾದರು.

ಗೌರವಾನ್ವಿತ ಮೊತ್ತ ಕಲೆಹಾಕಿದ ನೆದರ್ಲೆಂಡ್ಸ್

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಲಿಳಿದ ನೆದರ್ಲೆಂಡ್ಸ್ ತಂಡವು ಸಂಘಟಿತ ಪ್ರದರ್ಶನದ ಮೂಲಕ ಗೌರವಾನ್ವಿತ ಮೊತ್ತ ಕಲೆಹಾಕಿತು. ಆರಂಭಿಕ ಬ್ಯಾಟರ್ ಮಿಶೆಲ್ ಲೆವಿಟ್(24), ಬಾಸ್ ಡೇ ಲೀಡೆ(30), ಕಾಲಿನ್ ಅಕ್ರಮನ್(20) ಹಾಗೂ ನಾಯಕ ಸ್ಕಾಟ್ ಎಡ್ವರ್ಡ್ 37 ರನ್ ಬಾರಿಸಿ ಉಪಯುಕ್ತ ರನ್ ಕಾಣಿಕೆ ನೀಡಿದರು.

Source link
ಭಾರತ ಸೋಲಿಸುವುದಿರಲಿ, ಕ್ರಿಕೆಟ್ ಶಿಶು ನೆದರ್ಲೆಂಡ್ ಎದುರು ಪರದಾಡಿ ಗೆದ್ದ ಪಾಕಿಸ್ತಾನ!