India defense exports growth: ರಕ್ಷಣಾ ರಫ್ತಿನಲ್ಲಿ ಭಾರತ ಸಾರ್ವಕಾಲಿಕ ದಾಖಲೆ! – ಹತ್ತೇ ವರ್ಷದಲ್ಲಿ 25 ಪಟ್ಟು ಏರಿಕೆ! | India S Defence Exports Hit Record Rs38 424 Crore In Fy26 25 Fold Jump In A Decade Rav

India defense exports growth: ರಕ್ಷಣಾ ರಫ್ತಿನಲ್ಲಿ ಭಾರತ ಸಾರ್ವಕಾಲಿಕ ದಾಖಲೆ! – ಹತ್ತೇ ವರ್ಷದಲ್ಲಿ 25 ಪಟ್ಟು ಏರಿಕೆ! | India S Defence Exports Hit Record Rs38 424 Crore In Fy26 25 Fold Jump In A Decade Rav



India defense exports growth: ರಕ್ಷಣಾ ರಫ್ತಿನಲ್ಲಿ ಭಾರತ ಸಾರ್ವಕಾಲಿಕ ದಾಖಲೆ! – ಹತ್ತೇ ವರ್ಷದಲ್ಲಿ 25 ಪಟ್ಟು ಏರಿಕೆ! | India S Defence Exports Hit Record Rs38 424 Crore In Fy26 25 Fold Jump In A Decade Rav

ಒಂದೊಮ್ಮೆ ರಕ್ಷಣಾ ಉಪಕರಣಗಳಿಗೆ ವಿದೇಶಗಳನ್ನು ಅವಲಂಬಿಸಿದ್ದ ಭಾರತ, ಇದೀಗ ‘ಮೇಕ್ ಇನ್ ಇಂಡಿಯಾ’ ಯೋಜನೆಯ ಯಶಸ್ಸಿನಿಂದಾಗಿ ಪ್ರಮುಖ ರಫ್ತುದಾರನಾಗಿ ಹೊರಹೊಮ್ಮಿದೆ. 2025-26ರಲ್ಲಿ ₹38,424 ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ಮೂಲಕ ಐತಿಹಾಸಿಕ ದಾಖಲೆ ಬರೆದಿದೆ.

– ರಕ್ಷಣಾ ಉಪಕರಣಗಳಿಗೆ ಈ ಮೊದಲು ವಿದೇಶಗಳನ್ನೇ ಅವಲಂಬಿಸಿದ್ದ ಭಾರತ

– ಮೇಕ್‌ ಇನ್‌ ಇಂಡಿಯಾ ಕಾರ್ಯಕ್ರಮದ ಬಳಿಕ ರಫ್ತು ದೇಶವಾಗಿ ಬದಲು

– ಭಾರತದಿಂದ ಅತಿ ಹೆಚ್ಚು ರಕ್ಷಣಾ ಸಲಕರಣೆ ಖರೀದಿಸುವುದು ನೆರೆಯ ಮ್ಯಾನ್ಮಾರ್‌

ನವದೆಹಲಿ (ಏ.5): ಒಂದೊಮ್ಮೆ ತನ್ನ ಸೇನಾ ಬತ್ತಳಿಕೆಯ ಬಲವರ್ಧನೆಗೆ ರಷ್ಯಾ, ಇಸ್ರೇಲ್‌, ಫ್ರಾನ್ಸ್‌, ಅಮೆರಿಕದಂತಹ ಮಿತ್ರ ರಾಷ್ಟ್ರಗಳಿಂದ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುತ್ತಿದ್ದ ಭಾರತವೀಗ ತನ್ನ ಇತಿಹಾಸದಲ್ಲೇ ಅತಿಹೆಚ್ಚು ರಕ್ಷಣಾ ಉಪಕರಣಗಳನ್ನು ರಫ್ತು ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆರಂಭಿಸಿದ ‘ಮೇಕ್‌ ಇನ್‌ ಇಂಡಿಯಾ’ ಯೋಜನೆಯು ಕಳೆದೊಂದು ದಶಕದಲ್ಲಿ ರಕ್ಷಣಾ ವಲಯದಲ್ಲಿ ಭಾರತವು ಸ್ವಾವಲಂಬಿಯಾಗುವುದರ ಜತೆಗೆ ರಕ್ಷಣಾ ರಫ್ತುದಾರನಾಗಿ ಗುರುತಿಸಿಕೊಂಡಿದೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಇತ್ತೀಚಿನ ದಾಖಲೆಗಳ ಅನ್ವಯ, 2025-26ರಲ್ಲಿ ಭಾರತವು 38,424 ಕೋಟಿ ರು. ಮೌಲ್ಯದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಿದೆ. ರಫ್ತು ಈ ಪ್ರಮಾಣ ಮುಟ್ಟಿದ್ದು ಇದೇ ಮೊದಲು ಎಂಬುದು ಗಮನಾರ್ಹ.

25 ಪಟ್ಟು ಹೆಚ್ಚಳ:

2016-17ರಲ್ಲಿ ಭಾರತದ ರಕ್ಷಣಾ ವಲಯದ ರಫ್ತು ಕೇವಲ 1,522 ಕೋಟಿ ರು.ನಷ್ಟು ಇತ್ತು. ಆದರೆ ನಂತರದ ವರ್ಷಗಳಲ್ಲಿ ಈ ಪ್ರಮಾಣ ಹಂತಹಂತವಾಗಿ ಏರುತ್ತಲೇ ಬಂದು ಕಳೆದ ವರ್ಷ ₹38424 ಕೋಟಿಗೆ ತಲುಪಿದೆ. ಅಂದರೆ ರಫ್ತು ಪ್ರಮಾಣ ಕೇವಲ 10 ವರ್ಷದಲ್ಲಿ 25 ಪಟ್ಟು ಹೆಚ್ಚಾಗಿದೆ.

ಯಾವುದು ಹೆಚ್ಚು ರಫ್ತು?

ಭಾರತದ ರಫ್ತಿನಲ್ಲಿ ಶೇ.55ರಷ್ಟು ಹಡಗು, ಶೇ.13ರಷ್ಟು ಫಿರಂಗಿ, ಶೇ.12ರಷ್ಟು ಕ್ಷಿಪಣಿ, ಶೇ.9ರಷ್ಟು ಸೆನ್ಸಾರ್‌, ಶೇ.6ರಷ್ಟು ಯುದ್ಧವಿಮಾನ, ಶೇ.5ರಷ್ಟು ವಾಯುರಕ್ಷಣಾ ವ್ಯವಸ್ಥೆ ಸೇರಿವೆ.

ಖರೀದಿದಾರರು ಯಾರು?:

ಭಾರತದ ರಕ್ಷಣಾ ಉಪಕರಣಗಳ ಒಟ್ಟು ರಫ್ತಿನಲ್ಲಿ ಶೇ.28ರಷ್ಟನ್ನು ಆಮದು ಮಾಡಿಕೊಳ್ಳುವ ಮ್ಯಾನ್ಮಾರ್‌ ಖರೀದಿದಾರರ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ನಂತರ ಫಿಲಿಪ್ಪೀನ್ಸ್‌ ಶೇ.19, ಅರ್ಮೇನಿಯಾ ಶೇ.15, ಶ್ರೀಲಂಕಾ ಶೇ.13, ಮಾರಿಷಸ್‌ ಶೇ.8.3, ಸೀಶೆಲ್ಸ್‌ ಶೇ.6, ವಿಯೆಟ್ನಾಂ ಶೇ.5.5 ಖರೀದಿ ಮಾಡಿವೆ. ಉಳಿದಂತೆ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಮೊರಕ್ಕೋ, ಮಾರಿಷಸ್‌ ಸೇರಿ ಶೇ.5ರಷ್ಟನ್ನು ಕೊಂಡಿವೆ.

ಪ್ರಮುಖ ಖರೀದಿ ದೇಶಗಳು

  • ಮ್ಯಾನ್ಮಾರ್‌
  • ಫಿಲಿಪ್ಪೀನ್ಸ್‌
  • ಅರ್ಮೇನಿಯಾ
  • ಶ್ರೀಲಂಕಾ
  • ಮಾರಿಷಸ್‌
  • ಸೀಶೆಲ್ಸ್‌
  • ವಿಯೆಟ್ನಾಂ

ವರ್ಷ ರಫ್ತು ಪ್ರಮಾಣ

  • 2017 ₹1522 ಕೋಟಿ
  • 2019 ₹10,746 ಕೋಟಿ
  • 2021 ₹8,435 ಕೋಟಿ
  • 2023 ₹15,918 ಕೋಟಿ
  • 2025 ₹23,622 ಕೋಟಿ
  • 2026 38,424 ಕೋಟಿ ರು.



Source link

Leave a Reply

Your email address will not be published. Required fields are marked *