ಅಂಕೋಲಾದಲ್ಲಿ ಎರಡು ಖಾಸಗಿ ಬಸ್-ಲಾರಿ ನಡುವೆ ಭೀಕರ ಅಪಘಾತ! ವಾಹನ ನಜ್ಜುಗುಜ್ಜು, 12 ವಿದೇಶಿಗರಿಗೂ ಗಾಯ | Major Accident On Nh 52 Near Ankola Two Buses And Truck Collision Injures 32 Including 12 Foreigners Kvn

ಅಂಕೋಲಾ ತಾಲೂಕಿನ ಸುಂಕಸಾಳ ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಎರಡು ಬಸ್ ಹಾಗೂ ಲಾರಿ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 12 ವಿದೇಶಿಗರು ಸೇರಿದಂತೆ ಒಟ್ಟು 32 ಮಂದಿ ಗಾಯಗೊಂಡಿದ್ದು, ಹೆದ್ದಾರಿಯಲ್ಲಿ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಅಂಕೋಲಾ: ಹಂಪಿಯಿಂದ ಗೋವಾ ಕಡೆ ಹೋಗುತ್ತಿದ್ದ ಸೀ ಬರ್ಡ್ ಬಸ್ ಹಾಗೂ ಹುಬ್ಬಳ್ಳಿ ಕಡೆಯಿಂದ ಮಂಗಳೂರು ಕಡೆ ಚಲಿಸುತ್ತಿದ್ದ ಗಣೇಶ ಬಸ್ ಹಾಗೂ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆ ಚಲಿಸುತ್ತಿದ್ದ ಲಾರಿ ನಡುವೆ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ 8 ಮಂದಿಗೆ ಗಂಭೀರ ಗಾಯಗಳಾಗಿದ್ದು, 24 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆಯು ಅಂಕೋಲಾ ತಾಲೂಕಿನ ಸುಂಕಸಾಳ ಮೂಲೆಮನೆ ಎಂಬಲ್ಲಿ ನಡೆದಿದೆ.

12 ವಿದೇಶಿಗರಿಗೂ ಗಾಯ

ಈ ಘಟನೆಯಿಂದ ಎರಡು ಬಸ್‌ಗಳು ಹಾಗೂ ಲಾರಿಯ ಮುಂಬಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಈ ಅಪಘಾತದಲ್ಲಿ ಗಾಯಗೊಂಡಿರುವವರ ಪೈಕಿ 12 ಮಂದಿ ವಿದೇಶಿಯರು ಇದ್ದಾರೆ. ಗಂಭೀರವಾಗಿ ಗಾಯಗೊಂಡ ಎಂಟು ಮಂದಿಯನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ 24 ಗಾಯಾಳುಗಳು ಅಂಕೋಲಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದಿಂದ ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್:

ಇನ್ನು ಈ ಸರಣಿ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಆಗಿದೆ. ಅರಬೈಲ್ ಘಟ್ಟದಲ್ಲಿಯೂ ಸುಮಾರು ಐದು ತಾಸುಗಳ ಕಾಲ ವಾಹನಗಳು ಸಾಲುಗಟ್ಟಿನಿಂತಿವೆ. ಇದಾದ ಬಳಿಕ ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನ ತೆರವು ಕಾರ್ಯಚರಣೆ ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಇದೀಗ ಈ ಘಟನೆಯ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source link

Leave a Reply

Your email address will not be published. Required fields are marked *