Tilak Varma Trolled: 2026ರ ಟಿ20 ವಿಶ್ವಕಪ್ನಲ್ಲಿ ಕಳಪೆ ಸ್ಟ್ರೈಕ್ ರೇಟ್ಗಾಗಿ ಟೀಂ ಇಂಡಿಯಾ ಆಟಗಾರ ತಿಲಕ್ ವರ್ಮಾ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವರ ಬದಲು ಸಂಜು ಸ್ಯಾಮ್ಸನ್ಗೆ ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಅಹಮದಾಬಾದ್: 2026ರ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ಯುವ ಆಟಗಾರ ತಿಲಕ್ ವರ್ಮಾ ಕಳಪೆ ಫಾರ್ಮ್ ಮುಂದುವರಿಸಿದ್ದಾರೆ. ನೆದರ್ಲ್ಯಾಂಡ್ಸ್ ವಿರುದ್ಧದ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ತಿಲಕ್ 27 ಎಸೆತಗಳಲ್ಲಿ ಕೇವಲ 31 ರನ್ ಗಳಿಸಿದರು. ಇದಕ್ಕೂ ಮುನ್ನ ಆಡಿದ ಮೂರು ಪಂದ್ಯಗಳಲ್ಲಿ ತಲಾ 25 ರನ್ ಗಳಿಸಿದ್ದರು. ಒಟ್ಟಾರೆ 106 ರನ್ ಗಳಿಸಿದ್ದರೂ, ಅವರ ಸ್ಟ್ರೈಕ್ ರೇಟ್ ಮಾತ್ರ ತೀರಾ ಕಳಪೆಯಾಗಿದೆ. ಇದರಿಂದಾಗಿ ತಿಲಕ್ನನ್ನು ತಂಡದಿಂದ ಕೈಬಿಟ್ಟು ಸಂಜು ಸ್ಯಾಮ್ಸನ್ಗೆ ಅವಕಾಶ ನೀಡಬೇಕೆಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಟ್ರಾಲ್
ಸೋಶಿಯಲ್ ಮೀಡಿಯಾದಲ್ಲಿ ಹಲವರು ತಿಲಕ್ ವರ್ಮಾರನ್ನು ‘ಟಿಕ್-ಟಿಕ್’ ಬ್ಯಾಟರ್ ಎಂದು ಲೇವಡಿ ಮಾಡುತ್ತಿದ್ದಾರೆ. ಟಿ20 ಮಾದರಿಗೆ ಬೇಕಾದ ವೇಗದಲ್ಲಿ ರನ್ ಗಳಿಸಲು ತಿಲಕ್ಗೆ ಸಾಧ್ಯವಾಗುತ್ತಿಲ್ಲ. ಅವರ ಬದಲು ಕನ್ನಡಿಗ ಕೆ.ಎಲ್. ರಾಹುಲ್ ಆಡುವ ರೀತಿಯಲ್ಲೇ ಆಕ್ರಮಣಕಾರಿ ಆಟಗಾರನಾದ ಮಲಯಾಳಿ ಹುಡುಗ ಸಂಜು ಸ್ಯಾಮ್ಸನ್ರನ್ನು ಪ್ಲೇಯಿಂಗ್ ಇಲೆವೆನ್ಗೆ ಸೇರಿಸಿಕೊಳ್ಳಬೇಕು ಎಂಬುದು ಅಭಿಮಾನಿಗಳ ಪ್ರಮುಖ ಬೇಡಿಕೆಯಾಗಿದೆ. ತಿಲಕ್ ವಿರುದ್ಧ ಬಂದಿರುವ ಕೆಲವು ಟ್ರೋಲ್ಗಳು ಇಲ್ಲಿವೆ…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ತಿಲಕ್ ವರ್ಮಾ 31 ರನ್ ಗಳಿಸಿದರೂ, ಅವರ ಸ್ಟ್ರೈಕ್ ರೇಟ್ ತುಂಬಾ ಕಡಿಮೆ ಇತ್ತು. ಇದು ತಂಡದ ಸ್ಕೋರಿಂಗ್ ವೇಗಕ್ಕೆ ಹೊಡೆತ ನೀಡಿತು ಎಂದು ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ತಿಲಕ್ ವಿರುದ್ಧ ದೊಡ್ಡ ಮಟ್ಟದ ಟೀಕೆಗಳು ವ್ಯಕ್ತವಾಗುತ್ತಿವೆ. ಸಂಜು ಸ್ಯಾಮ್ಸನ್ ಅವರಂತಹ ಅದ್ಭುತ ಆಟಗಾರನನ್ನು ಬೆಂಚ್ನಲ್ಲಿ ಕೂರಿಸಿ, ಫಾರ್ಮ್ನಲ್ಲಿ ಇಲ್ಲದ ಆಟಗಾರರಿಗೆ ಯಾಕೆ ಅವಕಾಶ ಕೊಡುತ್ತಿದ್ದೀರಿ ಎಂದು ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ.
ಥಾಮ್ಸನ್ ಪರ ಬ್ಯಾಟಿಂಗ್
ಟೀಂ ಇಂಡಿಯಾ ಈಗಾಗಲೇ ಸೂಪರ್ 8 ಹಂತಕ್ಕೆ ಕ್ವಾಲಿಫೈ ಆಗಿರುವಾಗ, ಸಂಜು ಸ್ಯಾಮ್ಸನ್ ಅವರಂತಹ ಅಟ್ಯಾಕಿಂಗ್ ಆಟಗಾರನಿಗೆ ಒಂದು ಅವಕಾಶ ನೀಡಬೇಕಿತ್ತು ಎಂದು ಅಭಿಮಾನಿಗಳು ವಾದಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈ ವಿಶ್ವಕಪ್ನಲ್ಲಿ ಸಿಕ್ಕ ಒಂದೇ ಒಂದು ಅವಕಾಶದಲ್ಲಿ ಸಂಜು ಕೇವಲ 8 ಎಸೆತಗಳಲ್ಲಿ 22 ರನ್ ಚಚ್ಚಿದ್ದರು. ನಮೀಬಿಯಾ ವಿರುದ್ಧ ಈ ಪಂದ್ಯ ನಡೆದಿತ್ತು. ನಂತರ, ಅಭಿಷೇಕ್ ಶರ್ಮಾ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸ್ ಬಂದಾಗ ಸಂಜುಗೆ ಸ್ಥಾನ ತಪ್ಪಿತ್ತು.
