Headlines

Hubballi: ಲವ್ ಜಿಹಾದ್ ಕೇಸ್‌ಗೆ ಬಿಗ್ ಟ್ವಿಸ್ಟ್: ಬೆಳಗ್ಗೆ ಲೈಂಗಿಕ ದೌರ್ಜನ್ಯ ಎಂದಿದ್ದ ಯುವತಿಯೇ ರಾತ್ರಿ ಉಲ್ಟಾ! | Hubballi Love Jihad Big Twist Hindu Girl Youturned Assault Case Rav

ಅನ್ಯ ಕೋಮಿನ ಯುವಕನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಹುಬ್ಬಳ್ಳಿಯ ಯುವತಿಯೊಬ್ಬಳು, ತನ್ನ ಹೇಳಿಕೆಯನ್ನು ಬದಲಿಸಿದ್ದಾಳೆ. ತನಗೆ ಒತ್ತಾಯಪೂರ್ವಕವಾಗಿ ದೂರು ನೀಡುವಂತೆ ಮಾಡಲಾಗಿತ್ತು ಎಂದು ಆರೋಪಿಸಿದ್ದು, ಯುವಕನೊಂದಿಗೆ ಸ್ವಯಂ ಪ್ರೇರಣೆಯಿಂದ ಮದುವೆಗೆ ಒಪ್ಪಿದ್ದಾಗಿ ವಿಡಿಯೋ ಬಹಿರಂಗ

ಹುಬ್ಬಳ್ಳಿ (ಏ.7): ಬೆಳಗ್ಗೆಯಷ್ಟೇ ಅನ್ಯ ಕೋಮಿನ ಯುವಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದ ಯುವತಿ ಸಂಜೆ ಉಲ್ಟಾ ಹೊಡೆದಿದ್ದಾಳೆ. ಯುವಕನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ನನಗೆ ಒತ್ತಾಯಪೂರ್ವಕವಾಗಿ ಹೇಳಿಕೆ ನೀಡುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ.

ಪ್ರಕರಣ ದಾಖಲಿಸಿದ ವೇಳೆ ಸ್ವತಃ ಸಂತ್ರಸ್ತೆ ಮಾತನಾಡಿದ ವಿಡಿಯೋ ಹೊರಬಿದ್ದಿತ್ತು. ಅದರಲ್ಲಿ ಸಂತ್ರಸ್ತೆ ಮಾತನಾಡಿ, ಮುಫೀಜ್‌ ಮತ್ತು ನಾನು ಪ್ರೀತಿಸಿದೆವು. ತಂದೆ-ತಾಯಿ ತಿಳಿ ಹೇಳಿದ್ದಕ್ಕೆ ಬ್ರೇಕ್ ಮಾಡಿಕೊಂಡೆ. ಮದುವೆ ರಿಜಿಸ್ಟ್ರೇಷನ್ ರದ್ದುಗೊಳಿಸಲು ಅಫೀಲು ಮಾಡಿದ್ದೇನೆ. ಆದರೆ, ಆತನ ಬಳಿ ಇರುವ ಮೊಬೈಲ್, ಪೆನ್‌ಡ್ರೈವ್, ಲ್ಯಾಪ್‌ಟಾಪ್‌ನಲ್ಲಿ ಜತೆಗಿರುವ ಫೋಟೋ, ವಿಡಿಯೋ ಇದೆ. ಪೊಲೀಸರು ಅವುಗಳನ್ನು ನನಗೆ ಕೊಡಿಸಬೇಕು ಎಂದು ಒತ್ತಾಯಿಸಿದ್ದಳು.

ಏತನ್ಮಧ್ಯೆ, ಸ್ವತಃ ಯುವತಿಯೇ ಮಾತನಾಡಿರುವ ಬೇರೆ ವಿಡಿಯೋಗಳು ಭಾನುವಾರ ಸಂಜೆ ಬಹಿರಂಗೊಂಡಿವೆ. ಸಂತ್ರಸ್ತೆಯ ಮತ್ತೊಂದು ವಿಡಿಯೋದಲ್ಲಿ, ಮುಫೀಜ್ ವಿರುದ್ಧ ಪ್ರಕಣ ದಾಖಲಿಸಲು ನನ್ನ ಒಪ್ಪಿಗೆ ಇರಲಿಲ್ಲ. ಕೆಲವರು ಬಲವಂತವಾಗಿ ಪ್ರಕರಣ ದಾಖಲಿಸುವಂತೆ ಮಾಡಿದ್ದಾರೆ. ಮುಫೀಜ್ ಜತೆಗೆ ಸ್ವಯಂ ಪ್ರೇರಣೆಯಿಂದ ಮದುವೆಗೆ ಮುಂದಾಗಿದ್ದಾಗ ಆತನ ಕುಟುಂಬಸ್ಥರು ನಿರಾಕರಿಸಿದ್ದರು. ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದೆವು. ರಿಜಿಸ್ಟರ್‌ ಮದುವೆ ಆಗಲು ಅವರು ಒಪ್ಪಿಗೆ ಸೂಚಿಸಿದ್ದರು. ಹಾಗೆಯೇ ನಾನು ಕೂಡ ರಿಜಿಸ್ಟ್ರಾರ್‌ ಆಫೀಸ್‌ನಲ್ಲಿ ಮದುವೆಗೆ ಒಪ್ಪಿಗೆ ಸೂಚಿಸಿ ಸಹಿ ಕೂಡ ಮಾಡಿದ್ದೇನೆ. ಇದರಲ್ಲಿ ಅವರ ಕುಟುಂಬದ ಪಾತ್ರವೇನೂ ಇಲ್ಲ ಎಂದು ಹೇಳಿಕೊಂಡಿದ್ದಾಳೆ.

Source link

Leave a Reply

Your email address will not be published. Required fields are marked *