Headlines

RERA: ರೇರಾದಿಂದ ಬಿಲ್ಡರ್‌ ಮಾತ್ರ ಲಾಭ ಆಗ್ತಿದೆ : ಸುಪ್ರೀಂ ಕೋರ್ಟ್ ಗರಂ | ಏನಿದು ಪ್ರಕರಣ? | Supreme Court Slams Rera Better To Abolish It As It Only Benefits Defaulting Builders

RERA: ರೇರಾದಿಂದ ಬಿಲ್ಡರ್‌ ಮಾತ್ರ ಲಾಭ ಆಗ್ತಿದೆ : ಸುಪ್ರೀಂ ಕೋರ್ಟ್ ಗರಂ | ಏನಿದು ಪ್ರಕರಣ? | Supreme Court Slams Rera Better To Abolish It As It Only Benefits Defaulting Builders


ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೆರಾ) ಬಿಲ್ಡರ್‌ಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಸುಪ್ರೀಂ ಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಹಿಮಾಚಲ ಪ್ರದೇಶದ ಪ್ರಕರಣವೊಂದರ ವಿಚಾರಣೆ ವೇಳೆ, ರೆರಾ ಸ್ಥಾಪನೆಯ ಬಗ್ಗೆ ಎಲ್ಲಾ ರಾಜ್ಯಗಳು ಮರುಪರಿಶೀಲನೆ ನಡೆಸುವ ಸಮಯ ಬಂದಿದೆ ಎಂದು ಪೀಠ ಅಭಿಪ್ರಾಯ

ನವದೆಹಲಿ: ‘ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು (ರೆರಾ) ಬಿಲ್ಡರ್‌ಗಳಿಗೆ ಅನುಕೂಲ ಮಾಡಿಕೊಡುತ್ತಿದೆಯೇ ಹೊರತು ಬೇರೇನೂ ಮಾಡುತ್ತಿಲ್ಲ. ಇದರ ಸ್ಥಾಪನೆ ಬಗ್ಗೆ ಎಲ್ಲಾ ರಾಜ್ಯಗಳು ಮರುಪರಿಶೀಲನೆ ನಡೆಸುವ ಸಮಯ ಬಂದಿದೆ’ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಬೇಸರ ವ್ಯಕ್ತಪಡಿಸಿದೆ.

ಶಿಮ್ಲಾದಿಂದ ಧರ್ಮಶಾಲಾಕ್ಕೆ ಸ್ಥಳಾಂತರಿಸುವ ವಿಷಯ

ಹಿಮಾಚಲ ಪ್ರದೇಶದ ರೇರಾ ಕಚೇರಿಯನ್ನು ಶಿಮ್ಲಾದಿಂದ ಧರ್ಮಶಾಲಾಕ್ಕೆ ಸ್ಥಳಾಂತರಿಸುವ ವಿಷಯದಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಹಿಮಾಚಲ ಸರ್ಕಾರ ಮತ್ತು ಇತರರು ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಸೂರ್ಯಕಾಂತ್‌ ಹಾಗೂ ನ್ಯಾ. ಜಯಮಾಲ್ಯ ಬಾಗ್ಚಿ ಅವರಿದ್ದ ಪೀಠ, ‘ರೇರಾವನ್ನು ಯಾರಿಗಾಗಿ ಸ್ಥಾಪಿಸಲಾಗಿದೆಯೋ ಅವರು ಸಂಪೂರ್ಣ ಬೇಸರಗೊಂಡಿದ್ದು, ನಿರಾಶರಾಗಿದ್ದಾರೆ.

ಬಿಲ್ಡರ್‌ಗಳಿಗೆ ಅನುಕೂಲ

ಈ ಸಂಸ್ಥೆಯು ಬಿಲ್ಡರ್‌ಗಳಿಗೆ ಅನುಕೂಲ ಮಾಡುವುದನ್ನು ಬಿಟ್ಟು ಬೇರೇನನ್ನೂ ಮಾಡುತ್ತಿಲ್ಲ. ಇದನ್ನು ರದ್ದುಗೊಳಿಸುವುದೇ ಉತ್ತಮ, ಅದಕ್ಕೆ ನಮಗೆ ಅದರ ಬಗ್ಗೆ ಅಭ್ಯಂತರವಿಲ್ಲ’ ಎಂದಿತು. ಜೊತೆಗೆ, ‘ರೇರಾ ಸಂಸ್ಥೆಯ ಚಾಲನೆ ಬಗ್ಗೆ ಎಲ್ಲಾ ರಾಜ್ಯಗಳು ಮರುಚಿಂತನೆ ನಡೆಸಲು ಇದು ಸಕಾಲ’ ಎಂದು ಅಭಿಪ್ರಾಯಪಟ್ಟಿತು.

ಏನಿದು ರೇರಾ?: ರೇರಾ (ಆರ್‌ಇಆರ್‌ಎ) ಎಂದರೆ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ. ರಿಯಲ್ ಎಸ್ಟೇಟ್ ವಲಯವನ್ನು ನಿಯಂತ್ರಿಸಲು, ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಮನೆ ಖರೀದಿದಾರರನ್ನು ರಕ್ಷಿಸಲು 2016 ರಲ್ಲಿ ಭಾರತೀಯ ಸಂಸತ್ತು ಅಂಗೀಕರಿಸಿದ ಒಂದು ಮಹತ್ವದ ಕಾಯ್ದೆ. ಇದರನ್ವಯ ಬಿಲ್ಡರ್‌ಗಳು ಅದರಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ನಿಯಮಾನುಸಾರ ಮನೆ ನಿರ್ಮಿಸಬೇಕು. ನಿಗದಿತ ಅವಧಿಯಲ್ಲಿ ಮನೆಗಳನ್ನು ಖರೀದಿದಾರರಿಗೆ ಹಸ್ತಾಂತರಿಸಬೇಕು ಎಂಬ ಇತ್ಯಾದಿ ನಿಯಮಗಳಿವೆ.

YouTube video player



Source link

Leave a Reply

Your email address will not be published. Required fields are marked *