ಯೋಗೇಶ್ ಗೌಡ ಕೊಂದ 16 ಮಂದಿಗೆ ಜೀವಾವಧಿ, ವಿನಯ್ ಕುಲಕರ್ಣಿ ಮುಂದಿನ ಆಯ್ಕೆಗಳೇನು? ಜೀವಾವಧಿ ಶಿಕ್ಷೆ ಎಂದರೇನು? | What Is Mean By Life Sentence Vinay Kulkarni And Others Gets Life Sentence In Dharwad Yogesh Gowda Murder Case Gdp

ಯೋಗೇಶ್ ಗೌಡ ಕೊಂದ 16 ಮಂದಿಗೆ ಜೀವಾವಧಿ, ವಿನಯ್ ಕುಲಕರ್ಣಿ ಮುಂದಿನ ಆಯ್ಕೆಗಳೇನು? ಜೀವಾವಧಿ ಶಿಕ್ಷೆ ಎಂದರೇನು? | What Is Mean By Life Sentence Vinay Kulkarni And Others Gets Life Sentence In Dharwad Yogesh Gowda Murder Case Gdp



ಯೋಗೇಶ್ ಗೌಡ ಕೊಂದ 16 ಮಂದಿಗೆ ಜೀವಾವಧಿ, ವಿನಯ್ ಕುಲಕರ್ಣಿ ಮುಂದಿನ ಆಯ್ಕೆಗಳೇನು? ಜೀವಾವಧಿ ಶಿಕ್ಷೆ ಎಂದರೇನು? | What Is Mean By Life Sentence Vinay Kulkarni And Others Gets Life Sentence In Dharwad Yogesh Gowda Murder Case Gdp

ಧಾರವಾಡದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ 16 ಆರೋಪಿಗಳಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಸುಮಾರು 10 ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಈ ತೀರ್ಪು ಹೊರಬಿದ್ದಿದ್ದು, ಪ್ರತಿಯೊಬ್ಬ ಆರೋಪಿಗೂ ₹1 ಲಕ್ಷ ದಂಡವನ್ನೂ ವಿಧಿಸಲಾಗಿದೆ. ಇದೇ ಪ್ರಕರಣದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗೆ 7 ವರ್ಷಗಳ ಜೈಲು ಶಿಕ್ಷೆಯಾಗಿದೆ.

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಧಾರವಾಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದ್ದು, ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿ ಸೇರಿ 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿದೆ. ಜೊತೆಗೆ ಪ್ರತಿಯೊಬ್ಬ ಆರೋಪಿಗೂ ₹1 ಲಕ್ಷದಂತೆ ಒಟ್ಟು ₹16 ಲಕ್ಷ ದಂಡ ವಿಧಿಸಲಾಗಿದ್ದು, ಈ ಮೊತ್ತವನ್ನು ಯೋಗೇಶ್ ಗೌಡ ಅವರ ಮಕ್ಕಳಿಗೆ ಹಾಗೂ ಅವರ ಸಹೋದರ ಗುರುನಾಥ್ ಗೌಡ ಅವರಿಗೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಚನ್ನಕೇಶವ ಟಿಂಗರೀಕರ್ ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ ₹30,000 ದಂಡ ವಿಧಿಸಲಾಗಿದೆ.

ಜೀವಾವಧಿ ಶಿಕ್ಷೆ ಎಂದರೆ ಏನು?

ಜೀವಾವಧಿ ಶಿಕ್ಷೆ ಎಂದರೆ ಅಪರಾಧಿಯು ತನ್ನ ನೈಸರ್ಗಿಕ ಜೀವಿತಾವಧಿಯ ಅಂತ್ಯದವರೆಗೆ ಜೈಲಿನಲ್ಲಿ ಇರಬೇಕಾದ ಶಿಕ್ಷೆಯಾಗಿದೆ. ಇದು ಕೇವಲ 14 ಅಥವಾ 20 ವರ್ಷಗಳ ಶಿಕ್ಷೆಯಲ್ಲ. ವ್ಯಕ್ತಿ ಜೀವಿಸುವವರೆಗೂ ಜೈಲಿನಲ್ಲೇ ಇರಬೇಕಾಗುತ್ತದೆ. ಕೆಲವು ವಿಶೇಷ ಸಂದರ್ಭಗಳಲ್ಲಿ, ಸರ್ಕಾರ ಸನ್ನಡತೆ ಆಧಾರವಾಗಿ ಶಿಕ್ಷೆಯನ್ನು ಕಡಿಮೆ ಮಾಡಬಹುದು ಅಥವಾ ಪೆರೋಲ್ ನೀಡಬಹುದು. ಆದರೆ ಇದು ಕಡ್ಡಾಯವಲ್ಲ. ಸಾಮಾನ್ಯವಾಗಿ ಕೊಲೆ, ಭಯೋತ್ಪಾದನೆ, ಲೈಂಗಿಕ ದೌರ್ಜನ್ಯ ಹಾಗೂ ರಾಷ್ಟ್ರದ್ರೋಹದಂತಹ ಗಂಭೀರ ಅಪರಾಧಗಳಿಗೆ ಈ ಶಿಕ್ಷೆ ವಿಧಿಸಲಾಗುತ್ತದೆ.

ಅಪರಾಧಿಗಳ ಮುಂದಿರುವ ಆಯ್ಕೆಗಳೇನು?

ಜೀವಾವಧಿ ಶಿಕ್ಷೆಗೆ ಒಳಗಾಗಿರುವ 16 ಅಪರಾಧಿಗಳು ಮತ್ತು 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ A19 ಅಪರಾಧಿಗೆ ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮೆಟ್ಟಲೇರುವ ಅವಕಾಶವಿದ್ದು, ಅದಾಗಲೇ ಅಪರಾಧಿಗಳ ವಕೀಲರು ಈ ಬಗ್ಗೆ ಮುಂದಿನ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ದೀರ್ಘಕಾಲದ ವಿಚಾರಣೆಗೆ ತೆರೆ

2016ರ ಜೂನ್‌ನಲ್ಲಿ ನಡೆದ ಈ ಹತ್ಯೆ ಪ್ರಕರಣವು ಸುಮಾರು 10 ವರ್ಷಗಳ ಕಾಲ ಸುದೀರ್ಘ ವಿಚಾರಣೆಗೆ ಒಳಪಟ್ಟಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, 17 ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಶಿಕ್ಷೆ ಪ್ರಕಟಿಸಿದ್ದಾರೆ. ಜತೆಗೆ ಸಿಬಿಐ ಅಧಿಕಾರಿಗಳ ತನಿಖೆಯನ್ನು ಅಭಿನಂದಿಸಿದರು.

ಶಿಕ್ಷೆಗೆ ಗುರಿಯಾದ ಪ್ರಮುಖ ಆರೋಪಿಗಳು

ವಿನಯ್ ಕುಲಕರ್ಣಿ (A15) ಸೇರಿದಂತೆ ವಿಕ್ರಂ ಬಳ್ಳಾರಿ, ಕೀರ್ತಿ ಕುಮಾರ್, ಸಂದೀಪ್, ವಿನಾಯಕ, ಮಹಾಬಲೇಶ್ವರ, ಸಂತೋಷ್, ದಿನೇಶ್, ಅಶ್ವತ್ಥ್, ಸುನೀಲ್, ನಜೀರ್ ಅಹ್ಮದ್, ಶಹನವಾಜ್, ನೂತನ್, ಹರ್ಷಿತ್, ಚಂದ್ರಶೇಖರ್ ಇಂಡಿ ಮತ್ತು ವಿಕಾಸ್ ಕಲಬುರಗಿ ಸೇರಿದಂತೆ ಒಟ್ಟು 16 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. A19 ಅಪರಾಧಿಗೆ 7 ವರ್ಷ ಜೈಲು ಶಿಕ್ಷೆಯಾಗಿದೆ. A1 ಬಸವರಾಜ್ ಮುತ್ತಗಿ ಮತ್ತು A17 ಶಿವಾನಂದ್ ಶ್ರೀಶೈಲ ಬಿರಾದರ್ ಅವರನ್ನು ಮಾಫಿ ಸಾಕ್ಷಿಗಳಾಗಿ ಪರಿಗಣಿಸಲಾಗಿದೆ.

ಯಾವ ಸೆಕ್ಷನ್ ಅಡಿಯಲ್ಲಿ ಶಿಕ್ಷೆ?

ನ್ಯಾಯಾಲಯವು ಆರೋಪಿಗಳಿಗೆ ವಿವಿಧ ಭಾರತೀಯ ದಂಡ ಸಂಹಿತೆ (IPC) ವಿಧಿಗಳಡಿ ಶಿಕ್ಷೆ ವಿಧಿಸಿದೆ:

ಕಲಂ 302 (ಕೊಲೆ): ಜೀವಾವಧಿ ಶಿಕ್ಷೆ

ಕಲಂ 120(B) (ಅಪರಾಧಿಕ ಸಂಚು): ಜೀವಾವಧಿ ಶಿಕ್ಷೆ

ಕಲಂ 201 (ಸಾಕ್ಷ್ಯ ನಾಶ): 7 ವರ್ಷ ಜೈಲು ಶಿಕ್ಷೆ ಹಾಗೂ ದಂಡ

ಕಲಂ 143, 147, 148, 149 (ಅಕ್ರಮ ಕೂಟ, ಗಲಭೆ, ಆಯುಧಗಳಿಂದ ದಾಳಿ): 3 ವರ್ಷಗಳವರೆಗೆ ಶಿಕ್ಷೆ

ಚನ್ನಕೇಶವ ಟಿಂಗರೀಕರ್ (A19) ವಿರುದ್ಧ ಕಲಂ 218 ಅಡಿಯಲ್ಲಿ, ತಪ್ಪು ದಾಖಲೆ ಸೃಷ್ಟಿಸಿ ಆರೋಪಿಗಳಿಗೆ ಸಹಾಯ ಮಾಡಿದ ಆರೋಪ ಸಾಬೀತಾಗಿ ಶಿಕ್ಷೆ ವಿಧಿಸಲಾಗಿದೆ.

ಯಾವ ಸೆಕ್ಷನ್‌ ಯಾರ ಮೇಲೆ?

ಪ್ರಕರಣದ 2 ರಿಂದ 16 ಮತ್ತು 18ನೇ ಆರೋಪಿಗಳು ಭಾರತೀಯ ದಂಡ ಸಂಹಿತೆ 302 (ಕೊಲೆ) ಆರೋಪದಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಸಗಿ ಶಿಕ್ಷೆಗೊಳಗಾಗಿದ್ದಾರೆ. (ಯಾರೆಲ್ಲ A2 – ವಿಕ್ರಂ ಬಳ್ಳಾರಿ, A3 – ಕೀರ್ತಿ ಕುಮಾರ್​, A4 – ಸಂದೀಪ್​, A5 – ವಿನಾಯಕ್, ​​A6 – ಮಹಾಬಲೇಶ್ವರ, A7 – ಸಂತೋಷ್, A8 – ದಿನೇಶ್​​, A9 – ಅಶ್ವಥ್​​, A10 – ಸುನೀಲ್​​ ಕೆ.ಎಸ್​, A11 – ನಜರ್ ಅಹಮದ್​, A12 – ಶಹನವಾಜ್​​, A13 – ನೂತನ್, ​​A14 – ಹರ್ಷಿತ್, ​​A15 – ವಿನಯ್ ಕುಲಕರ್ಣಿ, A16 – ಚಂದ್ರಶೇಖರ್​ ಇಂಡಿ ಮತ್ತು ​A18 – ವಿಕಾಸ್​​ ಕಲಬುರ್ಗಿ )

ಹಾಗೆಯೇ 2 ರಿಂದ 16 ಮತ್ತು 18 ಹಾಗೂ 19ನೇ ಆರೋಪಿಗಳು 120 (ಬಿ) (ಅಪರಾಧಿಕ ಒಳ ಸಂಚು) ರೂಪಿಸಿದ್ದಾರೆ ಮತ್ತು ಮತ್ತು 201 (ಸಾಕ್ಷ್ಯ ನಾಶ ಪಡಿಸಿದ್ದಾರೆ. (ಯಾರೆಲ್ಲ A2 – ವಿಕ್ರಂ ಬಳ್ಳಾರಿ, A3 – ಕೀರ್ತಿ ಕುಮಾರ್​, A4 – ಸಂದೀಪ್​, A5 – ವಿನಾಯಕ್, ​​A6 – ಮಹಾಬಲೇಶ್ವರ, A7 – ಸಂತೋಷ್, A8 – ದಿನೇಶ್​​, A9 – ಅಶ್ವಥ್​​, A10 – ಸುನೀಲ್​​ ಕೆ.ಎಸ್​, A11 – ನಜರ್ ಅಹಮದ್​, A12 – ಶಹನವಾಜ್​​, A13 – ನೂತನ್, ​​A14 – ಹರ್ಷಿತ್, ​​A15 – ವಿನಯ್ ಕುಲಕರ್ಣಿ, A16 – ಚಂದ್ರಶೇಖರ್​ ಇಂಡಿ ಮತ್ತು ​A18 – ವಿಕಾಸ್​​ ಕಲಬುರ್ಗಿ ಮತ್ತು A19 – ಚೆನ್ನಕೇಶವ ಟಿಂಗರಿಕರ್).

ಇನ್ನು ಆರೋಪಿ 2 ರಿಂದ 14 ಮತ್ತು 18ನೇ ಆರೋಪಿಗಳು 143, 149 (ಅಕ್ರಮ ಕೂಟ), 147 (ಗಲಭೆ), 148 (ಆಯುಧಗಳಿಂದ ಕೃತ್ಯ) ಎಸಗಿದ್ದಾರೆ. ( ಯಾರೆಲ್ಲ A2 – ವಿಕ್ರಂ ಬಳ್ಳಾರಿ, A3 – ಕೀರ್ತಿ ಕುಮಾರ್​, A4 – ಸಂದೀಪ್​, A5 – ವಿನಾಯಕ್, ​​A6 – ಮಹಾಬಲೇಶ್ವರ, A7 – ಸಂತೋಷ್, A8 – ದಿನೇಶ್​​, A9 – ಅಶ್ವಥ್​​, A10 – ಸುನೀಲ್​​ ಕೆ.ಎಸ್​, A11 – ನಜರ್ ಅಹಮದ್​, A12 – ಶಹನವಾಜ್​​, A13 – ನೂತನ್, ​​A14 – ಹರ್ಷಿತ್ ಮತ್ತು ​A18 – ವಿಕಾಸ್​​ ಕಲಬುರ್ಗಿ)

19ನೇ ಆರೋಪಿ 218 ಅಡಿಯಲ್ಲಿ ಸಾರ್ವಜನಿಕ ಸೇವೆಯಲ್ಲಿದ್ದು ತಪ್ಪುದಾಖಲೆಗಳನ್ನು ಸೃಷ್ಟಿಸಿ ಆರೋಪಿಯನ್ನು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ. (ಯಾರು A19 – ಚೆನ್ನಕೇಶವ ಟಿಂಗರಿಕರ್)

ರಾಜಕೀಯ ಹಾಗೂ ಕಾನೂನು ಮಹತ್ವ

ಯೋಗೇಶ್ ಗೌಡ ಹತ್ಯೆ ಪ್ರಕರಣದ ಈ ತೀರ್ಪು ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ದೀರ್ಘಕಾಲದ ವಿಚಾರಣೆಯ ನಂತರ ಹೊರಬಿದ್ದ ಈ ತೀರ್ಪು, ರಾಜಕೀಯ ಪ್ರಭಾವದ ಪ್ರಕರಣಗಳಲ್ಲಿಯೂ ನ್ಯಾಯ ಸಿಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿದೆ. ಈ ಪ್ರಕರಣದ ತೀರ್ಪು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಹೇಗಿರಲಿದೆ ಎಂಬುದು ಕಾದು ನೋಡಬೇಕಾಗಿದೆ.



Source link

Leave a Reply

Your email address will not be published. Required fields are marked *