ಗಿಲ್ಲಿ ನಟ ನಟಿಸಿದ ಎಲ್ಲಾ ಸಿನಿಮಾ ಫ್ಲಾಫ್; ಮುಂದೇನು ಎಂದು ಕೈಹೊತ್ತು ಕುಳಿತ ಬಿಗ್‌ ಬಾಸ್ ಚಾಂಪಿಯನ್! | Bigg Boss Winner Gilli At A Crossroads Acting Or Direction After Post Show Slump Kvn

ಗಿಲ್ಲಿ ನಟ ನಟಿಸಿದ ಎಲ್ಲಾ ಸಿನಿಮಾ ಫ್ಲಾಫ್; ಮುಂದೇನು ಎಂದು ಕೈಹೊತ್ತು ಕುಳಿತ ಬಿಗ್‌ ಬಾಸ್ ಚಾಂಪಿಯನ್! | Bigg Boss Winner Gilli At A Crossroads Acting Or Direction After Post Show Slump Kvn


ಬಿಗ್ ಬಾಸ್‌ನಲ್ಲಿ ದಾಖಲೆಯ ಮತಗಳನ್ನು ಪಡೆದು ಗೆದ್ದ ಗಿಲ್ಲಿ ನಟ, ಆ ನಂತರ ಹಲವು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದರು. ಆದರೆ, ಅವರು ನಟಿಸಿದ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ಈ ಹಿನ್ನಡೆಯಿಂದಾಗಿ, ಗಿಲ್ಲಿ ನಟ ಈಗ ಮುಂದೇನು ಮಾಡಬೇಕೆಂಬ ಗಂಭೀರ ಚಿಂತನೆಯಲ್ಲಿದ್ದಾರೆ.

ಬೆಂಗಳೂರು: ಬಿಗ್​ ಬಾಸ್‌ನಲ್ಲಿ ದಾಖಲೆ ವೋಟ್ ಪಡೆದ ಗಿಲ್ಲಿ, ಆ ಬಳಿಕ ಉತ್ಸವ, ಜಾತ್ರೆ, ಶೋ ಅಂತ ಬ್ಯುಸಿಯಾಗಿದ್ದ. ಜೊತೆಗೆ ತಾನು ಮೊದಲು ನಟಿಸಿದ ಚಿತ್ರಗಳ ಪ್ರಮೋಷನ್‌ಗಳನ್ನೂ ಮಾಡಿದ್ದ. ಈಗ ಕೊಂಚ ಬ್ರೇಕ್ ತೆಗೆದುಕೊಂಡಿರೋ ಗಿಲ್ಲಿ ಮುಂದೇನು ಮಾಡೋದು ಅನ್ನೋ ಚಿಂತೆಯಲ್ಲಿ ಮುಳುಗಿದ್ದಾನಂತೆ.

ಉತ್ಸವ, ಜಾತ್ರೆ, ಸನ್ಮಾನ, ಸಿನಿಮಾ ಪ್ರಮೋಷನ್!

ಯೆಸ್, ಬಿಗ್ ಬಾಸ್ ನಲ್ಲಿ ಎಲ್ಲರಿಗೂ ಮೋಡಿ ಮಾಡಿ ದಾಖಲೆ ವೋಟ್ ಪಡೆದು ವಿನ್ನರ್ ಆದವನು ಗಿಲ್ಲಿ ನಟ. ದೊಡ್ಮನೆಯಿಂದ ಹೊರ ಬರ್ತಾನೆ ಸನ್ಮಾನ, ಜಾತ್ರೆ , ಉತ್ಸವ ಅಂತ ಗಿಲ್ಲಿ ಬ್ಯುಸಿಯಾಗಿದ್ದ. ಇನ್ನೂ ಗಿಲ್ಲಿ ನಟ ನಟಿಸಿದ್ದ ಹಳೆಯ ಅನೇಕ ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿದ್ವು. ಸೋ ಸಿನಿಮಾ ಪ್ರಮೋಷನ್‌ಗೆ ಬಾ ಅಂತ ಚಿತ್ರತಂಡಗಳು ಗಿಲ್ಲಿ ಹಿಂದೆ ಬಿದ್ದಿದ್ವು. ಈ ಎಲ್ಲವನ್ನೂ ಮುಗಿಸಿರೋ ಗಿಲ್ಲಿ ಸದ್ಯ ಉಸ್ಸಪ್ಪಾ ಅಂತ ನಿಟ್ಟುಸಿರು ಬಿಟ್ಟಿದ್ದಾನೆ. ಒಂದು ಸಣ್ಣ ಬ್ರೇಕ್​ ತೆಗೆದುಕೊಂಡು ಮುಂದೇನು ಅಂತ ಯೋಚನೆ ಮಾಡ್ತಾ ಇದ್ದಾನೆ.

ಗಿಲ್ಲಿ ನಟಿಸಿದ ಸಿನಿಮಾಗಳೆಲ್ಲಾ ಫ್ಲಾಪ್!

ಹೌದು ಗಿಲ್ಲಿಗೆ ಬಿಗ್ ಬಾಸ್ ನಿಂದ ಸಿಕ್ಕ ಜನಪ್ರಿಯತೆಯನ್ನ ನೋಡಿದವರು ಆತ ನಟಿಸಿದ ಸಿನಿಮಾಗಳ ಪಾಲಿಗೆ ಪ್ಲಸ್ ಆಗುತ್ತೆ ಅಂದುಕೊಂಡಿದ್ರು. ಆದ್ರೆ ಗಿಲ್ಲಿ ನಟಿಸಿದ ಸರ್ಕಾರಿ ಶಾಲೆ ಎಚ್.8 ಆಗಲಿ, ಸೂಪರ್ ಹಿಟ್ ಅನ್ನೋ ಚಿತ್ರವಾಗಲಿ ಸದ್ದು ಮಾಡ್ಲಿಲ್ಲ. ಬಿಗ್ ಬಾಸ್​​ನಲ್ಲಿ ಗಿಲ್ಲಿಯನ್ನ ನೋಡಿ ಮೆಚ್ಚಿದವರು ಬಿಗ್ ಸ್ಕ್ರೀನ್​ನಲ್ಲಿ ಗಿಲ್ಲಿಯನ್ನ ನೋಡ್ಲಿಕ್ಕೆ ಬರಲಿಲ್ಲ.

ಈ ಹಿಂದೆ ಬಿಗ್ ಬಾಸ್ ಗೆದ್ದಿದ್ದ ಪ್ರಥಮ್, ಅದೇ ಫೇಮ್​ನಿಂದ ಸಿನಿಮಾದಲ್ಲೂ ಗೆಲ್ತಿನಿ ಅಂದುಕೊಂಡು ಸಾಲು ಸಾಲು ಸಿನಿಮಾ ಮಾಡಿ ನೆಲಕಚ್ಚಿದ್ದ. ಬಿಗ್ ಬಾಸೇ ಬೇರೆ ಬಿಗ್ ಸ್ಕ್ರೀನ್​​ ನಲ್ಲಿ ಗೆಲ್ಲೋದೇ ಬೇರೆ ಅಂತ ಅರ್ಥವಾಗಿ ಈಗ ಊರು ಸೇರಿದ್ದಾನೆ ಪ್ರಥಮ್. ಸದ್ಯ ಗಿಲ್ಲಿಗೂ ಇಂಥದ್ದೇ ಚಾಲೆಂಜ್ ಎದುರಾಗಿದೆ. ಮುಂದೇನು ಮಾಡಬೇಕು ಅನ್ನೋದು ತಲೆಯಲ್ಲಿ ಕೊರೀತಾ ಇದೆ. ನಿರ್ದೇಶಕನಾಗೋ ತನ್ನ ಆಸೆಗೆ ಗಿಲ್ಲಿ ಚಾಲನೆ ಕೊಡ್ತಾನಾ? ಅಥವಾ ಮತ್ತಷ್ಟು ಕಾಲ ನಟನಾಗಿ ಮುಂದುವರೀತಾನಾ ಕಾದು ನೋಡಬೇಕಿದೆ.

ಫಿಲ್ಮ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್.



Source link

Leave a Reply

Your email address will not be published. Required fields are marked *