Headlines

ಹುಡುಗಿಯರೇ ಹುಷಾರ್​: ನಿಮ್ಮನ್ನು ಟ್ರ್ಯಾಪ್​ ಮಾಡೋ ಹೊಸ ವಿಧಾನವಿದು, ಅರಿಯದೇ ಬಲೆಗೆ ಬೀಳೋದು ಹೇಗೆ ನೋ | New Scam For Ladies In The Name Of Prank Video Where Hindu Girls Trapped Suc

ಹುಡುಗಿಯರೇ ಹುಷಾರ್​: ನಿಮ್ಮನ್ನು ಟ್ರ್ಯಾಪ್​ ಮಾಡೋ ಹೊಸ ವಿಧಾನವಿದು, ಅರಿಯದೇ ಬಲೆಗೆ ಬೀಳೋದು ಹೇಗೆ ನೋ | New Scam For Ladies In The Name Of Prank Video Where Hindu Girls Trapped Suc



ಹುಡುಗಿಯರೇ ಹುಷಾರ್​: ನಿಮ್ಮನ್ನು ಟ್ರ್ಯಾಪ್​ ಮಾಡೋ ಹೊಸ ವಿಧಾನವಿದು, ಅರಿಯದೇ ಬಲೆಗೆ ಬೀಳೋದು ಹೇಗೆ ನೋ | New Scam For Ladies In The Name Of Prank Video Where Hindu Girls Trapped Suc

ಸೋಷಿಯಲ್ ಮೀಡಿಯಾದಲ್ಲಿ ಬೇಗ ಫೇಮಸ್ ಆಗಬೇಕೆಂಬ ಯುವತಿಯರ ಆಸೆಯನ್ನೇ ಬಂಡವಾಳವಾಗಿಸಿಕೊಂಡು ಹೊಸ ರೀತಿಯ ಮೋಸದ ಜಾಲವೊಂದು ಸಕ್ರಿಯವಾಗಿದೆ. ಪ್ರ್ಯಾಂಕ್ ವಿಡಿಯೋಗಳ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಗುರಿಯಾಗಿಸಿಕೊಂಡು, ಅವರನ್ನು ಪ್ರೀತಿಯ ಬಲೆಗೆ ಬೀಳಿಸಿ ಲವ್ ಜಿಹಾದ್ ಅಥವಾ ದೈಹಿಕ ದೌರ್ಜನ್ಯದಂತಹ ಕೃತ್ಯಗಳಿಗೆ ದೂಡಲಾಗುತ್ತಿದೆ.

ಈಗ ಏನಿದ್ದರೂ ಸೋಷಿಯಲ್​ ಮೀಡಿಯಾ ಜಮಾನಾ. ಅದರಲ್ಲಿಯೂ ಜೆನ್​ ಜೀಗಳ ಪೈಕಿ ಹಲವರಿಗೆ ಅದರಲ್ಲೂ ಹೆಚ್ಚಾಗಿ ಹುಡುಗಿಯರಿಗೆ ಬೇಗನೇ ಫೇಮಸ್​ ಆಗುವ ಹಂಬಲ. ಸೋಷಿಯಲ್​ ಮೀಡಿಯಾದಿಂದ ಬಹುಬೇಗನೇ ಫೇಮಸ್​ ಆಗ್ಬೋದು ಎನ್ನೋದು ಅವರಿಗೆ ತಿಳಿದಿದೆ. ಆದರೆ ತಾವು ವಿಡಿಯೋ ಹಾಕಿದಾಗ ಅದನ್ನು ನೋಡುವವರು ಕೆಲವೇ ಮಂದಿ ಎಂದು ಗೊತ್ತಾದಾಗ, ಚಿಂತೆಗೆ ಒಳಗಾಗಿ ಬಹುಬೇಗ ಫೇಮಸ್​​ ಹೇಗೆ ಆಗಬಹುದು ಎಂದು ಚಿಂತಿಸುವ ದೊಡ್ಡ ವರ್ಗವೇ ಇದೆ. ನೀವು ಹೀಗೆ ಚಿಂತಿಸಿ, ಬಿಡಿ. ಆದರೆ ಇದೀಗ ಹೊಸ ರೀತಿಯಲ್ಲಿ ನಿಮ್ಮನ್ನು ಟ್ರ್ಯಾಪ್​ ಮಾಡಲಾಗುತ್ತಿದೆ. ಸುಲಭದಲ್ಲಿ ಮೋಸ ಮಾಡುವ ಹೊಸ ವಿಧಾನವಿದು. ಅದರಲ್ಲಿಯೂ ಇದರಲ್ಲಿ ಇಲ್ಲಿಯವರೆಗೆ ಟಾರ್ಗೆಟ್​ ಆಗಿರುವವರೆಲ್ಲರೂ ಹಿಂದೂ ಹುಡುಗಿಯರೇ ಎನ್ನೋದು ನೆನಪಿರಲಿ!

ಸುಂದರನಿಗೆ ಮರುಳಾಗಿ…

ಅಷ್ಟಕ್ಕೂ ಇದೆಂಥ ಟ್ರ್ಯಾಪ್​ ಅಂತೀರಾ. ಇತ್ತೀಚಿನ ದಿನಗಳಲ್ಲಿ ಪ್ರ್ಯಾಂಕ್​ ವಿಡಿಯೋ ಮಾಡುವುದು ಮಾಮೂಲಾಗಿದೆ. ಯಾರೋ ಒಬ್ಬರು ಬಂದು ಏನನ್ನೋ ಹೇಳಿ, ಆ ಬಳಿಕ ಇದು ಪ್ರ್ಯಾಂಕ್ ವಿಡಿಯೋ, ಅಲ್ಲಿ ನೋಡಿ ನಮ್ಮ ಕ್ಯಾಮೆರಾ ಇದೆ ಎಂದೆಲ್ಲಾ ಹೇಳುತ್ತಾರೆ. ಆದರೆ ಇದೇ ಪ್ರ್ಯಾಂಕ್​ ವಿಡಿಯೋ, ನಿಮ್ಮ ಜೀವನವನ್ನೇ ಹಾಳು ಮಾಡಬಹುದು ಎನ್ನೋದು ಗೊತ್ತಿದ್ಯಾ? ಯಾವುದೋ ಸೋಷಿಯಲ್​ ಮೀಡಿಯಾ ಸ್ಟಾರ್​ ಎಂದುಕೊಂಡು ನಿಮ್ಮ ಎದುರಿಗೆ ಬರುವ ಸ್ಮಾರ್ಟ್​ ಬಾಯ್​ ಮಾತಿಗೆ ಮರುಳಾಗಿ ನೀವು ಪ್ರ್ಯಾಂಕ್​ ವಿಡಿಯೋದಲ್ಲಿ ಭಾಗಿಯಾದರೆ, ನಿಮ್ಮ ಕಥೆ ಮುಗಿಯಿತು.

ಬಹುದೊಡ್ಡ ಜಾಲ

ಅಷ್ಟಕ್ಕೂ ಭಾರತಾದ್ಯಂತ ಈ ಜಾಲ ವಿಸ್ತರಿಸಿದೆ. ಮಹಾನಗರಗಳಲ್ಲಿ, ಮಾಲ್​ಗಳಿಗೆ ಹೋಗುವ ಯುವತಿಯರೇ ಅದರಲ್ಲಿಯೂ ಹಿಂದೂ ಹುಡುಗಿಯರೇ ಇವರ ಟಾರ್ಗೆಟ್​. ಮೊದಲಿಗೆ ಯಾರೋ ಒಬ್ಬ ಸುರಸುಂದರಾಂಗ ನಿಮ್ಮ ಬಳಿ ಬಂದು ಮಾತನಾಡುತ್ತಾನೆ. ಆಮೇಲೆ ನಾನು ಪ್ರ್ಯಾಂಕ್​ ವಿಡಿಯೋ ಮಾಡುತ್ತಿದ್ದೇನೆ. ನಾನು ಇಂಥವನು (ಅಲ್ಲಿ ಹಿಂದೂ ಹೆಸರು ಹೆಚ್ಚಾಗಿ ಹೇಳುತ್ತಾರೆ ಎನ್ನೋದೂ ನೆನಪಿರಲಿ), ಇಷ್ಟು ಫಾಲೋವರ್ಸ್​ ಇದ್ದಾರೆ ಎಂದೆಲ್ಲಾ ಸೋಷಿಯಲ್​ ಮೀಡಿಯಾ ಹ್ಯಾಂಡಲ್​ ತೋರಿಸಿ, ನೀವು ನಮ್ಮ ಪ್ರ್ಯಾಂಕ್ ವಿಡಿಯೋಗೆ ಸಾಥ್​ ಕೊಟ್ಟರೆ ಫೇಮಸ್​ ಆಗ್ಬೋದು ಎನ್ನುತ್ತಾರೆ.

ಇಷ್ಟವಿದೆ ಎಂದರೆ ಮುಗೀತು ಕಥೆ

ಒಂದು ವೇಳೆ ನೀವು ಇದೆಲ್ಲಾ ನನಗೆ ಇಷ್ಟವಿಲ್ಲ ಎಂದು ಹೇಳಿದರೆ, ದೀದೀ ಎಂದೇ ಸಂಬೋಧಿಸಿ ಅತ್ಯಂತ ಗೌರವಯುತವಾಗಿ ಓಕೆ ಎಂದು ಹೋಗುತ್ತಾರೆ. ಅಲ್ಲಿಗೆ ನೀವು ಸೇಫ್​. ಆದರೆ ಇಂದು ಹಾಗಾಗುತ್ತಿಲ್ಲ. ಪ್ರ್ಯಾಂಕ್​ ವಿಡಿಯೋದಿಂದ ಫೇಮಸ್​ ಆಗುವ ಹಂಬಲ ಹಾಗೂ ಆ ಸುರಸುಂದರನ ನೋಟ, ಮಾತು ಎಲ್ಲದ್ದಕ್ಕೂ ಮರುಳಾಗಿ, ಮೇಲಾಗಿ ಆತನಿಗೆ ಇರುವ ಮಿಲಿಯನ್​ಗಟ್ಟಲೆ ಫಾಲೋವರ್ಸ್​ ನೋಡಿ ತಾವೂ ಫೇಮಸ್​ ಆಗ್ಬೋದು ಎಂದುಕೊಂಡು ಅವನ ಜೊತೆ ಪ್ರ್ಯಾಂಕ್ ವಿಡಿಯೋಗೆ ಸಾಥ್​ ಕೊಟ್ಟರೆ ಅಲ್ಲಿಗೆ ನಿಮ್ಮ ನರಕದ ಬಾಳು ಶುರುವಾದಂತೆ. ನಿಮ್ಮ ಸೋಷಿಯಲ್​ ಮೀಡಿಯಾ ಖಾತೆ ಪಡೆದು, ಮೊಬೈಲ್​ ನಂಬರ್​ ಪಡೆದು ಪರಿಚಯ ಮಾಡಿಕೊಂಡು, ಪ್ರೀತಿ, ಪ್ರೇಮ ಎಂದುಕೊಂಡು, ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿರುವ ಲವ್​ ಜಿಹಾದ್​ ಎನ್ನುವ ಹೊಸ ತಂತ್ರಕ್ಕೆ ಅರಿಯದೇ ಹೋಗಬಹುದು. ಇಲ್ಲವೇ ದೈಹಿಕ ದೌರ್ಜನ್ಯ ಎಸಗಿ ಅದರ ವಿಡಿಯೋ ಮಾಡಿಕೊಂಡು ನಿಮ್ಮ ಬದುಕನ್ನೇ ನರಕ ಮಾಡ್ಬೋದು ಹುಷಾರ್.

ಹಿಂದೂ ಹೆಣ್ಣುಮಕ್ಕಳೇ….

ಇಂಥವರು ಯಾರೇ ನಿಮ್ಮ ಬಳಿ ಬಂದರೂ ಸಮಾಧಾನಚಿತ್ತರಾಗಿ ಅವರಿಗೆ ಬೇಡ ಎಂದು ಹೇಳಿ ಕಳುಹಿಸಿದರೆ ನಿಮ್ಮ ಲೈಫ್ ಸೇಫ್​. ಇದು ಹೊಸ ರೀತಿಯ ಲವ್​ ಜಿಹಾದ್​ ಎಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಇದಕ್ಕೆ ಅದೆಷ್ಟೋ ನಗರಗಳ ಯುವತಿಯರು ಬಿದ್ದು ಒದ್ದಾಡುತ್ತಿರುವ ಬಗ್ಗೆ ವರದಿಯಾಗಿದೆ. ಹಿಂದೂ ಹೆಣ್ಣುಮಕ್ಕಳೇ ನೀವು ಎಚ್ಚೆತ್ತುಕೊಳ್ಳದ ಹೊರತು ಯಾರೂ, ಏನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ ಬಲ್ಲವರು



Source link

Leave a Reply

Your email address will not be published. Required fields are marked *