Pushpa 2 ಸಿನಿಮಾದಲ್ಲಿ ನಟಿಸಿ ಯಾಕೆ ಪಶ್ಚಾತ್ತಾಪ ಪಡ್ತಿದ್ದಾರೆ ನಟಿ Divi Vadthya? ಅಷ್ಟಕ್ಕೂ ಆಗಿದ್ದೇನು? | Pushpa 2 Actress Divi Vadthya Expresses Disappointment Over Her Role Gvd

Pushpa 2 ಸಿನಿಮಾದಲ್ಲಿ ನಟಿಸಿ ಯಾಕೆ ಪಶ್ಚಾತ್ತಾಪ ಪಡ್ತಿದ್ದಾರೆ ನಟಿ Divi Vadthya? ಅಷ್ಟಕ್ಕೂ ಆಗಿದ್ದೇನು? | Pushpa 2 Actress Divi Vadthya Expresses Disappointment Over Her Role Gvd


20 ದಿನಗಳ ಕಾಲ ಶೂಟಿಂಗ್‌ನಲ್ಲಿ ಭಾಗವಹಿಸಿದ್ದೇನೆ. ನಾನು ತುಂಬಾ ಚೆನ್ನಾಗಿ ನಟಿಸಿದ್ದೇನೆ ಎಂಬುದು ನನಗೆ ಗೊತ್ತು. ಆದರೆ ಸಿನಿಮಾ ನೋಡಿದ ಮೇಲೆ ನನಗೆ ಆಘಾತವಾಯಿತುವ ಎಂದರು ನಟಿ ದಿವಿ ವಡತ್ಯಾ.

‘ಬಿಗ್ ಬಾಸ್ ತೆಲುಗು ಸೀಸನ್ 4’ರ ಸ್ಪರ್ಧಿಯಾಗಿದ್ದ ನಟಿ ದಿವಿ ವಡತ್ಯಾ, ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2: ದಿ ರೂಲ್’ ಸಿನಿಮಾದಲ್ಲಿ ನಟಿಸಿದ್ದಕ್ಕೆ ತಮಗೆ ಪಶ್ಚಾತ್ತಾಪವಿದೆ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಪಾಡ್‌ಕಾಸ್ಟ್ ಒಂದರಲ್ಲಿ ಅವರು ಈ ಹೇಳಿಕೆ ನೀಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ವಿಶುವಲ್ ಟಾಕ್ಸ್ ಪಾಡ್‌ಕಾಸ್ಟ್‌ನಲ್ಲಿ, ‘ಪುಷ್ಪ 2: ದಿ ರೂಲ್’ ಸಿನಿಮಾದಲ್ಲಿನ ಪೋಷಕ ಪಾತ್ರದಿಂದ ನಿಮಗೆ ಖುಷಿ ಇದೆಯಾ ಎಂದು ಕೇಳಿದಾಗ, ದಿವಿ ವಡತ್ಯಾ, ‘ಖಂಡಿತ ಇಲ್ಲ. ನನಗೆ ಈ ಪಾತ್ರವನ್ನು ಆಫರ್ ಮಾಡಿದಾಗ, ಇದೊಂದು ದೊಡ್ಡ ಪಾತ್ರ ಎಂದು ಹೇಳಿದ್ದರು. ಟೀಸರ್‌ನಲ್ಲಿ ನನ್ನ ಪಾತ್ರವನ್ನು ತೋರಿಸಿದ್ದರಿಂದ ನನ್ನ ನಿರೀಕ್ಷೆಗಳು ಇನ್ನಷ್ಟು ಹೆಚ್ಚಾಗಿದ್ದವು. ಆದರೆ ಸಿನಿಮಾ ರಿಲೀಸ್ ಆದ ಮೇಲೆ ಹಾಗೇನೂ ಆಗಲಿಲ್ಲ ಅನ್ನೋದು ಗೊತ್ತಾಯ್ತು’ ಎಂದು ಹೇಳಿದ್ದಾರೆ.

‘ಹೌದು, ನನಗೆ ಬೇಸರವಾಯ್ತು. ಆದರೆ ನನ್ನ ನೋವಿನ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಾರೆ? ನಾವೇ ನಮ್ಮನ್ನು ಸಮಾಧಾನ ಮಾಡಿಕೊಂಡು ಮುಂದೆ ಸಾಗಬೇಕು. ಸಿನಿಮಾ ನೋಡಿದ ಮೇಲೆ ನನಗೆ ತುಂಬಾ ದುಃಖವಾಯಿತು. ನನ್ನ ಪಾತ್ರ ಚೆನ್ನಾಗಿರುತ್ತೆ ಅಂದುಕೊಂಡು ನನ್ನ 10 ಜನ ಸ್ನೇಹಿತರನ್ನು ಥಿಯೇಟರ್‌ಗೆ ಕರೆದುಕೊಂಡು ಹೋಗಿದ್ದೆ’ ಎಂದು ದಿವಿ ಹೇಳಿದ್ದಾರೆ.

‘ನಾನು 10 ದಿನ ಡಬ್ಬಿಂಗ್ ಮಾಡಿದ್ದೇನೆ ಮತ್ತು 20 ದಿನಗಳ ಕಾಲ ಶೂಟಿಂಗ್‌ನಲ್ಲಿ ಭಾಗವಹಿಸಿದ್ದೇನೆ. ನಾನು ತುಂಬಾ ಚೆನ್ನಾಗಿ ನಟಿಸಿದ್ದೇನೆ ಎಂಬುದು ನನಗೆ ಗೊತ್ತು. ಆದರೆ ಸಿನಿಮಾ ನೋಡಿದ ಮೇಲೆ ನನಗೆ ಆಘಾತವಾಯಿತು’ ಎಂದು ದಿವಿ ವಡತ್ಯಾ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ. ಸುಕುಮಾರ್ ನಿರ್ದೇಶನದ ‘ಪುಷ್ಪ 2: ದಿ ರೂಲ್’ ಚಿತ್ರದಲ್ಲಿ ದಿವಿ ವಡತ್ಯಾ, ಟಿವಿ ವರದಿಗಾರ್ತಿ ಮಿನ್ನು ಉಮಾ ದೇವಿ ಪಾತ್ರವನ್ನು ನಿರ್ವಹಿಸಿದ್ದರು.

ಪುಷ್ಪ ಎಲ್ಲಿದ್ದಾನೆ?

ಸತ್ಯವನ್ನು ಪತ್ತೆಹಚ್ಚಲು ಪುಷ್ಪ (ಅಲ್ಲು ಅರ್ಜುನ್) ಹಿಂದೆ ಬೀಳುವ ಪಾತ್ರ ಅವರದ್ದಾಗಿತ್ತು. ಸಿನಿಮಾದ ಪ್ರೋಮೋದಲ್ಲಿ ‘ಪುಷ್ಪ ಎಲ್ಲಿದ್ದಾನೆ?’ ಎಂದು ಕೇಳುವ ದೃಶ್ಯದಲ್ಲಿ ಅವರು ಕಾಣಿಸಿಕೊಂಡಿದ್ದರು. ‘ಬಿಗ್ ಬಾಸ್ ತೆಲುಗು 4’ ರಿಯಾಲಿಟಿ ಶೋ ಮೂಲಕ ದಿವಿ ವಡತ್ಯಾ ಜನಪ್ರಿಯತೆ ಗಳಿಸಿದರು. ಅವರು 7ನೇ ವಾರದಲ್ಲಿ ಶೋನಿಂದ ಹೊರಬಂದಿದ್ದರು. ನಂತರ ‘ಮಾ ನೀಳ್ಳ ಟ್ಯಾಂಕ್’ ಮತ್ತು ‘ಗಾಡ್‌ಫಾದರ್’ ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ‘ಹನಿ’ ಎಂಬ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು.

2024ರಲ್ಲಿ ತೆರೆಕಂಡ ‘ಪುಷ್ಪ 2: ದಿ ರೂಲ್’ ಸಿನಿಮಾ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 1742 ಕೋಟಿ ರೂಪಾಯಿಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿತ್ತು. ಭಾರತದಲ್ಲಿ ಈ ಚಿತ್ರದ ನೆಟ್ ಕಲೆಕ್ಷನ್ ಸುಮಾರು 1234 ಕೋಟಿ ರೂಪಾಯಿ ಆಗಿತ್ತು.



Source link

Leave a Reply

Your email address will not be published. Required fields are marked *