ಮರುಭೂಮಿಯ ನಡುವೆ 1.7 ಮೈಲಿ ಉದ್ದದ ಬೃಹತ್ ಕೃತಕ ಸರೋವರ ನಿರ್ಮಿಸಲು ಮುಂದಾದ ಸೌದಿ ಅರೇಬಿಯಾ | Saudi Arabia To Build Biggest Artificial Lake In The Middle Of The Desert

ಮರುಭೂಮಿಯ ನಡುವೆ 1.7 ಮೈಲಿ ಉದ್ದದ ಬೃಹತ್ ಕೃತಕ ಸರೋವರ ನಿರ್ಮಿಸಲು ಮುಂದಾದ ಸೌದಿ ಅರೇಬಿಯಾ | Saudi Arabia To Build Biggest Artificial Lake In The Middle Of The Desert



ಮರುಭೂಮಿಯ ನಡುವೆ 1.7 ಮೈಲಿ ಉದ್ದದ ಬೃಹತ್ ಕೃತಕ ಸರೋವರ ನಿರ್ಮಿಸಲು ಮುಂದಾದ ಸೌದಿ ಅರೇಬಿಯಾ | Saudi Arabia To Build Biggest Artificial Lake In The Middle Of The Desert

ಸೌದಿ ಅರೇಬಿಯಾ ಸೇರಿದಂತೆ ಬಹುತೇಕ ಗಲ್ಫ್ ರಾಷ್ಟ್ರಗಳು ಮಾನವ ನಿರ್ಮಿತವಾದ ಹಲವು ಮಿರಾಕಲ್‌ಗಳಿಗೆ ಸಾಕ್ಷಿಯಾಗಿವೆ. ಇಲ್ಲಿ ನೈಸರ್ಗಿಕವಾದ ಅದ್ಭುತಗಳಿಗಿಂತ ಮಾನವ ನಿರ್ಮಿತ ಅದ್ಭುತಗಳೇ ಹೆಚ್ಚು. ಹಾಗೆಯೇ ಈಗ ಸೌದಿ ಅರೇಬಿಯಾವು ಮತ್ತೊಂದು ಮಾನವ ನಿರ್ಮಿತ ಅದ್ಭುತಕ್ಕೆ ಸಿದ್ಧಗೊಳ್ಳಲಿದೆ. ಅದೇನು?

ಮರುಭೂಮಿಯಲ್ಲಿ ಬೃಹತ್ ಗಾತ್ರದ ಕೃತಕ ಸರೋವರ ನಿರ್ಮಿಸಲಿರುವ ಸೌದಿ ಅರೇಬಿಯಾ

ಸೌದಿ ಅರೇಬಿಯಾ ಸೇರಿದಂತೆ ಬಹುತೇಕ ಗಲ್ಫ್ ರಾಷ್ಟ್ರಗಳು ಮಾನವ ನಿರ್ಮಿತವಾದ ಹಲವು ಮಿರಾಕಲ್‌ಗಳಿಗೆ ಸಾಕ್ಷಿಯಾಗಿವೆ. ಇಲ್ಲಿ ನೈಸರ್ಗಿಕವಾದ ಅದ್ಭುತಗಳಿಗಿಂತ ಮಾನವ ನಿರ್ಮಿತ ಅದ್ಭುತಗಳೇ ಹೆಚ್ಚು. ಹಾಗೆಯೇ ಈಗ ಸೌದಿ ಅರೇಬಿಯಾವು ಮತ್ತೊಂದು ಮಾನವ ನಿರ್ಮಿತ ಅದ್ಭುತಕ್ಕೆ ಸಿದ್ಧಗೊಳ್ಳಲಿದೆ. ಹೌದು ಸೌದಿ ಅರೇಬಿಯಾ ಮರುಭೂಮಿಯ ಮಧ್ಯದಲ್ಲಿ 1.7 ಮೈಲಿ ಉದ್ದದ ಕೃತಕ ಸರೋವರವನ್ನು ನಿರ್ಮಿಸಲು ಯೋಜನೆ ರೂಪಿಸಿದ್ದು, ಇದರಲ್ಲಿ ಮೂರು ಭಾರಿ ಗಾತ್ರದ ಅಣೆಕಟ್ಟುಗಳನ್ನು ಕೂಡ ನಿರ್ಮಿಸಲಿದೆ. ಇದರಿಂದ ಪರಿಸರದ ಮೇಲೆ ಅಂತಹ ಯಾವುದೇ ಹಾನಿ ಆಗುವುದಿಲ್ಲ. ಅಲ್ಲದೇ ವಾರಕ್ಕೆ 90,000 ಘನ ಮೀಟರ್ ನೀರನ್ನು ಇದು ನೀಡಲಿದೆ. ಈ ಬೃಹತ್ ಯೋಜನೆ 4.7 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಕ್ಕೆ ಸೌದಿ ಅರೇಬಿಯಾ ನಿರ್ಧರಿಸಿದೆ.

ಇಟಲಿಯಾನ್ ಸಂಸ್ಥೆ ಈ ಬಿಲ್ಡ್‌ನಿಂದ ನಿರ್ಮಾಣ ಕಾರ್ಯ

ಸೌದಿ ಅರೇಬಿಯಾದ ಎನ್‌ಇಒಎಮ್( NEOM) ಹೆಸರಿನ ಈ ಯೋಜನೆಯು ಮರುಭೂಮಿಯೊಳಗೆ ಆಳವಾಗಿ ಸಾಗಲಿದೆ. ಇಟಾಲಿಯನ್ ಗುತ್ತಿಗೆದಾರರಾದ ವಿ ಬಿಲ್ಡ್‌(Webuild)ಇದನ್ನು ನಿರ್ಮಾಣ ಮಾಡಲಿದೆ. ವಾಯುವ್ಯ ಸೌದಿ ಅರೇಬಿಯಾದಲ್ಲಿ ನಿರ್ಮಾಣ ಹಂತದಲ್ಲಿರುವ ಪರ್ವತ ತಾಣವಾದ ಟ್ರೋಜೆನಾದಲ್ಲಿ ಸುಮಾರು 1.7 ಮೈಲುಗಳಷ್ಟು ಉದ್ದದ ಮಾನವ ನಿರ್ಮಿತ ಸಿಹಿನೀರಿನ ಸರೋವರವನ್ನು ಹೊಂದಿರುವ ಮೂರು ಅಣೆಕಟ್ಟುಗಳನ್ನು ನಿರ್ಮಿಸಲು $ 4.7 ಬಿಲಿಯನ್ ಡಾಲರ್‌ನ ಒಪ್ಪಂದ ಆಗಿದೆ ಎಂದು ವಿಬಿಲ್ಡ್ ಹೇಳಿದೆ.

ಈ ಯೋಜನೆಯಡಿ ಇಲ್ಲಿ ವರ್ಷಪೂರ್ತಿ ಸ್ಕೀಯಿಂಗ್‌ ಹಾಗೂ ಜಲಕ್ರೀಡೆಗಳಿಗೆ ಅವಕಾಶವಿರಲಿದೆ. ಇದರ ಜೊತೆ ಇಲ್ಲಿ ಐಷಾರಾಮಿ ಹೋಟೆಲ್‌ಗಳು ಇರುವ ರೆಸಾರ್ಟ್ ಇರಲಿದೆ. ಇದು ಕಡಿಮೆ ಆಕರ್ಷಣೆ ಇರುವ ನೈಜ ಪ್ರಪಂಚದಂತೆ ಕಾಣುವ ಲೋಕವನ್ನು ಸೃಷ್ಟಿಸಲಿದೆ.

ಟ್ರೋಜೆನಾ ಪರ್ವತಗಳ ಬಳಿ ಈ ಬೃಹತ್ ಸೇತುವೆ ನಿರ್ಮಾಣ

ಟ್ರೋಜೆನಾ ಕರಾವಳಿಯಿಂದ ಸುಮಾರು 31 ಮೈಲುಗಳಷ್ಟು ದೂರದಲ್ಲಿರುವ ಅಕಾಬಾ ಕೊಲ್ಲಿಯ ಬಳಿಯ ತಬುಕ್ ಪ್ರದೇಶದಲ್ಲಿ ಈ ಟ್ರೋಜೆನಾ ಪರ್ವತವಿದೆ. ಇದು ಸರಿಸುಮಾರು 4,900 ರಿಂದ 8,500 ಅಡಿಗಳಷ್ಟು ಎತ್ತರದಲ್ಲಿದೆ. ಆ ಎತ್ತರದಿಂದಾಗಿ ತಾಪಮಾನವು ತಗ್ಗು ಪ್ರದೇಶದ ಮರುಭೂಮಿಗಿಂತ ಇಲ್ಲಿ ತಂಪಾಗಿರಬಹುದು ಮತ್ತು ಭೂಪ್ರದೇಶವು ಜಲಾಶಯದ ಜಲಾನಯನ ಪ್ರದೇಶವನ್ನು ಕೆತ್ತಲು ಸಾಕಷ್ಟು ಕಡಿದಾಗಿದೆ .

ಈ ಯೋಜನೆಯ ನಿರ್ಮಾಣ ಗುತ್ತಿಗೆ ಹೊಂದಿರುವ ವಿಬಿಲ್ಡ್ ಕಂಪನಿ ಪ್ರಕಾರ, ಯೋಜಿತ ಸರೋವರವು ಸುಮಾರು 370 ಎಕರೆ ಅಥವಾ ಸರಿಸುಮಾರು 0.6 ಚದರ ಮೈಲುಗಳಷ್ಟು ವಿಸ್ತೀರ್ಣವನ್ನು ಹೊಂದಿರುತ್ತದೆ ಮತ್ತು ಇದು ಸಸ್ಯಶಾಸ್ತ್ರೀಯ ನಡಿಗೆಗಳು ಮತ್ತು ಡೈವ್‌ಗಳಿಗಾಗಿ ಮೀಸಲಾಗಿರುವ ದ್ವೀಪವನ್ನು ಹೊಂದಿರಲಿದೆ. ಒಪ್ಪಂದವನ್ನು ಸುಮಾರು €4.3 ಬಿಲಿಯನ್ (ಸುಮಾರು $4.7 ಬಿಲಿಯನ್) ನ ಯೋಜನೆ ಎಂದು ಕರೆಯಲಾಗುತ್ತಿದ್ದು, ಈ ಕೆಲಸವು ದೇಶದ ಆರ್ಥಿಕತೆಯನ್ನು ವೈವಿಧ್ಯಗೊಳಿಸುವ ರಾಷ್ಟ್ರೀಯ ಯೋಜನೆಯಾದ ಸೌದಿ ವಿಷನ್ 2030 ರ ಭಾಗವಾಗಿದೆ.

ಮೂರು ಅಣೆಕಟ್ಟುಗಳು

ಮುಖ್ಯ ಅಣೆಕಟ್ಟನ್ನು ಸುಮಾರು 476 ಅಡಿ ಎತ್ತರ ಮತ್ತು ಸರಿಸುಮಾರು 1,560 ಅಡಿ ಉದ್ದದ ರೋಲರ್-ಕಾಂಪ್ಯಾಕ್ಟ್ ಕಾಂಕ್ರೀಟ್ ರಚನೆಯಾಗಿ ವಿನ್ಯಾಸಗೊಳಿಸಲಾಗಿದೆ. ಎರಡನೇ ಅಣೆಕಟ್ಟಿನಲ್ಲೂ ರೋಲರ್-ಕಾಂಪ್ಯಾಕ್ಟ್ ಕಾಂಕ್ರೀಟ್ ಅನ್ನು ಬಳಸಲಾಗುತ್ತದೆ ಎಂದು ವೆಬ್‌ಬಿಲ್ಡ್ ಹೇಳಿದೆ. ಆದರೆ ಮೂರನೇ ಆಣೆಕಟ್ಟನ್ನು ಬಂಡೆಯ ರಚನೆಯಾಗಿ ನಿರ್ಮಿಸಲಾಗುವುದು, ಇದು ಕಣಿವೆಯನ್ನು ಬಹು ದಿಕ್ಕುಗಳಿಂದ ಪರಿಣಾಮಕಾರಿಯಾಗಿ ಮುಚ್ಚುತ್ತದೆ.

ಇದನ್ನೂ ಓದಿ: ಇವ ಗೋವಾದ ಪ್ರಜ್ವಲ್ ರೇವಣ್ಣ: 30ಕ್ಕೂ ಹೆಚ್ಚು ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ

ಈ ಯೋಜನೆಗಾಗಿ ಈಗಾಗಲೇ ಸರೋವರದ ಸ್ಥಳದಲ್ಲಿ ಉತ್ಖನನವು ಈಗಾಗಲೇ ಸುಮಾರು 3 ಮಿಲಿಯನ್ ಘನ ಮೀಟರ್ ಬಂಡೆಯನ್ನು ತಲುಪಿದೆ. ವಾರಕ್ಕೆ ಸುಮಾರು 90,000 ಘನ ಮೀಟರ್‌ನಂತೆ ಉತ್ಖನನ ಕೆಲಸ ಮುಂದುವರೆದಿದೆ. ಅಮೆರಿಕದ ಪರಿಭಾಷೆಯಲ್ಲಿ ಹೇಳುವುದಾದದರೆ ಅದು ಸರಿಸುಮಾರು 3.9 ಮಿಲಿಯನ್ ಘನ ಗಜಗಳನ್ನು ಈಗಾಗಲೇ ಅಗೆದು ತೆಗೆದಿದೆ. ಅಗೆದ ಬಂಡೆಯನ್ನು ಸರೋವರದ ಒಳಪದರ ಮತ್ತು ಅಣೆಕಟ್ಟು ನಿರ್ಮಾಣಕ್ಕಾಗಿ ಮರುಬಳಕೆ ಮಾಡಲಾಗುತ್ತದೆ. ಆ ರೀತಿಯ ಮರುಬಳಕೆಯು ಹೆಚ್ಚುವರಿ ಕಲ್ಲುಗಣಿಗಾರಿಕೆಯನ್ನು ಕಡಿಮೆ ಮಾಡಬಹುದು.

 ನೀರು ಎಲ್ಲಿಂದ ಬರುತ್ತದೆ?

ಉಪ್ಪು ನೀರನ್ನು ಶುದ್ಧಿಕರಿಸಿ ಕುಡಿಯಲು ಬಳಸುವ ಗಲ್ಪ್‌ ರಾಷ್ಟ್ರ ಇಂತಹ ಯೋಜನೆಗೆ ಸಿಹಿ ನೀರು ಎಲ್ಲಿಂದ ಬರುತ್ತದೆ ಎಂಬ ಕುತೂಹಲ ಅನೇಕರನ್ನು ಕಾಡುತ್ತಿದೆ. ಆದರೆ ನವೀಕರಿಸಬಹುದಾದ ಶಕ್ತಿಯಿಂದ ನಡೆಸಲ್ಪಡುವ ಉಪ್ಪುನೀರಿನ ನಿರ್ಮೂಲನದ ಮೂಲಕ ತನ್ನ ಎಲ್ಲಾ ನೀರಿನ ಅಗತ್ಯಗಳನ್ನು ಪೂರೈಸಲು ಯೋಜನೆ ರೂಪಿಸಲಾಗಿದೆ ಎಂದು NEOM ಹೇಳಿದೆ ಮತ್ತು 100% ತ್ಯಾಜ್ಯ ನೀರನ್ನು ಮರುಬಳಕೆ ಮಾಡಿ ನೀರಾವರಿಗಾಗಿ ಬಳಸಲಾಗುತ್ತದೆ ಎಂದು ಅದು ಹೇಳುತ್ತದೆ.

ಇದನ್ನೂ ಓದಿ: ಪತ್ನಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪತಿ: ತಿಂಗಳ ಬಳಿಕ ಲವರ್ ಜೊತೆ ಸಿಕ್ಕ ಹೆಂಡ್ತಿ



Source link

Leave a Reply

Your email address will not be published. Required fields are marked *